Search
  • Follow NativePlanet
Share
» »ಐತಿಹಾಸಿಕ ದಿಂಡುಕ್ಕಲ್‌ನಲ್ಲಿ ಏನೇನಿದೆ ಗೊತ್ತಾ?

ಐತಿಹಾಸಿಕ ದಿಂಡುಕ್ಕಲ್‌ನಲ್ಲಿ ಏನೇನಿದೆ ಗೊತ್ತಾ?

ದಿಂಡುಕ್ಕಲ್ ನಗರ ತಮಿಳುನಾಡು ರಾಜ್ಯದಲ್ಲಿದೆ . ದಿಂಡುಕ್ಕಲ್ ಎಂಬ ಪದದ ಅರ್ಥ 'ದಿಂಡು' ಎಂದರೆ ದಿಂಬು , ಕಲ್ ಎಂದರೆ 'ಕಲ್ಲು ' ಎಂದಾಗಿದೆ. ನಗರದಿಂದ ನೋಡಿದರೆ ಒಂದು ಖಾಲಿ ಬೆಟ್ಟದಂತೆ ಕಾಣುತ್ತದೆ . ಈ ನಗರವು ಪಳನಿ ಬೆಟ್ಟ ಮತ್ತು ಸಿರುಮಲೈ ಬೆಟ್ಟಗಳ ನಡುವೆ ಇದೆ ಇದು ಫಲವತ್ತಾದ ಮಣ್ಣನ್ನು ಹೊಂದಿದ್ದು ಕೃಷಿಗೆ ಯೋಗ್ಯ ಭೂಮಿಯಾಗಿದೆ . ದಿಂಡುಕ್ಕಲ್ ಹಲವಾರು ಜಿಲ್ಲೆ ಮತ್ತು ನಗರಗಳನ್ನು ಒಳಗೊಂಡಿದೆ. ಉತ್ತರದಲ್ಲಿ ಕರಿ ಮತ್ತು ಎರೋಡಿ ಜಿಲ್ಲೆಗಳಿವೆ , ದಕ್ಷಿಣದಲ್ಲಿ ಮಧುರೈ , ಪಶ್ಚಿಮ ಭಾಗದಲ್ಲಿ ತುರುಪ್ಪುರ್ ಮತ್ತು ಕೇರಳ ವಿದೆ . ದಿಂಡುಕ್ಕಲ್ ನಗರವನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ ಅವುಗಳೆಂದರೆ ಬಿರಿಯಾನಿ ನಗರ , ಜವಳಿ ನಗರ ಮತ್ತು ತನ್ನೇರಿ .

ದಿಂಡುಕ್ಕಲ್ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು

ದಿಂಡುಕ್ಕಲ್ ಮತ್ತು ಹತ್ತಿರದ ಪ್ರವಾಸಿ ಸ್ಥಳಗಳು

PC: SriniGS
ಇಲ್ಲಿನ ಭವ್ಯ ಕೋಟೆಯೊಂದಿಗೆ ದೇವಸ್ಥಾನಗಳು , ಪವಿತ್ರ ನದಿಗಳು ಕೂಡ ದಿಂಡುಕ್ಕಲ್ ನ ಪ್ರವಾಸಿ ಸ್ಥಳಗಳಾಗಿವೆ . ದಿಂಡುಕ್ಕಲ್ ನಿಂದ 7 ಕಿ ಮೀ ದೂರದಲ್ಲಿರುವ ಪಂಜಮಪಟ್ಟಿ ನೋಡಲೇಬೇಕಾದ ಸ್ಥಳವಾಗಿದೆ . 300 ವರ್ಷ ಹಳೆಯ ರೋಮನ್ ಕ್ಯಾಥೊಲಿಕ್ ಚರ್ಚ್ ಇದೆ ಇದೂ ಕೂಡ ಪ್ರವಾಸಿ ಯೋಗ್ಯ ಸ್ಥಳವಾಗಿದೆ. ಕಿಂಗ್ ಚರ್ಚ್ ಮತ್ತು ಸಂತ ಜೋಸೆಫ್ ಚರ್ಚ್ ಗಳು ನಗರದ ಮುಖ್ಯ ಚರ್ಚ್ ಗಳಾಗಿವೆ .ದಿಂಡುಕ್ಕಲ್ ಗೆ ಹತ್ತಿರವಿರುವ ಆಹ್ಲಾದಕರ ಗಿರಿಧಾಮವಾಗಿರುವ ಸಿರುಮಲೈ ಹಿಲ್ ರೆಸಾರ್ಟ್ ದಿಂಡುಕ್ಕಲ್ ನಥನ್ ಗೆ ಹೋಗುವಾಗ ಸಿಗುತ್ತದೆ .

