Search
  • Follow NativePlanet
Share
» »ಬಿಹಾರದಲ್ಲಿನ ಮಹಾಬೋಧಿ ದೇವಾಲಯವ ನೋಡಿದ್ದೀರಾ? ಇಲ್ಲಿದೆ ಬುದ್ಧನ ಬೋಧಿ ವೃಕ್ಷ

ಬಿಹಾರದಲ್ಲಿನ ಮಹಾಬೋಧಿ ದೇವಾಲಯವ ನೋಡಿದ್ದೀರಾ? ಇಲ್ಲಿದೆ ಬುದ್ಧನ ಬೋಧಿ ವೃಕ್ಷ

By Manjula Balaraj Tantry

ಗೌತಮ ಬುದ್ಧನ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಬುದ್ಧನ ಬೌದ್ದ ಗಯಾ ಈಗ ಒಂದು ಪ್ರವಾಸಿ ತಾಣವಾಗಿದೆ. ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಾಲ್ಕು ತೀರ್ಥಯಾತ್ರಾ ಸ್ಥಳಗಳಲ್ಲಿ ಬೋಧ ಗಯಾ ಅತ್ಯಂತ ಮುಖ್ಯವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವೂ ಆಗಿದೆ.

ಬೋದ ಗಯಾ

ಬೋದ ಗಯಾ

PC: IamShrivastava

ಭಾರತದ ರಾಜ್ಯವೆನಿಸಿದ ಬಿಹಾರಿನ ಗಯಾ ಜಿಲ್ಲೆಯ ಮಹಾಬೊಧಿ ದೇವಾಲಯ ಸಂಕೀರ್ಣದಲ್ಲಿ ಇರುವ ಬೌದ್ದ ಗಯಾ ಒಂದು ಧಾರ್ಮಿಕ ಹಾಗೂ ಯಾತ್ರಿಕರ ತಾಣವಾಗಿದೆ. ಈ ಸ್ಥಳದಲ್ಲಿ ಗೌತಮ ಬುದ್ದನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದುದಕ್ಕಾಗಿಯೂ ಕೂಡ ಪ್ರಸಿದ್ದಿಯನ್ನು ಪಡೆದಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣ

ಯುನೆಸ್ಕೋ ವಿಶ್ವ ಪರಂಪರೆಯ ತಾಣ

PC:Корыгин Андрей

ಇಲ್ಲಿರುವ ವಿಷ್ಣುಪಾದ ಮಂದಿರವೂ ಕೂಡಾ ಪ್ರಸಿದ್ದಿಯನ್ನು ಪಡೆದಿದೆ. ಬೌದ್ದ ಧರ್ಮದವರಿಗೆ, ಗೌತಮ ಬುದ್ಧನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಾಲ್ಕು ತೀರ್ಥಯಾತ್ರಾ ಸ್ಥಳಗಳಲ್ಲಿ ಬೋಧ ಗಯಾ ಅತ್ಯಂತ ಮುಖ್ಯವಾಗಿದೆ. ಉಳಿದ ಮೂರು ಖುಷಿನಗರ, ಲುಂಬಿನಿ ಮತ್ತು ಸಾರಾನಾಥ್. 2002, ರಲ್ಲಿ ಬುದ್ದ ಗಯಾದಲ್ಲಿರುವ ಮಹಾಬೋಧಿ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ಒಂದು ತಾಣವಾಗಿ ಸೇರಿಸಲಾಗಿದೆ. ಅಶೋಕನು ಈ ದೇವಾಲಯವನ್ನು ನಿರ್ಮಿಸಿದನು.

