Search
  • Follow NativePlanet
Share
» »ಸಾರ್ವಜನಿಕ ಗಣೇಶೋತ್ಸವದ ಹಿಂದಿರುವ ದೇವಾಲಯ

ಸಾರ್ವಜನಿಕ ಗಣೇಶೋತ್ಸವದ ಹಿಂದಿರುವ ದೇವಾಲಯ

By Vijay

ನಮಗೆ, ನಿಮಗೆ ಮಾತ್ರವಲ್ಲದೆ ಇಡಿ ಪ್ರಪಂಚಕ್ಕೆ ತಿಳಿದಿದೆ, ಭಾರತದಲ್ಲಿ ಅದ್ದೂರಿಯಾಗಿ ಆಚರಿಸಲಾಗುವ ಉತ್ಸವಗಳ ಪೈಕಿ ಗಣೇಶೋತ್ಸವವೂ ಸಹ ಒಂದೆಂದು. ಮುಖ್ಯವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿಯೂ ಆಚರಿಸಲಾಗುವುದರಿಂದ ಭಾರತದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.

ಮೂಲತಃ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದರ ಹಿಂದೆ ಒಂದು ಅದ್ಭುತವಾದ ಆಶಯ, ಕಲ್ಪನೆಯಿತ್ತು. ಅದುವೆ ಒಗ್ಗಟ್ಟು. ಹೌದು, ಭಾರತದಲ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಭಾರತೀಯರೆಲ್ಲರನ್ನು ಒಗ್ಗುಡಿಸುವ ನಿಟ್ಟಿನಲ್ಲಿ ಈ ಒಂದು ಅದ್ಭುತ ಕಲ್ಪನೆಗೆ ಚಾಲನೆ ನೀಡಿದ್ದರು.

ನಿಮಗಿಷ್ಟವಾಗಬಹುದಾದ : ವಿಘ್ನನಾಶಕ ಅಷ್ಟ ವಿನಾಯಕರ ದರ್ಶನ

ಹಾಗಾಗಿ ಗಣೇಶೋತ್ಸವವು ಊರು, ಕೇರಿ, ಜಾತಿ, ಧರ್ಮ ಎನ್ನದೆ ಎಲ್ಲರೂ ಸೇರಿ ಒಟ್ಟಾಗಿ ಆಚರಿಸುವ ಸಡಗರದ ಉತ್ಸವವಾಗಿ ಅಂದಿನಿಂದ ಪರಿವರ್ತನೆ ಹೊಂದಲಾರಂಭಿಸಿತು. ಹೀಗೆ ಈ ಕಲ್ಪನೆಯನ್ನು ಪರಿಚಯಿಸಿದವರು ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ತಿಲಕ ಅಥವಾ ಬಾಲಗಂಗಾಧರ ತಿಲಕ್ ಅವರು.

ಅವರಿಗೆ ಆ ರೀತಿಯಾಗಿ ಕಲ್ಪನೆ ಬಂದುದು ಹೇಗೆ? ಯಾವ ಅಂಶದಿಂದ/ಘಟನೆಯಿಂದ ಅವರು ಪ್ರಭಾವಿತರಾದರು? ಎಂದೆಲ್ಲ ಯೋಚಿಸುತ್ತ ಸಾಗಿದರೆ ನೀವು ಬಂದು ನಿಲ್ಲುವುದು ದಗಡುಶೇಟ್ ಗಣಪತಿಯ ದೇವಾಲಯದ ಎದುರು. ಹಾಗಾದರೆ, ತಿಲಕರ ಕಲ್ಪನೆಗೂ ಆ ದೇವಾಲಯಕ್ಕೂ ಇರುವ ನಂಟೇನು...ಎಂದು ಈ ಲೇಖನದ ಮೂಲಕ ತಿಳಿಯಿರಿ.

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಗಣಪತಿ ದೇವಾಲಯವು ಮಹಾರಾಷ್ಟ್ರ ರಾಜ್ಯದಲ್ಲೆ ಹೆಚ್ಚು ಜನಪ್ರೀಯತೆ ಪಡೆದಿದೆ. ಚಿತ್ರತಾರೆಗಳು, ರಾಜಕೀಯ ನಾಯಕರು ಹಾಗೂ ಹಲವಾರು ಇತರೆ ಕ್ಷೇತ್ರಗಳ ಗಣ್ಯರು ಈ ದೇವಾಲಯಕ್ಕೆ ಭೇಟಿ ನೀಡುತ್ತಲೆ ಇರುತ್ತಾರೆ.

