» »ರಾತ್ರಿ ಸಮಯದಲ್ಲಿ ಮಾತನಾಡುವ ದೇವಾತ ವಿಗ್ರಹ

ರಾತ್ರಿ ಸಮಯದಲ್ಲಿ ಮಾತನಾಡುವ ದೇವಾತ ವಿಗ್ರಹ

Written By:

ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವು ತನ್ನದೇ ಮಹತ್ವವನ್ನು ಪಡೆದುಕೊಂಡಿರುತ್ತದೆ. ರಹಸ್ಯವಾದ ಹಲವಾರು ದೇವಾಲಯಗಳನ್ನು ನಾವು ನೋಡಿದ್ದೆವೆ. ಕೆಲವೊಮ್ಮೆ ಅದು ಬೆಳಕಿಗೆ ಬಾರದೇ ಇರಬಹುದು. ಆದರೆ ಇಲ್ಲೊಂದು ನಂಬಲು ಅಸಾಧ್ಯವಾದ ಒಂದು ದೇವಾಲಯದ ರಹಸ್ಯವಿದೆ ಅದು ಏನು ಎಂದು ಕೇಳುತ್ತಾಇದ್ದಿರಾ?

ಬಿಹಾರದಲ್ಲಿರುವ ರಾಜಾ ರಾಜೇಶ್ವರಿ ಬಾಲಾ ತ್ರೀಪುರ ಸುಂದರಿ ದೇವಾಲಯ. ಈ ದೇವಾಲಯದಲ್ಲಿ ಬಾಲಾ ತ್ರೀಪುರ ಸುಂದರಿ ರಾತ್ರಿಯ ಸಮಯದಲ್ಲಿ ಮಾತಾನಾಡುವುದು. ದೇವರು ಇದೆಯೋ ಇಲ್ಲವೋ ಎಂಬುದು ಅವರರವರ ನಂಬಿಕೆಗೆ ಬಿಟ್ಟಿದ್ದು. ಆದರೆ ಬಾಲಾ ತ್ರೀಪುರ ಸುಂದರಿ ವಿಗ್ರಹವು ಮಾತಾನಾಡುವುದಂತೂ ಸತ್ಯ. ಸುಮಾರು 400 ವರ್ಷಗಳ ಪುರಾತನವಾದ ದೇವಾಲಯವಾಗಿದೆ.

ಪ್ರಸ್ತುತ ಲೇಖನದಲ್ಲಿ ರಾಜಾ ರಾಜೇಶ್ವರಿ ತಾಯಿಯ ಗರ್ಭಗುಡಿಯಲ್ಲಿ ಮಾತನಾಡುವ ರಹಸ್ಯದ ಬಗ್ಗೆ ತಿಳಿಯೋಣ.

ಈ ದೇವಾಲಯ ಏಲ್ಲಿದೆ?

ಈ ದೇವಾಲಯ ಏಲ್ಲಿದೆ?

ರಾಜಾ ರಾಜೇಶ್ವರಿ ಬಾಲಾ ತ್ರೀಪುರ ಸುಂದರಿ ದೇವಾಲಯವು ಬಿಹಾರ ರಾಜ್ಯದ ಬಕ್ಸರ್ ಎಂಬಲ್ಲಿ ಈ ದೇವಿಯು ನೆಲೆಸಿದ್ದಾಳೆ. ಈ ದೇವಾಲಯವು ಸುಮಾರು 400 ವರ್ಷಗಳಿಗಿಂತಲೂ ಹಳೆಯಾದಾದ ದೇವಾಲಯ ಎಂದು ಕರೆಯುತ್ತಾರೆ.
PC: YOUTUBE

ಕ್ಷುದ್ರ ಪೂಜೆ

ಕ್ಷುದ್ರ ಪೂಜೆ

ಈ ದೇವಾಲಯವನ್ನು ಮೊದಲು ಕ್ಷುದ್ರ ಶಕ್ತಿಯ ಪೂಜೆಯನ್ನು ಮಾಂತ್ರಿಕರು ಮಾಡಲು ಬಳಸುತ್ತಿದ್ದರಂತೆ. ಹಾಗಾಗಿ ಇಲ್ಲಿ ಇಂತಹ ಘಟನೆಗಳು ಸಂಭವಿಸುತ್ತದೆ ಎಂದು ಕೆಲವರ ವಾದವಾಗಿದೆ.
PC:YOUTUBE

ಆರ್ಚಕರು

ಆರ್ಚಕರು

ಕ್ಷುದ್ರ ಶಕ್ತಿಯ ಕಾರಣದಿಂದಾಗಿ ಅಲ್ಲದೇ ಸಾಕ್ಷಾತ್ ಬಾಲಾ ತ್ರೀಪುರ ಸುಂದರಿಯೇ ಗರ್ಭಗುಡಿಯಲ್ಲಿ ಮಾತಾನಾಡುತ್ತಾಳೆ ಎಂದು ಸ್ವತಃ ಕೇಳಿದ ಆರ್ಚಕರು ತಿಳಿಸುತ್ತಾರೆ.
PC:YOUTUBE

ಬಾಲಾ ತ್ರಿಪುರ ಸುಂದರಿ

ಬಾಲಾ ತ್ರಿಪುರ ಸುಂದರಿ

ಈ ತಾಯಿಯು ಗರ್ಭಗುಡಿಯಲ್ಲಿ ಮಧ್ಯೆರಾತ್ರಿಯ ಸಮಯದಲ್ಲಿ ಮಾತಾನಾಡುವುದು ಹಲವಾರು ಭಕ್ತರು ಕೇಳಿಸಿಕೊಂಡಿರುವ ನಿದರ್ಶನವಿದೆ. ಹಲವಾರು ಜನರು ಈ ರಹಸ್ಯವನ್ನು ತಿಳಿಯಲು ಪ್ರಯತ್ನಿಸಿದರಂತೆ. ಸ್ವತಃ ಈ ತಾಯಿಯ ವಿಗ್ರಹದಿಂದಲೇ ಮಾತಾನಾಡುವುದನ್ನು ಪೂಜಾರಿಗಳೇ ಕೇಳಿಸಿಕೊಂಡಿದ್ದರಾಂತೆ.
PC:YOUTUBE

