Search
  • Follow NativePlanet
Share
» »ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಭಾರತದಲ್ಲಿ ಹಲವಾರು ಕೋಟೆಗಳು ಇವೆ. ಆ ಕೋಟೆಗಳಿಗೆಲ್ಲಾ ತನ್ನದೇ ಆದ ಪ್ರಾಮುಖ್ಯತೆಗಳಿವೆ. ರಕ್ತಕ್ಕೆ, ಯುದ್ಧಕ್ಕೆ, ಶ್ರೀಮಂತಿಕೆಗೆ ಹೆಸರುವಾಸಿ ಕೋಟೆಗಳು. ಹಾಗೆಯೇ ರಾಜಸ್ಥಾನದಲ್ಲಿಯೂ ಹಲವಾರು ಕೋಟೆಗಳು ಇವೆ. ಅವುಗಳಲ್ಲಿ ಜುನಾಗಢ್ ಕೋಟೆ ಕೂಡ ಒಂದು. ಈ ಕೋಟೆಯು ಅತ್ಯಂತ ಸುಂದರವಾಗಿದ್ದು, ರಾಜಸ್ಥಾನದ ಬಿಕಾನೇರ್ ನಗರದಲ್ಲಿನ ಪ್ರಸಿದ್ಧವಾದ ಕೋಟೆಗಳಲ್ಲಿ ಇದು ಕೂಡ ಒಂದು. ಈ ಕೋಟೆಯನ್ನು ಒಂದು ಕಾಲದಲ್ಲಿ "ಚಿಂತಮಣಿ" ಎಂದು ಕರೆಯಲಾಗುತ್ತಿತ್ತು. ಈ ಕೋಟೆಯನ್ನು 20 ನೇ ಶತಮಾನದಲ್ಲಿ ಜುನಗಢ್ ಕೋಟೆ ಅಥವಾ ಓಲ್ಡ್ ಪೋರ್ಟ್ ಎಂದು ಮರುನಾಮಕರಣ ಮಾಡಲಾಯಿತು.

ರಾಜಸ್ಥಾನದ ಕೆಲವು ಪ್ರಮುಖ ಕೋಟೆಗಳಲ್ಲಿ ಇದು ಒಂದು. ಇದನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿಲ್ಲ. ಬದಲಾಗಿ ಆಧುನಿಕ ನಗರದ ಬಿಕನೇರ್ ಕೋಟೆಯ ಸುತ್ತ ಅಭಿವೃದ್ಧಿಪಡಿಸಿದೆ. ಈ ಕೋಟೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಲೇಖನದ ಮೂಲಕ ಪಡೆಯಿರಿ.

ಇದು ರಾಜಸ್ಥಾನದ ಪ್ರಸಿದ್ಧ

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಈ ಅದ್ಭುತವಾದ ಕೋಟೆಯನ್ನು 1571 ರಿಂದ 1611 ರವರೆಗೆ ಆಳಿದ ಬಿಕನೇರ್‍ನ 6 ನೇ ದೊರೆಯಾದ ರಾಜಾ ರಾಯ್ ಸಿಂಗ್ ಪ್ರಧಾನಿ ಕರಣ್ ಚಂದ್ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾಯಿತು. ಈ ಕೋಟೆಯು ನಗರದ ಕೇಂದ್ರದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಹಳೆಯ ಕೋಟೆಯ ಕೆಲವು ಅವಶೇಷಗಳನ್ನು ಲಕ್ಷ್ಮೀ ನಾರಾಯಣ ದೇವಾಲಯದ ಬಳಿ ಸಂರಕ್ಷಿಸಿ ಇಡಲಾಗಿದೆ.

PC:Pablo Nicolas


ಇದು ರಾಜಸ್ಥಾನದ ಪ್ರಸಿದ್ಧ

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಈ ಸುಂದರವಾದ ಕೋಟೆಯಲ್ಲಿ ಹಲವಾರು ಅರಮನೆಗಳು, ದೇವಾಲಯಗಳು, ತೋಟಗಳು, ವೈವಿದ್ಯಮಯವಾದ ವಾಸ್ತುಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ಹಳೆಯ ಕೋಟೆಗಿಂತ ಹೊಸ ಕೋಟೆ ತುಂಬಾ ದೊಡ್ಡದಾಗಿದೆ ಮತ್ತು ಉತ್ತಮವಾಗಿದೆ. ಈ ಕೋಟೆಯ ಅಮೂಲ್ಯವಾದ ವಾಸ್ತುಶಿಲ್ಪ ಮತ್ತು ರಾಜಸ್ಥಾನದ ಸುಂದರ ಕೋಟೆಗಳಲ್ಲಿ ಒಂದಾಗಿದೆ. ಇತಿಹಾಸದ ಪ್ರೇಮಿಗಳಿಗೆ ಇದೊಂದು ಕನಸುಗಳ ಕೋಟೆ. ಇದನ್ನು ಅನ್ವೇಷಿಸಲು ಇತಿಹಾಸಕಾರರಿಗೆ ಹಾಗು ಪ್ರವಾಸಿಗರಿಗೆ ಈ ಕೋಟೆ ಇಷ್ಟವಾಗಬಹುದು.

