Search
  • Follow NativePlanet
Share
» »ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?

ಗೋವಾದಲ್ಲಿ ಮಾಡಲೇಬಾರದ ಕೆಲಸಗಳು ಯಾವುದು ಗೊತ್ತ?

ಗೋವಾ ಭಾರತ ಪ್ರಸಿದ್ಧವಾದ ರಾಜ್ಯಗಳಲ್ಲಿ ಒಂದಾಗಿದೆ. ಇದು ಭಾರತದ ಅತ್ಯಂತ ಸಣ್ಣದಾದ ರಾಜ್ಯ ಕೂಡ ಹೌದು. ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಕೆಲವು ಬೀಚ್‍ಗಳು ಗೋವಾದಲ್ಲಿವೆ. ಅವುಗಳಲ್ಲಿ ಕಲಾಂಗೂಟೆ, ಕೊಲ್ವ, ದೋನಾ, ಪಾಲಾ, ಸಿರಿದಾವೊ, ವಾಗತೋರ,

ಗೋವಾ ಭಾರತ ಪ್ರಸಿದ್ಧವಾದ ರಾಜ್ಯಗಳಲ್ಲಿ ಒಂದಾಗಿದೆ. ಇದು ಭಾರತದ ಅತ್ಯಂತ ಸಣ್ಣದಾದ ರಾಜ್ಯ ಕೂಡ ಹೌದು. ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಕೆಲವು ಬೀಚ್‍ಗಳು ಗೋವಾದಲ್ಲಿವೆ. ಅವುಗಳಲ್ಲಿ ಕಲಾಂಗೂಟೆ, ಕೊಲ್ವ, ದೋನಾ, ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚ್‍ಗಳಿಗೆ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಬರುತ್ತಾರೆ.

ಹೀಗೆ ಬೀಚ್‍ಗಳಿಗೆ ವಾಟರ್ ಗೇಮ್‍ಗಳಿಗೆ ಗೋವಾ ಪ್ರಸಿದ್ಧವಾದುದು. ನಮ್ಮ ಭಾರತ ದೇಶದಲ್ಲಿನ ಯುವಕರು ಫುಲ್ ಏಂಜಾಯ್ ಮೆಂಟ್ ಕೋರಿಕೊಳ್ಳುವ ಯುವಕರು ಹೆಚ್ಚಾಗಿ ಗೋವಾ ಪ್ರವಾಸಕ್ಕೆ ಹೋಗಬೇಕು ಎಂದು ಬಯಸುತ್ತಾರೆ. ಅದಕ್ಕೆ ಸರಿಯಾಗಿಯೇ ಗೋವಾದಲ್ಲಿ ಏರ್ಪಟುಗಳಿರುತ್ತವೆ. ಆದರೆ ಗೋವಾಗೆ ಹೋಗಬೇಕು ಎಂದು ಅಂದುಕೊಳ್ಳುವವರಿಗೆ ಏನು ಮಾಡಬಾರದು? ಏನು ಮಾಡಬೇಕು? ಕಡಿಮೆ ಖರ್ಚಿನಲ್ಲಿ ಹೆಚ್ಚು ಏನ್‍ಜಾಯ್ ಮಾಡುವುದು ಹೇಗೆ? ಎಂಬುದು ತಿಳಿದಿರುವುದಿಲ್ಲ.

ಹಾಗಾಗಿ ಪ್ರಸ್ತುತ ಲೇಖನದ ಮೂಲಕ ಗೋವಾದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ತಿಳಿಯಿರಿ.

121 ಕಿ,ಮೀ ವಿಸ್ತಾರದ ಬೀಚ್

121 ಕಿ,ಮೀ ವಿಸ್ತಾರದ ಬೀಚ್

ಗೋವಾದಲ್ಲಿ 121 ಕಿ,ಮೀ ವಿಸ್ತಾರವಾದ ಸಮುದ್ರ ತೀರವಿದೆ. ಈ ಬೀಚ್ ವಾಟರ್ ಗೇಮ್ಸ್ ಆಟವಾಡಲು ಹೇಳಿ ಮಾಡಿಸಿದ ಬೀಚ್ ಆಗಿದ್ದು, ಹೆಚ್ಚು ಅನುಕೂಲತೆಯನ್ನು ಹೊಂದಿದೆ. ನಮ್ಮ ದೇಶದವರೇ ಅಲ್ಲದೇ ವಿದೇಶಿಯರು ಕೂಡ ಈ ಬೀಚ್ ಗೆ ಅಧಿಕವಾಗಿ ಭೇಟಿ ನೀಡುತ್ತಾರೆ.


