Search
  • Follow NativePlanet
Share
» »ವಿಚಿತ್ರವಾದ ಶಿವಾಲಯಗಳು ಇವು...

ವಿಚಿತ್ರವಾದ ಶಿವಾಲಯಗಳು ಇವು...

ಸೃಷ್ಟಿಯ ಲಯಕಾರನಾದ ಮಹಾಶಿವನಿಗೆ ಸಂಬಂಧಿಸಿದ ಕೆಲವು ವಿಶೇಷವಾದ ಶೈವ ಕ್ಷೇತ್ರಗಳು ನಮ್ಮ ಭೂ ಮಂಡಲದಲ್ಲಿಯೇ ಇದೆ. ಅವುಗಳಲ್ಲಿ ಕೆಲವು ಮಾತ್ರ ತನ್ನದೇ ಆದ ಮಹತ್ವವನ್ನು ಹೊಂದಿದೆ. ಒಂದು ಶಿವಾಲಯದಲ್ಲಿ ನಂದಿಯೇ ಇಲ್ಲ. ಮತ್ತೊಂದು ದೇವಾಲಯವು 6 ತಿಂಗಳ

ಸೃಷ್ಟಿಯ ಲಯಕಾರನಾದ ಮಹಾಶಿವನಿಗೆ ಸಂಬಂಧಿಸಿದ ಕೆಲವು ವಿಶೇಷವಾದ ಶೈವ ಕ್ಷೇತ್ರಗಳು ನಮ್ಮ ಭೂ ಮಂಡಲದಲ್ಲಿಯೇ ಇದೆ. ಅವುಗಳಲ್ಲಿ ಕೆಲವು ಮಾತ್ರ ತನ್ನದೇ ಆದ ಮಹತ್ವವನ್ನು ಹೊಂದಿದೆ. ಒಂದು ಶಿವಾಲಯದಲ್ಲಿ ನಂದಿಯೇ ಇಲ್ಲ. ಮತ್ತೊಂದು ದೇವಾಲಯವು 6 ತಿಂಗಳು ಭೂಮಿಯ ಮೇಲೆಯೇ ಇರುವುದಿಲ್ಲ. ಲಿಂಗ ಸ್ವರೂಪಿಯಾಗಿ ಪಾರ್ವತಿ ದೇವಿಯು ನೆಲೆಸಿದ್ದಾಳೆ. ಜಟಾಜೂಟವನ್ನು ಹೊಂದಿರುವ ಲಿಂಗವನ್ನು ಎಂದಾದರೂ ಕಂಡಿದ್ದೀರಾ? ಅತ್ಯಂತ ಎತ್ತರ ಶಿವಲಿಂಗವನ್ನು ನೋಡಿದ್ದೀರಾ? ಶಿವಲಿಂಗದಲ್ಲಿ 2 ಪಾರಿವಾಳಗಳು.. ಅಬ್ಬಾ ಎಂಥ ದೇವಾಲಯಗಳು ಅಲ್ಲವೇ? ಇವೆಲ್ಲಾ ದೇವಾಲಯಗಳು ಅದರದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಹಾಗಾದರೆ ಆ ಎಲ್ಲಾ ದೇವಾಲಯದ ಮಹಿಮೆಯ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಯಾವುದೇ ಒಂದು ಶಿವಾಲಯದಲ್ಲಿಯೂ ನಂದಿ ಇಲ್ಲದೇ ಇರುವುದಿಲ್ಲ. ಮಹಾಶಿವನು ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ಶಿವನ ವಾಹನವಾದ ನಂದಿ ನೆಲೆಸುತ್ತಾನೆ. ಇದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಯಾವುದೇ ಒಂದು ಶಿವಾಲಯದಲ್ಲಿಯೂ ಕೂಡ ತನ್ನ ಒಡೆಯನ ಆಜ್ಞೆಯನ್ನು ಎದುರು ನೋಡುತ್ತಿರುವ ಸುಂದರ ಭಂಗಿಯಲ್ಲಿ ನಂದಿಯು ಕುಳಿತುಕೊಂಡಿರುತ್ತಾನೆ. ಆದರೆ ಇಲ್ಲೊಂದು ಶಿವಾಲಯವಿದೆ. ಆ ಶಿವಾಲಯದಲ್ಲಿ ನಂದಿಯೇ ಇಲ್ಲ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಇದೇ ಈ ದೇವಾಲಯದ ವಿಶೇಷತೆ. ಅಷ್ಟಕ್ಕೂ ಆ ದೇವಾಲಯ ಯಾವುದೆಂದರೆ ಅನಂತಪುರ ಜಿಲ್ಲೆಯಲ್ಲಿನ ಅಮರಪುರಂ ಹೇಮಾವತಿ ಗ್ರಾಮದಲ್ಲಿರುವ ಸಿದ್ದೇಶ್ವರ ದೇವಾಲಯದಲ್ಲಿ ಮಾತ್ರ ಶಿವನ ಎದುರಿಗೆ ನಂದಿ ಇರುವುದಿಲ್ಲ. ಇಲ್ಲಿನ ಶಿವನು ಉಗ್ರ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ. ಇದಕ್ಕೆ ಒಂದು ಪುರಾಣ ಕಥೆಯು ಕೂಡ ಇದೆ. ಅದೆನೆಂದರೆ ದಕ್ಷ ಯಜ್ಞ ನಡೆಯುವ ಸಮಯಕ್ಕೆ ಶಿವನು ಬೇಡ ಎಂದು ಹೇಳಿದರು ಕೂಡ ತಂದೆ ಮಾಡುವ ಯಾಗಕ್ಕೆ ಪಾರ್ವತಿ ದೇವಿ (ಸತಿ ದೇವಿ) ಹೋಗುತ್ತಾಳೆ. ಆಗ ಸತಿದೇವಿಯ ಜೊತೆಗೆ ತನ್ನ ವಾಹನವಾದ ನಂದಿಯನ್ನು ಕೂಡ ಕಳುಹಿಸುತ್ತಾನೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಆದರೆ ಅಲ್ಲಿ ನಡೆಯುವ ಅವಮಾನಕ್ಕೆ ಸತಿ ದೇವಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ಸತಿ ದೇವಿಯನ್ನು ಕಳೆದುಕೊಂಡ ಮಹಾ ಶಿವನು ಉಗ್ರ ತಾಂಡವವನ್ನು ಮಾಡುತ್ತಾನೆ. ಮಹಾಶಿವನ ಆ ಉಗ್ರ ಸ್ವರೂಪವೇ ಇಲ್ಲಿನ ಉಗ್ರ ಸ್ವರೂಪಿಯ ಶಿವ. ಸತಿ ದೇವಿಯ ಹಿಂದೆ ನಂದಿಯನ್ನು ಕಳುಹಿಸಿದ ಕಾರಣ ಈ ದೇವಾಲಯದಲ್ಲಿ ನಂದಿ ವಿಗ್ರಹವಿಲ್ಲ. ಈ ದೇವಾಲಯವನ್ನು ಈ ಪ್ರದೇಶವನ್ನು ಪಾಲಿಸಿದ ಶಿವ ಭಕ್ತನು ನಳಾಂಬ ರಾಜ ನಿರ್ಮಾಣ ಮಾಡಿದನು ಎಂದು ಹೇಳಲಾಗಿದೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಈ ಮುಕ್ತೇಶ್ವರ ದೇವಾಲಯವು ಕೇವಲ 6 ತಿಂಗಳು ಮಾತ್ರ ತೆರೆಯುವ ವಿಶೇಷವಾದ ಶಿವಾಲಯ. ಈ ದೇವಾಲಯವು ಕೂಡ ಆಂಧ್ರ ಪ್ರದೇಶ ರಾಜ್ಯದಲ್ಲಿನ ಗುಂಟೂರು ಜಿಲ್ಲಾ ಅಚ್ಚಂಪೇಟ ಮಂಡಲಂ ಮಾದಿಪಾಡು, ಕೃಷ್ಣಂ ಜಿಲ್ಲಾ ಜಕ್ಕೇಯ ಪೇಟ ಮಂಡಲಂ ಮಕ್‍ತ್ಯಾಲ ಗ್ರಾಮದ ಮಧ್ಯೆ ಕೃಷ್ಣ ನದಿಯ ಸಮೀಪದಲ್ಲಿ ಮಹಾಶಿವನು ಮುಕ್ತೇಶ್ವರನಾಗಿ ಪೂಜೆಗಳನ್ನು ಮಾಡಿಕೊಳ್ಳುತ್ತಿದ್ದಾನೆ. ವರ್ಷದ 6 ತಿಂಗಳ ಕಾಲ ಕೃಷ್ಣ ನದಿಯಲ್ಲಿ ಅಡಗಿಕೊಂಡಿರುತ್ತಾನೆ. ಆ ಸಮಯದಲ್ಲಿ ದೇವಾನು ದೇವತೆಗಳೆಲ್ಲಾ ಸ್ವಾಮಿಯನ್ನು ಆರಾಧಿಸುತ್ತಾರೆ ಎಂಬುದು ಪ್ರತೀತಿ. ಕೃಷ್ಣ ನದಿ ಮಳೆ ಕಡಿಮೆಯಾದ 6 ತಿಂಗಳ ನಂತರ ಭಕ್ತರಿಗೆ ಈ ದೇವಾಲಯವು ತೆರೆದಿರಲಾಗುತ್ತದೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಇಲ್ಲಿ ಮತ್ತೊಂದು ವಿಶೇಷವೂ ಕೂಡ ಇದೆ. ಇಲ್ಲಿ ಸಾಧಾರಣವಾಗಿ ಶಿವನನ್ನು ಲಿಂಗ ಸ್ವರೂಪಿಯಾಗಿ ಆರಾಧನೆ ಮಾಡುತ್ತಾರೆ. ಆದರೆ ಇಲ್ಲಿ ಆ ಪಾರ್ವತಿ ದೇವಿಯನ್ನು ಕೂಡ ಲಿಂಗ ಸ್ವರೂಪಿಯಾಗಿ ನೆಲೆಸಿರುವುದನ್ನು ಹಾಗು ಪೂಜಿಸುವುದನ್ನು ಕಾಣಬಹುದಾಗಿದೆ. ಅಂದರೆ ಇಲ್ಲಿ ಎರಡು ಲಿಂಗಗಳು, ಎರಡು ನಂದಿಗಳು, ಎರಡು ದೇವಾಲಯಗಳು ನಮಗೆ ಕಾಣಿಸುತ್ತವೆ. ಇಲ್ಲಿ ದಕ್ಷಿಣ ದಿಕ್ಕಿಗೆ ಇರುವ ನಂದಿಯನ್ನು ತಿರುಗುಡು ನಂದಿ ಎಂದೂ ಕೂಡ ಕರೆಯುತ್ತಾರೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಸಾಧಾರಣವಾಗಿ ಶಿವನಿಗೆ ಜಟಾಜೂಟ ಇರುವುದನ್ನು ಕಾಣಬಹುದು. ಆದರೆ ಲಿಂಗ ರೂಪದಲ್ಲಿರುವ ಸ್ವಾಮಿಯನ್ನು ಜಟಾಜೂಟ ಹೊಂದಿರುವ ಶಿವಲಿಂಗವನ್ನು ಎಂದಾದರೂ ನೀವು ಕಂಡಿದ್ದೀರಾ? ಹಾಗಾದರೆ ಒಮ್ಮೆ ಪೂರ್ವ(ತೂರ್ಪು) ಗೋದಾವರಿ ಜಿಲ್ಲೆ ಪಲಿವೆಲಾಕ್ಕೆ ತೆರಳಬೇಕು ಅಷ್ಟೇ. ಅಲ್ಲಿ ಶಿವನು ಶ್ರೀ ಉಮಾ ಕುಪ್ಪು