Search
  • Follow NativePlanet
Share
ಮುಖಪುಟ » ಸ್ಥಳಗಳು» ಸಾಂಗ್ಲಾ

ಸಾಂಗ್ಲಾ - ಮೋಡಿ ಮಾಡುವ ಕಣಿವೆ

22

ಹಿಮಾಚಲ ಪ್ರದೇಶ ರಾಜ್ಯದ ಕಿನ್ನೌರ್ ಜಿಲ್ಲೆಯ ಬೆಟ್ಟಗುಡ್ಡ ಪ್ರದೇಶದಲ್ಲಿರುವ ಸಾಂಗ್ಲಾ ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಬಸ್ಪಾ  ಕಣಿವೆಯಲ್ಲಿರುವ ಈ ಪ್ರದೇಶವು ಟಿಬೇಟ್ ಗಡಿಭಾಗಕ್ಕೆ ಹೊಂದಿಕೊಂಡಿದೆ. ಈ ಪಟ್ಟಣಕ್ಕೂ ಹಳ್ಳಿಯದೇ ಹೆಸರಿದ್ದು, ಟಿಬೇಟ್ ಭಾಷೆಯಲ್ಲಿ ಇದರ ಅರ್ಥ 'ಪಾಸ್ ಆಫ್ ಲೈಟ್' ಎಂಬುದಾಗಿದೆ. ಹಿಮಾಲಯಕ್ಕೆ ಸಮೀಪದಲ್ಲಿರುವ ಈ ಪ್ರದೇಶ ಬೆಟ್ಟಗುಡ್ಡಗಳ ಕಾನನದ ಹಚ್ಚ ಹಸಿರಿನ ನಡುವೆ ಅತ್ಯಂತ ಸುಂದರವಾಗಿ ಕಂಗೊಳಿಸುತ್ತದೆ. ಇದು ಇಂಡೋ-ಚೀನಾ ಗಡಿಯಲ್ಲಿರುವುದರಿಂದ 1989 ರ ವರೆಗೂ ಪ್ರವಾಸಿಗರು ಇಲ್ಲಿಗೆ ಹೋಗಬೇಕಾದರೆ ಭಾರತ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕಾಗಿತ್ತು. ನಂತರ ಈ ಕಾನೂನನ್ನು ರದ್ದು ಮಾಡಿ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಯಿತು.

ಈ ಪ್ರದೇಶವು ಸುಂದರವಾದ ಸೇಬು ಹಾಗೂ ಚೆರ್ರಿ ಹಣ್ಣಿನ ತೋಟವನ್ನು ಹೊಂದಿದೆ. ಸುತ್ತಲಿನ ಗ್ರಾಮಗಳಾದ ಚಿತ್ಕುಲ್, ಕರ್ಚಾಮ್ ಹಾಗೂ ಬತ್ಸೇರಿ ಮುಂತಾದವು ಸಾಂಗ್ಲಾದ ಸುತ್ತಮುತ್ತಲಿರುವ ಹೆಸರಾಂತ ಪ್ರವಾಸಿ ತಾಣಗಳಾಗಿವೆ. ಇಲ್ಲಿನ ಕಮ್ರು ಫೋರ್ಟ್ ಇಂದು ದೇವಸ್ಥಾನವಾಗಿ ಪರಿವರ್ತನೆಗೊಂಡಿದ್ದು ಇಲ್ಲಿ ಹಿಂದೂ ದೇವತೆ ಕಾಮಾಕ್ಷಿಯನ್ನು ಆರಾಧಿಸಲಾಗುತ್ತದೆ, ಇದು ಅತ್ಯಂತ ಹೆಸರಾಂತ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಸುಂದರವಾದ ಪುರಾತನ ಚಿತ್ರಗಳನ್ನು ರಚಿಸಲಾಗಿದೆ. ದೇವಸ್ಥಾನದ ಮೂರನೇ ಅಂತಸ್ತಿನಲ್ಲಿ ದೇವಿಯ ದೊಡ್ಡ ವಿಗ್ರಹವನ್ನು ಇರಿಸಲಾಗಿದೆ. ಸಾಂಗ್ಲಾದಲ್ಲಿರುವ ಮತ್ತೊಂದು ಧಾರ್ಮಿಕ ಕೇಂದ್ರ ಚಿತ್ಕುಲ್ ಮಾಥಿ ಎಂಬ ಹಿಂದೂ ದೇವತೆಯ ದೇವಸ್ಥಾನ, ಇದನ್ನು 'ಮಾತಾ ದೇವಿ' ದೇವಸ್ಥಾನ ಎಂದೂ ಕರೆಯುತ್ತಾರೆ. ಈ ದೇವಿಗೆ ತಮ್ಮ ಹರಕೆ ಸಲ್ಲಿಸಲು ದೇಶದ ಎಲ್ಲಾ ಕಡೆಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ.

