Search
  • Follow NativePlanet
Share
» »ಭಾರತ ಮತ್ತು ಚೀನಾ ಗಡಿಗಳ ಮಧ್ಯೆ ಇರುವ ಹಾದಿಗಳು ಕೇವಲ ಪಾಸ್ ಗಳಲ್ಲದೆ ಅವುಗಳಿಗಿಂತಲೂ ಮಿಗಿಲಾದುದು

ಭಾರತ ಮತ್ತು ಚೀನಾ ಗಡಿಗಳ ಮಧ್ಯೆ ಇರುವ ಹಾದಿಗಳು ಕೇವಲ ಪಾಸ್ ಗಳಲ್ಲದೆ ಅವುಗಳಿಗಿಂತಲೂ ಮಿಗಿಲಾದುದು

By Manjula Balaraj Tantry

ಗಡಿ ಭಾಗದಲ್ಲಿರುವ ಅತ್ಯಂತ ಸುಂದರವಾದ ಮತ್ತು ಉತ್ತಮವಾದ ಸ್ಥಳಕ್ಕೆ ಭೇಟಿ ಕೊಟ್ಟಿರುವಿರ? ಇಲ್ಲವಾದಲ್ಲಿ ಈ ವ್ಯಾಪಾರ ವಹಿವಾಟು ಮಾಡಲಾಗುತ್ತಿದ್ದ ಈ ಇವು ವಾಪರಸ್ಥರಿಗೆ ಉಪಯೋಗವಾಗದ ಭಾರತ ಮತ್ತು ಚೀನದ ಮಧ್ಯೆ ಇರುವ ಪಾಸ್ ಗಳಿಗೆ ಭೇಟಿ ಕೊಡಿ ಕಾಲಾನಂತರದಲ್ಲಿ, ಅದರ ಸೌಂದರ್ಯವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಿಸುತ್ತಿದ್ದು ಇವು ಆನಂದಿಸಲು ಸೂಕ್ತ ಸ್ಥಳಗಳಾಗಿವೆ.

ಅನೇಕ ದೇಶಗಳನ್ನು ತನ್ನ ಸುತ್ತಲೂ ಹೊಂದಿರುವ ಭಾರತವು ಒಂದು ವಿಶ್ವದ ಅತ್ಯಂತ ಸ್ನೇಹಪರ ದೇಶಗಳಲ್ಲೊಂದಾಗಿದೆ. ಅದು ಇಲ್ಲಿಯ ಆತಿಥ್ಯದಲ್ಲಾಗಿರಬಹುದು ಅಥವಾ ಔದಾರ್ಯಗಳಲ್ಲಾಗಿರಬಹುದು ಭಾರತದ ಸಂಸ್ಕೃತಿ ಮತ್ತು ಸಭ್ಯತೆಗಾಗಿ ಯಾವಾಗಲೂ ವಿಶ್ವದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುತ್ತದೆ.

ಕೆಲವು ನೆರೆಹೊರೆ ದೇಶದೊಂದಿಗೆ ಯುದ್ದ ಮಾಡುತ್ತಿದ್ದರೂ ಭಾರತವು ಇನ್ನೂ ಕೂಡಾ ಆ ದೇಶಗಳಿಗೆ ಬೆಂಬಲವನ್ನು ನೀಡುತ್ತಿದೆ ಮತ್ತು ಆ ದೇಶಗಳೊಂದಿಗೆ ಸ್ನೇಹಕ್ಕಾಗಿ ಹಸ್ತವನ್ನು ಚಾಚಿದೆ.

ಇಂದು ಯಾರೇ ಆಗಲಿ ಈ ನೆರೆಹೊರೆ ದೇಶಗಳನ್ನು ನೆಲ ಮಾರ್ಗದ ಮೂಲಕ ಪ್ರವೇಶಿಸಬೇಕಾದಲ್ಲಿ ಈ ಕೆಲವು ಹಾದಿಗಳನ್ನು ಬಳಸಬೇಕಾಗುತ್ತದೆ ಮತ್ತು ಇದಕ್ಕಾಗಿ ಅವರು ಸರಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಭಾರತದ ಪರ್ಯಾಯ ದ್ವೀಪಗಳ ಸುತ್ತಲೂ ಲೆಕ್ಕವಿಲ್ಲದಷ್ಟು ಹಾದಿಗಳಿವೆ ಮತ್ತು ಅವುಗಳಲ್ಲಿ ಕೆಲವು ಅವುಗಳ ಅಪ್ರತಿಮ ಸೌಂದರ್ಯತೆ ಮತ್ತುವಿಶ್ರಾಂತಿಯ ಸೆಳೆತಗಳಿಂದ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ.

