Search
  • Follow NativePlanet
Share
» »ಶರೀರದಲ್ಲಿ ತಾಕತ್ತಿರುವಾಗ್ಲೇ ಹೋಗ್ಬೇಕು ಕೊಡಗಿನ ಈ ಬೆಟ್ಟಕ್ಕೆ

ಶರೀರದಲ್ಲಿ ತಾಕತ್ತಿರುವಾಗ್ಲೇ ಹೋಗ್ಬೇಕು ಕೊಡಗಿನ ಈ ಬೆಟ್ಟಕ್ಕೆ

By Manjula Balaraj Tantry

ಜನಸಂದಣಿಯಿರುವ ಅದೇ ಹಳೇಯ ಸ್ಥಳಗಳಿಗೆ ಭೇಟಿ ಕೊಟ್ಟು ಬೇಸತ್ತು ಅಲ್ಲಿಯ ಸೌಂದರ್ಯತೆಯನ್ನು ಮನಸಾರೆ ಆನಂದಿಸುವಲ್ಲಿ ವಂಚಿತರಾಗಿರುವಿರಾ? ಹೌದು ಎಂದಾದಲ್ಲಿ, ನೀವು ಈ ಸಲ ಕರ್ನಾಟಕದಲ್ಲಿರುವ ಬ್ರಹ್ಮಗಿರಿ ಬೆಟ್ಟಗಳಿಗೆ ನಿಮ್ಮ ಪ್ರವಾಸವನ್ನು ಯೋಜಿಸಲೇ ಬೇಕು. ಹೌದು ಬ್ರಹ್ಮಗಿರಿಯು ಪಶ್ಚಿಮಘಟ್ಟದಲ್ಲಿ ನೆಲೆಸಿರುವ ಒಂದು ಸುಂದರವಾದ ಪರ್ವತ ಶ್ರೇಣಿಯಾಗಿದ್ದು ಆಫ್‌ ಬೀಟ್ ಪ್ರವಾಸಿಗರಿಗೆ ಇದೊಂದು ನೆಚ್ಚಿನ ತಾಣವೆನಿಸಿದೆ.

ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?

ನೀವು ಪ್ರಕೃತಿಯ ಅಭೂತಪೂರ್ವ ವಿಸ್ಮಯಗಳನ್ನು ಪ್ರೀತಿಸುವವರಾದಲ್ಲಿ ಇಲ್ಲಿಯ ಮಂಜಿನ ಮೋಡ, ದಟ್ಟವಾದ ಹಸಿರು ಬೆಟ್ಟಗಳು, ಶ್ರೀಮಂತ ಸಸ್ಯಗಳು ಮತ್ತು ತಂಪಾದ ಗಾಳಿಯಿಂದ ಕೂಡಿದ ಆಹ್ಲಾದಕರ ಪರಿಸರ ಇವೆಲ್ಲವುದರ ಜೊತೆಗೆ ಅದ್ಬುತ ಸೌಂದರ್ಯತೆಗಳು ಇತ್ಯಾದಿಗಳನ್ನು ಹೊಂದಿರುವ ಈ ಸ್ಥಳಕ್ಕೆ ಭೇಟಿ ಕೊಡುವುದನ್ನು ನೀವು ತಪ್ಪಿಸಿಕೊಳ್ಳಲೇಬಾರದು ಎನಿಸುವಂತಹವುಗಳಾಗಿವೆ. ಕರ್ನಾಟಕದಲ್ಲಿರುವ ಈ ಬ್ರಹ್ಮಗಿರಿ ಬೆಟ್ಟಗಳ ಬಗ್ಗೆ ಹೆಚ್ಚಿನದನ್ನು ಇಲ್ಲಿ ಓದಿ ತಿಳಿಯಿರಿ.

