Search
  • Follow NativePlanet
Share
» »ಚಿನ್ನಮಸ್ತಾ ದೇವಿಯ ಚಿಂತಪೂರ್ಣಿ ಶಕ್ತಿಪೀಠ

ಚಿನ್ನಮಸ್ತಾ ದೇವಿಯ ಚಿಂತಪೂರ್ಣಿ ಶಕ್ತಿಪೀಠ

By Vijay

ಹಲವು ವಿವಿಧ ಪುರಾಣಗಳು ಒಂದೊಂದು ರೀತಿಯಾಗಿ ಇಷ್ಟು ಸಂಖ್ಯೆಯ ಶಕ್ತಿಪೀಠಗಳು ಎಂದು ತಿಳಿಸಿವೆ. ಶಿವ ಪುರಾಣ, ದೇವಿ ಭಾಗವತ ಮುಂತಾದವುಗಳಲ್ಲಿ ಮುಖ್ಯವಾಗಿ ನಾಲ್ಕು ಶಕ್ತಿಪೀಠಗಳ ಕುರಿತು ತಿಳಿಸಲಾಗಿದ್ದರೆ ಪಿತಾನಿರ್ಣಯ ತಂತ್ರದಂತಹ ಕೃತಿಯಲ್ಲಿ 51 ಶಕ್ತಿಪೀಠಗಳ ಕುರಿತು ಉಲ್ಲೇಖಿಸಲಾಗಿದೆ.

ಇನ್ನೂ ಆದಿ ಶಂಕರಾಚಾರ್ಯರು ನಮೂದಿಸಿರುವ ಮಹಾ ಶಕ್ತಿಪೀಠಗಳ ಸಂಖ್ಯೆ 18. ಆದಾಗ್ಯೂ ಕೆಲವರು ಏಳು ಮಹಾ ಶಕ್ತಿಪೀಠಗಳ ಕುರಿತು ಪಟ್ಟಿ ಮಾಡಿದ್ದಾರೆ. ಸಂಖ್ಯೆಗಳಲ್ಲಿ ವ್ಯತ್ಯಾಸವಿದ್ದರೂ ಪ್ರತಿಯೊಂದು ಶಕ್ತಿಪೀಠಗಳನ್ನು ಬಲು ಭಕ್ತಿ ಮತ್ತು ಆದರಗಳಿಂದ ಭಾರತದಲ್ಲಿ ಆರಾಧಿಸಲಾಗುತ್ತದೆ. ಅಂತಹ ಶಕ್ತಿಪೀಠಗಳ ಪೈಕಿ ಒಂದಾಗಿದೆ ಚಿಂತಪೂರ್ಣಿ ಶಕ್ತಿಪೀಠ. ಚಿನ್ನಮಸ್ತಾ ದೇವಿಯ ನೆಲೆ.

ಹಿಮಾಚಲ ಪ್ರದೇಶ ರಾಜ್ಯದ ಉನಾ ಜಿಲ್ಲೆಯಲ್ಲಿರುವ ಚಿಂತಪೂರ್ಣಿ ಕ್ಷೇತ್ರವು ಸಾಕಷ್ಟು ಧಾರ್ಮಿಕ ಮಹತ್ವವುಳ್ಳ, ಹೆಚ್ಚು ಜನರಿಂದ ಭೇಟಿ ನೀಡಲಾಗುವ ಒಂದು ಶಕ್ತಿಪೀಠವಾಗಿದೆ. ಅಲ್ಲದೆ ಇದು ಹಿಮಾಚಲ ಪ್ರದೇಶದಲ್ಲಿರುವುದರಿಂದ, ಹಿಮಾಲಯಕ್ಕೆ ಸನ್ನಿಹಿತವಾಗಿರುವುದರಿಂದ ಸಾಕಷ್ಟು ರಮಣೀಯ ಪ್ರಕೃತಿ ಸೌಂದರ್ಯದ ಮಧ್ಯೆ ನೆಲೆಸಿರುವ ಪ್ರವಾಸಿ ತಾಣವೂ ಆಗಿ ಗಮನ ಸೆಳೆಯುತ್ತದೆ.

ಪ್ರಸ್ತುತ ಲೇಖನದ ಮೂಲಕ ಚಿಂತಪೂರ್ಣಿ ಶಕ್ತಿಪೀಠದ ಕುರಿತು ತಿಳಿಯಿರಿ.

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಾ ಶಕ್ತಿಪೀಠ: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿರುವ ಚಿಂತಪೂರ್ಣಿ ಚಿನ್ನಮಸ್ತಾ ಅಥವಾ ಚಿನ್ನಮಸ್ತಿಕಾ ದೇವಿಯ ದೇವಾಲಯವು ಒಂದು ಮಹಾ ಶಕ್ತಿಪೀಠವಾಗಿದ್ದು ಸಾಕಷ್ಟು ಜನರಿಂದ ಭೆಟಿ ನೀಡಲ್ಪಡುತ್ತದೆ.