PC:youtube

ಪ್ಲಾನಿಂಗ್

ಪ್ಲಾನಿಂಗ್

ಗೋವಾಗೆ ಹೋಗುವವರು ಮೊದಲೇ ಪ್ಲಾನಿಂಗ್ ಮಾಡಿಕೊಂಡರೆ ಇನ್ನೂ ಚೆನ್ನಾಗಿ ಏಂಜಾಯ್ ಮಾಡಬಹುದು.


PC:Swaminathan

ಹೋಟೆಲ್ಸ್

ಹೋಟೆಲ್ಸ್

ಗೋವಾದಲ್ಲಿ ತಂಗಲು ದೊಡ್ಡ ದೊಡ್ಡದಾದ ಹೋಟೆಲ್ಸ್ಗಳ ಬಗ್ಗೆ ಪ್ರಶ್ಯಸ್ತ ನೀಡುತ್ತಾರೆ. ಆದರೆ ಗೋವಾದ ಬೀಚ್‍ನ ಸಮೀಪದಲ್ಲಿ ಹಟ್‍ನಂತೆ ನಿರ್ಮಿಸಿರುವ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಇವುಗಳನ್ನು ಬಾಡಿಗೆಗೆ ಪಡೆದು ಸ್ಟೇ ಯಾದರೆ ಕಡಿಮೆ ಖರ್ಚಿನಲ್ಲಿ ಕೊಠಡಿಗಳು ದೊರೆಯುತ್ತದೆ.

PC:Rajan Manickavasagam

ಸೌಕರ್ಯ

ಸೌಕರ್ಯ

ಈ ಹಟ್‍ಗಳಲ್ಲಿಯೂ ಕೂಡ ದೊಡ್ಡ ದೊಡ್ಡ ಹೋಟೆಲ್‍ಗಳು ನೀಡುವ ಎಲ್ಲಾ ಸೌಕರ್ಯಗಳು ಇರುತ್ತವೆ.

PC:Klaus Nahr

ಪೀಕ್ ಸಿಸನ್

ಪೀಕ್ ಸಿಸನ್

ಜನವರಿ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಪೀಕ್ ಸಿಸನ್ ಎಂದು ಕರೆಯುತ್ತಾರೆ. ಏಕೆಂದರೆ ಈ ಸಮಯದಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಗೋವಾಗೆ ಬರುತ್ತಾರೆ.

PC:Miran Rijavec

ಬೆಲೆ

ಬೆಲೆ

ವಿದೇಶಿಯರು ಈ ಸಮಯದಲ್ಲಿ ಹೆಚ್ಚಾಗಿ ಬರುವುದರಿಂದ ಎಲ್ಲಾ ವಸ್ತುಗಳ ಬೆಲೆಯು ದುಬಾರಿಯಾಗಿ ಮಾರಾಟ ಮಾಡುತ್ತಾರೆ. ಹಾಗಾಗಿ ಭಾರತೀಯ ನಿವಾಸಿಗಳು ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಹೋದರೆ ಒಳ್ಳೆ ಏನ್‍ಜಾಯ್ ಮೆಂಟ್ ಮಾಡಬಹುದಾಗಿದೆ.