1. ಈ ಸ್ಥಳದ ಬಗ್ಗೆ ಮತ್ತು ಸೌಂದರ್ಯತೆಯ ಬಗ್ಗೆ ಸ್ವಲ್ಪ ಮಾಹಿತಿ

1. ಈ ಸ್ಥಳದ ಬಗ್ಗೆ ಮತ್ತು ಸೌಂದರ್ಯತೆಯ ಬಗ್ಗೆ ಸ್ವಲ್ಪ ಮಾಹಿತಿ

Kulbhushansingh Suryawanshi

ಬ್ರಹ್ಮಗಿರಿ ಬೆಟ್ಟವು ಒಂದು ಪರ್ವತ ಶ್ರೇಣಿಯಾಗಿದ್ದು ಇದು ಕರ್ನಾಟಕದ ಕೊಡಗು ಜಿಲ್ಲೆ ಮತ್ತು ಕೇರಳದ ವಯನಾಡ್ ಜಿಲ್ಲೆಯವರೆಗೂ ವಿಸ್ತರಿಸಿದೆ. ಪಶ್ಚಿಮ ಘಟ್ಟಗಳ ಒಂದು ಭಾಗವಾಗಿರುವ ಬ್ರಹ್ಮಗಿರಿ ಬೆಟ್ಟ ಪ್ರದೇಶವು ಶ್ರೀಮಂತವಾದ ಮತ್ತು ದಟ್ಟವಾದ ಸಸ್ಯ ಮತ್ತು ವೈವಿಧ್ಯಮಯ ವನ್ಯಜೀವಿಗಳನ್ನು ಹೊಂದಿದೆ.

ದಟ್ಟವಾದ ಕಾಡುಗಳ ಹೊದಿಕೆಯಿರುವ ಹುಲ್ಲುಗಾವಲುಗಳು ಮತ್ತು ಬೆಟ್ಟಗಳಿಂದ ಆವೃತವಾಗಿರುವ ,ಈ ಸೌಂದರ್ಯಯುತವಾದ ಮತ್ತು ನೈಸರ್ಗಿಕವಾಗಿ ಕಡಿಮೆ ಅನ್ವೇಷಿತವಾಗಿರುವ ಈ ಭೂಮಿಯು ದಕ್ಷಿಣ ಭಾರತದಲ್ಲಿಯ ಸಣ್ಣ ಸ್ವರ್ಗವೆನಿಸಿದೆ. ಆದುದರಿಂದ ಇದನ್ನು ಪ್ರಯಾಣಿಗರು ಅದರಲ್ಲೂ ಪ್ರತೀ ಆಫ್ಬೀಟ್ ಪ್ರಯಾಣಿಗರು ಅನ್ವೇಷಣೆ ಮಾಡಲೇ ಬೇಕಾಗಿರುವ ಸ್ಥಳವಾಗಿದೆ. 5276 ಅಡಿ ಎತ್ತರವಿರುವ ಬ್ರಹ್ಮಗಿರಿಯ ಬೆಟ್ಟಗಳು ಹೂಬಿಡುವ ಸಸ್ಯಗಳನ್ನು ಶ್ರೀಮಂತವಾಗಿ ಹೊಂದಿದೆ ಮತ್ತು ಅನೇಕ ಅಪರೂಪದ ಜಾತಿಯ ಪ್ರಾಣಿಗಳು ಮತ್ತು ಪಕ್ಷಿಗಳನ್ನೂ ಹೊಂದಿದೆ.

2. ಬ್ರಹ್ಮಗಿರಿ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತಲಿರುವ ಆಸಕ್ತಿದಾಯಕ ಸ್ಥಳಗಳು

2. ಬ್ರಹ್ಮಗಿರಿ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತಲಿರುವ ಆಸಕ್ತಿದಾಯಕ ಸ್ಥಳಗಳು

Mihir Tanksale

ಬೆಟ್ಟಗಳ ನೈಸರ್ಗಿಕ ಹಿನ್ನಲೆಯ ಭೂಪ್ರದೇಶವಾಗಿರುವ ಈ ಸ್ಥಳವು ಕಾಡುಗಳು ಮತ್ತು ಹುಲ್ಲುಗಾವಲುಗಳಿಂದ ಆವೃತ್ತವಾಗಿದೆ. ಬ್ರಹ್ಮಗಿರಿ ಬೆಟ್ಟಗಳು ಸುಂದರ ಛಾಯಗ್ರಣ ಸೌಂದರ್ಯತೆಗಳನ್ನು ಒಳಗೊಂಡಿರುವ ಅತ್ಯಂತ ಸುಂದರವಾದ ಸ್ಥಳಗಳನ್ನು ತನ್ನಲ್ಲಿ ಹೊಂದಿರುವ ಬೆಟ್ಟಗಳಲ್ಲೊಂದಾಗಿದೆ. ಈ ಅಚ್ಚರಿಗೊಳಿಸುವ ಸೌಂದರ್ಯತೆಗೆ ಭೇಟಿ ನೀಡಲು ನೀವು ಬಯಸುತ್ತಿದ್ದಲ್ಲಿ ನಿಮ್ಮೊಂದಿಗೆ ಕ್ಯಾಮಾರಾವನ್ನು ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ನಿಮ್ಮೊಂದಿಗೆ ತಪ್ಪದೆ ಕೊಂಡೊಯ್ಯಿರಿ.

