
ತಮಿಳುನಾಡಿನ ಅತ್ಕೊಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕೊಡೈಕೆನಾಲ್‌ನ್ನು ಮಿಸ್ ಮಾಡೋಕೆ ಸಾಧ್ಯಾನೇ ಇಲ್ಲ. ಕೊಡೈಕೆನಾಲ್ ನಲ್ಲಿರುವ ಅನೇಕ ಪ್ರವಾಸಿತಾಣಗಳಲ್ಲಿ ಬ್ರ್ಯಾಂಟ್ ಪಾರ್ಕ್ ಕೂಡಾ ಒಂದು. ಪ್ರಶಾಂತವಾಗಿರುವ ಈ ತಾಣವು ಕೊಡೈ ಸರೋವರದ ಪೂರ್ವ ಭಾಗದಲ್ಲಿರುವ ಈ ಉದ್ಯಾನವನವು ವಿವಿಧ ಪ್ರಭೇದ ಸಸ್ಯಗಳು ಮತ್ತು ಪೊದೆಸಸ್ಯಗಳಿಂದ ಕೂಡಿದೆ. ಇದು ಮಕ್ಕಳು ಮತ್ತು ಕುಟುಂಬದೊಂದಿಗೆ ಕಾಲ ಕಳೆಯಲು ಜನಪ್ರಿಯ ತಾಣವಾಗಿದೆ. ಪ್ರಕೃತಿ ಮಡಿಲಿನಲ್ಲಿ ತಂಪಾದ ವಾತಾವರಣದಲ್ಲಿ ಮೈ ಮನ ಮರೆಯಲು ಅದ್ಭುತವಾದ ತಾಣವಾಗಿದೆ.

ಎಲ್ಲಿದೆ ಬ್ರ್ಯಾಂಟ್ ಪಾರ್ಕ್?
ಕೊಡೈಕೆನಾಲ್ ಬಸ್ ನಿಲ್ದಾಣದಿಂದ 700 ಮೀಟರ್ ದೂರದಲ್ಲಿರುವ ಬ್ರ್ಯಾಂಟ್ ಪಾರ್ಕ್ಕೊಡೈ ಸರೋವರದ ಆಗ್ನೇಯ ಮೂಲೆಯಲ್ಲಿದೆ. ಕೊಡೈ ಕೆರೆ ಜೊತೆಗೆ ಕೊಡೈಕೆನಾಲ್ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿದೆ.

ಬ್ರೈಯಂಟ್ ಹೆಸರು ಬಂದಿದ್ದು ಹೇಗೆ?
ಬ್ರೈಯಂಟ್ ಪಾರ್ಕ್ ಬಸ್ ನಿಲ್ದಾಣದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಒಂದು ಉದ್ಯಾನವನವಾಗಿದೆ. ಇದೊಂದು ಅಚ್ಚುಕಟ್ಟಾಗಿ ನಿರ್ವಹಿಸಲಾಗಿರುವ ಒಂದು ಬೊಟಾನಿಕಲ್ ಗಾರ್ಡನ್ ಆಗಿದೆ. ಈ ಉದ್ಯಾನವನಕ್ಕೆ 1908ರಲ್ಲಿ ವಿನ್ಯಾಸ ಸಿದ್ಧಪಡಿಸಿ, ನಿರ್ಮಾಣವನ್ನು ಸಹ ಮಾಡಿದ ಅರಣ್ಯ ಅಧಿಕಾರಿ ಎಚ್,ಡಿ,ಬ್ರೈಯಂಟ್‍ರವರ ಹೆಸರನ್ನು ಇಡಲಾಗಿದೆ.