ಸಾಂಗ್ಲಾದ ಇನ್ನೊಂದು ಪ್ರಮುಖ ಆಕರ್ಷಣೀಯ ತಾಣ ಬಾಸ್ಪಾ ನದಿಯಾಗಿದ್ದು, ಪ್ರವಾಸಿಗರು ಇಲ್ಲಿ ಫಿಶಿಂಗ್, ಟ್ರೆಕ್ಕಿಂಗ್ ಹಾಗೂ ಫೈರ್ ಕ್ಯಾಂಪ್ ಹಾಕಿಕೊಂಡು ಎಂಜಾಯ್ ಮಾಡುತ್ತಾರೆ. ಇಡಿ ಪ್ರದೇಶವು ದೇವದಾರು ಹಾಗೂ ಓಕ್ ಮರಗಳಿಂದ ಆವರಿಸಲ್ಪಟ್ಟಿದ್ದು ಸುತ್ತಲು ಹರಿಯುವ ಸಣ್ಣ ಝರಿಗಳು ಹಾಗೂ ಇಡಿ ಕಾಡು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ.

ಸಾಂಗ್ಲಾದಿಂದ 8 ಕಿ.ಮೀ.ದೂರದಲ್ಲಿರುವ ಬತ್ಸೇರಿ ಗ್ರಾಮದಲ್ಲಿ ಶಾಪಿಂಗ್ ಮಾಡಲು ಬಯಸುವ ಪ್ರವಾಸಿಗರಿಗೆ ಉತ್ತಮವಾದ ಹ್ಯಾಂಡ್ ಮೇಡ್ ಶಾಲುಗಳು ಹಾಗೂ 'ಕಿನ್ನೌರಿ' ಟೋಪಿಗಳು ಸಿಗುತ್ತವೆ. ಬತ್ಸೇರಿ ಗ್ರಾಮವೊಂದು ಮಾತ್ರವೆ ತನ್ನಲ್ಲಿ ಬೆಳೆಯಲಾಗುವ ಚಿಲ್ಗೋಸಾ ಅಥವಾ ಪೈನ್ ನಟ್ಸ್ ಎಂಬ ಹಣ್ಣುಗಳಿಗೆ ಅತ್ಯಂತ ಹೆಸರುವಾಸಿಯಾಗಿದೆ. ಸಾಂಗ್ಲಾ ಸಮೀಪದ ಇನ್ನೂ ಹೆಸರಾಂತ ಪ್ರದೇಶಗಳಾದ ಸಪ್ನಿ, ಕಾಂಡ ಮತ್ತು ಟ್ರೌಟ್ ಮೀನುಗಳ ಫಾರ್ಮ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಪ್ರದೇಶದ ಮಧ್ಯಕಾಲದ ಪುರಾತನ ಘಟನೆಗಳನ್ನು ತಿಳಿಸುವ ಮರದಲ್ಲಿ ಕೆತ್ತಿದ ಶಿಲ್ಪಕಲೆಯು ಬಹುತೇಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಂಗ್ಲಾದ ಮತ್ತೊಂದು ಆಕರ್ಷಣೆ ಎಂದರೆ ಟಿಬೇಟ್ ವುಡ್ ಕಾರ್ವಿಂಗ್ ಸೆಂಟರ್, ಇಲ್ಲಿ ಸುಂದರವಾದ ಹ್ಯಾಂಡ್ ಕಾರ್ವಿಂಗ್ ವಸ್ತುಗಳು ಸಿಗುತ್ತದೆ. ಇದು ಸ್ಥಳೀಯ ಪ್ರದೇಶದ ಪರಂಪರೆಯನ್ನು ಪ್ರತಿನಿಧಿಸುತ್ತದೆ.

ಸುಮಾರು 238 ಕಿ.ಮೀ.ದೂರದಲ್ಲಿರುವ ಶಿಮ್ಲಾದ ಜಬ್ಬರ್ ಹಟ್ಟಿ ವಿಮಾನ ನಿಲ್ದಾಣ ಸಾಂಗ್ಲಾದ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪ್ರವಾಸಿಗರು ಈ ವಿಮಾನ ನಿಲ್ದಾಣದ ಹೊರಭಾಗದಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಗಳನ್ನು ಬಾಡಿಗೆಗೆ ಪಡೆದು ಸಾಂಗ್ಲಾ ತಲುಪಬಹುದು. ಶಿಮ್ಲಾದಿಂದ ನ್ಯಾರೋಗೇಜ್ ರೈಲು ಮಾರ್ಗದ ಮೂಲಕ ಕಲ್ಕಾ ರೈಲು ನಿಲ್ದಾಣಕ್ಕೆ ರೈಲು ಸಂಪರ್ಕವಿದ್ದು ರೈಲಿನ ಮೂಲಕ ಸಾಂಗ್ಲಾಕ್ಕೆ ಬರುವ ಪ್ರವಾಸಿಗರಿಗೆ ಇದೇ ಸಮೀಪ ರೈಲು ನಿಲ್ದಾಣವಾಗಿದೆ. ಶಿಮ್ಲಾದ ರೈಲು ನಿಲ್ದಾಣ ದೇಶದ ಇತರೆ ಪ್ರಮುಖ ನಗರಗಳ ರೈಲು ನಿಲ್ದಾಣಗಳಿಗೆ ಸಂಪರ್ಕ ಹೊಂದಿದೆ. ಚಂಡೀಘಡದಿಂದ ಅನೇಕ ಖಾಸಗಿ ಹಾಗೂ ಸರ್ಕಾರದ ಬಸ್ಸುಗಳು ಸಾಂಗ್ಲಾಕ್ಕೆ ಸಂಪರ್ಕಹೊಂದಿವೆ.