3. ದಕ್ಷಿಣಭಾರತದ ಕಾಶಿ

3. ದಕ್ಷಿಣಭಾರತದ ಕಾಶಿ

PC

ಇಲ್ಲಿಯ ಭವ್ಯ ಸೌಂದರ್ಯತೆಯ ಛಾಯಾಗ್ರಹಣ ಮಾಡುವಾಗ ಶಿಖರಗಳನ್ನು ಮತ್ತು ಹಸಿರು ಹಾಸುಗಳನ್ನು ಸೆರೆಹಿಡಿಯುವುದು ಮಾತ್ರವಲ್ಲದೆ ನೀವು ಬ್ರಹ್ಮಗಿರಿ ಬೆಟ್ಟಗಳ ಇನ್ನಿತರ ಸ್ಥಳಗಳನ್ನೂ ಅನ್ವೇಷಿಸಬಹುದಾಗಿದು ಅವುಗಳಲ್ಲಿ ಸ್ವತ: ಬ್ರಹ್ಮ ದೇವರಿಂದ ನಿರ್ಮಿತವಾಗಿದೆ ಎಂದು ನಂಬಲಾಗಿರುವ ಮತ್ತು ವಿಷ್ಣು ದೇವರಿಗೆ ಅರ್ಪಿತವಾಗಿರುವ ತಿರುನೆಲ್ಲಿ ದೇವಾಲಯವೂ ಸೇರಿದೆ. ಅತ್ಯಂತ ಪೂಜ್ಯನೀಯ ಯಾತ್ರೀ ಸ್ಥಳಗಳಲ್ಲೊಂದಾಗಿರುವ ಈ ಪ್ರದೇಶವು ದಕ್ಷಿಣಭಾರತದ ಕಾಶಿ ಎಂದು ಹೆಸರಿಸಲ್ಪಟ್ಟಿದೆ. ಇಲ್ಲಿಯ ಇನ್ನಿತರ ಆಸಕ್ತಿದಾಯಕ ಸ್ಥಳಗಳಲ್ಲಿ ಇರಪ್ಪು ಜಲಪಾತಗಳು, ಚಾರಣ ಸ್ಥಳವಾದ ಪಕ್ಷಿ ಪಾತಾಲಮ್, ಕದಂಬ ಜೈನ ದೇವಾಲಯ, ನಿಷಾನಿ ಮೊಟ್ಟೆ ಮತ್ತು ಅನೇಕ ಅಪರೂಪದ ಜಾತಿಗಳ ಪ್ರಾಣಿಗಳು ಮತ್ತು ಸಸ್ಯಗಳನ್ನು ಹೊಂದಿರುವ ಬ್ರಹ್ಮಗಿರಿ ವನ್ಯಜೀವಿಧಾಮ ಇತ್ಯಾದಿಗಳು ಸೇರಿವೆ.

4. ಬ್ರಹ್ಮಗಿರಿ ಬೆಟ್ಟಗಳಿಗೆ ನೀವು ಭೇಟಿ ಕೊಡಲೇ ಬೇಕು ಏಕೆ ?

4. ಬ್ರಹ್ಮಗಿರಿ ಬೆಟ್ಟಗಳಿಗೆ ನೀವು ಭೇಟಿ ಕೊಡಲೇ ಬೇಕು ಏಕೆ ?