PC:Jean-Pierre Dalbéra


ಇದು ರಾಜಸ್ಥಾನದ ಪ್ರಸಿದ್ಧ

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಈ ಕೋಟೆಯು ಒಟ್ಟು 7 ದ್ವಾರಗಳನ್ನು ಹೊಂದಿದೆ. ಇದರ ವಾಸ್ತುಶೈಲಿಯು ಸಣ್ಣ ಜಟಿಲತೆಯೊಂದಿಗೆ ಅಲಂಕಾರಿಕ ರಕ್ಷಣಾತ್ಮಕ ರಚನೆಗಳು ಸ್ವತಃ ಆಕರ್ಷಣೆಯಾಗಿವೆ. ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ಇದು ರಾಜಸ್ಥಾನದ ವಾಸ್ತುಶಿಲ್ಪದ ಕಲೆಗಾರಿಕೆಯನ್ನು ಪ್ರತಿಬಿಂಬಿಸುವ ಅರಮನೆಗಳು ಮತ್ತು ದೇವಾಲಯಗಳು. ಪ್ರತಿ ರಾಜರು ಕೂಡ ಕೋಟೆಯ ಒಳಭಾಗದಲ್ಲಿ ಕೆಲವು ಅರಮನೆಗಳನ್ನು ಹಾಗು ದೇವಾಲಯಗಳನ್ನು ನಿರ್ಮಾಣ ಮಾಡಿರುವುದನ್ನು ಕಾಣಬಹುದು. ಅವುಗಳಲ್ಲಿ ರತನ್ ಬಿಹಾರಿ ದೇವಾಲಯ ಮತ್ತು ಹರ ಮಂದಿರ್ ಈ ಕೋಟೆಯ 2 ಪ್ರಮುಖವಾದ ದೇವಾಲಯಗಳಾಗಿವೆ.


PC:Sachinsonkusare85

ಇದು ರಾಜಸ್ಥಾನದ ಪ್ರಸಿದ್ಧ

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ರತನ್ ಬಿಹಾರಿ ದೇವಾಲಯ ಮತ್ತು ಹರ ಮಂದಿರ್ ಎರಡೂ ಸಹ ವಿಭಿನ್ನವಾದ ರಚನೆಗಳ ಪ್ರಭಾವಗಳನ್ನು ಹೊಂದಿದೆ. ಇಲ್ಲಿನ ವಾಸ್ತುಶಿಲ್ಪ ಶೈಲಿಯ ಸಮ್ಮಿಲನವನ್ನು ಕಾಣಬಹುದು. ಅಂದರೆ ರಾಜಸ್ಥಾನಿ, ಮೊಘಲ್ ಮತ್ತು ಪಾಶ್ಚಿಮಾತ್ಯ ವಾಸ್ತುಶೈಲಿಗಳು ಇಲ್ಲಿಮ ಪ್ರಮುಖವಾದ ಶೈಲಿಗಳಾಗಿವೆ. ಈ ಕೋಟೆಯ ಪ್ರಮುಖ ಆಕರ್ಷಣೆಗಳೇ ಅರಮನೆಗಳು. ಇವುಗಳಲ್ಲಿ ಪ್ರತಿಯೊಂದು ಅರಮನೆಗಳು ತನ್ನದೇ ಆದ ಅನನ್ಯತೆ ಮತ್ತು ಶೈಲಿಯನ್ನು ಹೊಂದಿದೆ. ಅಮೃತಶಿಲೆ, ಕೆಂಪು ಕಲ್ಲಿನ ವಾಸ್ತುಶಿಲ್ಪಗಳು, ಸಂಕೀರ್ಣವಾಗಿ ಕೆತ್ತಿದ ಗೋಡೆಗಳು, ಬಿತ್ತಿ ಚಿತ್ರಗಳು ಆ ಕಾಲದ ಕಲಾ ವೈಭವವನ್ನು ಚಿತ್ರಿಸುತ್ತದೆ.

PC:Jean-Pierre Dalbéra

ಇದು ರಾಜಸ್ಥಾನದ ಪ್ರಸಿದ್ಧ

ಇದು ರಾಜಸ್ಥಾನದ ಪ್ರಸಿದ್ಧ "ಓಲ್ಡ್ ಫೋರ್ಟ್"...

ಜುನಾಗಡ್ ಕೋಟೆಯಲ್ಲಿರುವ ಪ್ರಮುಖ ಕೋಟೆಗಳಲ್ಲಿ ಅನುಪ್ ಮಹಲ್, ಕರುಣ್ ಮಹಲ್, ಗಂಗಾ ಮಹಲ್, ಬಾದಲ್ ಮಹಲ್ ಮತ್ತು ಫೂಲ್ ಮಹಲ್ ಇನ್ನು ಹಲವಾರು ಆಕರ್ಷಣೆಗಳನ್ನು ಕಾಣಬಹುದು. ಇಲ್ಲಿ ಅನ್ಯಾಗಾರ್ ಕೋಟೆ ಮ್ಯೂಸಿಯಂ ಕೂಡ ಇದೆ. ಈ ವಸ್ತು ಸಂಗ್ರಹಾಲಯವು ಕಲಾಕೃತಿಗಳು, ವರ್ಣಚಿತ್ರಗಳು ಮತ್ತು ಬಿಕಾನೆರ್ ರಾಯಲ್ಸ್ ಸೇರಿದ ಇತರ ವಸ್ತುಗಳ ಸಂಗ್ರಹವನ್ನು ಹೊಂದಿದೆ. ಕೋಟೆಯು 986 ಸುದೀರ್ಘವಾದ ಕಾಲುದಾರಿಗಳು, 37 ಕೊತ್ತಲಗಳು ಮತ್ತು 2 ಪ್ರವೇಶ ದ್ವಾರಗಳನ್ನು ಹೊಂದಿದೆ. ಪ್ರವಾಸಿಗರು ಕರಣ್ ಪೋಲ್ ಮೂಲಕ ಕೋಟೆಯನ್ನು ಪ್ರವೇಶಿಸಬಹುದು.

PC:Pablo Nicholas

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more