ಚಿತ್ರಕೃಪೆ: NishantAChavan

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಗಣೇಶೋತ್ಸವದ ಸಂದರ್ಭದಲ್ಲಂತೂ ಈ ದೇವಾಲಯ ಸಾಕಷ್ಟು ಮಹತ್ವ ಪಡೆಯುತ್ತದೆ. ಸಹಸ್ರಾರು ಜನರಿಂದ ಕಿಕ್ಕಿರಿದು ತುಂಬುತ್ತದೆ. ಸಾಕಷ್ಟು ಜನ ಭಕ್ತಾದಿಗಳನ್ನು ದಗಡುಶೇಟ್ ಗಣಪ ತನ್ನ ವಿಶಿಷ್ಟವಾದ ರೂಪ ಹಾಗೂ ವಿನ್ಯಾಸಗಳಿಂದ ತನ್ನತ್ತ ಸೆಳೆಯುತ್ತಾನೆಂದರೂ ತಪ್ಪಾಗಲಾರದು.

ಚಿತ್ರಕೃಪೆ: Trishna datta

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಈ ಭವ್ಯ ಗಣೇಶ ದೇವಾಲಯವು ಮಹಾರಾಷ್ಟ್ರ ರಾಜ್ಯದ ಮಾಹಿತಿ ತಂತ್ರಜ್ಞಾನ ನಗರ ಎಂಬ ಕೀರ್ತಿಗೆ ಪಾತ್ರವಾದ ಪುಣೆ ನಗರ ಕೇಂದ್ರದಲ್ಲಿದೆ. ನೀವೇನಾದರೂ ಪುಣೆ ನಗರಕ್ಕೆ ಭೇಟಿ ನೀಡಿದರೆ ಖಂಡಿತವಾಗಿಯೂ ಈ ದೇವಾಲಯಕ್ಕೆ ಭೇಟಿ ನೀಡಲು ಮರೆಯದಿರಿ.

ಚಿತ್ರಕೃಪೆ: Ketaki Pole

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಅಂದಹಾಗೆ ಈ ದೇವಾಲಯದಲ್ಲಿರುವ ಗಣೇಶ ಅರ್ಥಾತ್ ಗಣಪತಿಗೆ ದಗಡುಶೇಟ್ ಎಂಬ ಹೆಸರು ಬರುವ ಹಿಂದೆ ಒಂದು ಸ್ವಾರಸ್ಯಕರವಾದ ಘಟನೆಯಿದೆ. ಹಿಂದೆ ದಗಡುಶೇಟ್ ಎಂಬ ಮಿಠಾಯಿಗಾರನು ಇಲ್ಲಿಗೆ ಬಂದು ನೆಲೆಸಿದ್ದನು. ಅವನ ತಯಾರಿಸುವ ಮಿಠಾಯಿ ಬಹು ಬೇಗ ಪ್ರಖ್ಯಾತವಾಗಿ ಅವನಿಗೆ ದಗಡುಶೇಟ್ ಹಲ್ವಾಯಿ ಎಂದೆ ಕರೆಯ ತೊಡಗಿದರು. ಮರಾಠಿಯಲ್ಲಿ ಹಲ್ವಾಯಿ ಎಂದರೆ ಮಿಠಾಯಿಗಾರ/ಮಿಠಾಯಿ ತಯಾರಿಸುವವನು ಎಂದರ್ಥ.

ಚಿತ್ರಕೃಪೆ: Ranepictography

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಕೆಲವೆ ಸಮಯದಲ್ಲಿ ದಗಡುಶೇಟ್ ಯಶಸ್ವಿ ಹಾಗೂ ಶ್ರೀಮಂತ ವ್ಯಾಪಾರಿಯಾದ. 1800 ರ ಕೊನೆಯಲ್ಲಿ ಇಲ್ಲಿ ಬಂದೊಗಿದ ಭೀಕರ "ಪ್ಲೇಗ್" ಮಹಾಮಾರಿಯಿಂದ ಈತ ತನ್ನ ಮಗನನ್ನು ಕಳೆದುಕೊಂಡ. ಇದರಿಂದ ವ್ಯಾಪಾರಿ ಹಾಗೂ ಆತನ ಮಡದಿ ಬಹು ದುಖಿತರಾದರು. ದಿನೆ ದಿನೆ ಕುಗ್ಗುತ್ತ ಹೋದರು.

