Search
  • Follow NativePlanet
Share
» »ಸರಹದ್ದಿನ ಅತಿ ಸುಂದರ ಕೊನೆಯ ಹಳ್ಳಿ ಇದು!

ಸರಹದ್ದಿನ ಅತಿ ಸುಂದರ ಕೊನೆಯ ಹಳ್ಳಿ ಇದು!

By Vijay

ಭಾರತವು ತನ್ನ ನೆರೆಯ ದೇಶಗಳಾದ ಚೀನಾ, ಪಾಕಿಸ್ತಾನ, ನೇಪಾಳ, ಬಂಗ್ಲಾ ದೇಶಗಳೊಂದಿಗೆ ಸರಹದ್ದಿನ ಕೊನೆ ಕೊನೆಗಳಲ್ಲಿ ಕೆಲವು ಅತ್ಯಾಕರ್ಷಕ ಸ್ಥಳಗಳನ್ನು ಹೊಂದಿದೆ. ಈ ಸ್ಥಳಗಳ ಸೌಂದರ್ಯ ವರ್ಣನಾತೀತ. ಪ್ರವಾಸಿ ಚಟುವಟಿಕೆ ಅತಿ ಹೆಚ್ಚು ಬೆಳೆಯಲು ವಿಫುಲ ಅವಕಾಶ.

ಆದರೂ ಈ ಸ್ಥಳಗಳು ಅಷ್ಟೊಂದು ಪ್ರಸಿದ್ಧಿ ಪಡೆದಿಲ್ಲ. ಯಾರೂ ಸಹ ಈ ಸ್ಥಳಗಳಿಗೆ ಭೇಟಿ ನೀಡುವುದಿಲ್ಲವಂತೇನಿಲ್ಲ. ಆದರೆ ಭೇಟಿ ನೀಡಿದರೂ ಆ ಪ್ರವಾಸಿಗರ ಸಂಖ್ಯೆ ಕಮ್ಮಿಯೆ. ಇದಕ್ಕೆ ಸರಳವಾದ ಕಾರಣ ಇವು ಸರಹದ್ದಿನ ಬಳಿಯಲ್ಲಿ ಸ್ಥಿತವಿದ್ದು ಭದ್ರತೆಯ ವಿಷಯ ಸಾಕಷ್ಟು ತಡೆಯನ್ನು ಒಡ್ಡುತ್ತದೆ.

ಭಾರತ-ಚೀನಾ ದೇಶಗಳಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ರಾಜ್ಯದ ಒಂದು ಹಳ್ಳಿಯು ಸಾಕಷ್ಟು ನಯನಮನೋಹರವಾದ, ಅದ್ಭುತ ಪ್ರಾಕೃತಿಕ ಸೊಬಗಿನಿಂದ ಕೂಡಿರುವ ಹಿತಕರವಾದ ಪರಿಸರ ಹೊಂದಿರುವ ಸ್ಥಳವಾಗಿದ್ದು ಪ್ರವಾಸಿಗರು ಒಮ್ಮೆಯಾದರೂ ಇಲ್ಲಿ ಭೇಟಿ ನೀಡಲೇಬೇಕು ಎನ್ನುವಂತಿದೆ. ಇದೆ ಚಿತ್ಕುಲ್ ಗ್ರಾಮ.

ಇನ್ನೊಂದು ವಿಶೇಷವೆಂದರೆ ಇದು ಭಾರತಕ್ಕೆ ಒಳಪಟ್ಟ ಚೀನಾ ಪ್ರವೇಶಿಸುವ ಮುಂಚೆ ಭಾರತದ ಕೊನೆಯ ಹಳ್ಳಿಯೆಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರಸ್ತುತ ಲೇಖನದ ಮೂಲಕ ಈ ಹಳ್ಳಿಯ ಪ್ರಾಕೃತಿಕ ಸೊಗಡು ಹೇಗೆಲ್ಲ ಪ್ರವಾಸಿಗರನ್ನು ವಶೀಕರಿಸಿಕೊಳುತ್ತದೆ ಎಂಬುದರ ಕುರಿತು ತಿಳಿಯಿರಿ.

ಭೇಟಿ ನೀಡಲೇಬೇಕು

ಭೇಟಿ ನೀಡಲೇಬೇಕು

ಭಾರತದಲ್ಲೆ ಭೇಟಿ ನೀಡಬಹುದಾದ ಕೆಲವು ಅತ್ಯಾಕರ್ಷಕ ಪ್ರಾಕೃತಿಕ ಸೌಂದರ್ಯ ಹೊಂದಿರುವ ಗ್ರಾಮಗಳ ಪೈಕಿ ಹಿಮಾಚಲದ ಚಿತ್ಕುಲ್ ಸಹ ಒಂದೆಂದರೆ ತಪ್ಪಿಲ್ಲ.