ಈ ಹಾದಿಗಳ ಬಗ್ಗೆ ಪರಿಶೀಲಿಸುವುದು ಮತ್ತು ಇಲ್ಲಿಗೆ ಒಂದು ಅದ್ಬುತವಾದ ಪ್ರವಾಸವನ್ನು ಆಯೋಜಿಸಿ ಇಲ್ಲಿಯ ಗಡಿಯನ್ನು ದಾಟಿ ಅಲ್ಲಿಯ ಪ್ರೀತಿ ಮತ್ತು ಸೌಂದರ್ಯತೆಯ ಅನುಭವ ಪಡೆದರೆ ಹೇಗಿರಬಹುದು?

ನಾಥು ಲಾ ಪಾಸ್ , ಸಿಕ್ಕಿಮ್

ನಾಥು ಲಾ ಪಾಸ್ , ಸಿಕ್ಕಿಮ್

PC- Shayon Ghosh

ಇದೊಂದು ಹಿಮಾಲಯ ಪ್ರದೇಶದ ಪರ್ವತಗಳ ಪಾಸ್(ಹಾದಿ) ಆಗಿದ್ದು ಭಾರತ ಮತ್ತು ಚೀನಾವನ್ನು ಸಂಪರ್ಕಿಸುತ್ತದೆ. ನಾಥುಲಾ ಪಾಸ್ ಭಾರತದಲ್ಲಿಯ ಅತೀ ಹೆಚ್ಚು ಭೇಟಿ ಕೊಡಲ್ಪಡುವ ಪಾಸ್ (ಹಾದಿ)ಗಳಲ್ಲೊಂದಾಗಿದೆ. ಇದನ್ನು ರೇಷ್ಮೆ ಮಾರ್ಗದ ಒಂದು ಶಾಖೆ ಎಂದು ನಂಬಲಾಗುತ್ತದೆ. ಇದು ಎರಡು ದೇಶಗಳಲ್ಲಿಯ ವಹಿವಾಟು ಮಾಡುವ ಉದ್ದೇಶಗಳಿಗಾಗಿ ಮಾಡಲಾದ ಪ್ರಾಚೀನ ಮಾರ್ಗವಾಗಿದೆ.

ಭಾರತ ಮತ್ತು ಚೀನಾ ನಡುವಿನ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲಿ ಒಂದಾಗಿದ್ದು ಇದು ಸಾವಿರಾರು ಜನ ಸಂದರ್ಶಕರನ್ನು ಪ್ರತೀ ತಿಂಗಳು ಕೆಲವು ಕೊನೆಯ ಋತುಗಳಲ್ಲಿ ಆಕರ್ಷಿಸುತ್ತದೆ. ಈ ತಂಪಾದ ಸ್ಥಳವು ಪ್ರವಾಸಿಗರಿಗೆ ಅನೇಕ ಸಾಹಸಮಯ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಆಯ್ಕೆಗಳನ್ನು ನೀಡುತ್ತದೆ ಮತ್ತು ಹಿಮಾಲಯದ ನಯನ ಮನೋಹರ ಸೌಂದರ್ಯತೆಯು ಮತ್ತು ಹಿಮಾಲಯದ ಗಗನ ಚುಂಬಿ ಶಿಖರಗಳ ಸುಂದರ ದೃಶ್ಯಗಳನ್ನು ವೀಕ್ಷಿಸುವ ಅವಕಾಶ ಸಂದರ್ಶಕರಿಗೆ ಸಿಗುತ್ತದೆ.