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಶಿವನು ಸತಿಯ ಮೃತ ದೇಹವನ್ನು ಕೈಯಲ್ಲಿ ಹಿಡಿದು ತಾಂಡವ ನೃತ್ಯವಾಡುತ್ತಿದ್ದಾಗ ಅವನನ್ನು ಸಮಾಧಾನಗೊಳಿಸಲು ಅವನ ಕಣ್ಣು ಮುಂದಿರುವ ದೇಹವನ್ನು ಹೋಗಿಸಬೇಕಾಗಿರುವುದು ಅನಿವಾರ್ಯವಾಗಿತ್ತು. ಆ ಒಂದು ಉದ್ದೇಶದಿಂದ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಬಿಸಿ ಆ ಮೃತ ದೇಹವನ್ನು ಹಲವು ಭಾಗಗಳಲ್ಲಿ ಕತ್ತರಿಸಿ ಭೂಮಿಯ ಮೇಲೆ ಬೀಳುವಂತೆ ಮಾಡುತ್ತಾನೆ.

ಚಿತ್ರಕೃಪೆ: Gopal Aggarwal

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಹೀಗೆ ಸತಿಯ ವಿವಿಧ ದೇಹದ ಭಾಗಗಳು ಬಿದ್ದ ಸ್ಥಳಗಳೆ ಇಂದು ಪ್ರಸಿದ್ಧ ಶಕ್ತಿಪೀಠಗಳಾಗಿ ಪರಿವರ್ತಿತವಾಗಿರುವುದನ್ನು ನಾವು ತಿಳಿದಿದ್ದೇವೆ. ಇಂತಹ ಶಕ್ತಿಪೀಠಗಳಲ್ಲಿ ಚಿಂತಪೂರ್ಣಿಯೂ ಸಹ ಒಂದಾಗಿದ್ದು ಇದು ನಿರ್ದಿಷ್ಟವಾಗಿ ಸತಿ ದೇವಿಯ ಕಾಲುಗಳು ಬಿದ್ದ ಸ್ಥಳವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿಯಲ್ಲಿರುವ ಈ ದೇವಿಯನ್ನು ಚಿನ್ನಮಸ್ತಾ ಅಥವಾ ಚಿನ್ನಮಸ್ತಿಕಾ ದೇವಿ ಎಂಬ ಹೆಸರಿನಿಂದ ಕರೆಯಾಲಾಗುತ್ತದೆ ಹಾಗೂ ಈ ದೇವಿಗೆ ಸಂಬಂಧಿಸಿದಂತೆ ಹಲವಾರು ಕೌತುಕಮಯ ಹಿನ್ನಿಲೆಗಳು ವಿವಿಧ ಗ್ರಂಥ, ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿವೆ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಮಾರ್ಖಂಡೇಯ ಪುರಾಣದ ಪ್ರಕಾರ, ಚಂಡಿ ದೇವಿಯು ತನ್ನ ಇಬ್ಬರು ಸೇವಕಿಯರಾದ (ಯೋಗಿನಿ ಎಂತಲೂ ಕರೆಯುತ್ತಾರೆ) ಜಯಾ ಹಾಗೂ ವಿಜಯಾಳ ಜೊತೆಗೂಡಿ ಅನೇಕ ರಾಕ್ಷಸರನ್ನು ಅತಿ ಭಯಂಕರವಾದ ಯುದ್ಧದಲ್ಲಿ ಸಂಹರಿಸಿ ರಕ್ತ ಕುಡಿದಳು.

ಚಿತ್ರಕೃಪೆ: Gopal Aggarwal

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಇಷ್ಟಾದ ಮೇಲೂ, ಆಕೆಯ ಹಾಗೂ ಜಯಾ ಮತ್ತು ವಿಜಯಾಳ ರಕ್ತದಾಹ ನಿಲ್ಲಲೆ ಇಲ್ಲ. ಆ ಸೇವಕಿಯರು ಇನ್ನೂ ರಕ್ತ ಬೇಕೆಂದು ದೇವಿಗೆ ಅಂಗಲಾಚಿದರು. ರೌದ್ರಾವತಾರದಲ್ಲೂ ಕರುಣಾಮಯಿಯಾದ ದೇವಿ ತನ್ನ ರುಂಡವನ್ನೆ ಕಡಿದು ಕುತ್ತಿಗೆಯಲ್ಲಿರುವ ಮೂರು ನಾಳಗಳಿಂದ ರಕ್ತ ಹೊರ ಚಿಮ್ಮುವಂತೆ ಮಾಡಿದಳು.

