Search
  • Follow NativePlanet
Share
» »ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳು ಹೆಚ್ಚು ಇವೆ. ದೇವರ ಬಗೆಗೆ ಇಲ್ಲಿನ ಜನರ ಶ್ರದ್ಧೆ, ಭಕ್ತಿಯೂ ಕೂಡಾ ಜಾಸ್ತಿನೇ ಇದೆ. ಉತ್ತರ ಭಾರತವಿರಲಿ ದಕ್ಷಿಣ ಭಾರತವೇವಿರಲಿ ತಮ್ಮ ತಮ್ಮ ಇಷ್ಟ ದೇವರನ್ನು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಂತೂ ವಿಭಿನ್ನ ವಿಧಿ ವಿಧಾನಗಳನ್ನು ಕಾಣಲು ಸಿಗುತ್ತದೆ. ಹಿಂದೂ ಧರ್ಮದಲ್ಲಂತೂ ವರ್ಷವಿಡೀ ಒಂದಲ್ಲ ಒಂದು ಹಬ್ಬಗಳು ಇದ್ದೇ ಇರುತ್ತದೆ. ಅಂತಹದ್ದರಲ್ಲಿ ನಾವಿಂದು ದಕ್ಷಿಣ ಭಾರತದ ತೆಲಂಗಾಣದಲ್ಲಿ ಆಚರಿಸಲ್ಪಡುವ ಒಂದು ವಿಶೇಷ ಹಬ್ಬದ ಬಗ್ಗೆ ತಿಳಿಸಲಿದ್ದೇವೆ. ಈ ಹಬ್ಬವನ್ನು ಸುಖ ಶಾಂತಿಯ ಜೊತೆಗೆ ರೋಗ-ರುಜಿನಗಳಿಂದ ಪಾರಾಗಲು ಆಚರಿಸಲಾಗುತ್ತದೆ.

ಯಾವುದು ಈ ಹಬ್ಬ ?

ಯಾವುದು ಈ ಹಬ್ಬ ?

PC:Rammohan65

ತೆಲಂಗಾಣದಲ್ಲಿ ಪ್ರತಿಯೊಬ್ಬರು ಆಚರಿಸುವ ಈ ಹಬ್ಬವೇ ಬೋನಾಲ್ ಹಬ್ಬ. ಈ ಹಬ್ಬದಲ್ಲಿ ಮಹಾಕಾಳಿಯನ್ನು ಪೂಜಿಸಲಾಗುತ್ತದೆ. ಈ ಹಬ್ಬದ ವಿಧಿ ವಿಧಾನವನ್ನು ತಿಳಿದರೆ ನೀವು ಆಶ್ಚರ್ಯಪಡುವುದಂತೂ ಖಂಡಿತ.

100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?

ಆರಂಭವಾಗಿದ್ದು ಹೇಗೆ?

ಆರಂಭವಾಗಿದ್ದು ಹೇಗೆ?

PC: Rammohan65

ಈ ಹಬ್ಬವನ್ನು ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಳೆಗಾಲದಲ್ಲಿ ಒಂದಲ್ಲ ಒಂದು ರೋಗಗಳು ಕಾಡಲು ಆರಂಭವಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಹೃದಯ ವಿದ್ರಾಯಕ ಕಥೆ ಇದೆ. ೧೮೧೩ರಲ್ಲಿ ಹೈದರಾಬಾದ್ ಹಾಗೂ ಸಿಖಂದರಬಾದ್‌ನಲ್ಲಿ ಭೀಕರ ಕಾಲರಾ ಬಂದಿತ್ತು. ಇದರಿಂದ ಅನೇಕರು ಸಾವನ್ನಪ್ಪಿದ್ದರು. ಈ ರೋಗದಿಂದ ಪಾರಾಗಲು ನಗರದ ಆರ್ಮಿಯು ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಮಹಾಕಾಳಿಯ ಪೂಜೆ ಮಾಡಿತ್ತು.

ಕಾಲರಾ ರೋಗ ಶಮನ

ಕಾಲರಾ ರೋಗ ಶಮನ

PC:Rammohan65

ಜೊತೆಗೆ ನಗರದಲ್ಲಿನ ಈ ಕಾಲರ ರೋಗ ಸಂಪೂರ್ಣ ಶಮನವಾದರೆ ನಗರದಲ್ಲಿ ಕಾಳಿಯ ಮೂರ್ತಿಯ ಸ್ಥಾಪನೆ ಮಾಡುವುದಾಗಿ ಬೇಡಿಕೊಂಡಿದ್ದರು. ಈ ಪೂಜೆಯ ನಂತರ ನಗರದಲ್ಲಿ ಕ್ರಮೇಣವಾಗಿ ಕಾಲರಾ ರೋಗ ಶಮನವಾಗುತ್ತಾ ಬಂತು. ಆನಂತರ ಸೇನೆಯ ಸೈನಿಕರು ಕಾಳಿಯ ಮೂರ್ತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಪ್ರತಿವರ್ಷ ಆಗಸ್ಟ್‌ನಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ.

ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ಕಾಳಿಯ ಪೂಜೆ

ಕಾಳಿಯ ಪೂಜೆ

PC: Rammohan65

ಈ ಉತ್ಸವವು ಸಂಪೂರ್ಣವಾಗಿ ಮಹಾಕಾಳಿಗೆ ಸಮರ್ಪಿತವಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ವಿಶೇಷ ಆಯೋಜನೆಗಳೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ಕಾಳಿಯನ್ನು ಪೊಚ್ಚಮ್ಮ, ಮೈಸಮ್ಮ, ಪೆದ್ದಮ್ಮ, ಗಂಡಿ ಮೈಸಮ್ಮ, ಮಹಾಕಾಲಮ್ಮ, ಪೊಲೆರಮ್ಮ ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಮಹಾಕಾಳಿ ತನ್ನ ತವರುಮನೆಗೆ ಹೋಗುತ್ತಾಳೆ ಎನ್ನಲಾಗುತ್ತದೆ. ಈ ಹಬ್ಬದ ಮುಖಾಂತರ ಮಹಾಕಾಳಿಯಲ್ಲಿ ಉತ್ತಮ ಆರೋಗ್ಯ ಹಾಗೂ ಸುಖ ಶಾಂತಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಶೋಭಾ ಯಾತ್ರೆ ನಡೆಯುತ್ತದೆ

ಶೋಭಾ ಯಾತ್ರೆ ನಡೆಯುತ್ತದೆ

PC:Rammohan65

ಮಹಾಕಾಳಿ ಪೂಜೆಯಲ್ಲಿ ಶೋಭಾಯಾತ್ರೆಯೂ ನಡೆಯುತ್ತದೆ. ಈ ಉತ್ಸವದಲ್ಲಿ ಮಹಿಳೆಯರು ಅಕ್ಕಿ, ಹಾಲು, ಬೆಲ್ಲದಿಮದ ತಯಾರಿಸಲಾದಂತಹ ಪ್ರಸಾದದ ಪಾತ್ರೆಯನ್ನು ತಲೆಯ ಮೇಲೆ ಹೊತ್ತುಕೊಂಡು ಮಂದಿರದತ್ತ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬದಂದು ಮಹಿಳೆಯರು ಹಾಗೂ ಪುರುಷರು ಸಂಪ್ರಾದಾಯಿಕ ವಸ್ತ್ರವನ್ನೇ ಧರಿಸುತ್ತಾರೆ.

ಬಲಿ ಕೊಡಲಾಗುತ್ತದೆ

ಬಲಿ ಕೊಡಲಾಗುತ್ತದೆ

ಈ ಹಬ್ಬದಂದು ಪಶುಗಳನ್ನು ದೇವಿಗೆ ಬಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಆಡು, ಕುರಿಯನ್ನೇ ಬಲಿ ನೀಡುತ್ತಾರೆ. ಬಲಿ ನೀಡಿದ ಆಡನ್ನು ಮನೆಯವರು ಪದಾರ್ಥ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿ ಮನೆಯವರೆಲ್ಲಾ ಸೇರಿ ತಿನ್ನುತ್ತಾರೆ. ದೇವಿಗೆ ಮಧ್ಯವನ್ನೂ ಅರ್ಪಿಸಲಾಗುತ್ತದೆ. ಈ ಹಿಂದೆ ಆಡು ಕುರಿಯನ್ನು ಬಲಿ ನೀಡಲಾಗುತ್ತಿತ್ತು. ಆದರೆ ಸರ್ಕಾರ ಪ್ರಾಣಿ ಬಲಿ ನಿಷೇಧಿಸಿದ ನಂತರ ತರಕಾರಿಗಳನ್ನು ಬಲಿ ನೀಡಲಾಗುತ್ತದೆ.

ಸೆಲೆಬ್ರಿಟಿಗಳಿಗೆ ಗೆಸ್ಟ್‌ಹೌಸ್‌ ಆಗಿದ್ದ ಈ ಸ್ಥಳದಲ್ಲಿ ಇಂದು ಆತ್ಮಗಳು ಓಡಾಡುತ್ತಿವೆ

ಭವಿಷ್ಯವಾಣಿ ಹೇಳಲಾಗುತ್ತದೆ

ಭವಿಷ್ಯವಾಣಿ ಹೇಳಲಾಗುತ್ತದೆ

PC: Rammohan65

ಈ ಹಬ್ಬದ ಇನ್ನೊಂದು ವಿಶೇಷತೆ ಎಂದತೆ ಭವಿಷ್ಯವಾಣಿ ಹೇಳುವುದು. ಒಂದು ಮಹಿಳೆ ದೊಡ್ಡ ಮಣ್ಣಿನ ಮಡಕೆಯ ಮೇಲೆ ನಿಲ್ಲುತ್ತಾಳೆ. ಆಕೆಯ ಮೈ ಮೇಲೆ ಮಹಾಕಾಳಿ ಬರುತ್ತಾಳೆ ಎನ್ನಲಾಗುತ್ತದೆ. ಆಕೆಯು ಜನರ ಜೊತೆ ವರ್ಷದಲ್ಲಿ ಏನೆಲ್ಲಾ ನಡೆಯಲಿದೆ ಎನ್ನುವುದರ ಬಗ್ಗೆ ಭವಿಷ್ಯವಾಣಿಯನ್ನು ಹೇಳುತ್ತಾಳೆ.

ಈ ಶೋಭಾಯಾತ್ರೆಯು ಗೋಲ್ಕಂಡಾದ ಜಗದಂಬಿಕಾ ದೇವಸ್ಥಾನದಿಂದ ಪ್ರಾರಂಭವಾಗಿ ಸಿಖಂದರಬಾದ್‌ನ ಉಜ್ಜೈನಿ ದೇವಾಲಯವಾಗಿ ಲಾಲ್‌ ದರ್‌ವಾಜ ಮಾತೆಯ ಮಂದಿರದ ಬಳಿ ಸಮಾಪ್ತಿಯಾಗುತ್ತದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more