ಕಮ್ರು ಕೋಟೆ, ಸಾಂಗ್ಲಾ

ಬಸ್ಪ ನದಿಯ ದಂಡೆಯ ಮೇಲಿರುವ ಕಮ್ರು ಕೋಟೆ ಸಮುದ್ರ ಮಟ್ಟದಿಂದ ಸುಮಾರು 2600 ಮೀಟರ್ ಎತ್ತರದಲ್ಲಿದೆ. ಇದು ಹಿಮಾಚಲ ಪ್ರದೇಶದಲ್ಲಿರುವ ಅತ್ಯಂತ ಹಳೆಯ ಕೋಟೆಯಾಗಿದ್ದು ಶಿಮ್ಲಾದಿಂದ 229 ಕಿಲೋ ಮೀಟರ್ ಮತ್ತು ಸಾಂಗ್ಲಾ ಕಣಿವೆಯಿಂದ ಕೇವಲ 2 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿರುವ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಬುದ್ಧನ ಭಾವಚಿತ್ರ ಕಣ್ಣಿಗೆ ಕಾಣುತ್ತದೆ. ಮರದ ಬಾಲ್ಕನಿಯು, ಕೋಟೆಯ ಸೌಂದರ್ಯಕ್ಕೊಂದು ಮೆರುಗು ನೀಡುತ್ತದೆ. ಕೋಟೆಯ ಮೂರನೆ ಮಹಡಿಯಲ್ಲಿ ಹಿಂದೂ ದೇವತೆ ಕಾಮಾಖ್ಯ ದೇವಿ ಅಥವಾ ಕಾಮಾಕ್ಷಿ ದೇವಿಯ ಪ್ರತಿಮೆ ಕಂಗೊಳಿಸುತ್ತದೆ. ಸ್ಥಳೀಯರ ನಂಬಿಕೆಯಂತೆ, ದೇವತೆಯ ಮೂರ್ತಿಯನ್ನು ಗುಹಾತಿಯಿಂದ ತರಲಾಗಿದೆ. ಕಮ್ರು ಕೋಟೆಯಲ್ಲಿ ಮತ್ತೊಂದು ಪುರಾತನ ದೇವಸ್ಥಾನವಾದ ಬದ್ರಿನಾಥ್ ಮಂದಿರವಿದೆ. ಈ ದೇವಸ್ಥಾನದ ಇತಿಹಾಸ 15 ನೇ ಶತಮಾನಕ್ಕಿಂತಲೂ ಹಿಂದಿನದು. ಪ್ರತಿ ವರ್ಷ ದೇವತೆಯ ಗೌರವಕ್ಕಾಗಿ ದೇವಸ್ಥಾನದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ದೇವತೆಯ ಮೂರ್ತಿಯನ್ನು ಗಂಗೊತ್ರಿಗೆ ಕೊಂಡೊಯ್ಯಲಾಗುತ್ತದೆ. ಕೋಟೆಯ ಸುತ್ತಮುತ್ತಲು ರಕ್ಚಮ್, ಬತ್ಸೇರಿ, ಚಿತ್ಕುಲ್ ನಂತಹ ಸುಂದರ ಹಳ್ಳಿಗಳು ಆವರಿಸಿವೆ. ಚಿತ್ಕುಲ್ ಗ್ರಾಮ ಹಿಂದೂಸ್ಥಾನ್ ಟಿಬೇಟ್ ಮಾರ್ಗದಲ್ಲಿರುವ ಕಟ್ಟಕಡೆಯ ಹಳ್ಳಿ.

Please Wait while comments are loading...