ಚಿತ್ರಕೃಪೆ: Jonoikobangali

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಸ್ವತಃ ತನ್ನ ರುಂಡವನ್ನು ಒಂದು ಕೈಯಲ್ಲಿ ಹಿಡಿದು ಒಂದು ನಾಳದಿಂದ ಚಿಮ್ಮುತ್ತಿರುವ ರಕ್ತ ಕುಡಿಯುತ್ತಿದ್ದರೆ, ಮಿಕ್ಕ ಎರಡು ನಾಳಗಳಿಂದ ಜಯಾ ವಿಜಯಾ ಸೇವಕಿಯರು ರಕ್ತ ಕುಡಿಯತೊಡಗಿದರು. ಈ ಒಂದು ವಿಶಿಷ್ಟ ಭಂಗಿಯನ್ನೆ ಚಿನ್ನಮಸ್ತಿಕಾ ದೇವಿ ಎಂದು ಕರೆಯುತ್ತಾರೆ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಇನ್ನೊಂದು ಪ್ರತೀತಿಯ ಪ್ರಕಾರ, ಕೂಡುತ್ತಿರುವ ಎರಡು ಜೋಡಿಗಳ ಮೇಲೆ ರುಂಡವನ್ನು ಹಿಡಿದು ರಕ್ತ ಕುಡಿಯುತ್ತಿರುವ ಹಾಗೂ ಕುಡಿಸುತ್ತಿರುವ ಚಿನ್ನಮಸ್ತಿಕಾ ದೇವಿಯನ್ನು ಮಿಲನದ ಹಾಗೂ ದೈಹಿಕ ಆಸೆಯ ಮೇಲೆ ನಿಯಂತ್ರಣ ಸಾಧಿಸುವುದರ ಸಂಕೇತವಾಗಿಯೂ ಸಂದರ್ಭಕ್ಕನುಸಾರವಾಗಿ ವರ್ಣಿಸಲಾಗಿದೆ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಧಾರ್ಮಿಕ ಪುರಾಣಗಳ ಪ್ರಕಾರ, ಚಿನ್ನಮಸ್ತಿಕಾ ದೇವಿಯು ನಾಲ್ಕೂ ದಿಕ್ಕುಗಳಲ್ಲಿ ಶಿವನಿಂದ ರಕ್ಷಿಸಲ್ಪಡುತ್ತಾಳೆ. ಇದಕ್ಕೆ ಪೂರಕವಂತೆ ಚಿಂತಪೂರ್ಣಿಯ ನಾಲ್ಕು ದಿಕ್ಕುಗಳಲ್ಲೂ ಹೆಚ್ಚು ಕಡಿಮೆ ಒಂದೆ ಅಂತರದಲ್ಲಿ ನೆಲೆಸಿರುವ ಶಿವನ ದೇವಾಲಯಗಳಿರುವುದು ವಿಶೇಷ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿನ್ನಮಸ್ತಿಕಾ ದೇವಿಯನ್ನು ಸ್ವತ್ಯಾಗದ ಸಂಕೇತವಾಗಿ ಆರಾಧಿಸುತ್ತಾರೆ. ತನ್ನ ಸೇವಕಿಯರ ರಕ್ತದಾಹ ತಣಿಸಲೆಂದು ತಾನೆ ಸ್ವತಃ ರುಂಡ ಕಡದುಕೊಳ್ಳುವ ಈ ದೇವಿಯು ಕರುಣಾಮಯಿ ಆಗಿದ್ದಾಳೆಂದು ಭಕ್ತರ ನಂಬಿಕೆಯಾಗಿದೆ. ಕೆಲವರು ಹೇಳುವ ಪ್ರಕಾರ, ಯಾರೆ ಆಗಲಿ ತಾಯಿಯನ್ನು ನೈಜ ಹಾಗೂ ನಿರ್ಮಲ ಭಕ್ತಿಯಿಂದ ಬೇಡಿಕೊಂಡರೆ ಖಂಡಿತವಾಗಿಯೂ ಅವರು ನಿರಾಸೆ ಹೊಂದುವುದಿಲ್ಲ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಸಾರಸ್ವತ ಬ್ರಾಹ್ಮಣರಾದ ಪಂಡಿತ್ ಮಾಯಿ ದಾಸ್ ಎಂಬುವವರು ಬಹಳ ಸಮಯದ ಹಿಂದೆ ಇಲ್ಲಿ ದೇವಿಯ ದೇವಾಲಯ ನಿರ್ಮಿಸಿದ್ದಾರೆಂಬ ಮಾಹಿತಿಯಿದೆ. ಇಂದಿಗೂ ಸಹ ಅವಾ ವಂಶಸ್ಥರೆ ಈ ದೇವಾಲಯದಲ್ಲಿ ಅಧಿಕೃತ ಅರ್ಚಕರಾಗಿದ್ದು ನಿತ್ಯ ಪೂಜಾರ್ಚನೆಗಳನ್ನು ನೆರವೇರಿಸುತ್ತಾರೆ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಇನ್ನೊಂದು ವಿಷಯವೆಂದರೆ ಇಲ್ಲಿ ಹಿಂದು ಯಾತ್ರಾ ಹಾಗೂ ಮದುವೆಯ ದಾಖಲೆಗಳನ್ನು ಇಂದಿಗೂ ನಮೂದಿಸಲಾಗುತ್ತದೆ. ಭೇಟಿ ನೀಡುವ ಪ್ರತಿಯೊಬ್ಬ ಯಾತ್ರಿಕನ ಹೆಸರು, ಸ್ಥಳ, ಭೇಟಿ ನೀಡಿರುವುದರ ಉದ್ದೇಶದ ಕುರಿತು ವಿವರಗಳನ್ನು ದಾಖಲಿಸಲಾಗುತ್ತದೆ.