ಅಶೋಕ ದೇವಾಲಯವನ್ನು ನಿರ್ಮಿಸಿದನು

ಅಶೋಕ ದೇವಾಲಯವನ್ನು ನಿರ್ಮಿಸಿದನು

PC: RAVIRAJ KUMBLE

ಬುದ್ದಗಯಾ ಬೌದ್ದ ಧರ್ಮದವರಿಗೆ ಪವಿತ್ರ ಸ್ಥಳವಾಗಿದೆ. ಇದು ನೀರಾಂಜನ ನದಿ ದಡದಲ್ಲಿದ್ದು ಈ ಜಾಗವು ಉರುವೇಲಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಚಕ್ರವರ್ತಿ ಅಶೋಕನು ಮೊದಲಿಗೆ ಇಲ್ಲಿ ದೇವಾಲಯವನ್ನು ನಿರ್ಮಿಸಿದನು. ಸಾಂಪ್ರದಾಯಿಕವಾಗಿ, ಬುದ್ಧನು ಕ್ರಿ.ಪೂ. 563 ರಲ್ಲಿ ಈಗಿನ ನೇಪಾಳದಲ್ಲಿ ಅನುಸರಿಸಲಾಗುವ ಮಂಗಳಕರವಾದ ಬೈಸಖಿ ಪೂರ್ಣಿಮಾದಲ್ಲಿ ಜನಿಸಿದನು. ಸಿದ್ದಾರ್ಥರಾಗಿ, ಕ್ರಿ.ಪೂ. 534 ರಲ್ಲಿ ತಮ್ಮ ಕುಟುಂಬವನ್ನು 29 ನೇ ವಯಸ್ಸಿನಲ್ಲಿ ತ್ಯಜಿಸಿದರು ಮತ್ತು ಸತ್ಯವನ್ನು ಹುಡುಕಿಕೊಂಡು ಪ್ರಯಾಣಿಸಿದರು ಮತ್ತು ಧ್ಯಾನ ಮಾಡಿದರು.

ಬುದ್ದಗಯಾ ಎಂಬ ಹೆಸರು ಹೇಗೆ ಬಂತು?

ಬುದ್ದಗಯಾ ಎಂಬ ಹೆಸರು ಹೇಗೆ ಬಂತು?

PC: Ianasaman

ಗಯಾದಲ್ಲಿ ಉರುಬೇಲಾ (ಬುದ್ಧಗಯ) ನಲ್ಲಿ ಆರು ವರ್ಷಗಳ ಕಾಲ ಸ್ವಯಂ-ದಂಡನೆಯನ್ನು ಅಭ್ಯಾಸ ಮಾಡಿದ ನಂತರ, ಅದು ಅವರಿಗೆ ವಿಮುಕ್ತಿಯನ್ನು ನೀಡದೇ ಇರುವ ಕಾರಣದಿಂದಾಗಿ ಈ ಅಭ್ಯಾಸವನ್ನು ತ್ಯಜಿಸಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ ಗೌತಮ ಸಿದ್ಧಾರ್ಥರ ಶಿಷ್ಯರು ವೈಶಾಖ (ಏಪ್ರಿಲ್-ಮೇ) ತಿಂಗಳಲ್ಲಿ ಹುಣ್ಣಿಮೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲಾರಂಭಿಸಿದರು. ಕಾಲಕ್ರಮೇಣ ಈ ಜಾಗವು ಬುದ್ದಗಯಾ ಎಂದಾಯಿತು. ಹೀಗೆಯೆ ಜ್ಞಾನೋದಯ ದಿನವನ್ನು ಬುದ್ಧ ಪೂರ್ಣಿಮಾ ಎಂದೂ ಮರವನ್ನು ಬೋಧಿ ವೃಕ್ಷ ಎಂದೂ ಕರೆಯಲಾಯಿತು.

ಮಹಾಭೋಧಿ ದೇವಾಲಯ

ಮಹಾಭೋಧಿ ದೇವಾಲಯ

PC:Cacahuate

ಬುದ್ದಗಯಾ ಇತಿಹಾಸವನ್ನು ಅನೇಕ ಶಾಸನಗಳು ಮತ್ತು ತೀರ್ಥಯಾತ್ರೆಗಳ ಪಟ್ಟಿಗಳಲ್ಲಿ ದಾಖಲಿಸಲಾಗಿದೆ. ಈ ಪೈಕಿ 5 ನೇ ಶತಮಾನದಲ್ಲಿ ಚೀನೀ ಯಾತ್ರಿಕರು ಫಾಕ್ಸಿಯಾನ್ ಮತ್ತು 7ನೇ ಶತಮಾನದಲ್ಲಿ ಕ್ಸುವಾನ್ಜಾಂಗ್ ಅವರ ದಾಖಲೆಗಳು ಪ್ರಮುಖವಾಗಿವೆ. 13 ನೇ ಶತಮಾನದಲ್ಲಿ ತುರ್ಕಿ ಸೈನ್ಯದಿಂದ ವಶಪಡಿಸಿಕೊಳ್ಳುವವರೆಗೂ ಈ ತಾಣವು ಶತಮಾನಗಳವರೆಗೂ ಬೌದ್ದ ನಾಗರೀಕತೆಯ ಹೃದಯ ಭಾಗವಾಗಿತ್ತು. ಬುದ್ದಗಯಾ ಎಂಬ ಹೆಸರು 18ನೇ ಶತಮಾನಗಳವರೆಗೂ ಬಳಕೆಗೆ ಬಂದಿರಲಿಲ್ಲ. ಐತಿಹಾಸಿಕವಾಗಿ ಈ ಸ್ಥಳವು ಉರುವೇಲಾ ಸಂಭೋಧಿ ವಜ್ರಾಸನಾ ಅಥವಾ ಮಹಾಭೋಧಿ ಎಂದೇ ಕರೆಯಲ್ಪಡುತ್ತಿತ್ತು. ಬುದ್ದಗಯಾದ ಪ್ರಮುಖ ಮಠವನ್ನು ಭೋಧಿಮಂದ-ವಿಹಾರ(ಪಾಲಿ) ಎಂದು ಕರೆಯಲಾಗುತ್ತಿತ್ತು. ಈಗ ಇದನ್ನು ಮಹಾಭೋಧಿ ದೇವಾಲಯವೆಂದು ಕರೆಯಲಾಗುತ್ತದೆ.

