» »ಸೂರ್ಯನ ಈ ಪರಿ ನೋಡಿರಿ...

ಸೂರ್ಯನ ಈ ಪರಿ ನೋಡಿರಿ...

By: Divya

ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಭೂಮಿ ನಾಚಿ ಕೆಂಪಾದ ಹಾಗೆ ಕಾಣುತ್ತದೆ. ಆಕಾಶದಗಲಕ್ಕೂ, ಭೂಮಿಯ ಸುತ್ತಲೂ ಕವಿಯುವ ಆ ಸ್ವರ್ಣ ಬಣ್ಣದ ಛಾಯೆ ಎಲ್ಲರ ಮನಸ್ಸನ್ನು ಸೂರೆಗೊಳಿಸುವುದು ಸುಳ್ಳಲ್ಲ... ಅದರಲ್ಲೂ ಗಿರಿಗಳ ತುದಿ, ಸಮುದ್ರತೀರ, ಸಾಗರದ ಅಂಚು ಹಾಗೂ ಪರ್ವತಗಳ ಸಾಲಲ್ಲಿ ಮುಳುಗುವ ಸೂರ್ಯನ ಸೌಂದರ್ಯ ಪ್ರವಾಸ ತಾಣದ ಹಿರಿಮೆಯನ್ನು ಹೆಚ್ಚಿಸುತ್ತದೆ. ಇಂತಹ ರಮ್ಯ ಮನೋಹರ ದೃಶ್ಯಗಳಿಗೆ ಹೆಸರಾದ ತಾಣಗಳು ನಮ್ಮ ನಾಡಲ್ಲಿ ನೆಲೆಸಿವೆ. ಅವುಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ...

ಹಂಪಿ

ಹಂಪಿ

ಇಲ್ಲಿರುವ ಪ್ರತಿಯೊಂದು ಕಲ್ಲುಗಳು ಕೇಸರಿ ಬಣ್ಣದಿಂದ ಹೊಳೆಯುತ್ತ, ನನಗೂ ಜೀವ ಬಂತು ಹೇಳುವಂತೆ ಇರುತ್ತವೆ. ಐತಿಹಾಸಿಕ ಹಿರಿಮೆಗೆ ಪಾತ್ರವಾದ ಈ ತಾಣದಲ್ಲಿ ಸೂರ್ಯನ ಈ ಸೊಬಗನ್ನು ಕಣ್ತುಂಬಿಕೊಳ್ಳಲೇ ಬೇಕು.

ಹಂಪಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ

PC: wikimedia.org

ಮಂಗಳೂರು

ಮಂಗಳೂರು

ಸಮುದ್ರ ತೀರದ ತಾಣವಾದ ಮಂಗಳೂರು ಬೆಂಗಳೂರಿನಿಂದ 352 ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಪ್ರತಿಯೊಂದು ಸಮುದ್ರ ತೀರದಲ್ಲೂ ಸೂರ್ಯಾಸ್ತ ಹಾಗೂ ಸೂರ್ಯೋದಯದ ದೃಶ್ಯ ನೋಡುವಂತಿರುತ್ತದೆ. ಇಲ್ಲಿಗೆ ಬಂದಾಗ ಸೂರ್ಯಾಸ್ತದ ದೃಶ್ಯ ನೋಡಲು ಮರೆಯುವಂತಿಲ್ಲ.

ಮಂಗಳೂರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ


PC: flickr.com

ಆಗುಂಬೆ

ಆಗುಂಬೆ

ದಟ್ಟ ಅರಣ್ಯ ಸಂಪತ್ತನ್ನು ಹೊಂದಿರುವ ಆಗುಂಬೆ ಚಾರಣಕ್ಕೊಂದು ಸ್ವರ್ಗ ತಾಣ. ಅಂತೆಯೇ ಸೂರ್ಯಾಸ್ತದ ದೃಶ್ಯಕ್ಕೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಬೆಂಗಳೂರಿನಿಂದ 355 ಕಿ.ಮೀ. ದೂರದಲ್ಲಿದೆ.

