» »ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

Posted By:

ಭಾರತದೇಶದಲ್ಲಿ ಅತ್ಯಂತ ಪುರಾತನವಾದ ದೇವಾಲಯಗಳಿವೆ. ಇವುಗಳಲ್ಲಿ ಕೆಲವು ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾರೆ. ಇನ್ನು ದಕ್ಷಿಣ ಭಾರತ ದೇಶದಲ್ಲಿ ತಮಿಳುನಾಡಿನಲ್ಲಿ ಇರುವ ದೇವಾಲಯಗಳು ಇನ್ನು ವಿಶೇಷತೆಯನ್ನು ಹೊಂದಿದೆ. ಅವುಗಳಲ್ಲಿ ಚಿದಂಬರ ದೇವಾಲಯ ಕೂಡ ಒಂದು. ಇದು ಭಾರತ ದೇಶದಲ್ಲಿನ ದೇವಾಲಯಗಳಲ್ಲಿಯೇ ಪ್ರತ್ಯೇಕತೆಯನ್ನು ಹೊಂದಿದೆ. ಈ ದೇವಾಲಯದಲ್ಲಿ ಶಿವನನ್ನು "ನಟರಾಜ" ನೃತ್ಯ ರೂಪದಲ್ಲಿ ಪೂಜಿಸುವ ಏಕೈಕ ಶಿವಾಲಯ ಎಂದೇ ಹೇಳಬಹುದು. ಸಾಧಾರಣವಾಗಿ ಪ್ರತಿ ಶಿವಾಲಯದಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುವುದು ಗಮನಿಸಬಹುದು. ಪರಮಶಿವನು ಮಹಾವಿಷ್ಣು ಇಬ್ಬರು ಪಕ್ಕ-ಪಕ್ಕದಲ್ಲಿಯೇ ಪೂಜೆಯನ್ನು ಮಾಡಿಕೊಳ್ಳುತ್ತಿರುವ ಪ್ರಧಾನವಾದ ದೇವಾಲಯ ಇಲ್ಲಿ ಮಾತ್ರವೇ ಇದೆ.

1.ಎಲ್ಲಿದೆ?

1.ಎಲ್ಲಿದೆ?

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿನ ಚಿದಂಬರಂನ ಬಗ್ಗೆ ಹೇಳಿದ ತಕ್ಷಣ ನಟರಾಜ ಸ್ವಾಮಿ ನೆನಪಿಗೆ ಬರುತ್ತದೆ. ಚಿದಂಬರಂ ಎಂದರೆ ಆಕಾಶಲಿಂಗ. ಈ ದೇವಾಲಯದಲ್ಲಿ ಸ್ವಾಮಿಯು ನಟರಾಜ ರೂಪದಲ್ಲಿ ನೆಲೆಸಿದ್ದಾನೆ. ಇದು ಚಂದ್ರಮೌಳೀಶ್ವರ ಸ್ಪಟಿಕಲಿಂಗ ರೂಪವಾಗಿದೆ. ರೂಪವೇ ಇಲ್ಲದ ದೈವ ಸಾನಿಧ್ಯ ಎಂಬ 3 ರೂಪದಲ್ಲಿ ಸ್ವಾಮಿಯು ದರ್ಶನವನ್ನು ನೀಡುತ್ತಾನೆ. ಆ ಮೂರು ರೂಪವೇ ಚಿದಂಬರಂ ರಹಸ್ಯ. ಹಾಗಾಗಿಯೇ ಯಾವುದಾದರೂ ವಿಷಯದ ಬಗ್ಗೆ ಮಾತಾನಾಡುವಾಗ ಚಿದಂಬರ ರಹಸ್ಯ ಎಂದು ಕರೆಯುತ್ತಾರೆ.