ಲಿಂಗೇಶ್ವರನಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ತೇಜೋಲಿಂಗ ಸ್ವರೂಪದಲ್ಲಿ ಶಿವನನ್ನು ದರ್ಶನವನ್ನು ಮಾಡಬೇಕಾದರೆ ಗುಂಟೂರು ಜಿಲ್ಲೆ ಚಂದೂಳಿಗೆ ಭೇಟಿ ನೀಡಬೇಕು. ಲಿಂಗ ಉತ್ಭವ ಕ್ಷೇತ್ರವಾಗಿರುವ ಈ ಕ್ಷೇತ್ರವು ಅತ್ಯಂತ ಎತ್ತರದ ಶಿವಲಿಂಗವಾಗಿದೆ. ಇಲ್ಲಿ ಹಂಸ ರೂಪದಲ್ಲಿ ಬ್ರಹ್ಮ ಹಾಗು ವರಹ ರೂಪದಲ್ಲಿ ವಿಷ್ಣು ಮೂರ್ತಿ ರೂಪಗಳು ಕಾಣಿಸುತ್ತದೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಶಿವಲಿಂಗದ ಮೇಲಿನ ಭಾಗದಲ್ಲಿ ಎರಡು ಪಾರಿವಾಳಗಳು ಮಂಟಪದ ಹಿಂದಿನ ಭಾಗದಲ್ಲಿ ನಂದಿ, ಹಿಂದೆ ಬೇಟೆಗಾರನಿರುವ ವಿಶೇಷವಾದ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ. ಕಪೋತೇಶ್ವರ ದೇವಾಲಯವಾಗಿ ಕರೆಯುವ ಈ ದೇವಾಲಯವು ಎಷ್ಟೊ ಪ್ರಮುಖ್ಯತೆಯನ್ನು ಹೊಂದಿದೆ.

ವಿಚಿತ್ರವಾದ ಶಿವಾಲಯಗಳು ಇವು..

ವಿಚಿತ್ರವಾದ ಶಿವಾಲಯಗಳು ಇವು..

ಲಿಂಗ ಸ್ವರೂಪದಲ್ಲಿ ಪಾರ್ವತಿ-ಪರಮೇಶ್ವರರು ನೆಲೆಸಿರುವ ಪುಣ್ಯ ಕ್ಷೇತ್ರ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸೂರ್ಯ ಗ್ರಾಮದಲ್ಲಿದೆ. ಇಲ್ಲಿ ಶಿವರುದ್ರ ಸ್ವಾಮಿ ಲಿಂಗ ರೂಪದಲ್ಲಿ ನೆಲೆಸಿದ್ದಾನೆ ಎಂಬುದು ಪ್ರತೀತಿ. ದೇವಾಲಯಕ್ಕೆ ಸಮೀಪದಲ್ಲಿ ಒಂದು ಉದ್ಯಾನವನ ಇರುತ್ತದೆ. ಇದರಲ್ಲಿ 2 ಶಿಲಾರೂಪಗಳು ಇರುತ್ತವೆ. ಇವುಗಳನ್ನೇ ಶಿವ-ಪಾರ್ವತಿಗಳಾಗಿ ಭಾವಿಸಿ ಪೂಜಿಸುತ್ತಾರೆ ಭಕ್ತರು. ಇಲ್ಲಿನ ಮತ್ತೊಂದು ವಿಶೇಷವೆನೆಂದರೆ ನಾವು ಕೋರಿದ ಕೋರಿಕೆಗಳೆಲ್ಲಾ ಈಡೇರಿದರೆ ಆ ಕೋರಿಕೆಗಳನ್ನು ಬೊಂಬೆಯ ರೂಪದಲ್ಲಿ ಸ್ವಾಮಿಗೆ ಕಾಣಿಕೆಯಾಗಿ ನೀಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X