• Follow NativePlanet
Share
» »ವಿಜೃಂಬಣೆಯಿಂದ ನಡೆಯುವ ದೀಪಾವಳಿ ಹಬ್ಬ ಗೋವಾದಲ್ಲಿ ಹೇಗೆ ನಡೆಯುತ್ತದೆ ಗೊತ್ತ?

ವಿಜೃಂಬಣೆಯಿಂದ ನಡೆಯುವ ದೀಪಾವಳಿ ಹಬ್ಬ ಗೋವಾದಲ್ಲಿ ಹೇಗೆ ನಡೆಯುತ್ತದೆ ಗೊತ್ತ?

Written By:

ಗೋವಾ ಎಂಬ ಹೆಸರು ಕೇಳುತ್ತಿದ್ದಂತೆ ಪ್ರತಿಯೊಬ್ಬರಿಗೂ ಸುಂದರವಾದ ಬೀಚ್‍ಗಳು, ಅಹ್ಲಾದಕರವಾದ ವಾತಾವರಣ, ಪ್ರಕೃತಿ ದೃಶ್ಯಗಳು ನೆನಪಿಗೆ ಬರುತ್ತದೆ. ದೇಶವೆಲ್ಲಾ ವಿಜೃಂಬಣೆಯಿಂದ ಆಚರಿಸುವ ದೀಪಾವಳಿ ಹಬ್ಬವು ಗೋವಾದಲ್ಲಿ ಅತ್ಯಂತ ಸಂಪ್ರಾದಾಯವಾಗಿ ಆಚರಿಸಲಾಗುತ್ತದೆ. ದೀಪಾವಳಿಯನ್ನು "ದಿಯಾಂಚಿ ಆಲಿ" ಎಂದು ಗೋವಾದಲ್ಲಿ ಕರೆಯುತ್ತಾರೆ. ದೀಪಾವಳಿಯ ಹಬ್ಬದ ದಿನ ಪ್ರತಿ ಮನೆಯಲ್ಲಿ ಎಣ್ಣೆಯಿಂದ ಹಚ್ಚಿದ ದೀಪಗಳನ್ನು ಸಂಪ್ರದಾಯವಾಗಿ ಹಬ್ಬವನ್ನು ಪ್ರಾರಂಭಿಸುತ್ತಾರೆ. ಇವುಗಳನ್ನು ಕೊಂಕಣಿ ಭಾಷೆಯಲ್ಲಿ "ದಿಯಾಲಿಸ್" ಎಂದು ಕರೆಯುತ್ತಾರೆ.

ಆ ದಿನದಂದು ಅತ್ಯಂತ ಉತ್ಸವದಿಂದ ಪ್ರತಿ ಮನೆಯಲ್ಲಿ ಆಕಾಶ ದೀಪಗಳು ಬೆಳಗುತ್ತಿರುತ್ತದೆ. ಅಂದರೆ ಇದು ವಿವಿಧ ಬಣ್ಣಗಳಿಂದ ಕೂಡಿದ್ದು, ಕಿಟಕಿಗಳಲ್ಲಿ ನೇತಾಡಲು ಬೀಡುತ್ತಾರೆ. ಇದು ಇಲ್ಲಿನ ಪ್ರಜೆಗಳ ದೀಪಾವಳಿ ಹಬ್ಬದ ಆಚಾರವಾಗಿ ಬಂದಿದೆ. ಗೋವಾದಲ್ಲಿ ಈ ಹಬ್ಬವು ಹೇಗೆಲ್ಲಾ ಆಚರಿಸುತ್ತಾರೆ ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

 ಗೋವಾದಲ್ಲಿ ದೀಪಾವಳಿ ಹಬ್ಬ

ಗೋವಾದಲ್ಲಿ ದೀಪಾವಳಿ ಹಬ್ಬ

ನರಕ ಚರ್ತುದಶಿ ಹಬ್ಬದಂದು ದೀಪಾವಳಿ ಹಬ್ಬವು ಎಲ್ಲಾ ರಾಜ್ಯಗಳಲ್ಲಿಯೂ ಪ್ರಾರಂಭವಾಗುತ್ತದೆ. ನರಕಚರ್ತುದಶಿ ದಿನದಂದು ದೀವಾಳಿ ಎಂದು ಕರೆಯುತ್ತಾರೆ. ಇದರ ನಂತರ ದಿನ ಬರುವುದೇ ದೀಪಾವಳಿ. ಇದನ್ನು ಗೋವಾ ಭಾಷೆಯಲ್ಲಿ ವಾದಲಿ ಎಂದರೆ ದೊಡ್ಡ ಹಬ್ಬ ಎಂದು ಕರೆಯುತ್ತಾರೆ.

 ಗೋವಾದಲ್ಲಿ ದೀಪಾವಳಿ ಹಬ್ಬ

ಗೋವಾದಲ್ಲಿ ದೀಪಾವಳಿ ಹಬ್ಬ

ಈ ದೀಪಾವಳಿ ಹಬ್ಬದ 12 ದಿನದಂದು ತುಳಸಿ ಲಗ್ನಂ ಕೂಡ ಮಾಡುತ್ತಾರೆ. ಈ ತುಳಸಿ ಲಗ್ನವನ್ನು ಅತ್ಯಂತ ಶುಭಪ್ರದವಾದುದು ಎಂದು ಕೂಡ ಭಾವಿಸುತ್ತಾರೆ. ಸಾಧಾರಣವಾಗಿ ಇಲ್ಲಿನ ಪ್ರಜೆಗಳು ಈ ಹಬ್ಬದ ನಂತರ ಅಂದರೆ ತುಳಸಿ ಲಗ್ನಂದ ನಂತರ ವಿವಾಹವನ್ನು ಮಾಡಲು ಪ್ರಶ್ಯಸ್ತವಾದ ದಿನಗಳು ಎಂದು ಭಾವಿಸುತ್ತಾರೆ.

 ಗೋವಾದಲ್ಲಿ ದೀಪಾವಳಿ ಹಬ್ಬ

ಗೋವಾದಲ್ಲಿ ದೀಪಾವಳಿ ಹಬ್ಬ

ನರಕಚರ್ತುದಶಿಯಂದು ಅಲ್ಲಿನ ಪ್ರಜೆಗಳು ಮೈಗೆಲ್ಲಾ ಎಣ್ಣೆಯನ್ನು ಹಚ್ಚಿಕೊಂಡು, ಸುಂಗಧ ದ್ರವ್ಯಗಳಿಂದ ಮುಂಜಾನೆ ಸ್ನಾನವನ್ನು ಮಾಡುತ್ತಾರೆ. ಸ್ನಾನವಾದ ನಂತರ ಮನೆಯಲ್ಲಿನ ದೊಡ್ಡ ಮಹಿಳೆಯಲ್ಲಿ ಒಬ್ಬರು ನೂತನವಾದ ಬಟ್ಟೆಗಳನ್ನು ಪ್ರತಿಯೊಬ್ಬರಿಗೂ ನೀಡುತ್ತಾರೆ.

 ಗೋವಾದಲ್ಲಿ ದೀಪಾವಳಿ ಹಬ್ಬ

ಗೋವಾದಲ್ಲಿ ದೀಪಾವಳಿ ಹಬ್ಬ

ತದನಂತರ ರುಚಿ ರುಚಿಯಾದ ಆಹಾರಗಳನ್ನು ಮಾಡಿಕೊಂಡು ಭೋಜನ ಮಾಡುತ್ತಾರೆ. ಅದರಲ್ಲಿ ವಿವಿಧ ರೀತಿಯ ಸಿಹಿ ತಿಂಡಿಗಳು, ಕಾರ, ಹಾಲು ಇನ್ನು ಮೊದಲಾದ ಸ್ವಾಧಿಷ್ಟವಾದ ಆಹಾರವನ್ನು ಇಲ್ಲಿ ಸವಿಯಬಹುದು. ದೀಪಾವಳಿಯ 2 ನೇ ದಿನದಂದು ದೀಪಾವಳಿಯನ್ನು ನರಕಾಸುರನ ದೊಡ್ಡದಾದ ಬೊಂಬೆಯನ್ನು ನಿಲ್ಲಿಸಿ ಅದನ್ನು ಸುಟ್ಟು ಕೆಟ್ಟದರ ಮೇಲೆ ಸಾಧಿಸಿದ ವಿಜಯವಾಗಿ ಭಾವಿಸಲಾಗುತ್ತದೆ.

 ಗೋವಾದಲ್ಲಿ ದೀಪಾವಳಿ ಹಬ್ಬ

ಗೋವಾದಲ್ಲಿ ದೀಪಾವಳಿ ಹಬ್ಬ

ಕುಟುಂಬ ಸಭ್ಯರೆಲ್ಲಾರು ಸೇರಿ ಗೋವಾ ಪ್ರಜೆಗಳು ದೀಪಾವಳಿ ಸ್ವಾಧಿಷ್ಟವಾದ ಆಹಾರವನ್ನು ತಯಾರು ಮಾಡಿ ತಿನ್ನುತ್ತಾರೆ. ದೀಪಾವಳಿ ಹಬ್ಬದ ಪ್ರಧಾನವಾದ ಅಡಿಗೆಗಳೆಂದರೆ "ಪ್ಲಾಟ್ ರೈಸ್" ಅಥವಾ "ಪೋಹ". ಈ ಪೋಹವನ್ನು ವಿವಿಧ ರುಚಿಗಳಿಂದ ಮಾಡುತ್ತಾರೆ. ಇದರಲ್ಲಿ ಹಾಲು, ಸಕ್ಕರೆ, ಕೊಬ್ಬರಿಯ ಹಾಲು, ಬೆಲ್ಲ ಇನ್ನು ಹಲವಾರು ಪಾದಾರ್ಥಗಳನ್ನು ಹಾಕಿ ರುಚಿಕರವಾಗಿ ತಯಾರಿಸುತ್ತಾರೆ.

 ಗೋವಾದಲ್ಲಿ ದೀಪಾವಳಿ ಹಬ್ಬ

ಗೋವಾದಲ್ಲಿ ದೀಪಾವಳಿ ಹಬ್ಬ

ಆಲುಗಡ್ಡೆ, ಹರಿಶಿಣ, ಮೆಣಸಿನಕಾಯಿ ಇನ್ನು ಮೊದಲಾದ ಪಾದಾರ್ಥಗಳನ್ನು ಹಾಕಿ ಖಾರ-ಖಾರವಾಗಿ ಆಹಾರವನ್ನು ತಯಾರಿಸುತ್ತಾರೆ. ದೀಪಾವಳಿಹಬ್ಬದ 12 ನೇ ದಿನದಂದು ತುಳಸಿ ಲಗ್ನಂ ಎಂದು ಮಾಡಿ ಭೂಮಿಗೆ ನಮಸ್ಕಾರ ಮಾಡುತ್ತಾರೆ. ತಮ್ಮ ಉತ್ತಮವಾದ ಬೆಳೆಗಳನ್ನು ನೀಡಿದ್ದರಿಂದ ಭೂಮಿ ತಾಯಿಗೆ ಕೃತ್ಞತೆಯನ್ನು ಸಲ್ಲಿಸುತ್ತಾರೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