Search
  • Follow NativePlanet
Share
» »ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...

ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...

ಭಾರತದಲ್ಲಿ ಪ್ರಯಾಣಿಸಲು ಅನೇಕ ಮಾರ್ಗಗಳಿವೆ. ಶ್ರೀಮಂತರು ವಿಮಾನದಲ್ಲಿ ಪ್ರಯಾಣಿಸಿದರೆ ಮಧ್ಯಮ ವರ್ಗದವರು ಬಸ್‌ನಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣ ಬೆಳೆಸೋದು ಕೂಡಾ ಒಂದು ರೀತಿಯ ಮಜಾವಾಗಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ನಿಮ್ಮ ಪ್ರಯಾಣವನ್ನು ಸುಗಮವಾಗಿಸುತ್ತದೆ.

ಸಾಯೋ ಮೊದಲು ನೋಡಲೇಬೇಕಾದ ಸ್ಥಳಗಳಿವು

ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಗೆ

ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಗೆ

PC: V Mali

ಹೆಸರೇ ಸೂಚಿಸುವಂತೆ, ಈ ರೈಲು ಭಾರತದ ರಾಜಧಾನಿ ಮತ್ತು ಭಾರತದ ರಾಜ್ಯಗಳ ಮುಖ್ಯ ಕಛೇರಿಯನ್ನು ಸಂಪರ್ಕಿಸುತ್ತದೆ. ಈ ರೈಲುಗಳು ಅಸ್ಸಾಂ, ಛತ್ತೀಸ್ಗಢ, ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಮರಾಠಿಯಮ್, ಒರಿಸ್ಸಾ, ತಮಿಳುನಾಡು, ತೆಲಂಗಾಣ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಹೊಂದಿವೆ. ಈ ರೈಲಿನಲ್ಲಿ ಒಮ್ಮೆಯಾದರೂ ಪ್ರಯಾಣ ಬೆಳೆಸುವುದು ಅನೇಕ ಜನರ ಕನಸು.

ಮೊದಲ ಪರೀಕ್ಷೆ ನಮ್ಮ ಭಾರತ ರಾಜಧಾನಿ ನವದೆಹಲಿಯಿಂದ

ಮೊದಲ ಪರೀಕ್ಷೆ ನಮ್ಮ ಭಾರತ ರಾಜಧಾನಿ ನವದೆಹಲಿಯಿಂದ

PC: Superfast1111

ಮೊತ್ತಮೊದಲ ರಾಜಧಾನಿ ಎಕ್ಸ್‌ಪ್ರೆಸ್ ಚಾಲನೆಗೆ ಬಂದಿದ್ದು 1969ರಲ್ಲಿ. ಅದು ಕೂಡಾ ನವದೆಹಲಿಯಿಂದ ಪಶ್ಚಿ ಬಂಗಾಳದ ಹೌರಾ ಸ್ಟೇಶನ್ ವರೆಗೆ. ಇದು 1445 ಕಿ.ಮೀ ಕ್ರಮಿಸಲು 17 ಗಂಟೆ20 ನಿಮಿಷಗಳ ಕಾಲ ತೆಗೆದುಕೊಂಡಿತ್ತು. ಮುಂಬೈಯಿಂದ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ 1972ರಲ್ಲಿ ಚಾಲನೆ ದೊರೆತಿತ್ತು. .

ಊಟದ ವ್ಯವಸ್ಥೆಯೂ ಇದೆ

ಊಟದ ವ್ಯವಸ್ಥೆಯೂ ಇದೆ

PC:Debashis.jena16

ರಾಜಧಾನಿ ರೈಲ್ವೇ ಇಡೀ ಭಾರತೀಯ ರೈಲ್ವೆಯ ಸಂಪೂರ್ಣ ಹವಾನಿಯಂತ್ರಣವಾಗಿದೆ. ರೈಲನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಯಾಣಿಕನ ಪ್ರಯಾಣದ ಸಮಯಕ್ಕೆ ಅನುಗುಣವಾಗಿ ಬೆಳಗ್ಗಿನ ಟೀ, ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಟೀ, ರಾತ್ರಿಯ ಊಟವನ್ನು ಕಲ್ಪಿಸಲಾಗುತ್ತದೆ, ಅಷ್ಟೇ ಅಲ್ಲದೆ ಮಲಗಲು ಕೊಠಡಿ ಕೂಡಾ ಇದೆ.

ನಿಮಗೆ ಎಷ್ಟು ರೈಲುಗಳು ಗೊತ್ತು?

ನಿಮಗೆ ಎಷ್ಟು ರೈಲುಗಳು ಗೊತ್ತು?

PC:Hari KRK

ಸದ್ಯಕ್ಕೆ 23 ಜೊತೆ ರೈಲುಗಳಿವೆ. ಇವುಗಳು ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಯನ್ನು ತಲುಪುತ್ತದೆ. ಇತರ ಎಕ್ಸ್‌ಪ್ರೆಸ್‌ಗಳಂತೆ ಎಲ್ಲಾ ಸ್ಟಾಪ್‌ಗಳಲ್ಲಿ ನಿಲ್ಲುವುದಿಲ್ಲ. ಇದು ಪ್ರಮುಖ ನಿಲ್ದಾಣಗಳಲ್ಲಷ್ಟೇ ನಿಲ್ಲುತ್ತದೆ. ಆ ರೈಲುಗಳು ಯಾವುದೆಂದರೆ ದಿಬ್ರುಘರ್ ರಾಜಧಾನಿ, ಬಿಲಾಸ್‌ಪುರ್ ರಾಜಧಾನಿ, ಮಡಂಗಾಂ ರಾಜಧಾನಿ, ಸ್ವರ್ಣ ಜಯಂತಿ ರಾಜಧಾನಿ, ರಾಂಚಿ ರಾಜಧಾನಿ(ಬೋಕರೋ), ರಾಂಚಿ ರಾಜಧಾನಿ(ದಲ್ತೊಂಗನಿ), ಬೆಂಗಳೂರು ರಾಜಧಾನಿ, ತಿರುವನಂತಪುರಂ ರಾಜಧಾನಿ, ಮುಂಬೈ ರಾಜಧಾನಿ, ಆಗಸ್ಟ್ ಕ್ರಾಂತಿ ರಾಜಧಾನಿ, ಬಾಂದ್ರಾ ರಾಜಧಾನಿ, ಭುವನೇಶ್ವರ್ ರಾಜಧಾನಿ(ಆದ್ರಾ), ಭುವನೇಶ್ವರ ರಾಜಧಾನಿ(ಬೋಕಾರೋ), ಭುವನೇಶ್ವರ್ ರಾಜಧಾನಿ(ಸಂಬಾಲ್‌ಪುರ್), ಚೆನ್ನೈ ರಾಜಧಾನಿ, ಸಿಕಂದ್ರಬಾದ್ ರಾಜಧಾನಿ, ಅಗರ್‌ತಾಲ ರಾಜಧಾನಿ, ಹೌರಾ ರಾಜಧಾನಿ(ಗಯಾ), ಗೌರಾ ರಾಜಧಾನಿ(ಪಾಟ್ನಾ), ಸೀಲದ್‌ ರಾಜಧಾನಿ.

ಉಚಿತ Wi-Fi

ಉಚಿತ Wi-Fi

PC:Debashis.jena16

ಈ ರೈಲುಗಳಿರುವ ರೈಲು ನಿಲ್ದಾಣಗಳಲ್ಲಿ ಉಚಿತ Wi-Fi ಸೌಕರ್ಯಗಳಿವೆ. ರೈಲು ನಿಲ್ದಾಣವನ್ನು ತಲುಪಿದಾಗ ಮಾತ್ರ ವೈಫೈಯನ್ನು ಬಳಸಬಹುದು. ರೈಲಿನಲ್ಲಿ ಹೋಗುವಾಗಲೂ ಈ ಸೌಲಭ್ಯವನ್ನು ಬಳಸಲಬಹುದು. ಹೌರಾ-ನವದೆಹಲಿ ರೈಲುಮಾರ್ಗದಲ್ಲಿ ಈ ಸೌಲಭ್ಯಗಳು ಲಭ್ಯವಿದ್ದು, ಸದ್ಯದಲ್ಲೇ ಇತರ ರೈಲು ಮಾರ್ಗಗಳಿಗೂ ಅಳವಡಿಕೆಯಾಗಲಿದೆ.

Read more about: india travel railway
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X