Search
  • Follow NativePlanet
Share
» »ಕರಾವಳಿಯಲ್ಲಿ ನಿಂತಿರುವ ಸುಂದರ ಸಮುದ್ರಗಳು...

ಕರಾವಳಿಯಲ್ಲಿ ನಿಂತಿರುವ ಸುಂದರ ಸಮುದ್ರಗಳು...

By Divya Pandit

ಸಮುದ್ರ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಗೋವಾ ಎಂದು ಬರುತ್ತದೆ. ಅಲ್ಲಿ ಬರುವ ಜನರ ಮೋಜು ಮಸ್ತಿಯ ಬಗ್ಗೆ ನೆನೆಯುತ್ತಾರೆ. ಆಡಂಬರದ ಆ ಜನ ಜಂಗುಳಿಯ ಮಧ್ಯೆ ಸಮುದ್ರದ ಸೌಂದರ್ಯ, ಅಲ್ಲಿ ಬೀಸುವ ಆ ತಂಪು ಗಾಳಿಯ ಸುಂದರ ಅನುಭವವನ್ನು ಸವಿಯಲು ಸಾಧ್ಯವಿಲ್ಲ. ನಿಮಗೆ ಪ್ರಕೃತಿ ಸೌಂದರ್ಯದ ಜೊತೆಗೆ ಮನಸ್ಸಿಗೊಂದಿಷ್ಟು ಖುಷಿ, ಸಮುದ್ರ ದಡದಲ್ಲಿ ಓಡಾಡುವ ಅವಕಾಶ, ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಸಮಯ ಕಳೆಯುವ ಆಸೆ ಇದ್ದರೆ ಕರಾವಳಿ ತೀರದಲ್ಲಿರುವ ಈ ಸುಂದರ ಸಮುದ್ರಕ್ಕೆ ಬನ್ನಿ.

ಹೌದು, ಕರಾವಳಿ ತೀರದಲ್ಲಿ ಹಬ್ಬಿರುವ ಸಮುದ್ರ ತೀರಗಳ ಆಕರ್ಷಣೆಯೇ ಬೇರೆ. ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದಲ್ಲಿರುವ ಕೆಲವು ಸಮುದ್ರ ತೀರಗಳು ಪ್ರವಾಸಿಗನಿಗೆ ಬೇಕಾದಂತಹ ಪರಿಸರವನ್ನೇ ಒಳಗೊಂಡಿದೆ. ಇದು ಚಳಿಗಾಲದ ಅಂತ್ಯ, ಬೇಸಿಗೆಯ ಆರಂಭದ ಕಾಲವಾದ್ದರಿಂದ ಸಮುದ್ರ ತೀರಕ್ಕೆ ಹೋಗಲು ಉತ್ತಮ ಸಮಯ. ನೀವು ಒಮ್ಮೆ ಇಲ್ಲಿಯ ಸಮುದ್ರ ತೀರಗಳಿಗೆ ಭೇಟಿ ನೀಡಿದರೆ ಪುನಃ ಪುನಃ ಇಲ್ಲಿಗೆ ಬರಲು ಬಯಸುತ್ತೀರಿ.

ಮಲ್ವಾನ್ ಸಮುದ್ರ

ಮಲ್ವಾನ್ ಸಮುದ್ರ

ಮಹಾರಾಷ್ಟ್ರದ ಆವೃತ್ತಿಯಲ್ಲಿ ಬರುವ ಈ ಸಮುದ್ರ ತನ್ನ ಮಡಿಲಲ್ಲೇ ಅನೇಕ ದಡಗಳನ್ನು ಒಳಗೊಂಡಿದೆ. ಗೋವಾ ನಗರದಿಂದ 150 ಕಿ.ಮೀ. ದೂರದಲ್ಲಿರುವ ಈ ಸಮುದ್ರದಲ್ಲಿ ಕೆಲವು ನೀರಿನ ಆಟಗಳನ್ನು ಆಡಬಹುದು. ಕೊಂಕಣ ತೀರವೇ ಇಲ್ಲಿಯವರೆಗೂ ಮುಂದುವರಿದ ಭಾಗವಾದ್ದರಿಂದ ಸ್ವಚ್ಛ ಹಾಗೂ ಸುಂದರವಾಗಿದೆ.

PC: Shreyas m balappanavar

ವರ್ಕಲಾ ಸಮುದ್ರ

ವರ್ಕಲಾ ಸಮುದ್ರ

ದಕ್ಷಿಣದ ಕೆಳಭಾಗದಲ್ಲಿರುವ ಸಮುದ್ರ ತೀರ ಇದು. ಇದನ್ನು ಪಾಪನಾಶಿನಿ ಸಮುದ್ರ ಎನ್ನುತ್ತಾರೆ. ಈ ಸಮುದ್ರದ ನೀರಿನಲ್ಲಿ ಒಮ್ಮೆ ಮುಳುಗಿ ಎದ್ದರೆ ನಮ್ಮ ಪಾಪವೆಲ್ಲಾ ಕಳೆದು ಪುಣ್ಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಕುಟುಂಬದವರೊಂದಿಗೆ ಇಲ್ಲಿಗೆ ಬಂದು ಸಮಯ ಕಳೆಯಲು ಯೋಗ್ಯವಾದ ಸ್ಥಳ. ಕೇರಳ ಪ್ರವಾಸಸ್ಥಳದಲ್ಲಿ ನೋಡಲೇ ಬೇಕಾದ ಸಮುದ್ರ ತೀರ.
PC: Lukas Vacovsky

