Search
  • Follow NativePlanet
Share
» »ಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಶಾಪಿಂಗ್ ಮಾಡೋದಂದ್ರೆ ಎಲ್ಲರಿಗೂ ಇಷ್ಟಾನೇ ಅದರಲ್ಲೂ ಕಡಿಮೆ ಬೆಲೆಗೆ ಬ್ರಾಂಡೆಂಡ್ ಬಟ್ಟೆಗಳು ಇಗುತ್ತವೆ ಅಂದ್ರೆ ಪ್ರತಿಯೊಬ್ಬರೂ ಕೊಂಡುಕೊಳ್ಳಲು ಇಷ್ಟಪಡುತ್ತಾರೆ. ದೆಹಲಿಯಲ್ಲಿ ಅಂತಹ ಅನೇಕ ಮಾರುಕಟ್ಟೆಗಳಿವೆ. ಇಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ನಿಮಗೆ ಬೇಕಾದಂತಹ ಸ್ಟೈಲಿಶ್ ಬಟ್ಟೆಗಳು ಸಿಗುತ್ತವೆ. ಒಳ್ಳೆ ಶಾಪಿಂಗ್ ಮಾಡಬಹುದು.

ಬೆತ್ತಲಾಗಿರುವ ಯಕ್ಷಿಯ 30 ಅಡಿ ಎತ್ತರದ ಪ್ರತಿಮೆಯನ್ನು ನೋಡಿದ್ದೀರಾ ?

ದೆಹಲಿ ಮಾರುಕಟ್ಟೆಯ ರೋಮಾಂಚಕ ಮತ್ತು ವಿಲಕ್ಷಣ ವಾತಾವರಣವು ಶಾಪಿಂಗ್‌ಗೆ ಸಾಕಷ್ಟು ವಿನೋದವನ್ನು ನೀಡುತ್ತದೆ. ವಾಸ್ತವವಾಗಿ, ದೇಶಾದ್ಯಂತದ ಕರಕುಶಲ ವಸ್ತುಗಳೊಂದಿಗೆ ದೆಹಲಿಯು ಭಾರತದ ಅತ್ಯುತ್ತಮ ಮಾರುಕಟ್ಟೆಯನ್ನು ಹೊಂದಿದೆ. ನಿಮಗೆ ಶಾಪಿಂಗ್ ಅಂದ್ರೆ ಇಷ್ಟ ಆದ್ರೆ ಕಿಸೆ ಖಾಲಿಯೂ ಆಗಬಾರದೆಂದಿದ್ದರೆ ಇದನ್ನು ಓದಿ. ದೆಹಲಿಯಲ್ಲಿ ಶಾಪಿಂಗ್ ಮಾಡಬಹುದಾದ ನಿಮ್ಮ ಬಜೆಟ್‌ನಲ್ಲಾಗುವ ಉತ್ತಮ ಮತ್ತು ವಿಶ್ವಾಸಾರ್ಹ ಸ್ಥಳಗಳು ಯಾವ್ಯಾವು ಅನ್ನೋದನ್ನು ನೋಡೋಣ.

