Search
  • Follow NativePlanet
Share
ಮುಖಪುಟ » ಸ್ಥಳಗಳು » ಗಯಾ » ಹವಾಮಾನ

ಗಯಾ ಹವಾಮಾನ

ಗಯಾ ನಗರಕ್ಕೆ ಹೋಗಲು ಇರುವ ಯೋಗ್ಯವಾದ ಸಮಯ ಎಂದರೆ ಸಪ್ಟಂಬರ. ಈ ತಿಂಗಳಲ್ಲಿ ಗಯಾ ನಗರಕ್ಕೆ ಹೋಗಲು ಯೋಜನೆಯನ್ನು ಹಾಕಿಕೊಂಡರೆ ಒಳ್ಳೆಯದು. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸಿಗರು ಬರಲು ಆರಂಭಿಸುತ್ತಾರೆ. ಜನೇವರಿ ತಿಂಗಳಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಗಯಾ ನಗರಕ್ಕೆ ಭೇಟಿ ನೀಡಲು ಅತ್ಯಂತ ಯೋಗ್ಯವಾದ ಸಮಯ ಎಂದರೆ ನವಂಬರ ಮತ್ತು ಫೆಬ್ರುವರಿ ತಿಂಗಳುಗಳು. ಗಯಾ ನಗರವು ಬುದ್ಧ ಜಯಂತಿಯಂದು ಅಸಂಖ್ಯಾತ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬುದ್ಧ ಜಯಂತಿಯನ್ನು ಸಾಮಾನ್ಯವಾಗಿ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ.

ಬೇಸಿಗೆಗಾಲ

ಗಯಾ ನಗರವು ಉಷ್ಣವಲಯ ಪ್ರದೇಶದಲ್ಲಿ ನೆಲೆಗೊಂಡಿದ್ದು, ಇಲ್ಲಿ ಅತಿಯಾದ ಉಷ್ಣಾಂಶ ಇರುತ್ತದೆ. ಬೇಸಿಗೆಯಲ್ಲಿ ಅತಿಯಾದ ಸುಡು ಬಿಸಿಲು ಇದ್ದು ಜನಗಳು ಇದರಿಂದ ತತ್ತರಿಸುತ್ತಾರೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 45 ಸೆಲ್ಸಿಯಸ ಡಿಗ್ರಿಯವರೆಗೂ ಇರುತ್ತದೆ. ಬೇಸಿಗೆ ಕಾಲದಲ್ಲಿ ಗಯಾ ನಗರಕ್ಕೆ  ಭೇಟಿ ಕೊಡಲು ಬಯಸುವ ಪ್ರವಾಸಿಗರು ಹಗುರವಾದ ಹತ್ತಿ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಮರೆಯಬಾರದು.

ಮಳೆಗಾಲ

ಗಯಾದಲ್ಲಿ ಮಳೆಗಾಲವು ಜುಲೈ ತಿಂಗಳಿಂದ ಪ್ರಾರಂಭಗೊಂಡು ಸಪ್ಟಂಬರ ತಿಂಗಳ ಕೊನೆಯವರೆಗೂ ಇರುತ್ತದೆ. ಈ ಸಮಯದಲ್ಲಿ ಈ ಸಂಪೂರ್ಣ ಪ್ರದೇಶವು ಭಾರಿ ಮಳೆಯನ್ನು ಕಾಣುತ್ತದೆ. ಆದ್ದರಿಂದ ಈ ಮಳೆಗಾಲದಲ್ಲಿ ಪ್ರವಾಸಿಗರು ಗಯಾಕ್ಕೆ ಪ್ರವಾಸವನ್ನು ಕೈಗೊಳ್ಳುವುದು ಯೋಗ್ಯವಲ್ಲ.  

ಚಳಿಗಾಲ

ಗಯಾದಲ್ಲಿ ಚಳಿಗಾಲವು ಅಕ್ಟೋಬರನಿಂದ ಆರಂಭಗೊಂಡು ಮಾರ್ಚ ತಿಂಗಳ ಕೊನೆಯವರೆಗೂ ಇರುತ್ತದೆ. ಈ ಸಮಯವು ಗಯಾಕ್ಕೆ ಪ್ರವಾಸ ಕೈಗೊಳ್ಳಲು ಅತ್ಯಂತ ಯೋಗ್ಯವಾದ ಸಮಯವಾಗಿದೆ. ನವಂಬರ ಮತ್ತು ಫೆಬ್ರುವರಿ ತಿಂಗಳಲ್ಲಿ ಗಯಾನ ದವಾಮಾನವು ತುಂಬಾ ಹಿತಕರವಾಗಿದ್ದು, ತಂಪಾಗಿರುತ್ತದೆ. ಇದು ಪ್ರವಾಸಕ್ಕೆ ಸೂಕ್ತವಾದ ಸಮಯ. ಚಳಿಗಾಲದಲ್ಲಿ ಗಯಾ ನಗರಕ್ಕೆ  ಭೇಟಿ ಕೊಡಲು ಬಯಸುವ ಪ್ರವಾಸಿಗರು ಹಗುರವಾದ ಉಣ್ಣೆ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಮರೆಯಬಾರದು.