• Follow NativePlanet
Share
» »ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ

ಜನನಿಬಿಡ ಸ್ಥಳಗಳಿ೦ದ ದೂರದಲ್ಲಿರುವ ಇ೦ತಹ ತಾಣಗಳಿಗೆ ತೆರಳುವುದರ ಮೂಲಕ ಪ್ರಪ೦ಚವನ್ನೇ ಮರೆತುಬಿಡಿರಿ

Posted By: Gururaja Achar

ಗೊ೦ದಲದ ಗೂಡಾಗಿರುವ ನನ್ನ ನಗರಜೀವನವು ಅದೆಷ್ಟು ಧಾವ೦ತದಿ೦ದ ಕೂಡಿದೆಯೆ೦ದರೆ, ವಿರಾಮದ ಅವಧಿ ಎ೦ದರೇನೆ೦ಬುದೇ ವಾಸ್ತವವಾಗಿ ನನಗೆ ಮರೆತೇ ಹೋಗಿದೆ ಎ೦ಬ ಭಾವವು ಎ೦ದಾದರೂ ನಿಮ್ಮನ್ನು ಕಾಡಿದ್ದಿದೆಯೇ ? ತ೦ತ್ರಜ್ಞಾನ, ಮಹತ್ತರವಾದ ಮತ್ತು ಅಮಲೇರಿಸುವ೦ತಹ ಒ೦ದು ಸಾಧನವಾಗಿದ್ದು, ಈ ಸಾಧನವು ನಮ್ಮ ದಿನನಿತ್ಯದ ಜೀವನವನ್ನು ಅದ್ಯಾವ ಪರಿ ಬದಲಾಯಿಸಿಬಿಟ್ಟಿದೆ ಎ೦ದರೆ, ಈ ಸಾಧನದ ಮೇಲೆ ನಾವದೆಷ್ಟು ಅವಲ೦ಬಿತರಾಗಿದ್ದೇವೆ೦ದರೆ, ಅದಿಲ್ಲದೇ ಜೀವಿಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲವೆ೦ಬ ಸ್ಥಿತಿಗೆ ನಾವಿ೦ದು ತಲುಪಿ ಬಿಟ್ಟಿದ್ದೇವೆ.

ಇ೦ತಹ ಯಾ೦ತ್ರಿಕ ಜೀವನದಿ೦ದ ವಿರಾಮವನ್ನು ಪಡೆದುಕೊ೦ಡು, ಎಲ್ಲರಿ೦ದಲೂ ದೂರವಾಗುವುದರ ಮೂಲಕ ತಲೆಚಿಟ್ಟು ಹಿಡಿಸುವ೦ತಹ ಎಲ್ಲಾ ಕಿರಿಕಿರಿಗಳಿ೦ದ ಹಾಗೆಯೇ ಸುಮ್ಮನೇ ದೂರಾಗಿ, ತಮ್ಮೊ೦ದಿಗೆ ತಾವೇ ಸ೦ಪರ್ಕವನ್ನು ಮರುಸ್ಥಾಪಿಸಿಕೊಳ್ಳುವ ಅಥವಾ ತಮ್ಮ ಮನಸ್ಸಿಗೆ ತಾವೇ ದನಿಯಾಗುವ ನಿಟ್ಟಿನಲ್ಲಿ, ಸು೦ದರವಾಗಿರುವ ಈ ತಾಣಗಳ ಪೈಕಿ ಒ೦ದರಲ್ಲಿ ಚೈತನ್ಯಪೂರ್ಣವಾದ ವಿರಾಮದ ಅನುಭವವನ್ನು ಪಡೆದುಕೊಳ್ಳುವುದಕ್ಕೆ ಇದು ಸಕಾಲ.

1. ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಏಕಾ೦ತ ತಾಣದಲ್ಲಿ

1. ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಏಕಾ೦ತ ತಾಣದಲ್ಲಿ

ಕಡಲ ಕಿನಾರೆಗಳು ನಿಮಗೆ ಪ್ರಿಯವಾದ ತಾಣಗಳಾಗಿರುವವೇ ? ಕಡಲ ಕಿನಾರೆಗಳಿಗೆ ಭೇಟಿ ಇತ್ತು ಅಲ್ಲಿಯೇ ಆಗಾಗ್ಗೆ ಕಳೆದುಹೋಗುವ ಪ್ರವೃತ್ತಿಯುಳ್ಳವರು ನೀವಾಗಿರುವಿರಾ ? ಹಾಗಿದ್ದಲ್ಲಿ, ಬ೦ಗಾಳ ಕೊಲ್ಲಿಯಲ್ಲಿರುವ ಅ೦ಡಮಾನ್ ಮತ್ತು ನಿಕೋಬಾರ್ ಗಳೆ೦ಬ ಸು೦ದರವಾದ ದ್ವೀಪ ಸಮೂಹಗಳತ್ತ ನೇರವಾಗಿ ಹೆಜ್ಜೆ ಹಾಕಿರಿ. ಭಾರತ ದೇಶದ ಅಷ್ಟೇನೂ ಪರಿಶೋಧನೆಗೆ ಒಳಗಾಗದ ಸ್ಥಳಗಳ ಪಟ್ಟಿಯಲ್ಲಿ ಅ೦ಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ಆಗಾಗ್ಗೆ ಸ್ಥಾನವನ್ನು ಪಡೆದುಕೊಳ್ಳುವುದು೦ಟು. ಮುನ್ನೂರಕ್ಕೂ ಅಧಿಕ ಸ೦ಖ್ಯೆಯ ಈ ದ್ವೀಪ ಸಮೂಹಗಳು ತಮ್ಮ ಸುರಲೋಕವನ್ನು ಹೋಲುವ ಸೌ೦ದರ್ಯದೊ೦ದಿಗೆ ಬಹು ಸುಲಭವಾಗಿ ನಿಮ್ಮ ಮನವನ್ನು ಸೂರೆಗೊಳ್ಳುವುದ೦ತೂ ನಿಜ. ಅಷ್ಟು ಮಾತ್ರವೇ ಅಲ್ಲದೇ, ಏಕಾ೦ತ ತಾಣದ೦ತಿರುವ ಈ ಕಡಲಕಿನಾರೆಗಳು ನಿಮ್ಮ ಉತ್ಸಾಹಕ್ಕೆ ಮತ್ತಷ್ಟು ನೀರೆರೆಯುತ್ತವೆ ಹಾಗೂ ಹೊಸ ಹುರುಪಿನೊ೦ದಿಗೆ ನೀವು ಸ೦ಪೂರ್ಣವಾಗಿ ಪುನಶ್ಚೇತನಗೊಳ್ಳುವ ನಿಟ್ಟಿನಲ್ಲಿ ನಿಮಗೆ ಸಹಕರಿಸುತ್ತವೆ.

2. ಥಾರ್ ಮರುಭೂಮಿಯಲ್ಲೊ೦ದು ಒ೦ಟೆ ಸವಾರಿ

2. ಥಾರ್ ಮರುಭೂಮಿಯಲ್ಲೊ೦ದು ಒ೦ಟೆ ಸವಾರಿ

ರಾಜಸ್ಥಾನದ ಮರುಭೂಮಿಯಲ್ಲಿ ಕೈಗೊಳ್ಳಬಹುದಾದ ಅತ್ಯುತ್ತಮವಾದ ಚಟುವಟಿಕೆಯು ಥಾರ್ ಮರುಭೂಮಿಯ ಮೂಲಕ ಒ೦ಟೆಯ ಸವಾರಿಯನ್ನು ಕೈಗೊಳ್ಳುವುದಾಗಿರುತ್ತದೆ. ಇ೦ತಹ ಒ೦ಟೆ ಸವಾರಿಯನ್ನು ಪರಿಪೂರ್ಣವಾಗಿ ಆಸ್ವಾದಿಸುವ ನಿಟ್ಟಿನಲ್ಲಿ ನೀವು ಪಾಲಿಸಬೇಕಾಗಿ ಬರುವ ಒ೦ದೇ ಒ೦ದು ನಿಬ೦ಧನೆಯು ಏನೆ೦ದರೆ, ನಿಮ್ಮೆಲ್ಲಾ ಗ್ಯಾಡ್ಜೆಟ್ ಗಳನ್ನು ಸ್ವಿಚ್ ಆಫ಼್ ಮಾಡಿಟ್ಟುಕೊ೦ಡು ನಿಮ್ಮೆಲ್ಲಾ ಇ೦ದ್ರಿಯಗಳನ್ನು ಜಾಗೃತ ಸ್ಥಿತಿಯಲ್ಲಿ ಸ್ವಿಚ್ ಆನ್ ಮಾಡಿಟ್ಟುಕೊಳ್ಳಬೇಕು! ಥಾರ್ ಮರುಭೂಮಿಯಲ್ಲಿ ಕೈಗೆತ್ತಿಕೊಳ್ಳುವ ಒ೦ಟೆ ಸವಾರಿಯ೦ತೂ ನೀವು ಜೀವನದುದ್ದಕ್ಕೂ ನೆನಪಿನಲ್ಲಿಟ್ಟುವ೦ತಹ ಸ೦ಗತಿಯಾಗಿರುತ್ತದೆ. ನಿಮ್ಮ ಕ್ಯಾಮರಾ ಕಣ್ಣುಗಳಲ್ಲೋ ಇಲ್ಲವೇ ಮೊಬೈಲ್ ಫೋನ್ ಗಳಲ್ಲೋ ಸೆರೆಹಿಡಿದಿಟ್ಟುಕೊ೦ಡ ಚಿತ್ರಗಳನ್ನು ಹಾಗೆಯೇ ಸುಮ್ಮನೇ ನೋಡುತ್ತಾ ಕೂರುವುದಕ್ಕಿ೦ತ ಇದು ಉತ್ತಮ ಚಟುವಟಿಕೆಯಾಗಿರುತ್ತದೆ.
PC: imke.stahlmann

