Search
  • Follow NativePlanet
Share
» » ದೆಹಲಿಯಲ್ಲಿನ ಉತ್ತಮವಾದ ಬೋಟಿಂಗ್ ತಾಣಗಳಿವು

ದೆಹಲಿಯಲ್ಲಿನ ಉತ್ತಮವಾದ ಬೋಟಿಂಗ್ ತಾಣಗಳಿವು

ಪ್ರಪಂಚದ ಅತಿದೊಡ್ಡ ನಗರಗಳಲ್ಲಿ ದೆಹಲಿಯೂ ಕೂಡಾ ಒಂದಾಗಿದ್ದು ಇದು ತನ್ನಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಎಲ್ಲಾ ತರಹದ ಪ್ರವಾಸಿ ಆಕರ್ಷಣೆಗಳು ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ. ದೆಹಲಿಯಲ್ಲಿಯ ಐತಿಹಾಸಿಕ ತಾಣಗಳಿಂದಾಗಿ ಮಾತ್ರವಲ್ಲದೆ ಪ್ರಕೃತಿ ಪ್ರೇಮಿಗಳಿಗೆ , ಛಾಯಾಗ್ರಾಹಕರು ಮತ್ತು ವಾರಾಂತ್ಯದಲ್ಲಿ ಭೇಟಿ ಕೊಡುವ ಪ್ರವಾಸಿಗರಿಗೂ ಬೇಕಾಗುವಂತಹ ಸ್ಥಳಗಳನ್ನು ಹೊಂದಿರುವುದರಿಂದ ದೆಹಲಿಯು ಹೆಚ್ಚಾಗಿ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರಿಂದಲೂ ನಿರಂತರವಾಗಿ ಭೇಟಿ ನೀಡಲ್ಪಡುತ್ತದೆ.

ಇಲ್ಲಿ ಕೋಟೆಗಳಿಂದ ಅರಮನೆಗಳವರೆಗೆ, ಧಾರ್ಮಿಕ ತಾಣಗಳಿಂದ ಉದ್ಯಾನವನಗಳು ಮತ್ತು ಕೊಳಗಳಿಂದ ವಾಸ್ತುಶಿಲ್ಪ ಅದ್ಬುತಗಳವರೆಗೆ ಸಾವಿರಾರು ತಾಣಗಳು ಇಲ್ಲಿ ನೆಲೆಸಿರುವ ಕಾರಣದಿಂದಾಗಿ ಇದು ಜಗತ್ತಿನಾದ್ಯಂತದ ಪ್ರವಾಸಿಗರನ್ನು ಅನೇಕ ದಶಕಗಳಿಂದಲೂ ತನ್ನಲ್ಲಿಗೆ ಸೆಳೆಯುತ್ತಾ ಬಂದಿದೆ.

ವಾರಾಂತ್ಯದಲ್ಲಿ ಬೋಟಿಂಗ್ ಮಾಡಿ

ವಾರಾಂತ್ಯದಲ್ಲಿ ಬೋಟಿಂಗ್ ಮಾಡಿ

ದೆಹಲಿಯು ಭಾರತದಲ್ಲಿಯ ಅತಿ ಹೆಚ್ಚು ಭೇಟಿ ನೀಡಲ್ಪಡುವ ಸ್ಥಳಗಳಲ್ಲಿ ಒಂದೆನಿಸಿದೆ. ಇಂದು ನಾನು ನಿಮ್ಮಲ್ಲಿ ಸುಂದರ ನಗರವಾದ ನಮ್ಮ ದೇಶದ ರಾಜಧಾಲಿ ದೆಹಲಿಯ ಸ್ಥಳಗಳ ಬಗ್ಗೆ ಹೇಳುತ್ತಿದ್ದೇವೆ. ಇಲ್ಲಿ ನೀವು ನಗರದ ನಿರಂತರ ಜೀವನದಿಂದ ತಪ್ಪಿಸಿಕೊಂಡು ವಾರಾಂತ್ಯಗಳಲ್ಲಿ ಬೋಟಿಂಗ್ ಕೂಡಾ ಹೋಗಬಹುದು.
ಈ ಕೆಳಗಿನ ಕೆಲವು ಸ್ಥಳಗಳು ವಾರಾಂತ್ಯದಲ್ಲಿ ಹೊರಗೆ ಹೋಗುವವರಿಗಾಗಿ ದೆಹಲಿಯಲ್ಲಿರುವ ಕೆಲವು ಬೋಟಿಂಗ್ ಮಾಡಲು ಸೂಕ್ತವಾದ ಸ್ಥಳಗಳು . ಅವುಗಳ ಸ್ಥಳಗಳು ಪ್ರವೇಶ ಶುಲ್ಕಗಳು ಮತ್ತು ಪ್ರಶಾಂತವಾದ ಪರಿಸರಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

ಬೋಟ್ ಕ್ಲಬ್, ಇಂಡಿಯಾ ಗೇಟ್

ಬೋಟ್ ಕ್ಲಬ್, ಇಂಡಿಯಾ ಗೇಟ್

ಬೋಟ್ ಕ್ಲಬ್ ನಿಸ್ಸಂದೇಹವಾಗಿಯೂ ಒಂದು ಜನಪ್ರಿಯವಾದ ದೆಹಲಿಯ ಬೋಟಿಂಗ್ ತಾಣವೆನಿಸಿದೆ. ಇದು ನಗರದ ಅತ್ಯಂತ ಹಳೆಯ ಸ್ಥಳಗಳಲ್ಲೊಂದಾಗಿದ್ದು ಇದು ವಾರಾಂತ್ಯದಲ್ಲಿ ಭೇಟಿ ಕೊಡುವ ಪ್ರವಾಸಿಗರು ಮತ್ತು ಪ್ರಯಾಣಿಕರಿಂದ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ. ಭಾರತ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಗುರುತಿಸಲ್ಪಡುವ ಕಟ್ಟಡಗಳಲ್ಲೊಂದಾದ ಇಂಡಿಯಾ ಗೇಟ್ ನಲ್ಲಿ ಇದು ನೆಲೆಸಿದ್ದು ವಾರದ ಏಳು ದಿನಗಳಲ್ಲಿಯೂ ತೆರೆದಿರುತ್ತದೆ.

ಇಲ್ಲಿ 15 ನಿಮಿಷಗಳ ಸವಾರಿಗೆ 50 ರೂ ಹಾಗೂ 30 ನಿಮಿಷಗಳ ಸವಾರಿಗೆ 100 ರೂಪಾಯಿ ಪ್ರವೇಶ ಶುಲ್ಕ ದರವಾಗಿರುತ್ತದೆ. ಬೋಟ್ ಕ್ಲಬ್ ನ ಪ್ರದೇಶವು ಸುತ್ತಲೂ ಸುಂದರವಾದ ಉದ್ಯಾನವನ ಮತ್ತು ನೀರಿನ ಕಾರಂಜಿಗಳಿಂದ ಸುತ್ತುವರಿದಿದ್ದರಿಂಡ ಇದೊಂದು ವಾರಾಂತ್ಯದಲ್ಲಿ ಛಾಯಾಗ್ರಾಹಣ ಕೂಡಾ ಮಾಡಬಹುದಾದ ಒಂದು ಉತ್ತಮವಾದ ಸ್ಥಳವಾಗಿದೆ.

ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?