ಚಳಿಗಾಲ ಹೊರತುಪಡಿಸಿ ಸಾಂಗ್ಲಾದಲ್ಲಿ ವರ್ಷವಿಡಿ ಉತ್ತಮವಾದ ಹವಾಮಾನವಿರುತ್ತದೆ. ಬೇಸಿಗೆಯಲ್ಲಿ ತಾಪಮಾನ 8 ಡಿಗ್ರಿ ಸೆಲ್ಶಿಯಸ್ ನಿಂದ 30 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಮಳೆಗಾಲದಲ್ಲಿ ಸಾಂಗ್ಲಾದಲ್ಲಿ ಹೆಚ್ಚಿಗೆ ಮಳೆ ಬೀಳುವುದಿಲ್ಲ. ಈ ಪ್ರದೇಶದಲ್ಲಿ ಚಳಿಗಾಲದಲ್ಲಂತೂ ವಿಪರೀತ ಚಳಿ ಇರುತ್ತದೆ ಹಾಗಾಗಿ ಪ್ರವಾಸಿಗರು ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಸೂಕ್ತ. ಈ ಸಮಯದಲ್ಲಿ ತಾಪಮಾನ 10 ಡಿಗ್ರಿ ಸೆಲ್ಶಿಯಸ್ ನಿಂದ -10 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ಪ್ರವಾಸಿಗರು ಬೇಸಿಗೆ ಹಾಗೂ ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವುದು ಸೂಕ್ತ ಕಾಲವಾಗಿದೆ.

ಸಾಂಗ್ಲಾ ಪ್ರಸಿದ್ಧವಾಗಿದೆ

ಸಾಂಗ್ಲಾ ಹವಾಮಾನ

ಉತ್ತಮ ಸಮಯ ಸಾಂಗ್ಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಾಂಗ್ಲಾ

  • ರಸ್ತೆಯ ಮೂಲಕ
    ಚಂಡೀಘಡ ಹಾಗೂ ಶಿಮ್ಲಾದಿಂದ ಪ್ರತಿನಿತ್ಯ ಸಾಂಗ್ಲಾಗೆ ಅನೇಕ ಬಸ್ಸುಗಳು ಸಂಚರಿಸುತ್ತವೆ. ಈ ಎರಡು ನಗರಗಳಿಂದ ಅನೇಕ ಡಿಲಕ್ಸ್ ಬಸ್ಸುಗಳು ಸಾಂಗ್ಲಾಗೆ ಬರುತ್ತವೆ. ಈ ಬಸ್ಸುಗಳ ಪ್ರಯಾಣ ಅನುಕೂಲಕರವಾಗಿದ್ದು ಬೆಲೆಯೂ ಕೈಗೆಟುಕುವ ಹಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕಾ ರೈಲು ನಿಲ್ದಾಣ ಸಾಂಗ್ಲಾದ ಸಮೀಪದ ರೈಲು ನಿಲ್ದಾಣವಾಗಿದ್ದು ಇದು ನ್ಯಾರೋ ಗೇಜ್ ರೈಲು ಮಾರ್ಗವಾಗಿದೆ. ಆದಾಗ್ಯೂ ಹತ್ತಿರದ ದೊಡ್ಡ ರೈಲು ನಿಲ್ದಾಣವಾದ ಶಿಮ್ಲಾ ರೈಲು ನಿಲ್ದಾಣಕ್ಕೆ ಸಂಪರ್ಕ ಹೊಂದಿದೆ. ಶಿಮ್ಲಾ ರೈಲು ನಿಲ್ದಾಣವು ದೇಶದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಪ್ರವಾಸಿಗರು ಸಾಂಗ್ಲಾ ತಲುಪಲು ರೈಲು ನಿಲ್ದಾಣದ ಹೊರಗಡೆ ಲಭ್ಯವಿರುವ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶಿಮ್ಲಾದ ಜಬ್ಬರ್ ಹಟ್ಟಿ ವಿಮಾನ ನಿಲ್ದಾಣ ಸಾಂಗ್ಲಾಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಚಂಡೀಘಡ ಮುಂತಾದವುಗಳೊಂದಿಗೆ ಈ ವಿಮಾನ ನಿಲ್ದಾಣ ಸಂಪರ್ಕ ಹೊಂದಿದೆ. ಸುಮಾರು 238 ಕಿ.ಮೀ.ದೂರದಲ್ಲಿರುವ ಈ ವಿಮಾನ ನಿಲ್ದಾಣದ ಹೊರಗೆ ಟ್ಯಾಕ್ಸಿ ಸೌಕರ್ಯವಿದ್ದು ಪ್ರವಾಸಿಗರು ಇದರ ಉಪಯೋಗ ಪಡೆದುಕೊಳ್ಳಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat