Search
  • Follow NativePlanet
Share
» »ಮೋಡಿ ಮಾಡುವ ಸಾಂಪ್ರದಾಯಿಕ ಸೇತುವೆಗಳು

ಮೋಡಿ ಮಾಡುವ ಸಾಂಪ್ರದಾಯಿಕ ಸೇತುವೆಗಳು

By Vijay

ನಮಗೆ ಸರ್ವೆ ಸಾಮಾನ್ಯವಾಗಿ ತಿಳಿದಿರುವ ವಿಷಯವೆಂದರೆ ಮನುಷ್ಯ ಬೆಳೆದಂತೆಲ್ಲ ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ಆವಿಶ್ಕಾರಗಳು ನಡೆಯತೊಡಗಿದವು. ತನ್ನ ಅನುಕೂಲಕ್ಕೆಂದು ಮನುಷ್ಯ ಸಾಕಷ್ಟು ಪರಿಹಾರ ಸೂತ್ರಗಳನ್ನು ಕಂಡುಕೊಂಡನು. ಬೆಟ್ಟಗುಡ್ಡಗಳ ಮಧ್ಯೆ ಸರಾಗವಾಗಿ ಸಾಗಲು ಕಾಲು ದಾರಿಯನ್ನು ನಿರ್ಮಿಸಿಕೊಂಡನು. ಮೇಲೇರಲು ಅನುವಾಗುವಂತೆ ಮೆಟ್ಟಿಲುಗಳನ್ನು, ಏಣಿಗಳನ್ನು ರೂಪಿಸಿಕೊಂಡನು.

ಅದರಂತೆ ಕೆರೆಗಳು, ನದಿಗಳ ಒಂದು ದಂಡೆಯಿಂದ ಮತ್ತೊಂದು ದಂಡೆಗೆ ಸಾಗಲು ಪ್ರಕೃತಿಯಿಂದ ಸುಲಭವಾಗಿ ದೊರೆಯುವ ನಾರು, ಬೇರು, ಕಟ್ಟಿಗೆ, ದಿಣ್ಣು ಮುಂತಾದವುಗಳನ್ನು ಬಳಸಿಕೊಂಡು ಸೇತುವೆಗಳ ನಿರ್ಮಾಣಗಳನ್ನು ಮಾಡಿಕೊಂಡನು. ಹೀಗೆ ಸಾಂಪ್ರದಾಯಿಕವಾಗಿ ಮೊದಲು ನಿರ್ಮಿಸಲ್ಪಡುತ್ತಿದ್ದ ಸೇತುವೆಗಳು ಇಂದು ಆಧುನಿಕ ತಂತ್ರಜ್ಞಾನದೊಂದಿಗೆ ಬೆರೆತು ಸಾಕಷ್ಟು ಸುಧಾರಿತವಾಗಿ ನಿರ್ಮಿಸಲ್ಪಡುತ್ತಿವೆ.

ವಿಶೇಷ ಲೇಖನ : ಏಳು ಪ್ರಾಕೃತಿಕ ವಿಸ್ಮಯಗಳು

ಆದರೂ ನಿಮಗೆ ಆಶ್ಚರ್ಯ ಉಂಟು ಮಾಡುವ ಸಂಗತಿಯೆಂದರೆ ಇಂದಿಗೂ ಭಾರತದ ಕೆಲವು ಸ್ಥಳಗಳಲ್ಲಿ ಹಿಂದೆ ಸಾಂಪ್ರದಾಯಿಕವಾಗಿ, ಕಚ್ಚಾ ವಸ್ತುಗಳನ್ನು ಬಳಸಿಕೊಂಡು ನಿರ್ಮಿಸಲಾದ ಹಲವಾರು ಸೇತುವೆಗಳನ್ನು ನೋಡಬಹುದಾಗಿದೆ. ಕೇವಲ ನೋಡುವುದಷ್ಟೆ ಅಲ್ಲ, ಆ ಸೇತುವೆಗಳು ಇಂದಿಗೂ ಸಹ ಬಳಸಲ್ಪಡುತ್ತವೆ ಎನ್ನುವುದು ವಿಶೇಷ.