ಚಿತ್ರಕೃಪೆ: 4ocima

ಚುಂಬಕದಂತೆ ಸೆಳೆವ

ಚುಂಬಕದಂತೆ ಸೆಳೆವ

ಇಲ್ಲಿನ ಪರ್ವತಗಳು, ನೀರಿನ ಕೊಳಗಳು, ಜುಳು ಜುಳು ಎಂದು ಹರಿಯುವ ನದಿ, ಎಲ್ಲೆಡೆ ದಟ್ಟ ದಟ್ಟ ಗಿಡ ಮರಗಳು, ಕಣಿವೆ ಪ್ರದೇಶಗಳು, ಕಲ್ಮಶರಹಿತ ವಾತಾವರಣ ಚಿತ್ಕುಲ್ ಅನ್ನು ಪ್ರಕೃತಿ ಮಾತೆಯು ಪ್ರೀತಿಯಿಂದ ಆರೈಸಿರಬಹುದೆಂಬ ಭಾವ ಉಂಟು ಮಾಡುವ ಸ್ಥಳವಾಗಿ ಗುರುತಿಸಲ್ಪಡುತ್ತದೆ.

ಚಿತ್ರಕೃಪೆ: Sukanya Ray

ಆಲುಗಡ್ಡೆ

ಆಲುಗಡ್ಡೆ

ಚಿತ್ಕುಲ್ ಕುರಿತು ನಿಮಗೊಂದು ವಿಷಯ ಗೊತ್ತೆ? ಏನೆಂದರೆ ಇಲ್ಲಿ ಬೆಳೆಯಲಾಗುವ ಆಲುಗಡ್ಡೆಗಳು ಜಗತ್ತಿನಲ್ಲಿ ದೊರೆಯುವ ಅತ್ಯಂತ ಶ್ರೇಷ್ಠ ಗುಣಮಟ್ಟದ ಆಲುಗಡ್ಡೆಗಳ ಪೈಕಿ ಒಂದಾಗಿ ಪರಿಗಣಿಸಲಾಗುತ್ತದೆ ಹಾಗೂ ಇವು ಬಲು ದುಬಾರಿ! ಸಾಂದರ್ಭಿಕ

ಚಿತ್ರಕೃಪೆ: Maksym Kozlenko

ಭಾರತ-ಚಿನಾ ಗಡಿ

ಭಾರತ-ಚಿನಾ ಗಡಿ

ಚಿತ್ಕುಲ್ ಗ್ರಾಮ ಹಲವಾರು ವಿಶೇಷತೆಗಳನ್ನು ಹೊತ್ತು ನಿಂತ ಸುಂದರ ಗ್ರಾಮವಾಗಿದೆ. ಭಾರತ-ಚೀನಾ ಗಡಿಗೆ ಸಂಬಂಧಿಸಿದಂತೆ ಜನವಸತಿಯಿರುವ ಭಾರತದ ಕೊನೆಯ ಗ್ರಾಮವಾಗಿದೆ.

ಚಿತ್ರಕೃಪೆ: Sudhakarbichali

ಬಸ್ಪಾ ಕಣಿವೆ

ಬಸ್ಪಾ ಕಣಿವೆ

ಬಸ್ಪಾ ನದಿಯ ತಟಡಲ್ಲಿ ನೆಲೆಸಿರುವ ಚಿತ್ಕುಲ್ ಬಸ್ಪಾ ಕಣಿವೆಯ ಮೊದಲನೇಯ ಹಳ್ಳಿಯಾಗಿದ್ದು, ಹಿಂದೆ ಪ್ರಚಲಿತದಲ್ಲಿದ್ದ ಇಂಡೊ-ಟಿಬೆಟ್ ವ್ಯಾಪಾರ ಮಾರ್ಗದ ಕೊನೆಯ ಹಳ್ಳಿ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ.

ಚಿತ್ರಕೃಪೆ: Vachadave

ಪ್ರವಾಸಿ ವಿಶೇಷ

ಪ್ರವಾಸಿ ವಿಶೇಷ

ಅನುಮತಿ ಪಡೆಯದೆ ಭಾರತದಲ್ಲಿ ಪ್ರವಾಸ ಮಾಡಬಹುದಾದ ಭಾರತದ ಕೊನೆಯ ಹಳ್ಳಿಯಾದ ಚಿತ್ಕುಲ್ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ಇದು ಪ್ರಾಕೃತಿಕ ಸೌಂದರ್ಯದಿಂದಲೆ ಅಪಾರ ಜನರನ್ನು ಸೆಳೆಯುವ ಶಕ್ತಿ ಹೊಂದಿದೆ.