ಬಾಯಲ್ಲಿ ನೀರೂರಿಸುವ ಈ ರೈಲ್ವೆ ಸ್ಟೇಶನ್‌ಗಳ ಫುಡ್ ಟೇಸ್ಟ್ ಮಾಡಲೇ ಬೇಕು

ದಿಲ್ಲಿ ಹಟ್

ದಿಲ್ಲಿ ಹಟ್

PC: Ekabhishek

ದೆಹಲಿಯಲ್ಲಿನ ಈ ಬೃಹತ್ ಶಾಪಿಂಗ್ ಮಾರುಕಟ್ಟೆಯು ಸಾಂಪ್ರದಾಯಿಕ ಹಳ್ಳಿಯ ಮಾರುಟ್ಟೆಯಂತೆ ಅನಿಸುತ್ತದೆ. ಹಳ್ಳಿಯ ವಾತಾವರಣದೊಂದಿಗೆ ಸಣ್ಣ ಹೊದಿಕೆಯ ಛಾವಣಿಯ ಕುಟೀರಗಳು ಉತ್ತಮ ವಾತಾವರಣವನ್ನು ಒದಗಿಸುತ್ತದೆ. ಮಾರುಕಟ್ಟೆ, ಈ ಮಾರುಕಟ್ಟೆಯು ಸಾಂಸ್ಕೃತಿಕ ಮತ್ತು ಸಂಗೀತ ಪ್ರದರ್ಶನಗಳಾದ್ಯಂತ ಕರಕುಶಲ ವಸ್ತುಗಳ ಮಿಶ್ರಣವನ್ನು ಒದಗಿಸುತ್ತದೆ.

ಸ್ಥಳ: INA ಮಾರುಕಟ್ಟೆ ಎದುರು, ದಕ್ಷಿಣ ದೆಹಲಿ. ಪಿತ್ರಂಪುರಾ, ಉತ್ತರ ದೆಹಲಿ. ಜನಕ್ಪುರಿ, ಪಶ್ಚಿಮ ದೆಹಲಿ.

ತೆರೆಯುವ ಅವಧಿ: ರಜಾದಿನಗಳು ಸೇರಿದಂತೆ 11 ಗಂಟೆಗಳಿಂದ ರಾತ್ರಿ 10 ಗಂಟೆಗಳವರೆಗೆ ತೆರೆದಿರುತ್ತದೆ

ಏನನ್ನು ಖರೀದಿಸಬೇಕು: ಭಾರತೀಯ ಕರಕುಶಲ ವಸ್ತುಗಳು ಮತ್ತು ಕಲಾಕೃತಿಗಳನ್ನು ಖರೀದಿಸಬಹುದು.

ಜನಪಥ್ ಹಾಗೂ ಟಿಬೇಟಿಯನ್ ಮಾರುಕಟ್ಟೆ

ಜನಪಥ್ ಹಾಗೂ ಟಿಬೇಟಿಯನ್ ಮಾರುಕಟ್ಟೆ

PC: Biswarup Ganguly

ದೆಹಲಿಯಲ್ಲಿನ ಜನಪ್ರಿಯ ಶಾಪಿಂಗ್ ಮಾರುಕಟ್ಟೆ ಇದಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಏನನ್ನಾದರೂ ಖರೀದಿಸುತ್ತಾರೆ. ನೀವು ಭಾರತ ಮತ್ತು ಟಿಬೆಟ್‌ನಲ್ಲಿನ ವಸ್ತುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಯಾವುದೇ ವಸ್ತುವನ್ನು ಖರೀದಿಸುವುದಾದರೆ ಚೌಕಾಶಿ ಮಾಡಲು ತಿಳಿದಿರಬೇಕು.

ಸ್ಥಳ: ಮಧ್ಯ ದೆಹಲಿಯ ಕೋನಟ್ ಪ್ಲೇಸ್‌ನ ಮುಂದುಗಡೆ

ತೆರೆಯುವ ಸಮಯಗಳು: ದಿನನಿತ್ಯ.

ಏನನ್ನು ಖರೀದಿಸಬೇಕು: ಕರಕುಶಲ ವಸ್ತುಗಳು, ಹಿಪ್ಪಿ ಬಟ್ಟೆ, ಶೂಗಳು, ವರ್ಣಚಿತ್ರಗಳು, ಭಾರತೀಯ ಕಲಾಕೃತಿಗಳು, ಚರ್ಮದ ವಸ್ತುಗಳು ಮತ್ತು ಅಗ್ಗದ ಆಭರಣಗಳು.