ಕಾಪು ಬೀಚ್

ಕಾಪು ಬೀಚ್

ಈ ಸಮುದ್ರ ಉಡುಪಿ ನಗರ ಆವೃತ್ತಿಯಲ್ಲಿ ಬರುತ್ತದೆ. ಅಲ್ಲಲ್ಲಿ ಕಲ್ಲಿನ ಬಂಡೆಗಳನ್ನು ಒಳಗೊಂಡಿರುವ ಈ ಸಮುದ್ರ ತೀರ ಒಂದು ಅದ್ಭುತ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಕಾಪು ಲೈಟ್ ಹೌಸಿನಿಂದ ಸಮುದ್ರವನ್ನು ನೋಡಿದರೆ ಸುಂದರ ದೃಶ್ಯ ನಿಮ್ಮ ಮನಸ್ಸು ಸೂರೆಗೊಳಿಸುತ್ತದೆ.

ಗಣಪತಿಪುಲೆ

ಗಣಪತಿಪುಲೆ

ಮಹಾರಾಷ್ಟ್ರದಲ್ಲಿ ಬರುವ ಈ ಸಮುದ್ರದ ತೀರದಲ್ಲಿ ಒಂದು ಗಣೇಶ ದೇಗಲವಿದೆ. ವಿಶಾಲವಾದ ಜಾಗ ಇರುವುದರಿಂದ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಟ ಆಡ ಬಹುದು. ಕುಳಿತು ಸಮಯ ಕಳೆಯಲು ಯೋಗ್ಯವಾದ ಸ್ಥಳ. ಇಲ್ಲಿ ಜನ ಸಂದಣಿ ಕಡಿಮೆ.

PC: Hariprasad Poojary

ತಣ್ಣೀರ್‍ಬಾವಿ ಸಮುದ್ರ

ತಣ್ಣೀರ್‍ಬಾವಿ ಸಮುದ್ರ

ಮಂಗಳೂರಿನ ಪ್ರಮುಖ ಸಮುದ್ರ ತೀರಗಳಲ್ಲಿ ತಣ್ಣೀರ್ ಬಾವಿ ಸಮುದ್ರವೂ ಒಂದು. ಸುತ್ತಲೂ ಶುದ್ಧ ಹಾಗೂ ಶುಭ್ರವಾದ ನೀರಿನಿಂದ ಶೋಭಿಸುವ ಈ ಸಮುದ್ರ ತೀರದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ್ಯವನ್ನು ನೋಡಲು ನಯನ ಮನೋಹರ ವಾಗಿರುತ್ತದೆ.

PC: Karunakar Rayker

ತರ್ಕಾರ್ಲಿ ಸಮುದ್ರ

ತರ್ಕಾರ್ಲಿ ಸಮುದ್ರ

ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯಲ್ಲಿ ಬರುವ ಒಂದು ಪುಟ್ಟ ಹಳ್ಳಿ ತರಕಾರ್ಲಿ. ಇಲ್ಲಿರುವ ಸಮುದ್ರ ತೀರಕ್ಕೆ ತರ್ಕಾರ್ಲಿ ಸಮುದ್ರ ಎನ್ನುತ್ತಾರೆ. ಅರಬ್ಬಿ ಸಮುದ್ರದ ಒಂದು ಕಿರಿದಾದ ಗಡಿ ಇದು. ಪ್ರಶಾಂತವಾಗಿ ಇರುವ ಈ ಪ್ರದೇಶದಲ್ಲಿ ಕಾಲ ಕಳೆಯಲು ಸಂತೋಷವಾಗುತ್ತದೆ.

ಚೆರೈ ಸಮುದ್ರ

ಚೆರೈ ಸಮುದ್ರ

ಕೊಚ್ಚಿಯ ಕರಾವಳಿ ತೀರದಲ್ಲಿ ಬರುವ ಈ ಸಮುದ್ರ ಬಹಳ ಅದ್ಭುತವಾಗಿದೆ. ಕೊಚ್ಚಿಯಿಂದ 25 ಕಿ.ಮೀ. ದೂರದಲ್ಲಿರುವ ಈ ಸಮುದ್ರದ ಹತ್ತಿರದಲ್ಲೇ ಅನೇಕ ರೆಸಾರ್ಟ್‍ಗಳಿವೆ. ರಜದ ಮಜವನ್ನು ಅನುಭವಿಸಲು ಇದೊಂದು ಸೂಕ್ತ ಜಾಗ.
PC: Jan J George

Read more about: kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X