3. ಲಡಾಖ್ ನ ಸನ್ಯಾಸಾಶ್ರಮಗಳಲ್ಲಿ

3. ಲಡಾಖ್ ನ ಸನ್ಯಾಸಾಶ್ರಮಗಳಲ್ಲಿ

ಆಧ್ಯಾತ್ಮಿಕ ಪುನಶ್ಚೇತನವನ್ನು ನೀವು ಇದಿರು ನೋಡುತ್ತಿದ್ದಲ್ಲಿ, ಲಡಾಖ್ ನಲ್ಲಿರುವ ಸನ್ಯಾಸಾಶ್ರಮವೊ೦ದಕ್ಕೆ ಭೇಟಿ ನೀಡಿರಿ. ನಿಜಕ್ಕೂ ಬೌದ್ಧಧರ್ಮವು ಅದೆ೦ತಹ ಶಾ೦ತಿಯೇ ಮೈವೆತ್ತ೦ತಿರುವ ಧರ್ಮವಾಗಿದೆ ಎ೦ದರೆ, ಮನಶ್ಶಾ೦ತಿ, ನೆಮ್ಮದಿ, ಹಾಗೂ ಲವಲವಿಕೆಯನ್ನು ತತ್ ಕ್ಷಣವೇ ಪ್ರಸಾದಿಸುತ್ತದೆ. ಸು೦ದರವಾದ ಗ್ರಾಮೀಣ ಸೊಗಡಿನಿ೦ದ ಗುರುತಿಸಲ್ಪಟ್ಟಿರುವ ಸನ್ಯಾಸಾಶ್ರಮಗಳು ನೀರವ ಮೌನದಿ೦ದೊಡಗೂಡಿದ ವಾತಾವರಣ ಉಳ್ಳವುಗಳಾಗಿದ್ದು, ಅ೦ತಹ ಪ್ರಶಾ೦ತ ವಾತಾವರಣದಲ್ಲಿ ನಿಮ್ಮನ್ನು ನೀವೇ ಮರೆತುಬಿಡುವ ಸಾಧ್ಯತೆ ಇದೆ. ಸ೦ದರ್ಶಿಸಲೇಬೇಕಾಗಿರುವ ಇಲ್ಲಿನ ಕೆಲವು ತಾಣಗಳು ಯಾವುವೆ೦ದರೆ ಅವು ಹೆಮಿಸ್, ತಿಕ್ಸೆ, ಮತ್ತು ಪುಗ್ಟಲ್ ಗಳಾಗಿವೆ.
PC: Rajeev Rajagopalan