ಸರೋಜಿನಿ ನಗರ

ಸರೋಜಿನಿ ನಗರ

PC: youtube

ಸರೋಜಿನಿ ನಗರವು ಅದರ ಅಗ್ಗದ ಡಿಸೈನರ್ ಬಟ್ಟೆ ಮತ್ತು ಪ್ರಸಿದ್ಧ ಬ್ರಾಂಡ್‌ಗಳಿಗೆ ಫೇಮಸ್ ಆಗಿದೆ. ರಫ್ತಿನಿಂದ ತಿರಸ್ಕರಿಸಲ್ಪಟ್ಟ, ಹೆಚ್ಚುವರಿ ಪ್ರಮಾಣದ ಅಥವಾ ಸಣ್ಣ ಉತ್ಪಾದನಾ ದೋಷಗಳಿರುವ ಬಟ್ಟೆಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಅಂಗಡಿಗಳು ಮತ್ತು ಮಳಿಗೆಗಳು, ಎಲ್ಲಾ ರೀತಿಯ ಬಟ್ಟೆಗಳನ್ನು ಮತ್ತು ಫ್ಯಾಷನ್ ಬಿಡಿಭಾಗಗಳನ್ನು ಮಾರಾಟ ಮಾಡುತ್ತವೆ, ಬೀದಿಗಳಲ್ಲಿ ಹರಡುತ್ತವೆ.

ಸ್ಥಳ: ಸೌತ್ ವೆಸ್ಟ್ ದೆಹಲಿ, ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ.

ತೆರೆಯುವ ಗಂಟೆಗಳು: ಸೋಮವಾರ ಹೊರತುಪಡಿಸಿ ಪ್ರತಿದಿನ ತೆರೆದಿರುತ್ತದೆ

ಏನನ್ನು ಖರೀದಿಸಬೇಕು: ಫ್ಯಾಷನ್ ಡಿಸೈನರ್ ಬಟ್ಟೆ, ಭಾರತೀಯ ಬಟ್ಟೆ, ಶೂಗಳು.

ಖಾನ್ ಮಾರ್ಕೆಟ್

ಖಾನ್ ಮಾರ್ಕೆಟ್

PC: Vijayantgovinda

ಖಾನ್ ಮಾರ್ಕೆಟ್ ದೆಹಲಿಯಲ್ಲಿ ಸಣ್ಣ, ಯು-ಆಕಾರದ, ಸುಸಜ್ಜಿತವಾದ ಶಾಪಿಂಗ್ ಮಾರುಕಟ್ಟೆ ಇದಾಗಿದೆ. ಅದು ದೆಹಲಿಯ ಅತ್ಯಂತ ಶ್ರೇಷ್ಠವಾದದ್ದು. ಬಾರ್ಗೇನ್‌ ಮಾಡ ಬಯಸುವವರಿಗೆ ನಿರಾಶೆಯಾಗಬಹುದು. ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳ ಬಯಸುವವರು ಇಲ್ಲಿಗೆ ಶಾಪಿಂಗ್ ಮಾಡಲು ಬರುತ್ತಾರೆ. ಈ ಮಾರುಕಟ್ಟೆಯ ಬಗ್ಗೆ ಉತ್ತಮವಾದ ವಿಷಯವೆಂದರೆ ಅಲ್ಲಿರುವ ಪುಸ್ತಕ ಅಂಗಡಿಗಳು. ಹಾಗೂ ಇಲ್ಲಿ ಅತ್ಯುತ್ತಮ ಟೈಲರ್‌ಗಳೂ ಇದ್ದಾರೆ. ಒಂದು ವಾರದೊಳಗೆ ನಿಮಗೆ ಬೇಕಾದಂತಹ ಸೂಟ್‌ನ್ನು ಹೊಲಿದು ಕೊಡುತ್ತಾರೆ.

ಸ್ಥಳ : ಸೌತ್ ನ್ಯೂ ದೆಹಲಿ, ಇಂಡಿಯಾ ಗೇಟ್‌ನ ಸಮೀಪ

ತೆರೆಯುವ ಸಮಯಗಳು: ಭಾನುವಾರ ಹೊರತುಪಡಿಸಿ ಪ್ರತಿನಿತ್ಯ ತೆರೆದಿರುತ್ತದೆ.