ಬೋಧಿ ವೃಕ್ಷ
ಈ ಉದ್ಯಾನವನದಲ್ಲಿ ವೈವಿಧ್ಯಮಯವಾದ ಪೊದೆಗಳು, ಮರಗಳು ಮತ್ತು ಕ್ಯಾಕ್ಟಸ್‍ಗಳು ಇವೆ. ಈ ಉದ್ಯಾನವನವು ತನ್ನ ಕಾಲ ಕಾಲಕ್ಕೆ ಬಣ್ಣ ಬಣ್ಣದ ಹೂವುಗಳಿಂದ ಕೂಡಿರುತ್ತದೆ. ಈ ಉದ್ಯಾನವನದಲ್ಲಿ 1857ರಲ್ಲಿ ನೆಡಲಾದ ಒಂದು ನೀಲಗಿರಿ ಮರ ಮತ್ತು ಬೋಧಿ ವೃಕ್ಷವನ್ನು ಸಹ ನೋಡಬಹುದು. ಬೋಧಿ ವೃಕ್ಷದಿಂದಾಗಿ ಈ ಉದ್ಯಾನವನವು ಧಾರ್ಮಿಕ ಮಹತ್ವವನ್ನು ಹೊಂದಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ
PC:Ishfaq Shams ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ, ಅದರಲ್ಲೂ ಸೂರ್ಯಾಸ್ತದ ಸಮಯವು ಉದ್ಯಾನವನಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಮಳೆಗಾಲದಲ್ಲಿ ವಿಪರೀತ ಮಳೆ ಬೀಳುವುದರಿಂದ ಇಲ್ಲಿಗೆ ಭೇಟಿ ನೀಡುವುದು ಅಷ್ಟೊಂದು ಸೂಕ್ತವಲ್ಲ. ಉದ್ಯಾನವನದಲ್ಲಿ ಫೋಟೋ ಕ್ಲಿಕ್ಕಿಸಲು ಅವಕಾಶಗಳಿವೆ. ಆದ್ದರಿಂದ ನೀವು ಕ್ಯಾಮೆರಾವನ್ನು ಕೊಂಡೊಯ್ಯುವುದು ಒಳ್ಳೆಯದು. ಕೊಡೈಕೆನಾಲ್ ಪ್ರವಾಸ ಹೋಗುವಾಗ ಬ್ರ್ಯಾಂಟ್ ಪಾರ್ಕ್ ಭೇಟಿ ನೀಡುವುದು ಉತ್ತಮವಾಗಿದೆ. ಇದೊಂದು ಅತ್ಯುತ್ತಮ ಪಿಕ್ನಿಕ್ ತಾಣವಾಗಿದೆ.

ಟಿಕೇಟ್ ಎಷ್ಟು?
ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 15ರೂ . ಟಿಕೇಟ್ ತೆಗೆದುಕೊಂಡು ಬ್ರ್ಯಾಂಟ್ ಪಾರ್ಕ್‌ಗೆ ಎಂಟ್ರಿ ಪಡೆಯಬಹುದು. ಕ್ಯಾಮಾರ ಕೊಂಡೊಯ್ಯುವುದಾದರೆ 50 ರೂ. ವಿಡಿಯೋ ಕ್ಯಾಮೆರಾ ಕೊಂಡೊಯ್ಯುವುದಾದರೆ 100 ರೂ. ಶುಲ್ಕ ನೀಡಬೇಕು.

ತಲುಪುವುದು ಹೇಗೆ?
ಕೊಡೈಕೆನಾಲ್‌ನಲ್ಲಿರುವ ಬ್ರ್ಯಾಂಟ್ ಪಾರ್ಕ್‌ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಮದುರೈ ವಿಮಾನ ನಿಲ್ದಾಣ, ಇದು ಸುಮಾರು 120ಕಿ,ಮೀ ದೂರದಲ್ಲಿದೆ. ಅಲ್ಲಿಂದ ಬಸ್ ಅಥವಾ ಕ್ಯಾಬ್ ಮೂಲಕ ಕೊಡೈಕೆನಾಲ್ ತಲುಪಬಹುದು.
ಇನ್ನು ರೈಲಿನ ಮೂಲಕ ಪ್ರಯಾಣಿಸುವುದಾದರೆ ಕೊಡೈ ರೋಡ್ ಸಮೀಪದ ರೈಲು ನಿಲ್ದಾಣವಾಗಿದ್ದು, ಇದು ಸುಮಾರು 60 ಕಿ,ಮೀ ದೂರದಲ್ಲಿದೆ.