PC

ಈ ಬೇಸಿಗೆಯ ಋತುವಿನಲ್ಲಿ ಕಚ್ಚಾ ಪ್ರಕೃತಿಯ ಶುದ್ದ ಪರಿಸರದಲ್ಲಿ ನಿಮ್ಮ ಸಮಯವನ್ನು ಕಳೆಯಲು ನೀವು ಬಯಸುವುದಿಲ್ಲವೆ? ಹೌದು ಎಂದಾದಲ್ಲಿ ನೀವು ಖಂಡಿತವಾಗಿಯೂ ಬ್ರಹ್ಮಗಿರಿಯ ಬೆಟ್ಟಗಳ ಈ ತಾಣಗಳಲ್ಲಿ ನಿಮ್ಮ ವಾರಾಂತ್ಯದ ರಜಾದಿನಗಳನ್ನು ಕಳೆಯಬಹುದಾಗಿದೆ. ಧಾರ್ಮಿಕ ತಾಣಗಳ ಜೊತೆಗೆ ಟ್ರಕ್ಕಿಂಗ್ ಮತ್ತು ಇದರ ಎಂದಿಗೂ ಕಾಣದೇ ಇರುವ ಅದ್ಬುತ ಸೌಂದರ್ಯತೆಯ ಛಾಯಾಗ್ರಹಣಗ್ರಹಣ ಮಾಡವುದು ಹಾಗೂ ಶಿಬಿರ ಹೂಡುವವರೆಗೆ ಎಲ್ಲವನ್ನೂ ಇಲ್ಲಿ ಮಾಡಬಹುದಾಗಿದೆ. ಈ ಪರ್ವತ ಶ್ರೇಣಿಗಳ ಗಡಿಗಳೊಳಗೆ ಇನ್ನೂ ಅನೇಕ ವಿಷಯಗಳನ್ನು ಮಾಡಬಹುದಾಗಿದೆ.

5. ಸಂಪೂರ್ಣ ಪ್ಯಾಕೇಜ್

5. ಸಂಪೂರ್ಣ ಪ್ಯಾಕೇಜ್

ಇದು ಬೇಸಿಗೆಯನ್ನು ಕಳೆಯುವ ತಾಣಗಳಿಂದಾಗಿ ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದ್ದರೂ ನೀವು ಇಲ್ಲಿಯ ಐತಿಹಾಸಿಕ ಸ್ಥಳಗಳಿಗೂ ಭೇಟಿ ಕೊಡಬಹುದು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಸಾಹಸವನ್ನೂ ಕೂಡಾ ಮಾಡಬಹುದಾಗಿದೆ.ಆದುದರಿಂದ ಪರ್ವತ ಶ್ರೇಣಿಗಳು, ದೇವಾಲಯಗಳು ಚಾರಣ ಮಾಡುವ ಸ್ಥಳಗಳು ಹುಲ್ಲುಗಾವಲುಗಳು ಕಾಡುಗಳು ಮತ್ತು ವನ್ಯಜೀವಿಗಳನ್ನು ಹೊಂದಿರುವ ಒಂದು ಸಂಪೂರ್ಣ ಪ್ಯಾಕೇಜ್ ಅನ್ನು ನಿಮಗೆ ನೀಡುವಂತಹ ಬ್ರಹ್ಮಗಿರಿ ಬೆಟ್ಟಗಳಿಗೆ ಈ ಋತುವಿನಲ್ಲಿ ಒಂದು ಪ್ರವಾಸದ ಯೋಜನೆ ಮಾಡುವುದುಬಾರದೇಕೆ?