ಆಗುಂಬೆಯ ಬಗ್ಗೆ ಹೆಚ್ಚಿನ ಮಆಹಿತಿಗಾಗಿ

PC: flickr.com

ಜೊಯಿಡಾ

ಜೊಯಿಡಾ

ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಈ ತಾಣ ಕಾಳಿ ನದಿ ತೀರವನ್ನು ಒಳಗೊಂಡಿದೆ. ಇಲ್ಲಿ ನಿರ್ಮಿಸಲಾದ ಸೂಪ ಅಣೆಕಟ್ಟು ಪ್ರವಾಸ ತಾಣದಲ್ಲಿ ಒಂದಾಗಿದೆ. ಇಲ್ಲಿ ಕಾಣುವ ಸೂರ್ಯೋದಯ ಹಾಗೂ ಸೂರ್ಯಾಸ್ತವು ಹೆಚ್ಚು ಆಕರ್ಷಣೆಯನ್ನು ಪಡೆದಿದೆ.
PC: wikimedia.org

ನಾಗರ ಹೊಳೆ

ನಾಗರ ಹೊಳೆ

ಅಭಯಾರಣ್ಯಕ್ಕೆ ಹೆಸರಾದ ನಾಗರಹೊಳೆ ಕಬಿನಿ ಹಿನ್ನೀರಿನ ಜಲಾಶಯವನ್ನು ಹೊಂದಿದೆ. ಇಲ್ಲಿ ಮುಳುಗುವ ಸೂರ್ಯನ ಪರಿ ಸುಂದರವಾಗಿ ಕಾಣುತ್ತದೆ. ಕರ್ನಾಟಕದಲ್ಲಿ ಕಾಣಬಹುದಾದ ಸುಂದರ ಸೂರ್ಯಾಸ್ತ ದೃಶ್ಯದಲ್ಲಿ ನಾಗರಹೊಳೆಯ ಸೂರ್ಯಾಸ್ತವು ಒಂದು.
PC: wikimedia.org

ಮುಳ್ಳಯ್ಯನ ಗಿರಿ

ಮುಳ್ಳಯ್ಯನ ಗಿರಿ

ಕರ್ನಾಟಕದಲ್ಲಿಯೇ ಅತಿ ಎತ್ತರದ ಗಿರಿಧಾಮವಾದ ಮುಳ್ಳಯ್ಯನಗಿರಿ ಸುಂದರ ಪ್ರಕೃತಿ ಸಂಪತ್ತಿನಿಂದ ಕೂಡಿದೆ. ಗಿರಿಗಳ ಸಾಲನ್ನು ಹೊಂದಿರುವ ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ದೃಶ ನೋಡುವುದೇ ಒಂದು ಚೆಂದ.
PC: wikimedia.org

ಉಡುಪಿ

ಉಡುಪಿ

ಕರಾವಳಿ ತೀರದಲ್ಲಿ ಬರುವ ಈ ತಾಣ ಅನೇಕ ಸಮುದ್ರ ತೀರಗಳನ್ನು ಒಳಗೊಂಡಿದೆ. ಪ್ರಶಾಂತವಾದ ಈ ಕಡಲ ತೀರಗಳಲ್ಲಿ ಮುಗ್ಧನಾಗಿ ಉದಯಿಸುವ ಸೂರ್ಯನ ಪರಿ ಬಣ್ಣಿಸಲಸಾಧ್ಯ. ಅಷ್ಟೇ ಸುಂದರವಾಗಿ ನಾಚುತ್ತ ಕೆಂಪಗಾಗುವ ಸೂರ್ಯಾಸ್ತದ ದೃಶ್ಯ ರಮಣೀಯವಾಗಿರುತ್ತದೆ.

ಉಡುಪಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PC: flickr.com

Please Wait while comments are loading...