ಈ ರೀತಿಯ ಸೇತುವೆಗಳನ್ನು ನೋಡುವುದು ಹಾಗೂ ಅದರ ಮೇಲೆ ನಡೆದಾಡುವುದೆಂದರೆ ನಮ್ಮಲ್ಲಿ ಬಹುತೇಕರಿಗೆ ಸಂತಸವಾಗದೆ ಇರಲಾರದು. ನಿಮಗೂ ಸಹ ಈ ರೀತಿಯ ವಿಶಿಷ್ಟ ಸೇತುವೆಗಳು ಕುರಿತು ತಿಳಿಯಲು ಆಸಕ್ತಿಯಿದೆಯೆ? ಹಾಗಾದರೆ ಪ್ರಸ್ತುತ ಲೇಖನದ ಮೂಲಕ ನಿಮ್ಮ ಆಸಕ್ತಿಗೆ ನಿರಾಸಕ್ತಿಯಾಗದಂತೆ ಆ ಸೇತುವೆಗಳ ಬಗ್ಗೆ ತಿಳಿಯಿರಿ ಹಾಗೂ ಅವಕಾಶ ಸಿಕ್ಕಾಗ ಭೇಟಿ ನೀಡಲು ಮರೆಯದಿರಿ.

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಇಲ್ನೋಡಿ ಹೇಗಿದೆ ಈ ಸಾಂಪ್ರದಾಯಿಕ ಶೈಲಿಯ ಸೇತುವೆ. ಬಿದಿರು ಮರಗಳ ಬಾಂಬೂ ಹಾಗೂ ನಾರನ್ನು ಬಳಸಿ ನಿರ್ಮಿಸಲಾದ ರೋಮಾಂಚನವನ್ನುಂಟು ಮಾಡುವೆ ಸೇತುವೆ. ಈ ಸೇತುವೆಯಿ ಅರುಣಾಚಲ ಪ್ರದೇಶ ರಾಜ್ಯದ ದಿಬಾಂಗ್ ಕಣಿವೆ ಜಿಲ್ಲೆಯ ದಿಬಾಂದ್ ಪಟ್ಟಣದಲ್ಲಿ ಹರಿದಿರುವ ದ್ರಿ ಎಂಬ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಚಿತ್ರಕೃಪೆ: goldentakin

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೋಯಲ್ ನದಿ ಸೇತುವೆ : ಜಾರ್ಖಂಡ್ ಹಾಗೂ ಒಡಿಶಾ ರಾಜ್ಯಗಳಲ್ಲಿ ಹರಿಯುವ ಕೋಯಲ್ ಎಂಬ ನದಿಗೆ ಋತುಮಾನಕ್ಕನುಗುಣವಾಗಿ ಈ ಕಟ್ಟಿಗೆಯ ಸೇತುವೆ ನಿರ್ಮಿಸಲ್ಪಡುತ್ತದೆ. ಜಾರ್ಖಂಡ್ ನ ರಾಂಚಿ ಪಟ್ಟಣದ ಬಳಿಯಲ್ಲಿ ಈ ತಾತ್ಕಾಲಿಕ ಸೇತುವೆಯನ್ನು ಕಾಣಬಹುದು.

ಚಿತ್ರಕೃಪೆ: Sidharthkochar

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಇದು ಅರುಣಾಚಲ ಪ್ರದೇಶ ರಾಜ್ಯದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಮೆಚುಕಾ ಎಂಬ ಚಿಕ್ಕ ಪಟ್ಟಣದಲ್ಲಿ ಹರಿದಿರುವ ಯೆರ್ ಗ್ಯಾ ಪ್ಚು ಎಂಬ ನದಿಗೆ ಅಡ್ಡಲಾಗಿ ಸಾಂಪ್ರದಾಯಿಕವಾಗಿ ನಿರ್ಮಿಸಲಾಗಿರುವ ಸೇತುವೆ.

ಚಿತ್ರಕೃಪೆ: Quentin Talon & Mario Geiger

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಅರುಣಾಚಲ ಪ್ರದೇಶ ರಾಜ್ಯದ ಕಾಹೂ ಹಾಗೂ ಖಿಬಿಟು ಎಂಬ ಎರಡು ಹಳ್ಳಿಗಳನ್ನು ವಿಭಾಗಿರುವ ಲೋಹಿತ್ ನದಿ ಹಾಗೂ ಅವುಗಳನ್ನು ಒಂದಕ್ಕೊಂದು ಬೆಸೆಯುವಂತೆ ಮಾಡುವ ತೂಗು ಸೇತುವೆ.