ಏನನ್ನು ಖರೀದಿಸಬೇಕು: ಪುಸ್ತಕ, ಬ್ರಾಂಡೆಡ್ ಬಟ್ಟೆಗಳು, ಆಯುರ್ವೇದಿಕ್ ಸೌಂದರ್ಯವರ್ದಕಗಳು

ಚಾಂದ್ನಿ ಚೌಕ್

ಚಾಂದ್ನಿ ಚೌಕ್

PC: Bahnfrend

ಚಾಂದನಿ ಚೌಕ್‌ ಶಾಪಿಂಗ್ ತಾಣವು ನೂರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಚಾಂದ್ನಿ ಚೌಕ್‌ನ್ನು ವಿವಿಧ ಭಾಗಗಳಾಗಿ ವಿಂಗಡಿಸಲಾಗಿದೆ. ಒಂದೊಂದು ಸ್ಥಳವು ಒಂದೊಂದು ವಸ್ತುಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಭಗೀರಥ ಪ್ಯಾಲೇಸ್‌ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಳ್ಳಬಹುದು. ದರಿಬಾ ಕಲನ್ ಹಳೆಯ ದೆಹಲಿಯ ಪ್ರಾಚೀನ ಬೆಳ್ಳಿಯ ಮಾರುಕಟ್ಟೆಯಾಗಿದ್ದು ಬೆಳ್ಳಿಯ ಆಭರಣಗಳಿಂದ ತುಂಬಿದೆ. ಚಾಂದನಿ ಚೌಕ್ನಲ್ಲಿನ ಆಹಾರ ಮಾರಾಟಗಾರರು ದೆಹಲಿ ರಸ್ತೆ ಆಹಾರದ ರುಚಿಕರವಾದ ಸಂಗ್ರಹವನ್ನು ಕೂಡಾ ಪೂರೈಸುತ್ತಾರೆ.

ಸ್ಥಳ: ಹಳೆ ದೆಹಲಿ

ತೆರೆಯುವ ಗಂಟೆಗಳು: ಭಾನುವಾರ ಹೊರತುಪಡಿಸಿ ಪ್ರತಿನಿತ್ಯ ತೆರೆದಿರುತ್ತದೆ.

ಏನನ್ನು ಖರೀದಿಸಬೇಕು: ಫ್ಯಾಬ್ರಿಕ್, ಆಭರಣಗಳು, ಎಲೆಕ್ಟ್ರಾನಿಕ್ ಗೂಡ್ಸ್‌ಗಳು

ಪಹಾರ್ಗಂಜ್

ಪಹಾರ್ಗಂಜ್

PC:User

ದೆಹಲಿಯಲ್ಲಿನ ಅತ್ಯುತ್ತಮ ಚೌಕಾಶಿ ಶಾಪಿಂಗ್ ಮಾರುಕಟ್ಟೆಯು ಪಹಾರ್ಗಂಜ್ ಮುಖ್ಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಪಹಾರ್ಗಂಜ್‌ನಲ್ಲಿನ ಅನೇಕ ಅಂಗಡಿಗಳು ವಿದೇಶಿ ದೇಶಗಳಿಗೆ ಸಗಟು ಮತ್ತು ರಫ್ತು ವ್ಯಾಪಾರ ಮಾಡುತ್ತವೆ. ಹಾಗಾಗಿ ಮನೆಗಳಿಗೆ ಬೇಕಾದ ವಸ್ತುಗಳನ್ನು ಖರೀಸಲು ಸೂಕ್ತವಾದ ಸ್ಥಳ ಇದಾಗಿದೆ.

ಸ್ಥಳ: ಪಹರ್ಗಂಜ್ ಮುಖ್ಯ ಬಜಾರ್, ನವದೆಹಲಿ ರೈಲು ನಿಲ್ದಾಣದ ಎದುರು

ತೆರೆಯುವ ಗಂಟೆಗಳು: ಪ್ರತಿದಿನ ರಾತ್ರಿ 9 ಗಂಟೆವರೆಗೆ

ಏನನ್ನು ಖರೀದಿಸಬೇಕು: ಬಟ್ಟೆ, ಪಾದರಕ್ಷೆ, ಆಭರಣ, ಪುಸ್ತಕಗಳು, ಜವಳಿ, ಕರಕುಶಲ ವಸ್ತುಗಳು, ಧೂಪದ್ರವ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more