PC:Suddhasatwa Bhaumik

31 ಡಿಸೆಂಬರ್

31 ಡಿಸೆಂಬರ್

30 ಡಿಸೆಂಬರ್ ಹೊಸ ವರ್ಷ ಆಚರಿಸಲು ಗೋವಾಕ್ಕಿಂತ ಒಳ್ಳೆಯ ಪ್ರದೇಶ ಬೇರೆ ಯಾವುದು ಇಲ್ಲ ಎಂದು ಹೇಳಬಹುದು. ಆದರೆ ಆ ಸಮಯದಲ್ಲಿ ವಿವಿಧ ಹೋಟೆಲ್‍ಗಳು ನೀಡುವ ಪ್ಯಾಕೆಜ್‍ಗಳನ್ನು ಪರಿಶೀಲಿಸಿ ತೆಗೆದುಕೊಂಡರೆ ಖರ್ಚು ಕಡಿಮೆ ಮಾಡಬಹುದು.

PC:Rajarshi MITRA

ವಾತಾವರಣ

ವಾತಾವರಣ

ಗೋವಾ ಪ್ರವಾಸವನ್ನು ಮಳೆಗಾಲ, ಬೇಸಿಗೆ ಕಾಲ ಅದಷ್ಟೂ ಕಡಿಮೆ ಮಾಡುವುದು ಒಳ್ಳೆಯದು. ಏಕೆಂದರೆ ಆ ಕಾಲದಲ್ಲಿ ಇರುವ ವಾತಾವರಣ ಪರಿಸ್ಥಿತಿಯ ಕಾರಣ ಹೆಚ್ಚು ಏನ್‍ಜಾಯ್ ಮಾಡುವುದಕ್ಕೆ ಆಗುವುದಿಲ್ಲ.

PC:Rajarshi MITRA

ವಿದೇಶಿಯರು

ವಿದೇಶಿಯರು

ಗೋವಾಗೆ ತೆರಳುವ ಅದೆಷ್ಟೂ ಮಂದಿ ವಿದೇಶಿಯರನ್ನು ಕಾಣಲು ಗೋವಾಗೆ ಭೇಟಿ ನೀಡುತ್ತಾರೆ. ವಿದೇಶಿಯರು ತುಂಡು ಬಟ್ಟೆ ಧರಿಸಿ ಗೋವಾದಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ ಸಾಮಾನ್ಯವಾಗಿ ನಿಮಗೆ ಗೊತ್ತು.

PC:Jaskirat Singh Bawa

 ಫೋಟು

ಫೋಟು

ದೇಶಿಯರು ಬೀಚ್‍ನಲ್ಲಿ ತುಂಡು ಬಟ್ಟೆ ಧರಿಸಿರುವ ವಿದೇಶಿಯರ ಜೋತೆ ಫೋಟು ಹಿಡಿದುಕೊಳ್ಳಲು ಹಾತೊರೆಯುತ್ತಾರೆ. ಆದರೆ ಈ ಕೆಲಸ ಎಂದೂ ಕೂಡ ಮಾಡಬಾರದು. ವಿದೇಶಿಯರಿಗೆ ಈ ಬಗ್ಗೆ ಕೋಪ ಬಂದರೆ ಪೊಲೀಸ್ ಕಂಪ್ಲೇಂಟ್ ಕೂಡ ಕೊಡಬಹುದು. ಹಲವಾರು ನಿದರ್ಶನಗಳು ಕೂಡ ಇವೆ.


PC:PROMeredith P.

ಮದ್ಯಪಾನ

ಮದ್ಯಪಾನ

ಗೋವಾದಲ್ಲಿದ್ದಾಗ ಮದ್ಯಪಾನದ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರಬೇಕು. ಏಕೆಂದರೆ ಗೋವಾದಲ್ಲಿ ಮದ್ಯಪಾನ ಅತ್ಯಂತ ಕಡಿಮೆ ಬೆಲೆಗೆ ದೊರೆಯುವುದೇ ಅಲ್ಲದೇ ಪ್ರಪಂಚದಲ್ಲಿನ ಹಲವಾರು ಬ್ರಾಂಡ್‍ಗಳ ಮದ್ಯಪಾನಗಳು ಇರುತ್ತವೆ.