ಚಿತ್ರಕೃಪೆ: शंतनू

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಚೀರಾಪುಂಜಿಯ ಲಿವಿಂಗ್ ರೂಟ್ ಬ್ರಿಡ್ಜ್: ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಮೇಘಾಲಯ ರಾಜ್ಯದ ಚಿರಾಪುಂಜಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಈ ಸೇತುವೆ ಒಂದು ನಿಸರ್ಗ ನಿರ್ಮಿತ ಜಗತ್ತಿನಲ್ಲೆ ಅದ್ಭುತ ಅಚ್ಚರಿಯಾಗಿದೆ. ಮರದ ಬೇರುಗಳಿಂದ ತೂಗು ಸೇತುವೆಯ ಹಾಗೆ ತನ್ನಷ್ಟಕ್ಕೆ ತಾನೆ ನಿರ್ಮಾಣಗೊಂಡಿರುವ ಈ ಸೇತುವೆಯು ಇಂದಿಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಂದ ನಿರ್ಭಯವಾಗಿ ಬಳಸಲ್ಪಡುತ್ತದೆ.

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಗೋವಾ ಎಲ್ಲರಿಗೂ ಇಷ್ಟವಾಗುವ ಪ್ರಖ್ಯಾತ ಪ್ರವಾಸಿ ಕೇಂದ್ರ. ಹಲವು ಆಧುನಿಕತೆಗಳ ನಡುವೆ ಸಾಂಪ್ರದಾಯಿಕವಾಗಿ ಕಟ್ಟಿಗೆಗಳಿಂದ ನಿರ್ಮಿಸಲಾದ ಸುಂದರ ಸೇತುವೆ. ಇದು ಇರುವುದು ಗೋವಾದ ಫಾಲೋಲೆಮ್ ಕಡಲ ತೀರದ ಬಳಿ.

ಚಿತ್ರಕೃಪೆ: Glabb

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕರ್ನಾಟಕದ ಮಂಗಳೂರಿನಿಂದ ಹನ್ನೆರಡು ಕಿ.ಮೀ ದೂರದಲ್ಲಿರುವ ಹೇಮಾವತಿ ನದಿಯಲ್ಲಿರುವ ನೆಲೆಸಿರುವ ಪಾವೂರು ಉಲಿಯಾ ಎಂಬ ಚಿಕ್ಕ ನಡುಗಡ್ಡೆಯನ್ನು ಅಡ್ಯಾರ್ ನಿಂದ ಬೆಸೆಯುವ ಕಟ್ಟಿಗೆಗಳಿಂದ ನಿರ್ಮಿತವಾದ ಸೇತುವೆ.

ಚಿತ್ರಕೃಪೆ: Vaikoovery

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ತೊನ್ಸೆ ತೂಗು ಸೇತುವೆ : ಉಡುಪಿಯಿಂದ ಎಂಟು ಕಿ.ಮೀ ಗಳಷ್ಟು ಅಂತರದಲ್ಲಿ ತೊನ್ಸೆ ಎಂಬ ಗ್ರಾಮವಿದೆ. ಪ್ರವಾಸಿ ದೃಷ್ಟಿಯಿಂದ ಅಷ್ಟೊಂದಾಗಿ ಚಿರಪರಿಚಿತವಿಲ್ಲದ ಈ ಗ್ರಾಮ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿದೆ. ಕಾರಣ ಇದರ ಪಶ್ಚಿಮದಲ್ಲಿ ಅರಬ್ಬಿ ಸಮುದ್ರವಿದ್ದರೆ ಪೂರ್ವಕ್ಕೆ ಸುವರ್ಣಾ ನದಿ ಹರಿದಿದೆ. ಅಲ್ಲದೆ ಈ ನದಿಯಲ್ಲಿ ಹಲವಾರು ನಡುಗಡ್ಡೆಗಳಿದ್ದು ಅದ್ಭುತವಾದ ಪ್ರಕೃತಿಯನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಇಲ್ಲಿರುವ ತೂಗೆ ಸೇತುವೆಯನ್ನು ತೊನ್ಸೆ ಸೇತುವೆ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: Sharfulla