ಇಲ್ಲಿಯವರೆಗೆ ಇಲ್ಲಿ ಸುಮಾರು 40 ರೋಯಿಂಗ್ ದೋಣಿಗಳಿವೆ. ಆದುದರಿಂದ ನೀವು ನಿಮ್ಮ ಸಮಯವನ್ನು ಕುಟುಂಬ ಹಾಗೂ ಮಕ್ಕಳ ಜೊತೆಗೆ ಕಳೆಯಲು ಯಾವುದಾದರೂ ಸ್ಥಳವನ್ನು ನೋಡುತ್ತಿದ್ದಲ್ಲಿ ಈ ದೋಣಿವಿಹಾರದ ಸ್ಥಳವು ನಿಮಗೆ ಖಂಡಿತವಾಗಿಯೂ ಆಸಕ್ತಿದಾಯಕೆ ಎನಿಸುವುದರಲ್ಲಿ ಸಂಶಯವೇ ಇಲ್ಲ.

ನೈನಿ ಸರೋವರ

ನೈನಿ ಸರೋವರ

ಮುಖ್ಯ ನಗರದಿಂದ ಸುಮಾರು 19 ಕಿ.ಮೀ ಅಂತರದಲ್ಲಿರುವ ಈ ಸ್ಥಳವು ಮೋಡೆಲ್ ಟೌನ್ ನ ಮೊದಲನೇ ಹಂತದಲ್ಲಿದೆ. ನೈನಿ ಸರೋವರವು ಶಿಕಾರಾ ಸವಾರಿಯ ಸೌಂದರ್ಯತೆಯ ಅನುಭವವನ್ನು ಪಡೆಯಬಹುದಾದ ಭಾರತದ ಬೋಟಿಂಗ್ ಸ್ಥಳಗಳಲ್ಲಿ ಒಂದಾಗಿದೆ.

ಶಿಖಾರಾ ಎಂದರೆ ಇವು ಉದ್ದನೆಯ ಮರದ ದೋಣಿಯಾಗಿರುತ್ತದೆ ಇದನ್ನು ಮೊದಲು ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಹಿಡಿಯಲಾಯಿತು. ನೀವು ಈ ಸುಂದರ ಸವಾರಿಯ ಅನುಭವ ಪಡೆಯಲು ಹಾಗೂ ಇಲ್ಲಿಯ ಶಾಂತಿಯುತವಾದ ನೀರಿನಲ್ಲಿ ಮತ್ತು ತಂಪಾದ ಗಾಳಿಯಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳಲು ಬಯಸುವುದಿಲ್ಲವೆ?

ಇದು ನಿಮ್ಮ ಮಕ್ಕಳಿಗೆ ಪ್ರಕೃತಿಯ ಮಧುರತೆಯಲ್ಲಿ ತೊಡಗಿಸಿಕೊಳ್ಳಲು ಉತ್ತಮವಾದ ಸ್ಥಳವಾಗಿದೆ. ಶೀಕಾರಾ ಸವಾರಿಗಾಗಿ ಇಲ್ಲಿ ಪ್ರತಿವ್ಯಕ್ತಿಗೆ 120 ರೂಪಾಯಿಗಳು ಮತ್ತು ತುಳಿಯುವ ದೋಣಿಗೆ ಕೇವಲ 50 ರೂಪಾಯಿಗಳು ಇವು ಇಲ್ಲಿಯ ಪ್ರವೇಶ ಶುಲ್ಕವಾಗಿರುತ್ತದೆ. ಆದುದರಿಂದ ನೈನಿ ಲೇಕ್ ಗೆ ಈ ವಾರಾಂತ್ಯದಲ್ಲಿ ಹೋಗಿ ಅಲ್ಲಿಯ ಪ್ರಶಾಂತವಾದ ಪರಿಸರದಲ್ಲಿ ತೊಡಗಿಸಿಕೊಂಡರೆ ಹೇಗಿರಬಹುದು?