ಚಿತ್ರಕೃಪೆ: Trishna datta

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಇವರ ಸ್ಥಿತಿಯನ್ನು ನೋಡಿದ ಅವರ ಗುರುಗಳಾದ ಶ್ರೀ ಮಾಧವನಾಥ ಮಹಾರಾಜ ಎಂಬುವರು ಅವರನ್ನು ಕರೆದು ದುಖ ನಿವಾರಣೆಗಾಗಿ ಒಂದು ಗಣೇಶನ ದೇವಾಲಯ ನಿರ್ಮಿಸಲು ಸಲಹೆ ನೀಡಿದರು. ಗುರುಗಳನ್ನು ಬಹುವಾಗಿ ಪಾಲಿಸುತ್ತಿದ್ದ ದಗಡುಶೇಟ್ ದೇವಾಲಯ ನಿರ್ಮಾಣದಲ್ಲಿ ತಲ್ಲೀಣರಾದರು.

ಚಿತ್ರಕೃಪೆ: ANI(GM)

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಈ ಸಮಯದಲ್ಲಿದ್ದ ಬಾಲ ಗಂಗಾಧರ ತಿಲಕರವರು ದಗಡುಶೇಟ್ ಅವರ ನಿಕಟ ಮಿತ್ರರಾಗಿದ್ದರು ಹಾಗೂ ದಗಡುಶೇಟ್ ದೇವಾಲಯ ನಿರ್ಮಾಣದಲ್ಲಿ ತೋರಿದ್ದ ಆಸಕ್ತಿಯಿಂದ ಬಹು ಪ್ರಭಾವಿತರಾದರು. ಈ ದೇವಾಲಯ ನಿರ್ಮಾಣದಲ್ಲಿ ಅವರೊಂದಿಗೆ ಇತರೆ ಜನರು ತೋರ್ಪಡಿಸುತ್ತಿದ್ದ ಉತ್ಸುಕತೆಯಿಂದ ಇನ್ನಷ್ಟು ಉತ್ತೇಜಿತರಾದ ತಿಲಕರ ಮನದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವ ಪರಿಕಲ್ಪನೆ ಥಟ್ಟನೆ ಮೂಡಿತು.

ಚಿತ್ರಕೃಪೆ: Gayathri menon

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಮುಂದೆ ಈ ಪರಿಕಲ್ಪನೆ ಚಿಗುರೊಡೆದು ಬೆಳೆದು ನಂತರ ಸಮಯದಲ್ಲಿ ಹೆಮ್ಮರವಾಗಿದ್ದು ಎಲ್ಲರಿಗೂ ತಿಳಿದಿರುವ ಇತಿಹಾಸ. ಆದರೆ ಈ ದಗಡುಶೇಟ್ ದೇವಾಲಯದ ನಿರ್ಮಾಣವೆ ಇಂದು ಸಾರ್ವಜನಿಕವಾಗಿ ಆಚರಿಸಲಾಗುವ ಗಣೇಶೋತ್ಸವಕ್ಕೆ ನಾಂದಿ ಹಾಡಿತು ಎನ್ನಬಹುದು.

ಚಿತ್ರಕೃಪೆ: Gayathri menon

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಅವರಿಂದ ನಿರ್ಮಿಸಲ್ಪಟ್ಟ ಕಾರಣದಿಂದಾಗಿಯೆ ಇದು ಇಂದು ಪುಣೆ ನಗರದ ಅತಿ ಪ್ರಸಿದ್ಧ ದಗಡುಶೇಟ್ ಹಲ್ವಾಯಿ ಗಣಪತಿ ದೇವಾಲಯವೆಂದೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Gayathri menon

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಇಲ್ಲಿರುವ ಗಣಪತಿಯ ಮೂರ್ತಿಯು ಏಳುವರೆ ಅಡಿ ಎತ್ತರ ಹಾಗೂ ನಾಲ್ಕು ಅಡಿಗಳಷ್ಟು ಅಗಲವಾಗಿದೆ. ಈ ಗಣೇಶನ ವಿನ್ಯಾಸವೆ ಅತ್ಯಾಕರ್ಷಕವಾಗಿದ್ದು ಎಷ್ಟು ನೋಡಿದರೂ ಮತ್ತೆ ನೋಡುತ್ತಲೆ ಇರಬೇಕು ಎನ್ನುವ ಹಾಗಿದೆ. ವಿಶೇಷವೆಂದರೆ ಈ ಮೂರ್ತಿಯ ಮೇಲೆ ಒಂದು ಕೋಟಿ ರೂಪಾಯಿಯ ವಿಮೆ ಮಾಡಲಾಗಿದೆ.