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕರ್ನಾಟಕದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ರೈಲು ಮಾರ್ಗದಲ್ಲಿ ಹೋಗುವಾಗ ಸಕಲೇಶಪುರದ ನಂತರ ಒಂದು ಅದ್ಭುತವಾದ ಟ್ರೆಕ್ಕಿಂಗ್ ಮಾರ್ಗ ದೊರೆಯುತ್ತದೆ. ಈ ಮಾರ್ಗವು ಸುಂದರವಾದ, ದಟ್ಟವಾದ ಹಸಿರಿನ ನಡುವೆ, ಹಳ್ಳ ಕೊಳ್ಳಗಳ ಮೂಲಕ, ಪ್ರಪಾತಗಳ ಮೂಲಕ ರೈಲು ಹಳಿಯೊಂದಿಗೆಯೆ ಸಾಗುತ್ತದೆ. ಇದನ್ನು ಹಸಿರುಪಥ ಎಂತಲೂ ಕರೆಯುತ್ತಾರೆ. ಆ ಮಾರ್ಗದ ಎಡುಕುಮೇರಿ ಎಂಬಲ್ಲಿ ಹಳಿಯ ಪಕ್ಕದಲ್ಲೆ ನೀರಿನ ತೊರೆಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾದ ಕಟ್ಟಿಗೆಗಳ ಚಿಕ್ಕೆ ಸೇತುವೆ. ಆದರೆ ಗಮನದಲ್ಲಿಡಿ, ಇಂದು ಇದನ್ನು ಬಳಸಲಾಗುತ್ತಿಲ್ಲ, ಕಾರಣ ಇದು ಹಳೆಯದಾಗಿದ್ದು ಅಪಾಯಕಾರಿಯೂ ಆಗಿದೆ.

ಚಿತ್ರಕೃಪೆ: netlancer2006

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿ ನೆಲೆಸಿದೆ ಗೋಕಾಕ ಪಟ್ಟಣ. ಈ ಪಟ್ಟಣ ಪ್ರಖ್ಯಾತವಾಗಿರುವುದು ತನ್ನಲ್ಲಿರುವ ಮೈ ಝುಮ್ಮೆನಿಸುವ ರುದ್ರ ಭಯಂಕರ ಜಲಪಾತದಿಂದಾಗಿ. ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೆ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದುಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆಯೊಂದಿದ್ದು ಅದರ ಮೇಲೆ ಸಾಗುತ್ತಿರುವಾಗ ಎಲ್ಲಿಲ್ಲದ ರೋಮಾಂಚನ ಉಂಟಾಗುತ್ತದೆ.

ಚಿತ್ರಕೃಪೆ: Nethra10469

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ವೆಲ್ಲೆಸ್ಲಿ ಸೇತುವೆ : ಶ್ರೀರಂಗಪಟ್ಟಣದ ಬಳಿಯಿರುವ ವೆಲ್ಲೆಸ್ಲಿ ಸೇತುವೆ 1870 ರ ಸಂದರ್ಭದಲ್ಲಿ. 1804 ರಲ್ಲಿ ಮೈಸೂರು ಸಂಸ್ಥಾನದ ದೀವಾನರಾದ ಪೂರ್ಣಯ್ಯನವರ ಸುಪರ್ದಿಯಲ್ಲಿ ಒಟ್ಟು 5.50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಸೇತುವೆಯ ನಿರ್ಮಾಣ ಮಾಡಲಾಯಿತು. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯು 1964 ರ ವರೆಗೂ ಪ್ರಚಲಿತದಲ್ಲಿತ್ತು.

ಚಿತ್ರಕೃಪೆ:Glabb

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಮೇಘಾಲಯ ರಾಜ್ಯದ ಗ್ರಾಮವೊಂದರಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಬಿದಿರಿನಿಂದ ನಿರ್ಮಿಸಲ್ಪಟ್ಟ ಸುಂದರ ಬುಡಕಟ್ಟು ಜನಾಂಗದವರು ನಿರ್ಮಿಸಿದ ಸೇತುವೆ. ಪ್ರೀಯ ಓದುಗರೆ ಇದರ ಕುರಿತು ಹೆಚ್ಚಿನ ಮಾಹಿತಿ ನಿಮಗೆ ಲಭ್ಯವಿದ್ದಲ್ಲಿ ಪ್ರತಿಕ್ರಿಯೆಯ ಮೂಲಕ ನೀಡಬಹುದು.