6. ಬ್ರಹ್ಮಗಿರಿ ಬೆಟ್ಟಗಳಿಗೆ ಭೇಟಿ ಕೊಡಲು ಸೂಕ್ತ ಸಮಯ

6. ಬ್ರಹ್ಮಗಿರಿ ಬೆಟ್ಟಗಳಿಗೆ ಭೇಟಿ ಕೊಡಲು ಸೂಕ್ತ ಸಮಯ

Keshavsp

ಇಲ್ಲಿಯ ಹವಾಮಾನವು ತಂಪಾಗಿ ಮತ್ತು ಆಹ್ಲಾದಕರವಾಗಿ ವರ್ಷದುದ್ದಕ್ಕೂ ಇರುವುದರಿಂದ ಬ್ರಹ್ಮಗಿರಿ ಬೆಟ್ಟಗಳು ವರ್ಷದಲ್ಲಿ ಯಾವುದೇ ಸಮಯದಲ್ಲೂ ಭೇಟಿ ನೀಡಬಹುದಾದ ತಾಣವಾಗಿದೆ. ಆದುದರಿಂದ ವರ್ಷದ ಯಾವುದೇ ಸಮಯದಲ್ಲಿಯೂ ಇಲ್ಲಿಗೆ ಭೇಟಿ ನೀಡಿ ಆನಂದವನ್ನು ಪಡೆಯಬಹುದಾಗಿದೆ. ಇಲ್ಲಿಯ ಕಡಿಮೆ ಅನ್ವೇಷಿತ ಪರ್ವತ ಶ್ರೇಣಿಯ ನೈಸರ್ಗಿಕ ಸೌಂದರ್ಯತೆಯನ್ನು ಆನಂದಿಸಲು ಇದರ ತಪ್ಪಲಿಗೆ ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳ ಕೊನೆಯವರೆಗೆಯೂ ಭೇಟಿ ನೀಡಬಹುದಾಗಿದೆ ಈ ಸಮಯದಲ್ಲಿ ಭೇಟಿ ನೀಡಿದಲ್ಲಿ ನೀವು ಬ್ರಹ್ಮಗಿರಿ ಬೆಟ್ಟದ ಪ್ರತೀ ಮೂಲೆ ಮೂಲೆಗಳಲ್ಲಿಯೂ ವರ್ಣಮಯ ಪರಿಸರವನ್ನು ಕಾಣಬಹುದಾಗಿದೆ.

7. ಬ್ರಹ್ಮಗಿರಿ ಬೆಟ್ಟಗಳಿಗೆ ತಲುಪುವುದು ಹೇಗೆ?

7. ಬ್ರಹ್ಮಗಿರಿ ಬೆಟ್ಟಗಳಿಗೆ ತಲುಪುವುದು ಹೇಗೆ?

ವಾಯುಮಾರ್ಗ ಮೂಲಕ : ಬ್ರಹ್ಮಗಿರಿ ಬೆಟ್ಟಗಳಿಗೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಅದು 120 ಕಿ.ಮೀ ಅಂತರದಲ್ಲಿರುವ ಮೈಸೂರು ವಿಮಾನ ನಿಲ್ದಾಣ. ನೀವು ಒಮ್ಮೆ ವಿಮಾನ ನಿಲ್ದಾಣವನ್ನು ತಲುಪಿದ ನಂತರ ಬಾಡಿಗೆ ಕ್ಯಾಬ್ ಮಾಡಿಕೊಂಡು ಪರ್ವತ ಶ್ರೇಣಿಯ ತಪ್ಪಲಿನ ವರೆಗೂ ಹೋಗಬಹುದಾಗಿದೆ ಈ ಬೆಟ್ಟದ ಮೇಲೆ ತಲುಪಿದ ನಂತರ ಭವ್ಯವಾದ ದೃಶ್ಯ ವನ್ನು ನೋಡಿ ಆನಂದಿಸಿ ಇದಕ್ಕಾಗಿ ನೀವು ಬೆಟ್ಟದ ಮೇಲಿನ ಭಾಗಕ್ಕೆ ಚಾರಣ ಮಾಡಬೇಕಾಗುತ್ತದೆ.

ರೈಲು ಮಾರ್ಗ: ನೀವು ಮೈಸೂರು ರೈಲ್ವೇ ನಿಲ್ದಾಣಕ್ಕೆ ನೇರವಾಗಿ ರೈಲಿನ ಮೂಲಕ ಪ್ರಯಾಣ ಮಾಡಬಹುದು ಮತ್ತು ಅಲ್ಲಿಂದ ಬಾಡಿಗೆ ವಾಹನದ ಮೂಲಕ ಬ್ರಹ್ಮಗಿರಿ ಬೆಟ್ಟದ ತಪ್ಪಲಿನವರೆಗೆ ಹೋಗಬಹುದಾಗಿದೆ.

ರಸ್ತೆ ಮೂಲಕ : ಬ್ರಹ್ಮಗಿರಿ ಬೆಟ್ಟಗಳ ಪ್ರದೇಶವು ಸಮೀಪದ ಸ್ಥಳಗಳಿಗೆ ರಸ್ತೆಯ ಮೂಲಕ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ನೀವು ಒಮ್ಮೆ ಇಲ್ಲಿಯ ತಪ್ಪಲಿಗೆ ತಲುಪಿದ ನಂತರ ನೀವು ಬೆಟ್ಟಗಳು ಮತ್ತು ಕಾಡುಗಳ ಮೂಲಕ ಚಾರಣ ಮಾಡಿ ಅದರ ಪ್ರವಾಸಿ ತಾಣಗಳನ್ನು ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X