PC:Jaskirat Singh Bawa

ಜಾಗ್ರತೆ

ಜಾಗ್ರತೆ

ಮದ್ಯ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ ಎಂದು ಫುಲ್ಲಾಗಿ ಕುಡಿದು ನೆಲದ ಮೇಲೆ ಹೊರಳಾಡಿದರೆ ಇನ್ನಷ್ಟೆ. ಕಳ್ಳರು ನಿಮ್ಮ ಬಳಿಯಿರುವ ಬಂಗಾರ ಆಭರಣಗಳು, ಹಣ ಎಲ್ಲವೂ ಸ್ವಃ ಮಾಡಿಬಿಡುತ್ತಾರೆ. ಬೀಚ್‍ನ ಸುತ್ತ ಮುತ್ತ ಹಲವಾರು ನಾಯಿಗಳು ತಿರುಗುತ್ತಾ ಇರುತ್ತವೆ. ಅವುಗಳು ನಿಮ್ಮ ಮೇಲೆ ದಾಳಿ ಕೂಡ ಮಾಡುವ ಎಲ್ಲಾ ಲಕ್ಷಣಗಳು ಇರುತ್ತವೆ. ನಾಯಿಗಳು ಕಚ್ಚಿರುವ ಹಲವಾರು ನಿದರ್ಶನಗಳು ಇವೆ.

PC:Greg Younger

ಪ್ರಯಾಣ

ಪ್ರಯಾಣ

ಗೋವಾದಲ್ಲಿ ಸುತ್ತ ಮುತ್ತ ಪ್ರದೇಶಗಳಿಗೆ ಸುತ್ತಾಡಬೇಕೆಂದರೆ ಮುಂದೆಯೇ ಬುಕ್ ಮಾಡಿರುವ ಪ್ರಿಪೇಡ್ ಕಾರುಗಳನ್ನೇ ಬಳಸಿರಿ. ಅದು ಬಿಟ್ಟು ಅಲ್ಲೇ ಇರುವ ಲೋಕಲ್ ಟ್ಯಾಕ್ಸಿ ಹತ್ತಿದ್ದರೆ ಅಧಿಕ ಹಣವನ್ನು ಹೇಳಿ ಕಿತ್ತುಕೊಳ್ಳುತ್ತಾರೆ.


PC:Avarty Photos

ಬೈಕ್ ಬಾಡಿಗೆ

ಬೈಕ್ ಬಾಡಿಗೆ

ಗೋವಾದಲ್ಲಿ ಬೈಕ್‍ಗಳನ್ನು ಬಾಡಿಗೆಗೆ ನೀಡುತ್ತಾರೆ. ಗೋವಾ ಎಲ್ಲಾವೂ ಸುತ್ತಾಡಬಹುದು.


PC:Jaskirat Singh Bawa

ಪೈಲೆಟ್

ಪೈಲೆಟ್

ಗೋವಾ ಎಲ್ಲಾ ಸುತ್ತಾಡಿಸಿಲು ಅಲ್ಲಿ ಪ್ರತ್ಯೆಕವಾಗಿ ಬೈಕ್ ಸವಾರರು ಇರುತ್ತಾರೆ. ಇವರನ್ನು ಫೈಲೆಟ್‍ಗಳು ಎಂದು ಕರೆಯುತ್ತಾರೆ. ಇವರ ಜೊತೆ ಮುಂಚೆಯೇ ಹಣದ ವ್ಯವಾಹರದ ಬಗ್ಗೆ ಮಾತಾನಾಡಿಕೊಳ್ಳಬೇಕು.

PC:Jaskirat Singh Bawa

ಅಪರಿಚಿತರನ್ನು ನಂಬಬಾರದು

ಅಪರಿಚಿತರನ್ನು ನಂಬಬಾರದು

ಗೋವಾದಲ್ಲಿ ಮಾಡಲೇಬಾರದ ಅತಿ ಮುಖ್ಯವಾದ ಕೆಲಸವೆನೆಂದರೆ ಅಪರಿಚಿತರನ್ನು ನಂಬಲೇಬಾರದು. ಗೋವಾಗೆ ಬರುವ ಯಾತ್ರಿಕರೇ ಅವರ ಟಾರ್‍ಗೇಟ್. ಕೆಲವು ಜನರು ನಿಮ್ಮ ಜೊತೆ ಸಲಿಗೆಯಿಂದ ಇದ್ದು ನಿಮಗೆ ತಿಳಿದ ಹಾಗೆ ನಿಮ್ಮಿಂದಲೇ ಡ್ರಗ್ಸ್ ನೀಡಿ ನಿಮ್ಮ ಸರ್ವಸ್ವವನ್ನು ಕಸಿದುಕೊಳ್ಳುತ್ತಾರೆ.