ಚಿತ್ರಕೃಪೆ: Gowtham P S

ಕಟ್ಟಿಗೆ ಕುಟಿರಗಳು

ಕಟ್ಟಿಗೆ ಕುಟಿರಗಳು

ಬೌದ್ಧ ಧರ್ಮಿಯರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ವಾಸವಿದ್ದು ಚಿಕ್ಕ ಚಿಕ್ಕ ಗೋಪುರಗಳು ವಿಶಿಷ್ಟ ಬೌದ್ಧ ಮಠಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಇಲ್ಲಿನ ಜನರ ವಸತಿ ಗೃಹಗಳು ನೋಡಲು ಸಾಕಷ್ಟು ವಿಶೇಷವಾಗಿರುತ್ತವೆ ಹಾಗೂ ಹೆಚ್ಚಾಗಿ ಕಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿರುತ್ತವೆ.

ಚಿತ್ರಕೃಪೆ: Sukanya Ray

ಎಲ್ಲೆಲ್ಲೂ ಹಿಮ

ಎಲ್ಲೆಲ್ಲೂ ಹಿಮ

ಚಳಿಗಾಲದ ನಂತರದ ಸಮಯದಲ್ಲಿ ಸಾಮಾನ್ಯವಾಗಿ ಇಲ್ಲಿ ಹಿಮಪಾತ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಚಿತ್ಕುಲ್ ಅಕ್ಷರಶಃ ಶ್ವೇತ ವಸ್ತ್ರಧಾರಿಯಾಗಿ ನೆಲೆಸಿರುವಂತೆ ಕಂಡುಬರುತ್ತದೆ. ಹೆಚ್ಚಿನ ಹಿಮಪಾತವಿರುವ ಸಂದರ್ಭದಲ್ಲಿ ಗ್ರಾಮದ ಜನರು ಕೆಳ ಸ್ತರದ ಪ್ರದೇಶಗಳಿಗೆ ತೆರಳಿ ವಾಸಿಸುತ್ತಾರೆ ಎನ್ನುವುದು ಒಂದು ವಿಶೇಷ.

ಚಿತ್ರಕೃಪೆ: Pratik Kadam

ಕಾಗ್ಯುಪಾ ದೇವಾಲಯ

ಕಾಗ್ಯುಪಾ ದೇವಾಲಯ

ಶಕ್ಯಮುನಿ ಬುದ್ಧನ ಅತಿ ಹಳೆಯ ಹಾಗೂ ಅತಿ ಅಮೂಲ್ಯವಾದ ಚಿತ್ರವಿರುವ ಕಾಗ್ಯುಪಾ ದೇವಾಲಯ ಇರುವುದು ಚಿತ್ಕುಲ್ ನಲ್ಲಿಯೆ. ಚಿತ್ಕುಲ್ ಸಂಗ್ಲಾ ಕಣಿವೆಗೆ ಸನಿಹವಿದ್ದು ಅಪಾರ ಪ್ರಮಾಣದ ಸೃಷ್ಟಿ ಸೌಂದರ್ಯ್ ಹೊಂದಿದೆ.

ಚಿತ್ರಕೃಪೆ: meg and rahul

ಆಕರ್ಷಣೀಯ

ಆಕರ್ಷಣೀಯ

ಮೊದಲೆ ಸಂಗ್ಲಾ ಕಣಿವೆ ತನ್ನಲ್ಲಿರುವ ಸೃಷ್ಟಿ ಸೌಂದರ್ಯಕ್ಕೆ ಅತಿ ಹೆಚ್ಚು ಜನಪ್ರೀಯತೆ ಪಡೆದಿದೆ. ಹೀಗಾಗಿ ಇಲ್ಲಿಂದ ಚಿತ್ಕುಲ್ ವರೆಗಿನ ಮಾರ್ಗವು ಅಕ್ಷರಶಃ ಮೂಕವಿಸ್ಮಿತರಾಗಿ ನೋಡುವಂತಹ ಪ್ರಾಕೃತಿಕ ಸೌಂದರ್ಯದಿಂದ ನಳನಳಿಸುತ್ತದೆ.

ಚಿತ್ರಕೃಪೆ: Gowtham P S

ಕೊನೆಯ ಸ್ಥಳ

ಕೊನೆಯ ಸ್ಥಳ

ಇನ್ನೊಂದು ವಿಶೇಷವೆಂದರೆ ಕಿನ್ನರ್ ಕೈಲಾಶ್ ಪರಿಕ್ರಮಾ ಹಿಂದುಗಳು ಪಾಲಿಸಿಕೊಂಡು ಬಂದಿರುವ ಶಿವನ ಕೃಪೆಗೆ ಪಾತ್ರವಾಗುತ್ತಾರೆಂಬ ನಂಬಿಕೆಯಿರುವ ಧಾರ್ಮಿಕ ಆಚರಣೆಯಾಗಿದೆ. ಈ ಪ್ರದಕ್ಷಿಣೆಯ ಕೊನೆಯ ಸ್ಥಳವು ಚಿತ್ಕುಲ್ ಆಗಿದೆ.

