• Follow NativePlanet
Share
Menu
» »ಮುಂಬೈ ಸುತ್ತಮುತ್ತಲಿನ ಸೈಕಲ್ ಟ್ರ್ಯಾಕ್ ಗಳ ಬಗ್ಗೆ ಒಂದು ಕಥಾ ಪ್ರಯಾಣ

ಮುಂಬೈ ಸುತ್ತಮುತ್ತಲಿನ ಸೈಕಲ್ ಟ್ರ್ಯಾಕ್ ಗಳ ಬಗ್ಗೆ ಒಂದು ಕಥಾ ಪ್ರಯಾಣ

Posted By: Manjula Balaraj

ಸೈಕ್ಲಿಂಗ್ ಎನ್ನುವುದು ಪುನರುಜ್ಜೀವನಗೊಳಿಸುವ ಮತ್ತು ಪುನರ್ಯೌವನಗೊಳಿಸುವ ಕ್ರೀಡೆಯಾಗಿದೆ ಮತ್ತು ಯಾವುದೇ ಇತರ ಕ್ರೀಡೆ ಕೂಡ ಇದಕ್ಕೆ ಸಾಟಿಯಿಲ್ಲ. ಸೈಕ್ಲಿಂಗ್ ಮಾಡುವಾಗ ಗಾಳಿಯು ನಿಮ್ಮ ಮುಖಕ್ಕೆ ಬೀಸುತ್ತದೆ ಅಡ್ರಿನಾಲಿನ್ ನಿಮ್ಮ ದೇಹದ ಮೂಲಕ ಧಾವಿಸಿ ನಿಮ್ಮ ಸ್ನಾಯುಗಳಲ್ಲಿ ಶಕ್ತಿ ತುಂಬುವಂತೆ ಮಾಡುತ್ತದೆ.

ಮಾತ್ರವಲ್ಲದೆ, ಬೈಕ್ನೊಂದಿಗೆ ಒಂದು ಸವಾರಿ ಕೂಡಾ ನಿಮ್ಮ ಮನಸ್ಸನ್ನು ತೆರವುಗೊಳಿಸಲು ಮತ್ತು ನಿಮ್ಮ ದೇಹವನ್ನು ಉಲ್ಲಾಸಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕನಸುಗಳ ನಗರವಾದ ಮುಂಬೈ ಸೈಕ್ಲಿಂಗ್ಗೆ ಹೋಗಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ನಗರವು ಸಾಕಷ್ಟು ಟ್ರ್ಯಾಕ್ ಗ ಳನ್ನು ಹೊಂದಿದೆ.

ಇಲ್ಲಿ ಇದು ಕೆಲವು ಅತ್ಯುತ್ತಮ ದೃಶ್ಯ ಹೊಂದಿರುವ ಜಾಗಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಈ ಟ್ರ್ಯಾಕ್ ಗಳಲ್ಲಿ ಹೆಚ್ಚಿನವು ಹಳೆಯ ಪಟ್ಟಣದ ಮೂಲಕ ಹಾದುಹೋಗುವಾಗ ಇಲ್ಲಿ ಕೇವಲ ಕೆಲವು ದೃಶ್ಯಗಳನ್ನು ನೋಡುವ ಅವಕಾಶವನ್ನು ಮಾತ್ರವಲ್ಲದೆ ಉತ್ತಮ ವ್ಯಾಯಾಮ ಕೂಡ ಮಾಡಿದಂತಾಗುತ್ತದೆ.

ಇದಲ್ಲದೆ ಒಂದು ದೊಡ್ಡ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಸಂಕುಲವನ್ನೂ ಕೂಡ ನೀವು ನೋಡಬಹುದು. ಇದು ಪ್ರಕೃತಿಯೊಂದಿಗೆ ನಿಮ್ಮನ್ನು ಸಂಪರ್ಕಿಸುವ ಅವಕಾಶ ಮಾಡಿಕೊಡುತ್ತದೆ. ಮುಂಬೈನ ಇಂತಹ ಕೆಲವು ಟ್ರ್ಯಾಕ್ ಗಳನ್ನು ನೋಡೋಣ ಮತ್ತು ಬೈಕ್ ಮೇಲೆ ಸವಾರರಾಗಲು ಸಿದ್ದಗೊಳ್ಳಿರಿ ಮತ್ತು ಸೈಕ್ಲಿ ಸ್ಥಳಗಳಿಗೆ ಹಾಕಲಾಗಿರುವ ಈ ಟ್ರ್ಯಾಕ್ಗಕ್ ಗಳಲ್ಲಿ ಒಂದಕ್ಕೆ ಹೋಗಲು ತಯಾರಾಗಿ.