ನಗರದ ಯಾತ್ರಾ ಸ್ಥಳಗಳು

ನಗರದ ಯಾತ್ರಾ ಸ್ಥಳಗಳು

PC:Drajay1976
ಬೇಗಂಬೂರು ದೊಡ್ಡ ಮಸೀದಿ , ಶ್ರೀ ಮರಿಯಮ್ಮನ ದೇವಸ್ಥಾನ , ವಿಶ್ವನಾಥ ದೇವಸ್ಥಾನ , ಕಾಮಾಕ್ಷಿ ದೇವಸ್ಥಾನ , ಥದಿಕೊಂಬು ಪೆರುಮಾಳ್ ದೇವಸ್ಥಾನ , ಅಬಿರಾಮಿ ದೇವಸ್ಥಾನ , ಆಂಜನೇಯ ದೇವಸ್ಥಾನ , ಅತ್ಹೂರ್ ಕಾಮರಾಜರ್ ಕೊಳ ಮತ್ತು ಡ್ಯಾಮ್ ಇವುಗಳು ಪ್ರವಾಸ ಯೋಗ್ಯವಾದ ದಿಂಡುಕ್ಕಲ್ ಹತ್ತಿರದ ಸ್ಥಳಗಳಾಗಿವೆ . ಮತ್ತೊಂದು ಆಕರ್ಷಣೆಯಾದ ವೈಗೈ, ಮಂಜುಳ ಮತ್ತು ಮರುಡ ಎಂಬ ಮೂರು ನದಿಗಳು ಸೇರುವ ಸ್ಥಳ ನಗರದ ಯಾತ್ರಾ ಸ್ಥಳವಾಗಿದೆ .

ಟ್ರಕ್ಕಿಂಗ್ ಗೆ ಯೋಗ್ಯವಾಗಿದೆ

ಟ್ರಕ್ಕಿಂಗ್ ಗೆ ಯೋಗ್ಯವಾಗಿದೆ

PC: Jaseem Hamza
ನಗರದಲ್ಲಿರುವ ಮಲ್ಲೈಕೊಟ್ಟೈ ಎಂಬ ಸಣ್ಣ ಬೆಟ್ಟ ಟ್ರಕ್ಕಿಂಗ್ ಗೆ ಯೋಗ್ಯವಾಗಿದೆ . ಚಿನ್ನಳಪಟ್ಟಿ ಇನ್ನೊಂದು ಪ್ರವಾಸಿಗರ ಇಷ್ಟದ ಸ್ಥಳ . ದಿಂಡುಕ್ಕಲ್ ನ ಅಡುಗೆ ಕೂಡ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ. ಇದು ಬಿರಿಯಾನಿಗೆ ಜನಪ್ರಿಯವಾಗಿದ್ದು ಆದ್ದರಿಂದ ಇದನ್ನು ಬಿರಿಯಾನಿ ನಗರ ಎಂದು ಕರೆಯುತ್ತಾರೆ . ಇದರೊಂದಿಗೆ ಬೇರೆಬೇರೆ ತಿನಿಸುಗಳು ಜನಪ್ರಿಯಗೊಂಡಿದ್ದು ಪ್ರವಾಸಿ ಸಂದರ್ಭದಲ್ಲಿ ಇದನ್ನು ತಿನ್ನಲೇಬೇಕು .