ಚಿತ್ರಕೃಪೆ: Kaiho

ದೆಹಲಿಯಿಂದ

ದೆಹಲಿಯಿಂದ

ಚಿತ್ಕುಲ್ ರಾಷ್ಟ್ರ ರಾಜಧಾನಿ ದೆಹಲಿಯಿಂದ 570 ಕಿ.ಮೀ ಹಾಗೂ ಸಂಗ್ಲಾ ಕಣಿವೆಯಿಂದ 28 ಕಿ.ಮೀ ಗಳಷ್ಟು ದೂರವಿದೆ. ಸಂಗ್ಲಾ ಕಣಿವೆಯನ್ನು ದೆಹಲಿಯಿಂದ ತಲುಪಬಹುದಾಗಿದ್ದು ಚಿತ್ಕುಲ್ ಅನ್ನು ಸಂಗ್ಲಾದಿಂದ ತಲುಪಬಹುದು.

ಚಿತ್ರಕೃಪೆ: Malvikabaru

ಸಂಗ್ಲಾದಿಂದ ಚಲಿಸುತ್ತವೆ

ಸಂಗ್ಲಾದಿಂದ ಚಲಿಸುತ್ತವೆ

ಹಿಮಾಚಲ ಸರ್ಕಾರ ಸಾರಿಗೆ ಸಂಸ್ಥೆಯು ನಿಯಮಿತವಾಗಿ ಚಿತ್ಕುಲ್ ಗೆ ಸಂಗ್ಲಾದಿಂದ ಬಸ್ಸುಗಳ ಸೇವೆ ಒದಗಿಸುತ್ತದಾದರೂ ಮಧ್ಯಾಹ್ನದವರೆಗೆ ಮಾತ್ರ ಬಸ್ಸುಗಳು ಸಂಚರಿಸುತ್ತವೆ. ಚಿತ್ಕುಲ್ ನಲ್ಲಿ ವಿಶಿಷ್ಟವಾಗಿ ನಿರ್ಮಿಸಲಾದ ಕಟ್ಟಿಗೆಯ ಮನೆಗಳು ಹೋಟೆಲುಗಳಾಗಿ ಪರಿವರ್ತಿತವಾಗಿದ್ದು ಬಾಡಿಗೆ ದುಬಾರಿ ಇದೆ.

ಚಿತ್ರಕೃಪೆ: Malvikabaru

ಏಕೆಂದರೆ...

ಏಕೆಂದರೆ...

ಹಾಗಾಗಿ ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಸಂಗ್ಲಾದಲ್ಲೆ ತಂಗುತ್ತಾರೆ ಹಾಗೂ ಚಿತ್ಕುಲ್ ಗೆ ಒಂದು ದಿನದ ಪ್ರವಾಸಕ್ಕಾಗಿ ಸಾಮಾನ್ಯವಾಗಿ ಭೇಟಿ ನೀಡುತ್ತಾರೆ. ಸಮ್ಗ್ಲಾದಲ್ಲಿ ತಂಗಲು ಬಾಡಿಗೆ ಚಿತ್ಕುಲ್ ಗಿಂತ ಕಡಿಮೆಯಿರುತ್ತದೆ.

ಚಿತ್ರಕೃಪೆ: Vishalnagula

ಏನೆಲ್ಲ ಇವೆ

ಏನೆಲ್ಲ ಇವೆ

ಅಲ್ಲದೆ ಸಂಗ್ಲಾದಲ್ಲಿ ಬೇಕಾದ ಅವಶ್ಯಕತೆಗಳಿಗೆ ತಕ್ಕಂತೆ ವಸ್ತುಗಳು ದೊರೆಯುತ್ತವೆ. ಪೆಟ್ರೊಲ್ ಬಂಕುಗಳಿವೆ, ಆಸ್ಪತ್ರೆಗಳಿವೆ ಹಾಗೂ ಎಟಿಎಂ ಕೇಂದ್ರಗಳಿವೆ. ಇವುಗಳಲ್ಲಿ ಯಾವುದು ಚಿತ್ಕುಲ್ ನಲ್ಲಿ ಲಭ್ಯವಿಲ್ಲ. ಅಲ್ಲದೆ ಹಿಮದ ಋತು ಪ್ರಾರಂಭಕ್ಕೆ ಮುಂಚೆಯೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.

ಚಿತ್ರಕೃಪೆ: Kaiho

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more