PC:Andrea

ಮಹಿಳೆಯರು

ಮಹಿಳೆಯರು

ಮಹಿಳೆಯಾರದರೇ ಕಿಡ್ನಾಪ್ ಮಾಡಿ ವ್ಯಭಿಚಾರಿಗಳಿಗೆ ಮಾರಿದ ಹಲವಾರು ಸಂಘಟನೆಗಳು ಹಲವಾರು ನೆಡೆದಿದೆ. ಆದ್ದರಿಂದ ನಿಮ್ಮ ಜೊತೆ ಬರುವ ಮಹಿಳೆಯರು ಹಾಗೂ ಮಕ್ಕಳನ್ನು ಭದ್ರವಾಗಿ ನೋಡಿಕೊಳ್ಳಬೇಕು.

PC:Leonora (Ellie) Enking

ಏಕಾಂಗಿ

ಏಕಾಂಗಿ

ಕೆಲವು ಬೀಚ್‍ಗಳಲ್ಲಿ ಯಾರು ಇಲ್ಲ ಹಾರಾಮವಾಗಿ ಏಕಾಂಗಿಯಾಗಿ ಓಡಾಡಬಹುದು ಎಂದು ಅಂದುಕೊಂಡು ಓಡಾಡಿದರೆ ಅಲ್ಲೇ ಇರುವ ಕಳ್ಳರ ಜೊತೆಗೆ ನೈಜೀರಿಯಾ ದೇಶದ ಕಳ್ಳರು ನಿಮ್ಮಲ್ಲಿರುವುದೆಲ್ಲಾ ದೋಚಿಕೊಳ್ಳುತ್ತಾರೆ. ಎಷ್ಟೇ ಪ್ರತಿಭಟಿಸಿದರೂ ಕೂಡ ಕೊಲೆ ಮಾಡಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ.

PC:Akash Bhattacharya

ಸ್ಪೀಡ್ ಬೋಟಿಂಗ್

ಸ್ಪೀಡ್ ಬೋಟಿಂಗ್

ಗೋವಾಗೆ ಹೋಗುವವರು ಸ್ಪೀಡ್ ಬೋಟಿಂಗ್ ಮಾಡಲು ಇಷ್ಟ ಪಡುತ್ತಾರೆ. ಅಲ್ಲಿ ಹಲವಾರು ಸ್ಪೀಡ್ ಬೋಟಿಂಗ್ ಪರಿಣಿತರು ಇರುತ್ತಾರೆ ಅವರ ಸಹಾಯದಿಂದ .ಸ್ಪೀಡ್ ಬೋಟಿಂಗ್‍ಗೆ ತೆರಳಿ ಇಲ್ಲವಾದರೆ ಸಮುದ್ರದಲ್ಲಿ ಅಪಾಯ ಸಂಭವಿಸಬಹುದು.


PC:Abhishek Singh

ತಲುಪುವ ಬಗೆ?

ತಲುಪುವ ಬಗೆ?

ಗೋವಾ ಕರ್ನಾಟಕದಿಂದ ಹತ್ತಿರವಿರುವ ರಾಜ್ಯವಾದ್ದರಿಂದ ವಿಮಾನ. ರೈಲು, ಅಥವಾ ಹಲವಾರು ಖಾಸಗಿ ಬಸ್‍ಗಳ ಸೌಕರ್ಯವಿದೆ. ಹೀಗಾಗಿ ಸುಲಭವಾಗಿ ಸುಂದರವಾದ ಗೋವಾಗೆ ತಲುಪಬಹುದಾಗಿದೆ.

PC:Ramnath Bhat

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X