ಚಿತ್ರಕೃಪೆ: Glabb

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ತಮಿಳುನಾಡಿನ ಮದುರೈ ನಗರದ ಸನೀಹದಲ್ಲಿರುವ ಸೆಂಬುಕುಡಿಪಟ್ಟಿ ಎಂಬ ಗ್ರಾಮದಲ್ಲಿ ಮುಳ್ಳೈ ಪೆರಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಡಿಮೆ ಅಗಲ ಹೊಂದಿರುವ ಸೇತುವೆ.

ಚಿತ್ರಕೃಪೆ: எஸ்ஸார்

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ತ್ರಿಪುರಾದ ಅಮರಪುರ ಎಂಬಲ್ಲಿ ಚಾಲ್ತಿಯಲ್ಲಿರುವ ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಟ್ಟಿಗೆಗಳ ಸೇತುವೆ.

ಚಿತ್ರಕೃಪೆ: Soman

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ವರಾಣಸಿಯಿಂದ ರಾಮನಗರ ಕೋಟೆಗೆ ತೆರಳುವಾಗ ಬರುವ ಗಂಗಾ ನದಿಗೆ ಅಡ್ಡಲಾಗಿ ತಾತ್ಕಾಲಿಕವಾಗಿ ಅಂದರೆ ವರ್ಷದ ನಿರ್ದಿಷ್ಟ ಸಮಯದಲ್ಲಿ (ಚಳಿಗಾಲ) ನಿರ್ಮಿಸಲಾಗುವ ಪೊಂಟೂನ್ ಸೇತುವೆ. ದೊಡ್ಡ ಆಕಾರದ ಲೋಹದ ಸಿಲಿಂಡರುಗಳನ್ನು ನದಿಯಲ್ಲಿ ಹಾಕಿ ಅದರ ಮೇಲೆ ಕಟ್ಟಿಗೆಗಳಿಂದ ಮಾರ್ಗವನ್ನು ನಿರ್ಮಿಸಲಾಗುತ್ತದೆ.

ಚಿತ್ರಕೃಪೆ: Ekabhishek

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್ ನಲ್ಲಿ ಅಲಕನಂದಾ ನದಿಯು ಮಂದಾಕಿನಿ ನದಿಯೊಂದಿಗೆ ಸಂಗಮ ಹೊಂದುವ ಸ್ಥಳದಲ್ಲಿ ನಿರ್ಮಿಸಲಾಗಿರುವ ತೂಗು ಸೇತುವೆ.

ಚಿತ್ರಕೃಪೆ: Vvnataraj

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ತೊಮ್ಮನಕುತು ಸೇತುವೆ : ಈ ಸೇತುವೆ ಸಾಂಪ್ರದಾಯಿಕವಾಗಿ ಕಟ್ಟಿಗೆಗಳಿಂದ ನಿರ್ಮಿಸಲಾದ ಅತಿ ಚಿಕ್ಕದಾದ ಸೇತುವೆಯಾದರೂ ತನ್ನ ವಿಶೀಷ್ಟತೆ ಹಾಗೂ ಸುಂದರ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರಿಗೆ ಪ್ರಸನ್ನತೆಯನ್ನುಂಟು ಮಾಡುತ್ತದೆ. ಇದು ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳಾ ಎಂಬಲ್ಲಿದೆ. ಈ ಚಿಇಕ ಸೇತುವೆ ಮನೆಯ ರೀತಿಯ ಚಪ್ಪರವನ್ನು ಹೊಂದಿರುವುದು ವಿಶೇಷ.

ಚಿತ್ರಕೃಪೆ: Amjithps

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಹಗ್ಗ ಸೇತುವೆ : ಕೇರಳದ ಪೊನಲೂರು ಬಳಿ ಚಾಲಿಯಕ್ಕರ್ ರಬ್ಬರ್ ಪ್ಲ್ಯಾಂಟೇಷನ್ ಗೆ ತೆರಳುವಾಗ ಈ ಸುಂದರ ಸೇತುವೆ ಜನರನ್ನು ಸ್ವಾಗತಿಸುತ್ತದೆ.