 ಡಮ್ ಡಮಾ ಸರೋವರ

ಡಮ್ ಡಮಾ ಸರೋವರ

ಡಮ್ ಡಮಾ ಸರೋವರವೂ ಕೂಡಾ ಪ್ರಮುಖ ನಗರದಿಂದ ಸುಮಾರು 60 ಕಿ.ಮೀ ದೂರದ ಹರಿಯಾಣದ ಗುರೆಗಾಂವ್ ಜಿಲ್ಲೆಯಲ್ಲಿದೆ. ಇದು ದೇಶದ ರಾಜಧಾನಿಯ ಸರಹದ್ದಿನಲ್ಲಿಯೇ ಬರುವುದರಿಂದ ಇದು ದೆಹಲಿಯ ನಿವಾಸಿಗಳಿಂದ ಹೆಚ್ಚಾಗಿ ವಾರಾಂತ್ಯಗಳಲ್ಲಿ ಭೇಟಿ ನೀಡಲ್ಪಡುತ್ತದೆ.

ಹಸಿರು ಸಸ್ಯ ಮತ್ತು ಆಹ್ಲಾದಕರವಾದ ವಾತಾವರಣಗಳಿಂದ ಸುತ್ತುವರೆದಿರುವ ಡಮ್ ಡಮಾ ಸರೋವರವು ಈ ಪ್ರಾಂತ್ಯದಲ್ಲಿ ಹೆಚ್ಚಾಗಿ ಭೇಟಿ ನೀಡಲ್ಪಡುವ ಸರೋವರಗಳಲ್ಲೊಂದಾಗಿದೆ. ಇಲ್ಲಿಯ ಪ್ರಶಾಂತವಾದ ನೀರಿನಲ್ಲಿ ಬೋಟಿಂಗ್ ಮಾಡಿ ಆನಂದಿಸುವುದಲ್ಲದೆ ನೀವು ಇಲ್ಲಿ ಅನೇಕ ಸ್ಥಳೀಯ ಮತ್ತು ವಲಸೆ ಬಂದಿರುವ ಸರೋವರದ ಸುತ್ತಲೂ ಕಾಣ ಸಿಗುವ ಪಕ್ಷಿಗಳನ್ನು ನಿಮ್ಮ ಕ್ಯಾಮಾರಾದಲ್ಲಿ ಸೆರೆಹಿಡಿಯ ಬಹುದಾಗಿದೆ.

ಈ ಸರೋವರವು ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿರುವುದರಿಂದ ಇಲ್ಲಿಯ ಸಂದರ್ಶಕರಿಗೆ ಇದು ನಯನ ಮನೋಹರ ದೃಶ್ಯವನ್ನು ಒದಗಿಸುತ್ತದೆ. ನೀವು ನಿಮ್ಮ ವಾರಾಂತ್ಯದ ಸಮಯವನ್ನು ದೆಹಲಿಯ ಗಡಿಯೊಳಗಿನ ಪ್ರಶಾಂತವಾದ ಪರಿಸರದ ಮಧ್ಯೆ ಕಳೆಯಲು ಬಯಸಿದರೆ ಡಮ್ ಡಮಾ ಸರೋವರವು ನೀವು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ.

ಸಂಜಯ್ ಲೇಖ್

ಸಂಜಯ್ ಲೇಖ್


ಈ ವಾರಾಂತ್ಯದಲ್ಲಿ ನೀವು ಆಯ್ಕೆ ಮಾಡಬಹುದಾದ ಒಂದು ಉತ್ತಮವಾದ ಸರೋವರ ಸಂಜಯ್ ಲೇಕ್ ಆಗಿದ್ದು ಇದು ದೆಹಲಿಯ ತ್ರಿಲೋಕ್ ಪುರಿ ಪ್ರಾಂತ್ಯದಲ್ಲಿದೆ ಇದು ಸುಂದರವಾದ ಕಾಡಿನಲ್ಲಿರುವ ಒಂದು ಕೃತಕವಾದ ಸರೋವರವಾಗಿದ್ದು ಇದು ಸಾರ್ವಜನಿಕರಿಗಾಗಿ 1982 ರಲ್ಲಿ ತೆರೆಯಲ್ಪಟ್ಟಿತು.

