Search
  • Follow NativePlanet
Share
» » ಚಂದೌಲಿಯಲ್ಲಿರುವ ಈ ಜಲಪಾತಕ್ಕೆ ಮನಸೋಲದವರೇ ಇಲ್ಲ

ಚಂದೌಲಿಯಲ್ಲಿರುವ ಈ ಜಲಪಾತಕ್ಕೆ ಮನಸೋಲದವರೇ ಇಲ್ಲ

ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು ನಂತರ ಕೋಟೆಯನ್ನು ಕಟ್ಟಿಸಿದರು. ಅವೇಶಷಗಳ ನಡುವೆಯೂ ಈ ಕೋಟೆ ಹಲವಾರು ಪ್ರವಾಸಿಗರನ್ನು ಸೆಳೆಯುತ್ತಿದೆ.

ಚಂದೌಲಿ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಚಂದೌಲಿ ಸುತ್ತಮುತ್ತಲಿನ ಪ್ರವಾಸಿ ತಾಣಗಳು

PC: GOVERNMENT OF UTTAR PRADESH
ಹಕಿಯಾ ಕಾಳಿ ಮಂದಿರ, ಬಾಬಾ ಲತಿಫ್ ಶಾ ಗೋರಿ ಸೇರಿದಂತೆ ಹಲವು ಪ್ರವಾಸಿ ತಾಣಗಳು ಇಲ್ಲಿವೆ. ಅದರಲ್ಲೂ ಮುಖ್ಯವಾಗಿ ಗಮನ ಸೆಳೆಯುವುದು ಚಂದೌಲಿ ಅಭಯಾರಣ್ಯ. ಭಾರತದಲ್ಲಿಯೇ ಕಡಿಮೆ ಪ್ರಚಲಿತದಲ್ಲಿರುವ ಅಭಯಾರಣ್ಯ ಇದಾಗಿದ್ದು ಹಲವಾರು ತಳಿಯ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಜನ ಸಂಪರ್ಕದಿಂದ ದೂರವಿರುವ ಈ ಅಭಯಾರಣ್ಯ ತನ್ನ ಹೊಳಪನ್ನು ಉಳಿಸಿಕೊಂಡಿದೆ. ಅವಸಾನದ ಅಂಚಿನಲ್ಲಿರುವ ಏಷಿಯಾದ ಸಿಂಹಗಳು ಇಲ್ಲಿವೆ. ಅಭಯಾರಣ್ಯದ ಒಳಭಾಗದಲ್ಲಿ ಹಲವಾರು ಪಿಕ್ನಿಕ್ ಸೈಟ್ ಗಳು ಮತ್ತು ದಟ್ಟ ಮರಗಳಿವೆ. ಮನಮೋಹಕ ಜಲಪಾತಗಳಾದ ರಾಜದರಿ ಮತ್ತು ದೇವದರಿ ಇಲ್ಲಿವೆ.

ಚಂದ್ರಪ್ರಭಾ ಅಭಯಾರಣ್ಯ

ಚಂದ್ರಪ್ರಭಾ ಅಭಯಾರಣ್ಯ

PC:Wikicommons

ಚಂದ್ರಪ್ರಭಾ ಅಭಯಾರಣ್ಯ ಒಂದು ಪ್ರಮುಖ ಪ್ರವಾಸಿ ತಾಣವಾಗಿದ್ದು, ವಾರಣಾಸಿಯಿಂದ 70 ಕಿ.ಮೀ ದೂರದಲ್ಲಿದೆ. ರಾಜದರಿ ಮತ್ತು ದೇವದರಿಯಂಥ ಜಲಪಾತಗಳು, ದಟ್ಟವಾದ ಅರಣ್ಯ ಹಾಗೂ ಹಲವು ಮನಮೋಹಕ ವಿಹಾರ ತಾಣಗಳು ಇಲ್ಲಿವೆ. ಏಷಿಯಾದ ಸಿಂಹಗಳನ್ನು ಸಂರಕ್ಷಿಸುವ ಸಲುವಾಗಿ 1957 ರಲ್ಲಿ ಈ ಅಭಯಧಾಮವನ್ನು ಸ್ಥಾಪಿಸಲಾಯಿತು. ಸಿಂಹಗಳ ಜೊತೆಗೆ ಬೇರೇ ಬೇರೇ ಪ್ರಭೇದದ ಪ್ರಾಣಿಗಳೂ ಇಲ್ಲಿವೆ. ಚೀತಲ್, ಬ್ಲ್ಯಾಕ್ ಬಕ್ಸ್, ವೈಲ್ಡ್ ಬೋರ್, ಸಾಂಬಾರ್, ನೀಲಘಾಯ್ ಮತ್ತು ಇಂಡಿಯನ್ ಗೇಜೇಲ್ ಗಳನ್ನು ಇಲ್ಲಿ ಕಾಣಬಹುದಾಗಿದೆ.