ರಹಸ್ಯವಾಗಿಯೇ ಉಳಿಯಿತು

ರಹಸ್ಯವಾಗಿಯೇ ಉಳಿಯಿತು

ಕೊನೆಗೆ ಆ ಗುಡಿಯ ಪೂಜಾರಿಗಳು ವೈಜ್ಞಾನಿಕ ಶಾಸ್ತ್ರಕಾರರು ಸಹ ಈ ವಿಷಯವನ್ನು ಭೇಧಿಸಲು ಸಾಧ್ಯವಾಗಿಲ್ಲವಂತೆ.
PC:YOUTUBE

ಅದ್ಭುತ

ಅದ್ಭುತ

ಅದೇ ಏನೇ ಇದ್ದರು ಈ ದೇವಾಲಯವಂತೂ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ಕಲಿಯುಗದಲ್ಲೂ ವಿಗ್ರಹದಿಂದ ಧ್ವನಿ ಕೇಳಿಸುತ್ತದೆ ಎಂದರೆ ಆಶ್ಚರ್ಯವಲ್ಲದೇ ಇನ್ನೇನೂ.
PC:YOUTUBE

ಸತ್ಯಾಸತ್ಯತೆ

ಸತ್ಯಾಸತ್ಯತೆ

ಕೇವಲ ದೇವಾಲಯದ ಪೂಜಾರಿಗಳೇ ಮಾತ್ರ ಈ ಶಬ್ದಗಳೆಲ್ಲಾ ತಾಯಿ ಬಾಲಾ ತ್ರೀಪುರ ಸುಂದರಿಯ ವಿಗ್ರದಿಂದ ಬರುತ್ತಿದೆ ಎನ್ನುತ್ತಿಲ್ಲ. ಬದಲಾಗಿ ಶಾಸ್ತ್ರಕಾರರು ಕೂಡ ಈ ವಿಷಯವು ಸತ್ಯವಾದುದು ಎಂದು ಹೇಳುತ್ತಿದ್ದಾರೆ.
PC:YOUTUBE

ಸಮೀಪದಲ್ಲಿರುವ ದೇವಾಲಯಗಳು

ಸಮೀಪದಲ್ಲಿರುವ ದೇವಾಲಯಗಳು

ರಾಜಾ ರಾಜೇಶ್ವರಿ ಬಾಲಾ ತ್ರೀಪುರ ಸುಂದರಿಯ ದೇವಾಲಯದ ಜೊತೆ ಇಲ್ಲಿ ಹಲವಾರು ಪ್ರಸಿದ್ಧವಾದ ದೇವಾಲಯಗಳನ್ನು ಕಾಣಬಹುದಾಗಿದೆ. ಅವುಗಳೆಂದರೆ ಬುದ್ಧಗಯ, ನಳಂದ, ರಾಜಗಿರಿ ಇವು ಬೌದ್ಧ ದೇವಾಲಯಗಳಾದರೆ, ವೈಶಾಲಿ ಜೈನ ದೇವಾಲಯವಾಗಿದೆ.
PC:YOUTUBE

ಇತರ ದೇವಾಲಯಗಳು

ಇತರ ದೇವಾಲಯಗಳು

ಸಿಕ್ಕ್ರ ಕ್ಷೇತ್ರಗಳು ಹಾಗೂ ಹಿಂದೂ ಪ್ರಸಿದ್ದವಾದ ಕ್ಷೇತ್ರವಾದ ಗಯ(ಪಿಂಡದಾನ ಸ್ಥಳ) ಮ್ತತು ಬೈದ್ಯನಾಥ ಧಾಮ ಇನ್ನೂ ಹಲವಾರು.

PC:YOUTUBE

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಬಿಹಾರದ ಈ ಪವಿತ್ರ ದೇವಾಲಯಗಳು ಹಾಗೂ ರಹಸ್ಯಮಯ ಬಾಲಾ ತ್ರೀಪುರ ದೇವಾಲಯಕ್ಕೆ ತಲುಪಲು ಸಮೀಪದ ವಿಮಾನ ಮಾರ್ಗ ಪಾಟ್ನಾ ಹಾಗೂ ಗಯ.
PC:YOUTUBE

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ವ್ಯವಸ್ಥೆ ಬಿಹಾರದಲ್ಲಿ ಹೆಚ್ಚಾಗಿ ವಿಸ್ತಾರಗೊಂಡಿರುವುದರಿಂದ ಹಲವು ಪ್ರಧಾನ ನಗರಗಳಿಗೆ ರೈಲು ಕನೆಕ್ಷನ್‍ಗಳಿವೆ.
PC:YOUTUBE

ರಸ್ತೆಯ ಮಾರ್ಗದ ಮೂಲಕ

ರಸ್ತೆಯ ಮಾರ್ಗದ ಮೂಲಕ

ಬಿಹಾರ ರಾಜ್ಯ ಅತ್ಯಂತ ದೂರ ಪ್ರಯಾಣವಾದ್ದರಿಂದ ರಸ್ತೆ ಸಂಪರ್ಕವಿಲ್ಲ.
PC:YOUTUBE

Please Wait while comments are loading...