2.ಚಿದಂಬರಂ-ನಟರಾಜನ ನಗರ

2.ಚಿದಂಬರಂ-ನಟರಾಜನ ನಗರ

ಚಿದಂಬರಂ ತಮಿಳುನಾಡು ರಾಜ್ಯದಲ್ಲಿನ ಕಡಲೂರು ಜಿಲ್ಲೆಯಲ್ಲಿರುವ ಒಂದು ದೇವಾಲಯ ಪಟ್ಟಣ. ಪುರಾತನ ದ್ರಾವಿಡ ನಿರ್ಮಾಣ ಮತ್ತು ಗಂಭೀರವಾದ ಗೋಪುರದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ಬೆಳಗ್ಗೆ ದೇವಾಲಯದ ಗಂಟೆಗಳ ಶಬ್ಧದಿಂದಾಗಿ ಆಧ್ಯಾತ್ಮಿಕವಾದ ಅನುಭೂತಿಯನ್ನು ಉಂಟು ಮಾಡುತ್ತದೆ.

3.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

3.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ತಮಿಳುನಾಡು ದೇವಾಲಯ ಪಟ್ಟಣವಾದ ಚಿದಂಬರದಲ್ಲಿ ಯಾರು ಕೂಡ ಊಹೆಯೇ ಮಾಡಲಾಗದ ವಿಧವಾಗಿರುತ್ತದೆ, ಈ ಪಟ್ಟಣದ ಬಗ್ಗೆ ಅಲೋಚಿಸಿದಾಗ ಅನೇಕ ವಿಷಯ ಮನಸ್ಸಿಗೆ ಬರುತ್ತವೆ. ಆದರೆ ಮೊದಲು ಈ ಪಟ್ಟಣದಲ್ಲಿ ಪ್ರಸಿದ್ಧ ಹಾಗು ಗಂಭೀರವಾದ ಚಿದಂಬರಂ ನಟರಾಜ ದೇವಾಲಯವಿದೆ. ದೇವಾಲಯದಲ್ಲಿ ಪ್ರಧಾನವಾಗಿ ಶಿವನಿಗೆ ಪೂಜೆಯನ್ನು ಮಾಡುತ್ತಾರೆ.

4.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

4.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಪಟ್ಟಣವು ಶೈವರಿಗೆ ಒಂದು ಇಷ್ಟವಾದ ಗಮ್ಯಸ್ಥಾನವಾಗಿ ತಯಾರು ಮಾಡಿದ್ದಾರೆ. ಈ ದೇವಾಲಯವು ತಮಿಳುನಾಡಿನಲ್ಲ ವಿಸ್ತರಿಸಿದ 5 ಪಂಚಭೂತ ಶಿವಾಲಯಗಳಲ್ಲಿ ಇದು ಕೂಡ ಒಂದು. ಈ 5 ಅಂಶಗಳು ಪ್ರತಿಯೊಂದರಲ್ಲಿಯೂ ಒಂದಲ್ಲ ಒಂದರಲ್ಲಿ ಸಂಬಂಧವನ್ನು ಹೊಂದಿದೆ.

5.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

5.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಹಿಂದೂ ಧರ್ಮದ ಭಾವನೆಯ ಪ್ರಕಾರ ಪಂಚಭೂತಗಳು ಎಂದರೆ ಗಾಳಿ, ನೀರು, ಭೂಮಿ, ಅಗ್ನಿ ಮತ್ತು ಆಕಾಶ. ಚಿದಂಬರದಲ್ಲಿ ಪ್ರವಾಸಿ ಪ್ರದೇಶಗಳು ಗಾಳಿಗೆ ಸಂಬಂಧಿಸಿದ ಕಾಳಹಸ್ತಿ ನಾಥರ್ ದೇವಾಲಯ, ಅಗ್ನಿಗೆ ಸಂಬಂಧಿಸಿದ ತಿರುವನ್ನಮಲೈ ಅರುಣಾಚಲೇಶ್ವರ ದೇವಾಲಯ, ಭೂಮಿಗೆ ಸಂಬಂಧಿಸಿದ ಕಂಚಿ ಏಕಾಂಬರೇಶ್ವರ ದೇವಾಲಯ, ನೀರಿಗೆ ಸಂಬಂಧಿಸಿದ ಜಂಬುಕೇಶ್ವರ ದೇವಾಲಯ.