ನಾಥುಲಾ ಪಾಸ್ ನ ಒಂದು ವೈಶಿಷ್ಟ್ಯತೆಯೇನೆಂದರೆ ಇದು ಶಾಂತಿಯುತವಾದ ಮತ್ತು ಸ್ನೇಹಪರ ವಾತಾವರಣದ ಹಿಂದೆ ಇದ್ದು, ಇಲ್ಲಿಯ ಜನರು ಪರಸ್ಪರರಿಗೆ ಮುಗುಳ್ನಗೆಯನ್ನು ನೀಡಿಕೊಂಡು ಈ ಪಾಸ್ ಮೂಲಕ ಬರುವ ತಂಪಾದ ಗಾಳಿಯಲ್ಲಿ ಸಂತೋಷದಿಂದ ಇರುವುದನ್ನು ಕಾಣಬಹುದಾಗಿದೆ.

ನಾಥುಲಾ ಪಾಸ್ ಗೆ ಭೇಟಿ ಕೊಡಲು ಸೂಕ್ತ ಸಮಯ

ನಾಥುಲಾ ಪಾಸ್ ಗೆ ಭೇಟಿ ಕೊಡಲು ಸೂಕ್ತ ಸಮಯ

PC- Shayon Ghosh

ಹಿಮಾಲಯ ಪರ್ವತ ಶ್ರೇಣಿಗಳಿಗೆ ಹತ್ತಿರದಲ್ಲಿ ನಾಥುಲಾ ಪಾಸ್ ಇರುವುದರಿಂದ ಈ ಜಾಗವು ವರ್ಷದಲ್ಲಿ ಹೆಚ್ಚಿನ ಸಮಯ ಶೀತವಲಯದ ವಾತಾವರಣವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ಈ ದಾರಿಗಳು ಮುಚ್ಚಲ್ಪಡುತ್ತವೆ ಮತ್ತು ಈ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲು ಸರಕಾರದ ಅನುಮತಿ ಸಿಗುವುದು ಕಷ್ಟಕರವಾಗಿದೆ.

ಆದರೂ ನೀವು ನಾಥುಲಾ ಪಾಸ್ ನ ಸೌಂದರ್ಯತೆಯನ್ನು ಅನುಭವಿಸಬೇಕೆಂದಿದ್ದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡಲು ಬೇಸಿಗೆ ಕಾಲವು ಸೂಕ್ತವಾದ ಸಮಯವಾಗಿದೆ. ಈ ಸಮಯದಲ್ಲಿ ಮಾರ್ಗಗಳು ಮತ್ತು ಪಾಸ್ ಗಳು ನಿರ್ಭಂದಿತವಾಗಿರುವುದಿಲ್ಲ.

ಶಿಪ್ಕಿ ಲಾ ಪಾಸ್ , ಹಿಮಾಚಲ ಪ್ರದೇಶ

ಶಿಪ್ಕಿ ಲಾ ಪಾಸ್ , ಹಿಮಾಚಲ ಪ್ರದೇಶ

ಹಿಮಾಲಯದ ಮಡಿಲಲ್ಲಿರುವ ಕಡಿಮೆ -ಅನ್ವೇಷಣೆಗೊಳಗಾದ ಮತ್ತು ಗುಪ್ತವಾಗಿರುವ ಪಾಸ್ ಗಳಲ್ಲಿ ಶಿಪ್ಕಿ ಲಾ ಪಾಸ್ ಒಂದಾಗಿದೆ. ಇದು ಹಿಮಾಚಲ ಪ್ರದೇಶದ ಕಿನ್ನೂರ್ ಜಿಲ್ಲೆಯಲ್ಲಿದ್ದು, ಇದು ಟಿಬೆಟ್ ಮತ್ತು ಚೈನಾವನ್ನು ಸಂಪರ್ಕಿಸುತ್ತದೆ. ಶಿಪ್ಕಿ ಲಾ ಪಾಸ್ ಗೆ ಹೋಗಲು ಮತ್ತು ಅಲ್ಲಿ ಸ್ಥಳಗಳ ಅನ್ವೇಷಣೆ ಮಾಡಲು ಸರಕಾರದಿಂದ ಅನುಮತಿ ದೊರೆಯುವುದು ಕಷ್ಟಕರ.