ಚಿತ್ರಕೃಪೆ: Niraj Suryawanshi

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಅಲ್ಲದೆ ಈ ಗಣಪತಿಯು ಪುಣೆ ನಗರದಲ್ಲೆ ಬಲು ಶ್ರೀಮಂತ ಗಣಪತಿ. ಭಕ್ತರು ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಬಂಗಾರದ ಆಭರಣಗಳನ್ನು ಇವನಿಗೆ ಅರ್ಪಿಸುತ್ತಿರುತ್ತಾರೆ. ಹೀಗಾಗಿ ಈ ಗಣಪತಿಯು ತನ್ನ ಮೈಮೇಲೆ ಏನಿಲ್ಲವೆಂದರೂ ಸುಮಾರು ಎಂಟು ಕೆ.ಜಿ ಗಳಷ್ಟು ಚಿನ್ನವನ್ನು ಹೊಂದಿದ್ದಾನೆ. ಹೀಗಾಗಿ ಇವನನ್ನು ಶ್ರೀಮಂತ ದಗಡುಶೇಟ್ ಗನಪತಿ ಎಂತಲೂ ಸಹ ಪ್ರೀತಿಯಿಂದ ಕರೆಯುತ್ತಾರೆ.

ಚಿತ್ರಕೃಪೆ: Meghavbafana

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ದೇವಾಲಯವನ್ನು ಸರಳ ಹಾಗೂ ಅಷ್ಟೆ ಆಕರ್ಷಕವಾಗಿ ನಿರ್ಮಿಸಲಾಗಿದೆ. ದೇವಾಲಯದ ಕೇಂದ್ರ ಬಿಂದುವಾಗಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದ ಜಯ, ವಿಜಯ ದ್ವಾರಪಾಲಕರು ಮೊದಲ ನೋಟದಲ್ಲೆ ಭೇಟಿ ನೀಡಿದವರಿಗೆ ಆಕರ್ಷಿಸಿ ಬಿಡುತ್ತಾರೆ.

ಚಿತ್ರಕೃಪೆ: Darshan3295

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಈ ದೇವಾಲಯಕ್ಕೆ ಆಡಳಿತ ಮಂಡಳಿಯಿದ್ದು ದೇವಾಲಯದ ನಿರ್ವಹಣೆ ಹಾಗೂ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತದೆ. ಆಡಳಿತ ಮಂಡಳಿಯಿಂದ ದೇವಾಲಯದಲ್ಲಿ ಭಜನೆ, ಕೀರ್ತನೆ, ಸಾಂಸ್ಕೃತಿಕ ಉತ್ಸವ, ಗಣಪತಿ ಅಥರ್ವಶೀರ್ಷ ಮುಂತಾದವುಗಳನ್ನು ಏರ್ಪಡಿಸಲಾಗುತ್ತಿರುತ್ತದೆ. ಪುಣೆಯಲ್ಲಿ ಹೀಗೊಂದು ಸಾರ್ವಜನಿಕ ಸಂಸ್ಥೆ ನಿರ್ಮಿಸಿದ ದಗಡುಶೇಟ್ ಗಣಪತಿ.

ಚಿತ್ರಕೃಪೆ: PratibhaS Pawar

ದಗಡುಶೇಟ್ ಹಲುವಾಯಿ ಗಣಪತಿ:

ದಗಡುಶೇಟ್ ಹಲುವಾಯಿ ಗಣಪತಿ:

ಈ ದೇವಾಲಯದ ನಿರ್ಮಾತೃ ದಗಡುಶೇಟ್ ಅವರ ಮಿಠಾಯಿಯಂಡಿಯು ಇಂದು ಪುಣೆಯಲ್ಲಿದ್ದು ಅದನ್ನು ಈಗ ಕಾಕಾ ಹಲ್ವಾಯಿ ಎಂದು ಕರೆಯಲಾಗುತ್ತದೆ. ನಿಮಗೇನಾದರೂ ಪುಣೆಗೆ ಭೇಟಿ ನೀಡುವ ಅವಕಾಶ ಲಭಿಸಿದರೆ ಈ ಗಣೇಶ ದೇವಾಲಯಕ್ಕೆ ಭೇಟಿ ನೀಡಿ ಹಾಗೂ ಸಮ್ತಸದಿಂದ ಕಾಕಾ ಹಲ್ವಾಯಿಯಲ್ಲಿ ರುಚಿ ರುಚಿಯಾದ ಮಿಠಾಯಿಯನ್ನು ಸವಿಯಿರಿ.

ಚಿತ್ರಕೃಪೆ: Mehak madan

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+