ಚಿತ್ರಕೃಪೆ: Noblevmy

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಆಲುವಾದಲ್ಲಿರುವ ಆಲುವಾ ಮಣಪ್ಪುರಂ ಪಟ್ಟಣವು ಶಿವರಾತ್ರಿ ಹಬ್ಬಕ್ಕೆ ಬಲು ಖ್ಯಾತವಾಗಿದೆ. ಶಿವರಾತ್ರಿಯ ಸಂದರ್ಭದಲ್ಲಿ ಈ ತಾತ್ಕಾಲಿಕ ಸೇತುವೆಯು ಭಕ್ತರು ಶಿವ ದೇಗುಲಕ್ಕೆ ತೆರಳಲು ಅನುಕೂಲ ಮಾಡಿಕೊಡುತ್ತದೆ.

ಚಿತ್ರಕೃಪೆ: Ranjithsiji

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಆರಳಂ ವನ್ಯಜೀವಿ ಅಭಯಾರಣ್ಯದಲ್ಲಿ ಸಾಗುವಾಗ ಕಂಡು ಬರುವ ಪಾರಂಪರಿಕ ಶೈಲಿಯಲ್ಲಿ ನಿಎಮಿಸಲಾದ ಸೇತುವೆ.

ಚಿತ್ರಕೃಪೆ: Manojk

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರಿನಲ್ಲಿ ಚಾಲಿಯಾರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸುಂದರ ತೂಗು ಸೇತುವೆ.

ಚಿತ್ರಕೃಪೆ: PP Yoonus

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಹಿನ್ನೀರಿನ ಪ್ರದೇಶಗಳನ್ನು ಒಳಗೊಂಡಿರುವ ಕೇರಳ ರಾಜ್ಯದಲ್ಲಿ ನೀರಿನ ಮೂಲಗಳು ಅನೇಕ. ಇನ್ನೂ ಮಳೆಗಾಲದಲ್ಲಂತೂ ಸಾಕಷ್ಟು ಭೂಪ್ರದೇಶಗಳು ಕೃತಕ ನೀರಿನ ತೊರೆಗಳು ಹಾಗೂ ಕೆರೆಗಳಿಂದ ಎಲ್ಲೆಂದರಲ್ಲಿ ತುಂಬಿ ಹೋಗಿರುತ್ತವೆ. ಇಂತಹ ಸಂದರ್ಭಗಳಲ್ಲಿ ಸಾಕಷ್ಟು ಗ್ರಾಮ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮರಗಳ ಕಾಂಡಗಳು ರೆಂಬೆಗಳು ತಾತ್ಕಾಲಿಕ ಸೇತುವೆಗಳಾಗಿ ಬಳಸಲ್ಪಡುತ್ತವೆ. ಇದೊಂದು ಸಾಂಪ್ರದಾಯಿಕ ವಿಧಾನವೂ ಹೌದು.

ಚಿತ್ರಕೃಪೆ: Glabb

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ಕೊಟ್ಟಿಯೂರು ಶಿವನ ಎರಡು ದೇವಸ್ಥಾನಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಒಂದು ಅಕ್ಕರೆ ಕೊಟ್ಟಿಯೂರು ಶಿವನ ದೇವಾಲಯವಾದರೆ ಇನ್ನೊಂದು ಇಕ್ಕರೆ ಕೊಟ್ಟಿಯೂರು ಶಿವನ ದೇವಾಲಯ. ಅಕ್ಕರೆ ಕೊಟ್ಟಿಯೂರು ದೇವಾಲಯವು ಮುಖ್ಯ ದೇವಾಲಯವಾದರೂ ಕೇವಲ ಮಳೆಗಾಲದ ಅಂದರೆ ಜೂನ್ ಜುಲೈ ಸಂದರ್ಭದಲ್ಲಿ ಮಾತ್ರವೆ ತಾತ್ಕಾಲಿಕವಾಗಿ ನಿರ್ಮಿಸಲ್ಪಡುತ್ತದೆ. ಇನ್ನುಳಿದಂತೆ ಇಕ್ಕರೆ ದೇವಾಲಯವು ಶಾಶ್ವತವಾದ ರಚನೆಯಾಗಿದೆ. ಇವೆರಡು ದೇವಸ್ಥಾನಗಳ ಮಧ್ಯೆ ನದಿಯೊಂದಿದ್ದು ಭೇಟಿ ನೀಡಲು ಅದಕ್ಕೆ ಅಡ್ಡಲಾಗಿ ಕಲ್ಲುಗಳು ಹಾಗೂ ಸಿಮೆಂಟು ಚೀಲಗಳನ್ನು ಬಳಸಿ ಸೇತುವೆ ನಿರ್ಮಿಸಲಾಗುತ್ತದೆ.