ಶಿಪ್ಕಿಲಾ ದಲ್ಲಿ ವಾಸ ಮಾಡದೇ ಇರುವ ಜನರಿಗೆ ಇಲ್ಲಿಯ ದ್ವಾರವನ್ನು ಮುಚ್ಚಲಾಗುತ್ತದೆ. ಆದುದರಿಂದ ಇಲ್ಲಿಯ ಗಡಿ ಪ್ರದೇಶದ ಒಳಗೆ ಪ್ರವೇಶಿಸಲು ನಿಮಗೆ ಸರಕಾರದಿಂದ ವಿಶೇಷವಾದ ಅನುಮತಿಯ ಅವಶ್ಯಕತೆಯಿರುತ್ತದೆ.

ಒಮ್ಮೆ ನೀವು ಈ ಪಾಸ್ ನ ಒಳಗೆ ಪ್ರವೇಶಿಸಿದಲ್ಲಿ ನೀವು ಜಗತ್ತಿನ ಮೂಲ ಸೌಂದರ್ಯತೆಯು ಪರ್ವತ ಶಿಖರಗಳಲ್ಲಿ ,ಬಯಲು ಮತ್ತು ಪಾಸ್ ಗಳಲ್ಲಿ ಕಾಣಬಹುದಾಗಿದೆ ಇಲ್ಲಿ ನೀವು ಸಟ್ಲೇಜ್ ನದಿಯನ್ನು ಕೂಡಾ ನೋಡಬಹುದಾಗಿದೆ ಇದು ಶಿಪ್ಕಿಲಾ ಪಾಸ್ ನ ಪಕ್ಕದಲ್ಲಿ ಹರಿಯುತ್ತದೆ. ನಿಮ್ಮ ಹೆಜ್ಜೆ ಗುರುತನ್ನು ಈ ಪಾಸ್ ಗಳಲ್ಲಿ ಇಟ್ಟರೆ ಅದರ ಅನುಭವ ಹೇಗಿರಬಹುದು?

ಶಿಪ್ಕಿ ಲಾ ಪಾಸ್ ಗೆ ಭೇಟಿ ಕೊಡಲು ಸರಿಯಾದ ಸಮಯ

ಶಿಪ್ಕಿ ಲಾ ಪಾಸ್ ಗೆ ಭೇಟಿ ಕೊಡಲು ಸರಿಯಾದ ಸಮಯ

ಸ್ಪಿತಿಯ ಆವೃತ್ತಿಯಲ್ಲಿ ಇದು ಇರುವ ಕಾರಣದಿಂದಾಗಿ ಶಿಪ್ಕಿಲಾ ಪಾಸ್ ಚಳಿಗಾಲದಲ್ಲಿ ಹಿಮಪಾತವನ್ನು ಅನುಭವಿಸುತ್ತದೆ ಆದುದರಿಂದ ಭಾರತ ಮತ್ತು ಚೀನಾದ ನಡುವೆ ಇರುವ ಈ ಗುಪ್ತವಾಗಿರುವ ಪಾಸ್ ಗೆ ಭೇಟಿ ಕೊಡುವುದು ಕಷ್ಟ. ಅದಕ್ಕಿಂತ ಹೆಚ್ಚಾಗಿ ಇಲ್ಲಿಯ ಗಡಿ ಪ್ರದೇಶಗಳಿಗೆ ಭೇಟಿ ಕೊಡಲು ಸೂಕ್ತ ಕಾರಣಗಳಿಲ್ಲದೆ ಇಲ್ಲಿಗೆ ಅನುಮತಿ ಸುಲಭವಾಗಿ ಸಿಗುವುದಿಲ್ಲ.

ನೀವು ಇಲ್ಲಿಗೆ ಹೋಗಲು ಅನುಮತಿ ಪಡೆಯುವ ಅದೃಷ್ಟವಂತರಾಗಿದ್ದಲ್ಲಿ ಶಿಪ್ಕಿಲಾ ಪಾಸ್ ಗೆ ಭೇಟಿ ಕೊಡಲು ಎಪ್ರಿಲ್ ನಿಂದ ಜುಲೈ ತಿಂಗಳ ಕೊನೆಯವರೆಗೆ ಸೂಕ್ತವಾದ ಸಮಯವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿ ತಾಪಮಾನದ ಸ್ಥಿತಿಯು ಅನುಕೂಲಕರವಾಗಿದ್ದು ನಿಮಗೆ ಇಲ್ಲಿಯ ಸೌಂದರ್ಯತೆಯ ಅನ್ವೇಷಣೆಯನ್ನು ಮಾಡಲು ಅನುಕೂಲಕರವಾಗಿರುತ್ತದೆ.