ಬೋಧಿ ವೃಕ್ಷ

ಬೋಧಿ ವೃಕ್ಷ

PC: G3krishna

ಈ ಸಂಕೀರ್ಣವು ಪಾಟ್ನಾ ದಿಂದ 110 ಕಿ.ಮೀ ದೂರದಲ್ಲಿದ್ದು ಮಹಾಭೋಧಿ ದೇವಾಲಯವನ್ನು ಹೊಂದಿದೆ ಈ ದೇವಾಲಯವು ವಜ್ರಖಚಿತ ಸಿಂಹಾಸನ (ವಜ್ರಾಸನವೆಂದು ಕರೆಯಲಾಗುವ) ಮತ್ತು ಪವಿತ್ರ ಬೋಧಿ ವೃಕ್ಷವನ್ನು ಹೊಂದಿದೆ. ಮೂಲತಃ ಈ ಮರವು ಶ್ರೀಲಂಕಾದಲ್ಲಿನ ಶ್ರೀ ಮಹಾ ಬೋಧಿ ವೃಕ್ಷದ ಒಂದು ಸಸಿಯಾಗಿತ್ತು, ಮೂಲತಃ ಬೋಧಿ ವೃಕ್ಷದ ಸಸಿ ಎಂದು ಕರೆಯಲ್ಪಡುವ ಒಂದು ಸಸ್ಯದಿಂದ ಬೆಳೆಯಲಾಗಿದೆ. ಪಟ್ಟಣದ ಅತ್ಯಂತ ಪವಿತ್ರ ಸ್ಥಳವು ಬೋಧಿ ವೃಕ್ಷವಾಗಿದ್ದು ಮಹಾಬೋಧಿ ದೇವಸ್ಥಾನ ಸಂಕೀರ್ಣದ ಒಳಭಾಗದಲ್ಲಿ ಸುತ್ತುವರೆದಿದೆ. ಸುಂದರ ಉದ್ಯಾನವನದ ಮಧ್ಯೆ ಇದರ ಬೇರುಗಳು ಅದರ ಪೂರ್ವಜರಂತೆ ಅದೇ ಮಣ್ಣಿನಲ್ಲಿ ಹುದುಗಿದೆ.

ಜೊತೆಗೆ ಈ ಪಟ್ಟಣವನ್ನು ಹೆಚ್ಚಾಗಿ ಗುರುತಿಸುವಂತೆ ಮಾಡುವುದು ಇಲ್ಲಿಯ ದೇವಾಲಯಗಳು ಮತ್ತು ಕೆಲವು ಮಠಗಳು ಇವುಗಳ ಶೈಲಿಯು ವಿದೇಶೀ ಬೌದ್ದ ಸಮುದಾಯಗಳಿಂದ ದೇಶಿ ಮಾದರಿಯಲ್ಲಿ ಕಟ್ಟಲಾಗಿದೆ. ಈ ಪರಿಸರವು ಶಾಂತಿ, ಸೌಕರ್ಯ ಸೌಲಭ್ಯ ,ಮತ್ತು ಸಣ್ಣ ಪಟ್ಟಣದ ಸದ್ದುಗದ್ದಲ ಇವೆಲ್ಲವುಗಳ ಮಿಶ್ರಣವಾಗಿದೆ. ಕಟ್ಟಕಡೆಗೆ ಇಲ್ಲಿ ತೀವ್ರವಾದ ಭಕ್ತಿಯಿಂದ ಕೊನೆಗೊಂಡು ಆಸಕ್ತಿಕರವಾಗಿರುವಂತಹ ಸ್ಥಳವೆನಿಸುತ್ತದೆ.

Read more about: bihar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more