ಈ ನಗರದ ಇತಿಹಾಸ

ಈ ನಗರದ ಇತಿಹಾಸ

PC: Ssriram mt
ದಿಂಡುಕ್ಕಲ್ ನ ಐತಿಹಾಸಿಕ ಹೆಗ್ಗುರುತುಗಳಲ್ಲಿ ಬೆಟ್ಟದ ತುದಿಯಲ್ಲಿರುವ ಕಲ್ಲಿನ ಕೋಟೆಯೂ ಒಂದು . 1605 ರಲ್ಲಿ ಮಧುರೈ ನಾಯಕ ಮುತ್ತುಕೃಷ್ಣ ಇದನ್ನು ಕಟ್ಟಲು ಪ್ರಾರಂಭಿಸಿದ 1623 ರಿಂದ 1659 ರಲ್ಲಿ ಇದನ್ನು ಕಟ್ಟಿ ಮುಗಿಸಲಾಯಿತು . 1755 ರಲ್ಲಿ ಹೈದರಾಲಿ ಆತನ ಹೆಂಡತಿ ಮತ್ತು ಮಗ ಟಿಪ್ಪು ಸುಲ್ತಾನ್ ದಿಂಡುಕ್ಕಲ್ ಗೆ ಬಂದಿದ್ದರು . ಟಿಪ್ಪು ಸುಲ್ತಾನ್ 1784 ರಿಂದ 1790 ರ ವರೆಗೆ ಈ ಕೋಟೆಯ ಆಳ್ವಿಕೆ ನಡೆಸಿದ ಎನ್ನಲಾಗಿದೆ . 1784 ರಲ್ಲಿ ಟಿಪ್ಪುವಿನ ಕೆಲಸಗಾರರು ಕೋಟೆಯಲ್ಲಿ ಹೆಚ್ಚಿನ ಕೊಠಡಿ ಕಟ್ಟುವುದು ಮತ್ತು ಗೋಡೆಯನ್ನು ಬಲಪಡಿಸುವುದರ ಮೂಲಕ ಕೋಟೆಯನ್ನು ನವೀಕರಿಸಿದರು . 1790 ರ ಮೈಸೂರು ಯುದ್ಧದಲ್ಲಿ ಬ್ರಿಟೀಷರು ಟಿಪ್ಪು ಸುಲ್ತಾನನನ್ನು ಸೋಲಿಸಿದರು ಮತ್ತು ಈ ಕೋಟೆ ಬ್ರಿಟೀಷರ ವಶಕ್ಕೆ ಹೋಯಿತು. .

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: Ssriram mt
ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ನಗರದಲ್ಲಿ ಹೆಚ್ಚು ಒಣ ಮತ್ತು ಬಿಸಿಲಿನ ಅನುಭವವಾಗುತ್ತದೆ .ಆದ್ದರಿಂದ ದಿಂಡುಕ್ಕಲ್ ಅನ್ನು ನೋಡಲು ಸರಿಯಾದ ಸಮಯ ಚಳಿಗಾಲ ಮತ್ತು ಮಳೆಗಾಲ. ಈ ಸಮಯದಲ್ಲಿ ಹವಾಮಾನ ತಂಪು ಮತ್ತು ಆಹ್ಲಾದಕರವಾಗಿರುತ್ತದೆ . ಈ ಸಮಯದಲ್ಲಿ ತಾಪಮಾನ ಪ್ರಯಾಣಕ್ಕೆ ಮತ್ತು ಸುತ್ತಲು ಹೆಚ್ಚು ಸೂಕ್ತವಾಗಿರುತ್ತದೆ . ಸೆಪ್ಟೆಂಬರ್ ನಿಂದ ಮಾರ್ಚ್ ದಿಂಡುಕ್ಕಲ್ ಭೇಟಿ ನೀಡಲು ಒಳ್ಳೆಯ ಸಮಯ .

ತಲುಪುವ ಮಾರ್ಗ

ತಲುಪುವ ಮಾರ್ಗ

PC: Aruna
ದಿಂಡುಕ್ಕಲ್ ಗೆ ಪ್ರಯಾಣಿಸುವುದು ಸುಲಭ . ಇಲ್ಲಿಗೆ ತಲುಪಲು ಸಾಕಷ್ಟು ಬೇರೆಬೇರೆ ಮಾರ್ಗಗಳಿವೆ . ಮಧುರೈ ಹತ್ತ್ತಿರದ ವಿಮಾನ ನಿಲ್ದಾಣ ಮತ್ತು ಚನ್ನೈ ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ . ದಿಂಡುಕ್ಕಲ್ ನ ರೈಲು ನಿಲ್ದಾಣದಿಂದ ತಮಿಳುನಾಡಿನ ಇತರ ನಗರಗಳಿಗೆ ಸುಲಭವಾಗಿ ತಲುಪಬಹುದು . ಸ್ಥಳೀಯ ಪ್ರಯಾಣಗಳಿಗೆ ಆಟೋ ಮತ್ತು ಟ್ಯಾಕ್ಸಿಗಳು ಸುಲಭವಾಗಿ ಸಿಗುತ್ತವೆ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X