Search
  • Follow NativePlanet
Share
» »ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

ಸಂಬಂಧಿಕರಿಗಿಂತ ನೆರೆಹೊರೆಯವರು ಮೊದಲು ಕಷ್ಟಕ್ಕೆ ಬರುತ್ತಾರೆ ಎನ್ನುವ ಮಾತಿದೆ. ಅದು ನಿಜಕ್ಕೂ ಸತ್ಯ ಎನ್ನಬಹುದು. ಈಗಿನ ಕಾಲದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡೋದೇ ಕಡಿಮೆ. ಅಂತಹದರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಂದು ವಿಶೇಷ ಹಳ್ಳಿ ಇದೆ. ಇಲ್ಲಿ ಊರಿನವರು ಏನ್ ಮಾಡ್ತಾರೆ ಗೊತ್ತಾ?

ಹಳ್ಳಿಯ ವಿಶೇಷತೆ ಏನು?

ಹಳ್ಳಿಯ ವಿಶೇಷತೆ ಏನು?

ಈ ಹಳ್ಳಿಯಲ್ಲಿ ಹಾಲನ್ನು ಮಾರಾಟಮಾಡಲಾಗುವುದಿಲ್ಲ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ಉಚಿತವಾಗಿ ನೀಡಲಾಗುತ್ತದೆ. ಯಾರ ಮನೆಯಲ್ಲಿ ಹಸು, ಎಮ್ಮೆ ಇಲ್ಲವೋ ಅಂತವರಿಗೆ ಹಸು, ಎಮ್ಮೆ ಇರುವವರು ಹಾಲನ್ನು ಉಚಿತವಾಗಿ ನೀಡುತ್ತಾರೆ.

ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !

ಉಚಿತ ಹಾಲು, ಮಜ್ಜಿಗೆ

ಉಚಿತ ಹಾಲು, ಮಜ್ಜಿಗೆ

ಕುಚ್‌ ಜಿಲ್ಲೆಯಲ್ಲಿರುವ ಡೋಕ್ಡಾ ಹಳ್ಳಿಯಲ್ಲಿ ಸುಮಾರು 5 ಸಾವಿರ ಜನರು ಜಾನುವಾರನ್ನು ಹೊಂದಿದ್ದಾರೆ. ಹಾಲಿನಿಂದ ಮೊಸರು, ಮಜ್ಜಿಗೆಯನ್ನು ತಯಾರಿಸುತ್ತಾರೆ. ಅದನ್ನು ಅಕ್ಕ ಪಕ್ಕದ ಮನೆಗಳಿಗೆ ಹಾಗೂ ನೆರೆಯ ಹಳ್ಳಿಗೆ ಉಚಿತವಾಗಿ ನೀಡುತ್ತಾರೆ. ಸುಮಾರು 90 ಫ್ಯಾಮಿಲಿಗಳು ಉಚಿತವಾಗಿ ಮೊಸರು, ಮಜ್ಜಿಯನ್ನು ಪಡೆಯುತ್ತಾರೆ.

ಇದರ ಹಿಂದಿದೆ ಮೂಢನಂಬಿಕೆ

ಇದರ ಹಿಂದಿದೆ ಮೂಢನಂಬಿಕೆ

ಇದು ಯಾವುದೇ ಚಾರಿಟಿಯಿಂದ ಮಾಡುತ್ತಿರುವ ಪುಣ್ಯದ ಕಾರ್ಯವಲ್ಲ. ಬದಲಾಗಿ ಇದರ ಹಿಂದೆ ಮೂಢ ನಂಬಿಕೆ ಅಡಗಿದೆ. 500 ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ನೆಲೆಸಿದ್ದ ಸಾಧುವೊಬ್ಬರು ಈ ಹಳ್ಳಿಯಲ್ಲಿ ಹಾಲನ್ನು ಮಾಡಬೇಟಿ. ಹಳ್ಳಿಯ ಶಾಂತಿ, ಸಂತೋಷಕ್ಕೆ ಹಾಲನ್ನು ಮಾರಬಾರದು ಎಂದು ಹೇಳಿದ್ದರಂತೆ . ಅದನ್ನೇ ಈ ಹಳ್ಳಿ ಜನ ಅನುಸರಿಸುತ್ತಾ ಇದ್ದಾರೆ.

1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು 1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

ಬೆಚ್ಚಿ ಬೀಳಿಸಿದ ಘಟನೆ

ಬೆಚ್ಚಿ ಬೀಳಿಸಿದ ಘಟನೆ

ಈ ಹಳ್ಳಿಯ ಅಳಿಯನೊಬ್ಬ ಈ ಕಟ್ಟುಪಾಡನ್ನು ಹಿಂದಿಕ್ಕಿ ಹಾಲನ್ನು ಮಾರಲು ಹೊರಟನು. ಸ್ವಲ್ಪ ದಿನದಲ್ಲೇ ಆತ ಸಾವನ್ನಪ್ಪಿದ ಈ ಘಟನೆಯು ಜನರನ್ನು ಬೆಚ್ಚಿ ಬೀಳಿಸಿದೆ. ಆದರಿಂದ ಯಾರೂ ಹಾಲು ಮಾರಾಟ ಮಾಡುವ ಸಾಹಸಕ್ಕೆ ಕೈ ಹಾಕೋದೇ ಇಲ್ಲ. ಹಾಗಾಗಿ ಉಚಿತವಾಗಿಯೇ ಹಾಲನ್ನು ನೀಡುತ್ತಾರೆ.

 ತಿಂಗಳಿಗೆ 7500ರೂ. ಹಾಲು

ತಿಂಗಳಿಗೆ 7500ರೂ. ಹಾಲು

ಇಲ್ಲಿ ಒಬ್ಬೊಬ್ಬರಿಗೆ ಪ್ರತಿದಿನ 3 ಲೀ. ಹಾಲು ,4 ಲೀಟರ್ ಮಜ್ಜಿಗೆ ದೊರೆಯುತ್ತದೆ. ಅಂದರೆ ತಿಂಗಳಿಗೆ ಸುಮಾರು 7500ರೂ.ಯ ಹಾಲು ಹಾಗೂ ಮಜ್ಜಿಗೆ ಉಚಿಯವಾಗಿ ದೊರೆಯುತ್ತದೆ. ಹಳ್ಳಿಯವರೇ ಉಚಿತವಾಗಿ ಹಾಲನ್ನು ಒದಗಿಸುವಾಗ ಹಸು ಅಥವಾ ಎಮ್ಮೆಯನ್ನು ಖರೀದಿಸುವ ಅಗತ್ಯವಾದರೂ ಏನಿದೆ ಹೇಳಿ?.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X