6.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

6.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಈ ದೇವಾಲಯವು ಶಿವನ "ನಟರಾಜ" ನೃತ್ಯ ರೂಪದಲ್ಲಿ ಪೂಜಿಸಲಾದ ಏಕೈಕ ಶಿವಾಲಯ ಎಂದು ಹೇಳಬಹುದು. ಸಾಧಾರಣವಾಗಿ ಪ್ರತಿ ಶಿವಾಲಯದಲ್ಲಿ ಶಿವನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತಿರುವುದನ್ನು ಗಮನಿಸಬಹುದು. ಪರಮಶಿವನು ಮಹಾವಿಷ್ಣು ಇಬ್ಬರು ಪಕ್ಕ ಪಕ್ಕದಲ್ಲಿಯೇ ಪೂಜೆಗಳನ್ನು ಮಾಡಿಕೊಳ್ಳುತ್ತಿರುವ ಪ್ರಧಾನವಾದ ದೇವಾಲಯ ಇಲ್ಲಿ ಮಾತ್ರವೇ ಇದೆ.

7.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

7.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ವಿಷ್ಣುವು ಗೋವಿಂದರಾಜ ಪೆರುಮಾಳ್ ಸ್ವಾಮಿಯಾಗಿ, ಪರಮಶಿವನು ಇಬ್ಬರು ಇದೇ ದೇವಾಲಯದ ಪ್ರಾಂಗಣದಲ್ಲಿ ಪೂಜೆಮಾಡಿಕೊಳ್ಳುತ್ತಿದ್ದಾರೆ. ಚಿದಂಬರಂ ನಟರಾಜ ದೇವಾಲಯವು ಶೈವರಿಗೆ ಹಾಗು ವೈಷ್ಣವರಿಗೆ ಇಬ್ಬರಿಗಾಗಿಯೂ ಇರುವ ಪುಣ್ಯ ಕ್ಷೇತ್ರವೇ ಆಗಿದೆ. ಪ್ರಸ್ತುತ ಪ್ರಪಂಚದಲ್ಲಿ ಒಂದೇ ಸ್ಥಾನದಲ್ಲಿ ಇಬ್ಬರು ದೇವತೆಗಳು ಪೂಜಿಸುವುದು ಇಲ್ಲಿ ಮಾತ್ರ ಕಾಣಬಹುದು.

8.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

8.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಪಟ್ಟಣದಲ್ಲಿ ದೇವಾಲಯದಲ್ಲಿ ಮತ್ತು ವಿದ್ಯಾ ಸಂಸ್ಥೆಗಳು ಚಿದಂಬರಂ ನಟರಾಜ ದೇವಾಲಯ ಮಾತ್ರವೇ ಅಲ್ಲದೇ ಅನೇಕ ಇತರ ದೇವಾಲಯಕ್ಕೂ ನಿಲಯವಾಗಿರುತ್ತದೆ. ವಿವಿಧ ಕಾಲದಲ್ಲಿ ಮತ್ತು ವಿವಿಧ ರಾಜವಂಶಿಗರು ನಿರ್ಮಾಣ ಮಾಡಿದರು. ಈ ದೇವಾಲಯದಲ್ಲಿ ಪುರಾತನ ಕಾಲದ ವಾಸ್ತು ನೈಪುಣ್ಯಕ್ಕೆ ಪ್ರಸಿದ್ಧಿ ಹೊಂದಿದೆ.

9.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

9.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಈ ದೇವಾಲಯವನ್ನು ಅನೇಕ ಬಾರಿ ಮಾರ್ಪಟು ಮಾಡಿದ್ದಾರೆ. ಚಿದಂಬರಂ ನಟರಾಜ ದೇವಾಲಯ ಕೂಡ ಅನೇಕ ಬಾರಿ ಪುನರ್ ನಿರ್ಮಾಣ ಮಾಡಿದ್ದಾರೆ. ಅನ್ನಾಮಲೈ ವಿಶ್ವವಿದ್ಯಾಲಯಕ್ಕೂ ಚಿದಂಬರಂ ಜನಿಸಿದ ಸ್ಥಳ. ದೇಶದಲ್ಲಿ ಪ್ರಧಾನವಾದ ವಿಶ್ವವಿದ್ಯಾಲಯದಲ್ಲಿ ಒಂದಾಗಿದೆ.