ಯೆಯರ್ ಹಿಲ್ಸ್

ಯೆಯರ್ ಹಿಲ್ಸ್

PC: Dinesh Valke

ಯಯೂರ್ ಬೆಟ್ಟಗಳು ಥಾಣೆ ಯಲ್ಲಿನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಈ ಬೆಟ್ಟಗಳನ್ನು ಮಾಮಾ ಭಾಂಜ ಬೆಟ್ಟಗಳು ಎಂದೂ ಕರೆಯುತ್ತಾರೆ ಇದು ಹೆಚ್ಚಿನ ಸಂಖ್ಯೆಯ ಸೈಕ್ಲಿಸ್ಟ್ ಗಳು ಯಾರು ಬೆಟ್ಟದ ಮೇಲೆ ಹತ್ತಲು ಇಚ್ಚಿಸುತ್ತಾರೋ ಅವರನ್ನು ಆಕರ್ಷಿಸುತ್ತದೆ.

ಸ್ಥಳವು ಪರ್ವತಗಳಲ್ಲಿ ಬೈಕಿಂಗ್ ಮಾಡುವವರಿಗೆ ಸೂಕ್ತವಾದುದಾಗಿದೆ ಮತ್ತು ರಾಷ್ಟ್ರೀಯ ಉದ್ಯಾನವನದ ಮತ್ತೊಂದು ಪ್ರವೇಶದ್ವಾರವೂ ಆಗಿದ್ದು ಇದನ್ನು ವೃತ್ತಿಪರ ಚಾರಣಿಕರು ಮತ್ತು ಪಾದಯಾತ್ರಿಕರು ಮಾತ್ರ ಬಳಸುತ್ತಾರೆ.ಈ ಬೆಟ್ಟಗಳನ್ನು ಪರಿಸರ-ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ, ಇಲ್ಲಿ ಹಸಿರಿನಿಂದ ಕೂಡಿದ ಪರಿಸರವು ಹೇರಳವಾಗಿದ್ದು, ಕಡಿಮೆ ಮಾಲಿನ್ಯ ಮತ್ತು ತಾಜಾ ಗಾಳಿಯನ್ನು ನೀಡುತ್ತದೆ.

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ

PC: Pratham.bhoot

104 ಕಿಮೀ ದೂರದಲ್ಲಿರುವ ಈ ಅಭಯಾರಣ್ಯವು ದೇಶಾದ್ಯಂತದ ಚಾರಣಿಗರು ಮತ್ತು ಬೈಕು ಸವಾರರಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಇದೇ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ. ಈ ಸ್ಥಳದ ನೈಸರ್ಗಿಕ ಸೌಂದರ್ಯ ಮತ್ತು ಶಾಂತಿಯುತತೆಯು ಋತುವಿನ ಹೊರತಾಗಿಯೂ ಭೇಟಿ ನೀಡುವವರನ್ನು ಆಕರ್ಷಿಸುತ್ತದೆ.

ಇದು 2400 ವರ್ಷದ ಕಾನ್ಹೆರಿ ಗುಹೆಗಳಿಗೆ ನೆಲೆಯಾಗಿದೆ, ಇದು ಇಲ್ಲಿನ ಬಂಡೆಗಳಲ್ಲೊಂದು. ವಿಹಾರ ಮತ್ತು ತುಳಸಿ ಎಂಬ ಎರಡು ಸುಂದರವಾದ ಸರೋವರಗಳಿವೆ. ಇದರ ಹೊರಗಾಗಿ ಬೆಳಿಗ್ಗೆ ಮತ್ತು ಸಾಯಂಕಾಲ ವಾಕಿಂಗ್ ಮಾಡುವವರಿಗೆ ಬೇಕಾಗುವ ಸ್ವಚ್ಛವಾದ ಗಾಳಿ, ಬೆಳಕು ಸಾಕಷ್ಟು ಇಲ್ಲಿ ಸಿಗುವುದು.

ಪೋರ್ಚುಗೀಸ್ ಮೀನುಗಾರಿಕಾ ಗ್ರಾಮ

ಪೋರ್ಚುಗೀಸ್ ಮೀನುಗಾರಿಕಾ ಗ್ರಾಮ

PC: AlainAudet

ಇದು ವರ್ಸೊವಾದಲ್ಲಿದೆ, ಸೈಕ್ಲಿಂಗ್ ಮಾಡುವ ಸಾಹಸಿಗಳಿಗೆ ಈ ಜಾಗವು ಹೇಳಿ ಮಾಡಿಸಿದಂತಿದೆ. ಇಲ್ಲಿನ ಮಾರ್ಗವು ಹಲವಾರು ಮೀನುಗಾರಿಕೆ ಗ್ರಾಮಗಳು ಮತ್ತು ಮ್ಯಾಂಗ್ರೋವ್ ಗಳ ಮೂಲಕ ಹಾದು ಹೋಗುತ್ತವೆ. ಮಾಂಗ್ರೋವ್ ವೃಕ್ಷಗಳು ಈ ಜಾಗದ ಸೌಂದರ್ಯತೆಯನ್ನು ಹೆಚ್ಚಿಸಿವೆ ಹಾಗೂ ನೋಡುಗರನ್ನು ಮೋಡಿ ಮಾಡುತ್ತವೆ.

ನೀವು ಉತ್ಠಾನ ಚೌಕ್ ಗೆ ಹೋಗುವಾಗ ಚರ್ಚುಗಳು ಮತ್ತು ಕುಟೀರಗಳ ಅವಶೇಷಗಳಿಂದಾಗಿ, ಈ ಸ್ಥಳವು ಪುರಾತನ ಕಾಲಕ್ಕೆ ಹಿಂತಿರುಗಿ ನೋಡುವಂತೆ ಮಾಡುತ್ತದೆ. ಇಲ್ಲಿಂದ ಸುತ್ತಮುತ್ತಲಿನ ಪೂರ್ಣ ಪಕ್ಷಿ ನೋಟವನ್ನು ನೋಡಬಹುದಾಗಿದೆ.

ಬಾಂದ್ರಾದಿಂದ ಚರ್ಚಿಗೆ

ಬಾಂದ್ರಾದಿಂದ ಚರ್ಚಿಗೆ

PC: Ameya charankar

ಬಾಂದ್ರಾ ಸುಂದರವಾದ ಉಪನಗರವಾಗಿದ್ದು, ಇಲ್ಲಿಯ ಬೂಲ್ವರ್ಡ್, ಬೀಚ್ ಮತ್ತು ಬಾಂದ್ರಾ ಸರೋವರದ ಮಧ್ಯೆ ನಿಮ್ಮನ್ನು ಸವಾರಿ ಮಾಡಿಸುತ್ತದೆ. ಈ ಹಾದಿಗಳು ಮುಂಬೈಯ ಪಶ್ಚಿಮ ಭಾಗದಕ್ಕೂ ಹರಡಿಕೊಂಡಿವೆ, ನಾರಿಮನ್ ಪಾಯಿಂಟ್ ನ ಅಂತಿಮ ಜಾಗದಿಂದ ಹಿಡಿದು ಈ ಟ್ರ್ಯಾಕ್ ಗಳು ​​ದೇವಾಲಯಗಳು, ಉದ್ಯಾನವನಗಳ ಮೂಲಕ ಹೆಚ್ಚು ಹಾದುಹೋಗುತ್ತದೆ, ಇದು ಆಮ್ಚಿ ಮುಂಬಯಿಯ ಅತ್ಯಂತ ಇಷ್ಟವಾದ ಸೈಕ್ಲಿಂಗ್ ಮಾಡುವ ಜಾಗವಾಗಿದೆ.

ಮೆರೈನ್ ಡ್ರೈವ್ ನಿಂದ ಬಾಂಬೇ ಕೋಟೆಯ ಕಡೆಗೆ

ಮೆರೈನ್ ಡ್ರೈವ್ ನಿಂದ ಬಾಂಬೇ ಕೋಟೆಯ ಕಡೆಗೆ

PC: Tfeayush

ಸಿಎಸ್ಟಿ ಯಿಂದ ಪ್ರಾರಂಭಗೊಂಡು ಸಾಸೂನ್ ಡಾಕ್ನಲ್ಲಿ ಇದು ಕೊನೆಯಾಗುತ್ತದೆ. ಈ ಮೂಲಕ ಹಾದು ಹೋಗುವಾಗ ಬಾಂಬೆ ಪಂಜ್ರಾಪೋಲ್, ಮರೀನ್ ಡ್ರೈವ್, ಮುಂಬಾದೇವಿ ದೇವಾಲಯ ಮತ್ತು ಕ್ರಾಫೋರ್ಡ್ ಮಾರ್ಕೆಟ್ ಇತ್ಯಾದಿಗಳು ಸಿಗುತ್ತವೆ.

ಮರೀನ್ ಡ್ರೈವ್ ನಲ್ಲಿರುವ 3.5 ಕಿಮೀ ಉದ್ದದ ಬೋಲೆವಾರ್ಡ್ ಒಂದು ಕಾಂಕ್ರೀಟ್ ರಸ್ತೆಯಾಗಿದ್ದು, ಮುಂಬೈಯ ಆಕರ್ಷಕ ಕೊಲ್ಲಿಯ ಉದ್ದಕ್ಕೂ ವಿಸ್ತರಿಸಿದೆ ಮತ್ತು ಅಲಂಕರಿಸಲ್ಪಟ್ಟ ಪಾಮ್ ಮರಗಳ ಸುಂದರವಾದ ಸಾಲುಗಳ ವಾಯು ವಿಹಾರದಲ್ಲಿ ಕೊನೆಗೊಳ್ಳುತ್ತದೆ.

Read more about: ಮುಂಬೈ

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