ಚಿತ್ರಕೃಪೆ: Vinayaraj

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ವಯಪುರ್ ಮಲ್ಲಪಳ್ಳಿ ತೂಗು ಸೇತುವೆ. ವಯಪುರ್ ಕೇರಳದ ಪತನಾಂತಿಟ್ಟ ಜಿಲ್ಲೆಯಲ್ಲಿದೆ. ಮಲ್ಲಪಳ್ಳಿಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ.

ಚಿತ್ರಕೃಪೆ: An.aravind.k

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ವಯನಾಡ್ ಜಿಲ್ಲೆಯಲ್ಲಿ ಹರಿದಿರುವ ಕಬಿನಿ ನದಿಯ ಜಲನಯನ ಪ್ರದೇಶದಲ್ಲಿರುವ ಕುರುವಾ ದ್ವೀಪದಲ್ಲಿ ಮಳೆಗಾಲದ ಸಂದರ್ಭದಲ್ಲಿ ನಿರ್ಮಿತವಾಗುವ ತಾತ್ಕಾಲಿಕ ಸೇತುವೆ.

ಚಿತ್ರಕೃಪೆ: Challiyan

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ಕಣ್ಣೂರಿನಲ್ಲಿರುವ ಪಪ್ಪಿನಿಸ್ಸೆರಿ ಮ್ಯಾಂಗ್ರೋವ್ ಉದ್ಯಾನದಲ್ಲಿರುವ ಕಟ್ಟಿಗೆಗಳಿಂದ ನಿರ್ಮಿತವಾದ ಸೇತುವೆ.

ಚಿತ್ರಕೃಪೆ: Ks.mini

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗಳ ಜಂಕ್ಷನ್ ನಲ್ಲಿ ನೆಲೆಸಿರುವ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿ ಸೈದಂಧ್ರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅದ್ಭುತ ಸೇತುವೆ.

ಚಿತ್ರಕೃಪೆ: Cj.samson

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಕೇರಳದ ತ್ರಿಶ್ಶೂರ್ ಜಿಲ್ಲೆಯ ಪುತೆಂಚಿರಾ ಎಂಬ ಗ್ರಾಮದಲ್ಲಿ ಕೆನಾಲ್ ಒಂದರ ಮುಂದೆ ನೆಲೆಸಿರುವ ಪುತೆಂಚಿರಾ ಫೊರೆನ್ ಚರ್ಚ್. ಕೆನಾಲ್ ನ ಈಚೆ ಬದಿಯಲ್ಲಿರುವ ಜನರು ಕೆನಾಲ್ ಗೆ ಅಡ್ಡಲಾಗಿ ಸಾಂಪ್ರದಾಯಿಕವಾಗಿ ನಿರ್ಮಿಸಲಾದ ಈ ಸೇತುವೆಯ ಮೂಲಕ ತೆರಳಬೇಕು.

ಚಿತ್ರಕೃಪೆ: കാക്കര

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಇಂಜುತೊಟ್ಟಿ ತೂಗು ಸೇತುವೆ. ಇದು ಕೊಚ್ಚಿ ಬಳಿಯ ತಟ್ಟೆಕಾಡ್ ಪಕ್ಷಿ ಧಾಮದ ಬಳಿ ಸ್ಥಿತವಿದೆ.

ಚಿತ್ರಕೃಪೆ: Drajay1976

ಸಾಂಪ್ರದಾಯಿಕ ಸೇತುವೆಗಳು:

ಸಾಂಪ್ರದಾಯಿಕ ಸೇತುವೆಗಳು:

ಎರ್ನಾಕುಲಂ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಕೇಂದ್ರವಾದ ಕೋಡನಾಡಿನಿಂದ ಮಲಯಟ್ಟು ಚರ್ಚ್ ತಲುಪಲು ನಿರ್ದಿಷ್ಟ ಸಮಯದಲ್ಲಿ ಅಂದರೆ ಚರ್ಚ್ ಉತ್ಸವದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗುವ ಕಟ್ಟಿಗೆಗಳ ಸೇತುವೆ.

ಚಿತ್ರಕೃಪೆ: Sreejith K

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+