ಚಿತ್ರಕೃಪೆ: Gopal Aggarwal

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಭೇಟಿ ನೀಡುವ ಭಕ್ತಾದಿಗಳು ತಮ್ಮ ಮನೆಯಲ್ಲಿ ತಯಾರಿಸಲಾದ ಇಲ್ಲವೆ ಇಲ್ಲಿ ದೊರೆಯುವ ಹಲವಾರು ವೈವಿಧ್ಯಮಯವಾದ ಸಿಹಿ ತಿನಿಸುಗಳನ್ನು ದೇವಿಗೆ ಅರ್ಪಿಸಬಹುದು. ದೇವಾಲಯವು ಪ್ರತಿ ದಿನ ಬೆಳಿಗ್ಗೆ ನಾಲ್ಕರಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ತೆರೆದಿರುತ್ತದೆ.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿನ್ನಮಸ್ತಿಕಾ ದೇವಿಯ ದರ್ಶನವನ್ನು ಸರತಿಯಲ್ಲಿ ನಿಂತು ಒಬ್ಬಬ್ಬರಾಗಿ ಬಂದು ಪಡೆಯುವ ವ್ಯವಸ್ಥೆ ಇಲ್ಲಿದ್ದು, ಇಲ್ಲಿ ದೇವಿಯು ಒಂದು ಕಲ್ಲಿನ ಪಿಂಡಿಯ ರುಪದಲ್ಲಿ ನೆಲೆಸಿರುವುದನ್ನು ಕಾಣಬಹುದು.

ಚಿತ್ರಕೃಪೆ: Guptaele

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಇನ್ನೂ ಧಾರ್ಮಿಕವಲ್ಲದೆ ಚಿಂತಪೂರ್ಣಿಯು ಹಿಮಾಚಲ ಪ್ರದೇಶದ ಸುಂದರವಾದ ಪ್ರಕೃತಿಯ ಮಧ್ಯದಲ್ಲಿ ನೆಲೆಸಿರುವುದರಿಂದ ಇಲ್ಲಿನ ಪರಿಸರವೂ ಸಹ ಅದ್ಭುತವಾಗಿದ್ದು ಪ್ರವಾಸಿಗರ ಮನಸೆಳೆಯುತ್ತದೆ.

ಚಿತ್ರಕೃಪೆ: Robinsonmash

ಚಿಂತಪೂರ್ಣಿ ಚಿನ್ನಮಸ್ತಿಕಾ:

ಚಿಂತಪೂರ್ಣಿ ಚಿನ್ನಮಸ್ತಿಕಾ:

ಇನ್ನೂ ಇಲ್ಲಿಗೆ ತಲುಪಲು ಚಿಂತಪೂರ್ಣಿ ಬಸ್ಸು ನಿಲ್ದಾಣದಿಂದ 1.5 ಕಿ.ಮೀ ನಡೆಯಬೇಕಾಗಿರುವುದು ಅನಿವಾರ್ಯವಾಗಿದೆ. ಹೋಶಿಯಾರ್ಪುರ್-ಧರ್ಮಶಾಲಾ ರಸ್ತೆಯಲ್ಲಿರುವ ಭರ್ವೈನ್ ಎಂಬ ಸ್ಥಳದಿಂದ ಚಿಂತಪೂರ್ಣಿ ಕೇವಲ ಮೂರು ಕಿ.ಮೀ ಗಳಷ್ಟು ದೂರವಿದೆ. ಈ ರಸ್ತೆಯು ರಾಜ್ಯ ಹೆದ್ದಾರಿಯ ಭಾಗವಾಗಿರುವುದರಿಂದ ಧರ್ಮಶಾಲಾ ಹಾಗೂ ಹೋಶಿಯಾರ್ಪುರ್ ಗಳಿಂದ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: सुमित सिंह

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X