10.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

10.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಅಷ್ಟೇ ಅಲ್ಲ, ಈ ಪಟ್ಟಣವು ಅಭರಣಗಳ ತಯಾರಿಗಳಿಗೂ ಕೂಡ ಪ್ರಸಿದ್ಧಿ ಹೊಂದಿದೆ. ಗರ್ಭಾಲಯದ ಹಿಂದೆಯ ಗೋಡೆಯಲ್ಲಿ ಒಂದು ಚಕ್ರವಿದೆ. ಅದರ ಮುಂದೆ ಬಂಗಾರದ ಬಿಲ್ವ ಪಾತ್ರೆಗಳು ವಾಲಾಡುತ್ತಿರುತ್ತದೆ. ಆದರೆ ಅವು ಸ್ಪಷ್ಟವಾಗಿ ಕಾಣುವುದಿಲ್ಲ. ದರ್ಶನಕ್ಕೆ ಬರುವ ಭಕ್ತರಿಗೆ ಅರ್ಚಕರು ಆ ತೆರೆಯನ್ನು ನಾಮಮಾತ್ರವಾಗಿ ತೆರೆದು ತೋರಿಸುತ್ತಾರೆ. ಆ ಪ್ರದೇಶವನ್ನೇ ಶಿವೋಂಭವ ಎಂದು ಕೂಡ ಕರೆಯುತ್ತಾರೆ. ಅಂದರೆ ಆ ದೈವದಲ್ಲಿ ಮನಸ್ಸು ಏಕವಾಗುವ ಪ್ರದೇಶ ಎಂಬ ಅರ್ಥವೇ ಆಗಿದೆ.

11.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

11.ಚಿದಂಬರ ದೇವಾಲಯದಲ್ಲಿ ನಡೆಯುವ ರಹಸ್ಯಗಳು...!

ಯಾವುದೇ ರೂಪವೇ ಇಲ್ಲದ ಅಜ್ಞಾನವನ್ನು ತೊಲಗಿಸಲು ದೈವ ಸಾನಿಧ್ಯಕ್ಕೆ ಅನುಮತಿಯನ್ನು ಪಡೆಯುವುದೇ ಈ ಕ್ಷೇತ್ರದ ವಿಶೇಷತೆ. ಇದು ಚಿದಂಬರ ರಹಸ್ಯವೇ ಆಗಿದೆ. ಈ ದೇವಾಲಯಕ್ಕೆ ಇರುವ ಮತ್ತೊಂದು ವಿಶೇಷತೆ ಏನೆಂದರೆ ಅದು ನಟರಾಜ ಸ್ವಾಮಿಯನ್ನು ದರ್ಶಿಸಿಕೊಂಡು ಹೊರಗೆ ಬಂದು ಹಿಂದೆ ತಿರುಗಿ ನೋಡಿದರೆ ದೇವಾಲಯದ ಗೋಪುರ ನಮ್ಮ ಹಿಂದೆಯೇ ಬರುತ್ತಿದೆ ಎಂಬ ಅನುಭೂತಿ ಉಂಟಾಗುತ್ತದೆ.

12.ಇಲ್ಲಿ ನೋಡಬೇಕಾಗಿರುವ ಪ್ರವಾಸಿ ಸ್ಥಳಗಳು

12.ಇಲ್ಲಿ ನೋಡಬೇಕಾಗಿರುವ ಪ್ರವಾಸಿ ಸ್ಥಳಗಳು

ಚಾತಪುರಿನತಾರ್ ದೇವಾಲಯ, ಚಿದಂಬರಂ
ಚಾತಪುರಿನತಾರ್ ದೇವಾಲಯವು ಚಿದಂಬರಂ ಮತ್ತು ಸುತ್ತಮುತ್ತಲಿರುವ ಅನೇಕ ದೇವಾಲಯಗಳ ಹಾಗೆಯೇ ಶಿವನಿಗೆ ಅಂಕಿತವಾಗಿದೆ. ಚಾತಪುರಿನತಾರ್‍ನಲ್ಲಿ ಶಿವನನ್ನು ಪೂಜಿಸುತ್ತಾರೆ. ಹಾಗಾಗಿಯೇ ಈ ದೇವಾಲಯಕ್ಕೆ ವರ್ಷವೆಲ್ಲಾ ಶಿವ ಭಕ್ತರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ.