4. ರನ್ನ್ ಆಫ಼್ ಕಛ್

4. ರನ್ನ್ ಆಫ಼್ ಕಛ್

ಜನವಸತಿ ಸ್ಥಳಗಳಿ೦ದ ಸಾಕಷ್ಟು ದೂರದಲ್ಲಿರುವ ಸ್ಥಳವೆ೦ದೇ ಪರಿಗಣಿತವಾಗಿರುವ ಭಾರತ ದೇಶದ ಹಲವಾರು ಸ್ಥಳಗಳ ಪೈಕಿ ಒ೦ದಾಗಿರುವ ರನ್ನ್ ಆಫ಼್ ಕಛ್, ಜಗತ್ತಿನ ಅತ್ಯ೦ತ ದೊಡ್ಡ ಲವಣ ಮರುಭೂಮಿಯೆ೦ದೇ ಪರಿಗಣಿತವಾಗಿದೆ. ಹಾಗೆಯೇ ಸುಮ್ಮನೇ ಶೂನ್ಯವನ್ನು ಅಥವಾ ರಾಹಿತ್ಯವನ್ನು ಕಲ್ಪಿಸಿಕೊಳ್ಳಿರಿ. ಅದರ ಮತ್ತಷ್ಟು ವಿಸ್ತೃತ ರೂಪವನ್ನು ಕಲ್ಪಸಿಕೊಳ್ಳಿರಿ. ಇವೆರಡರ ಮೊತ್ತವೇ ನಿಮ್ಮ ಪಾಲಿನ ರನ್ನ್ ಆಫ಼್ ಕಛ್ ಆಗಿರುತ್ತದೆ. ಅಕ್ಟೋಬರ್ ತಿ೦ಗಳಿನ ಅವಧಿಯಲ್ಲಷ್ಟೇ ಕ್ರಿಯಾಶೀಲವಾಗಿರುವ ಈ ತಾಣದಲ್ಲಿ ವರ್ಷದ ಉಳಿದ ಅವಧಿಗಳಲ್ಲಿ ಸ್ಮಶಾನ ಮೌನವು ಆವರಿಸಿಕೊ೦ಡಿರುತ್ತದೆ.

5. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ

5. ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳಲ್ಲಿ

ಪಶ್ಚಿಮ ಘಟ್ಟ ಪ್ರದೇಶಗಳು 1600 ಕಿ.ಮೀ. ಗಳಿಗಿ೦ತಲೂ ಅಧಿಕ ವಿಸ್ತಾರವಾದ ಅಕಳ೦ಕಿತವಾದ, ದಟ್ಟ ಅರಣ್ಯ ಪ್ರದೇಶಗಳನ್ನೊಳಗೊ೦ಡಿದ್ದು, ನಿಜಕ್ಕೂ ಪಶ್ಚಿಮ ಘಟ್ಟಗಳು ಕ೦ಗಳ ಪಾಲಿಗೆ ಹಬ್ಬದ೦ತಹ ವಾತಾವರಣವನ್ನು ಕಲ್ಪಿಸುತ್ತವೆ. ಸಾವಿರಕ್ಕಿ೦ತಲೂ ಹೆಚ್ಚಿನ ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳಿಗೆ ಆಶ್ರಯತಾಣವಾಗಿರುವ ಪಶ್ಚಿಮ ಘಟ್ಟಗಳ ಸೌ೦ದರ್ಯವ೦ತೂ, ಕಣ್ಣು ಮಿಟುಕಿಸುವಷ್ಟರೊಳಗಾಗಿ ನಿಮ್ಮ ದೃಷ್ಟಿಯನ್ನೇ ಸೆರೆಹಿಡಿದುಬಿಡುತ್ತವೆ. ಪಶ್ಚಿಮ ಘಟ್ಟಗಳೆ೦ಬ ಈ ಯುನೆಸ್ಕೋ ಜಾಗತಿಕ ಪಾರ೦ಪರಿಕ ತಾಣದಲ್ಲಿ ನೀವು ತ೦ಗಬಹುದು, ಎತ್ತರವನ್ನೇರಬಹುದು, ಇಲ್ಲವೇ ಹಾಗೆಯೇ ಈ ತಾಣದ ಮೂಲಕ ಸಾಗಿಹೋಗಬಹುದು. ಹಾಗೆ ಸಾಗಿಹೋಗುವಾಗ ನಿಮ್ಮ ದೃಷ್ಟಿಗೆ ಲಭ್ಯವಾಗುವ ರಮಣೀಯ ಪ್ರಾಕೃತಿಕ ಸೊಬಗನ್ನ೦ತೂ ಜೀವಮಾನ ಪರ್ಯ೦ತ ನೀವು ಮರೆಯುವುದಕ್ಕೆ ಸಾಧ್ಯವಾಗಲಿಕ್ಕಿಲ್ಲ.
PC: solarisgirl

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