ಲಿಪುಲೇಖ್ ಪಾಸ್ , ಉತ್ತರಾಖಾಂಡ್

ಲಿಪುಲೇಖ್ ಪಾಸ್ , ಉತ್ತರಾಖಾಂಡ್

17060 ಅಡಿ ಎತ್ತರದಲ್ಲಿರುವ, ಲಿಪುಲೇಖ್ ಪಾಸ್ ಭಾರತದ ಅತ್ಯಂತ ದೊಡ್ಡ ಪಾಸ್ ಗಳಲ್ಲಿ ಒಂದಾಗಿದೆ. ಆಗಿದೆ. ಇದು ಹಿಮಾಲಯದ ಉತ್ತರಾಖಾಂಡ್ ರಾಜ್ಯದಲ್ಲಿದೆ. ಇದನ್ನು ಭಾರತ ಮತ್ತು ಚೀನಾದ ವ್ಯಾಪಾರ ವಹಿವಾಟನ್ನು ಉತ್ತಮ ಗೊಳಿಸುವ ಉದ್ದೇಶದಿಂದ ಮಾಡಲಾಗಿದೆ. ಲಿಪುಲೇಖ್ ಪಾಸ್ ಭಾರತದ ಸ್ನೇಹಪರ ವಾತಾವರಣಕ್ಕೆ ಇನ್ನೊಂದು ಉದಾಹರಣೆಯಾಗಿದೆ.

ಭಾರತ ಮತ್ತು ಚೀನಾ ತಮ್ಮ ಉತ್ಪನ್ನಗಳ ವಿನಿಮಯಕ್ಕಾಗಿ ಕೆಲವೇ ಕೆಲವು ಮಾರ್ಗಗಳಿದ್ದಾಗ ಮಾಡಲಾದ ಈ ಹಾದಿಯು ಪ್ರಾಚೀನ ಇತಿಹಾಸವನ್ನು ಹೊಂದಿದೆ. ಲಿಪು ಲೇಖ್ ಪಾಸ್ ಟಿಬೇಟಿನಲ್ಲಿಯೂ ಕೂಡ ತೆರೆಯಲಾಗುತ್ತದೆ. ಒಂದು ಕಡೆ ಕುಳಿತು ಹಿಮಾಲಯದ ಅದ್ಬುತ ಸೌಂದರ್ಯಗಳನ್ನು ಸವಿಯ ಬೇಕೆಂದಿದ್ದಲ್ಲಿ ಲಿಪು ಲೇಖ್ ಪಾಸ್ ಕಡೆ ಪ್ರಯಾಣ ಬೆಳೆಸಿ.

ಲಿಪುಲೇಖ್ ಪಾಸ್ ಗೆ ಭೇಟಿ ಕೊಡಲು ಸೂಕ್ತ ಸಮಯ

ಲಿಪುಲೇಖ್ ಪಾಸ್ ಗೆ ಭೇಟಿ ಕೊಡಲು ಸೂಕ್ತ ಸಮಯ

ಲಿಪುಲೇಖ್ ಪಾಸ್ ಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಬೇಸಿಗೆ ಕಾಲದಲ್ಲಿ ಎಪ್ರಿಲ್ ತಿಂಗಳಿನಿಂದ ಜುಲೈ ತಿಂಗಳ ಕೊನೆಯವರೆಗೆ. ಈ ಸಮಯದಲ್ಲಿ ಹವಾಮಾನವು ಅನುಕೂಲಕರವಾಗಿದ್ದು ನಿಮಗೆ ಲಿಪುಲೇಖ್ ಪಾಸ್ ನ ಒಳಗೆ ಮತ್ತು ಸುತ್ತಮುತ್ತ ತಿರುಗಾಡಲು ಅನುಕೂಲವಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more