13.ತಿಲ್ಲೈಕಾಲಿ ದೇವಿ ದೇವಾಲಯ, ಚಿದಂಬರಂ

13.ತಿಲ್ಲೈಕಾಲಿ ದೇವಿ ದೇವಾಲಯ, ಚಿದಂಬರಂ

ತಿಲ್ಲೈಕಾಳಿ ದೇವಿಯ ದೇವಾಲಯದಲ್ಲಿ ಕಾಳಿ ದೇವತೆಯು ನೆಲೆಸಿದ್ದಾಳೆ. ಚಿದಂಬರಂನಲ್ಲಿ ಭೇಟಿ ನೀಡಲು ಒಂದು ಮುಖ್ಯವಾದ ಪ್ರದೇಶವಾಗಿದೆ. ದೇವತೆಯ ವಿಗ್ರಹವು ನಾಲ್ಕು ಮುಖವನ್ನು ಹೊಂದಿದ್ದು, ಅದ್ಭುತವಾದ ದೃಷ್ಟಿಯನ್ನು ತಾಯಿಯು ಹೊಂದಿದ್ದಾಳೆ. ಇದರ ಹಿಂದೆ ಒಂದು ರೋಚಕವಾದ ಕಥೆಯು ಕೂಡ ಇದೆ. ಅದೆನೆಂದರೆ ಪಾರ್ವತಿ, ಶಿವನ ಮಧ್ಯೆ ಇಬ್ಬರಲ್ಲಿ ಯಾರು ದೊಡ್ಡವರು ಎಂಬ ಪ್ರಶ್ನೆ ಮೂಡುತ್ತದೆ. ಆಗ ಆಕೆಗೆ ಕೋಪ ಬಂದು ಕಾಳಿಯ ರೂಪವನ್ನು ಧರಿಸುತ್ತಾಳೆ.

14.ಚಿದಂಬರಂನ ವಾತಾವರಣ

14.ಚಿದಂಬರಂನ ವಾತಾವರಣ

ನೀವು ವರ್ಷದ ಉದ್ದಕ್ಕೂ ಯಾವುದೇ ಸಮಯದಲ್ಲಿಯಾದರೂ ಈ ದೇವಾಲಯಕ್ಕೆ ಭೇಟಿ ನೀಡಬಹುದು. ಚಿದಂಬರಂಗೆ ಭೇಟಿ ನೀಡಿದಾಗ ಬೇಸಿಗೆ ಅಥವಾ ಚಳಿಗಾಲದಲ್ಲಿ ಅನುಭೂತಿಯು ಒಂದೇ ವಿಧವಾಗಿರುತ್ತದೆ. ಆದರೆ ಉಷ್ಣವು ಕಡಿಮೆ ಇದ್ದಾಗ ಭೇಟಿ ನೀಡುವುದು ಉತ್ತಮವಾದುದು.

15.ಚಿದಂಬರಕ್ಕೆ ತಲುಪುಬವ ಬಗೆ ಹೇಗೆ?

15.ಚಿದಂಬರಕ್ಕೆ ತಲುಪುಬವ ಬಗೆ ಹೇಗೆ?

ಚಿದಂಬರಕ್ಕೆ ವಿಮಾನ, ರೈಲ್ವೆ ಹಾಗು ಬಸ್ಸುಗಳ ಮುಖಾಂತರ ಸುಲಭವಾಗಿ ಸೇರಿಕೊಳ್ಳಬಹುದಾಗಿದೆ. ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ತಿರುಚ್ಚಿ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಚೆನ್ನೈ. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 250 ಕಿ.ಮೀ ದೂರದಲ್ಲಿದೆ.