ಯಾವಾಗ ಭೇಟಿ ಸೂಕ್ತ

ಯಾವಾಗ ಭೇಟಿ ಸೂಕ್ತ

PC:uttar pradesh govt
ಸುಮಾರು 150 ಸ್ಥಳೀಯ ಮತ್ತು ವಲಸೆ ಬರುವ ಪಕ್ಷಿಗಳು ಅಧ್ಯಯನಕಾರರಿಗೆ ಸೂಕ್ತ ವಾತಾವರಣ ಕಲ್ಪಿಸುತ್ತವೆ. ವಿಂಧ್ಯ ಪರ್ವತದ ಸಾಲಿನಲ್ಲಿ ನೌಘರ್ ಮತ್ತು ವಿಜಯಘರ್ ಬೆಟ್ಟಗಳ ನಡುವೆ ಸುಮಾರು 78 ಸ್ಕ್ವೇರ್ ಕಿ.ಮೀ ವಿಸ್ತೀರ್ಣದಲ್ಲಿ ಈ ಅಭಯಾರಣ್ಯ ಹರಡಿಕೊಂಡಿದೆ. ಇಲ್ಲಿಗೆ ಭೇಟಿ ನೀಡುವುದಕ್ಕೆ ಅಕ್ಟೋಬರ್ ನಿಂದ ಫೇಬ್ರವರಿ ಸೂಕ್ತವಾದ ಸಮಯ. ಆದರೆ ಇಲ್ಲಿ ಯಾವುದೇ ವಸತಿ ಸೌಕರ್ಯಗಳಿಲ್ಲ. ತಿಂಡಿ ತಿನಿಸು ಪಾನೀಯದ ಅಂಗಡಿಗಳಿವೆ.

ರಾಜದರಿ ಮತ್ತು ದೇವದರಿ ಜಲಪಾತ

ರಾಜದರಿ ಮತ್ತು ದೇವದರಿ ಜಲಪಾತ

PC:Rosehubwiki, Kuber Patel
ರಾಜದರಿ ಮತ್ತು ದೇವದರಿ ಜಲಪಾತಗಳು ಚಂದ್ರಪ್ರಭಾ ಅಭಯಾರಣ್ಯದಲ್ಲಿ ಕಾಣಿಸುತ್ತವೆ. ಏಷಿಯಾದ ಸಿಂಹಗಳನ್ನು ಸಂರಕ್ಷಿಸಲು ಈ ಅಭಯಾರಣ್ಯವನ್ನು ನಿರ್ಮಿಸಲಾಗಿದೆ. ಈ ಅಭಯಾರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಜೊತೆಗೆ ರಾಜದರಿ ಮತ್ತು ದೇವದರಿ ಜಲಪಾತಗಳು ಮುಖ್ಯ ಆಕರ್ಷಣೆಯಾಗಿವೆ. ಸ್ಪಟಿಕ ಶುಧ್ದ ನೀರು ಕಲ್ಲು ಬಂಡೆಗಳ ಮಧ್ಯೆ ಹರಿಯುವುದರಿಂದ ನೋಡುವುದಕ್ಕೆ ಚಂದ. ಇದು ಐತಿಹಾಸಿಕ ನಗರ ವಾರಣಾಸಿಯಿಂದ ಕೇವಲ 55ಕಿಮೀ ದೂರದಲ್ಲಿದೆ. ದಿನದ ಪ್ರವಾಸಕ್ಕೆಂದು ಇದು ಹೇಳಿಮಾಡಿಸಿದ ತಾಣವಾಗಿದ್ದು, ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ. ಆದರೆ ಇಲ್ಲಿ ಉಳಿದುಕೊಳ್ಳಲು ಯಾವುದೇ ವಸತಿ ಸೌಕರ್ಯವಿಲ್ಲ.

ಲತೀಫ್-ಷಾ ಅಣೆಕಟ್ಟು

ಲತೀಫ್-ಷಾ ಅಣೆಕಟ್ಟು

PC: GOVERNMENT OF UTTAR PRADESH
ಭಾರತದ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಲತೀಫ್-ಷಾ ಅಣೆಕಟ್ಟು 1921 ರಲ್ಲಿ ಪೂರ್ಣಗೊಂಡಿತು. ಇದು ಕರ್ಮ- ನಶಾ ನದಿಗೆ ಕಟ್ಟಲಾಗಿದೆ. ಅಣೆಕಟ್ಟು ರಚಿಸಿದ ಜಲಾಶಯವು ಮುಖ್ಯವಾಗಿ ನೀರಾವರಿ ಮತ್ತು ಮಾನವ ಬಳಕೆಗಾಗಿ ಬಳಸಲಾಗುತ್ತದೆ.

ಲತೀಫ್ ಷಾ ಸಮಾಧಿ

ಲತೀಫ್ ಷಾ ಸಮಾಧಿ

PC: GOVERNMENT OF UTTAR PRADESH

ಈ ಸಮಾಧಿಯು ಮಝಾರ್ ಸೂಫಿ ಸಂತ ಹಜರತ್ ಲತೀಫ್ ಷಾ ಬೀರ್ ರಹ್ಮಾತುಲ್ಲಾರಿಗೆ ಸೇರಿದ್ದು ಮತ್ತು ಚಕೀಯಾದಿಂದ 3 ಕಿ.ಮೀ ದೂರದಲ್ಲಿದೆ.

ತಲುಪುವುದು ಹೇಗೆ?

ಚಂದೌಲಿ ಸಮೀಪದ ವಿಮಾನ ನಿಲ್ದಾಣವು ಸುಮಾರು 95 ಕಿಲೋಮೀಟರ್ ದೂರದಲ್ಲಿರುವ ವಾರಣಾಸಿ. ಇನ್ನು ರೈಲಿನ ಮೂಲಕ ಪ್ರಯಾಣಿಸುವುದಾದರೆ ಹತ್ತಿರದ ರೈಲು ನಿಲ್ದಾಣವು ಮುಘಲ್ಸಾರೈಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಮುಘಲ್ಸಾರೈನಿಂದ ಹಂಚಿದ ಜೀಪ್ ಅನ್ನು ಚಕಿಯಾಗೆ ತೆಗೆದುಕೊಳ್ಳಿ. ಸ್ವಲ್ಪ ದೂರದಲ್ಲಿ ಚಕ್ಯಾದಿಂದ ನೀವು ದೇವದಾರಿಗಾಗಿ ಮತ್ತೊಂದು ಜೀಪ್ ಪಡೆಯುತ್ತೀರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X