ಈ ಸರೋವರವು ಸುಂದರವಾದ ಸಸ್ಯಗಳು ಮತ್ತು ಸುಂದರವಾದ ಹುಲ್ಲುಗಾವಲುಗಳಿಂದ ಸುತ್ತುವರಿಯಲ್ಪಟ್ಟಿದೆ ಆದುದರಿಂದ ಅನೇಕ ಸಮಯಗಳಿಂದಲೂ ಸ್ಥಳೀಯರಲ್ಲಿ ಒಂದು ಜನಪ್ರಿಯ ಪಿಕ್ನಿಕ್ ತಾಣವೆನಿಸಿದೆ.

ಈ ಪ್ರದೇಶ ಮತ್ತು ಇದರ ಸುತ್ತಮುತ್ತಲು ಹಲವಾರು ವನ್ಯಜೀವಿಗಳನ್ನು ಹೊಂದಿದ್ದು ಛಾಯಾಗ್ರಹಣ ಮಾಡಲು ಸೂಕ್ತವಾಗಿದೆ ಅಲ್ಲದೆ ಇಲ್ಲಿ ಸುಮಾರು ನೂರು ಬಗೆಯ ಜಾತಿಯ ಪಕ್ಷಿಗಳಿರುವುದರಿಂದ ಈ ಸ್ಥಳವು ಪಕ್ಷಿ ವೀಕ್ಷಣೆಗೂ ಸೂಕ್ತವಾದುದಾಗಿದೆ.

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದ ಎಲ್ಲಿದೆ ಗೊತ್ತಾ?ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದ ಎಲ್ಲಿದೆ ಗೊತ್ತಾ?

ಇದು ದೆಹಲಿಯ ಒಂದು ಪರಿಪೂರ್ಣವಾದ ಸ್ಥಳವಾಗಿದ್ದು ನಿಮ್ಮ ಕುಟುಂಬದವರೊಂದಿಗೆ ನಿಮ್ಮ ವಾರಾಂತ್ಯವನ್ನು ಕಳೆಯಲು ಅವಿಸ್ಮರಣೀಯವಾದ ಸ್ಥಳವೆನಿಸುವುದಿಲ್ಲವೆ? ಹೌದು ಎಂದಾದಲ್ಲಿ ಇನ್ನು ತಡ ಏಕೆ? ಆದಷ್ಟು ಬೇಗ ಸಂಜಯ್ ಲೇಕ್ ಗೆ ನಿಮ್ಮ ಪ್ರವಾಸ ಹೂಡಲು ತಯಾರಾಗಿ.

ಭಲ್ಸ್ವಾ ಸರೋವರ

ಭಲ್ಸ್ವಾ ಸರೋವರ


ನೀವು ಬೋಟಿಂಗ್ ಮಾಡಬಹುದಾದ ಇನ್ನೊಂದು ಸುಂದರ ಸರೋವರವೆಂದರೆ ಅದು ಭಲ್ಸ್ವಾ ಸರೋವರ. ಇದು ದೆಹಲಿಯ ಪ್ರಮುಖ ನಗರದಿಂದ 12 ಕಿ.ಮೀ ದೂರದಲ್ಲಿರುವ ಜಹಾಂಗಿರಾಪುರ ಪ್ರಾಂತ್ಯದಲ್ಲಿದೆ. ಮತ್ತು ಇದು ಸಾಮಾನ್ಯ ದೋಣಿ ವಿಹಾರದ ಹೊರತಾಗಿ ತನ್ನ ಸಂದರ್ಶಕರಿಗೆ ಚಟುವಟಿಕೆಗಳಾದ ಕಾಯಾಕಿಂಗ್, ಮತ್ತು ಕೆನೋಯಿಂಗ್ ನಂತಹ ಕೆಲವು ಜಲಕ್ರೀಡೆಯನ್ನು ಒದಗಿಸುವ ಕೆಲವೆ ಕೆಲವು ನಗರದ ಸರೋವರಗಳಲ್ಲಿ ಒಂದಾಗಿದೆ.
ನೀವು ಜಲಕ್ರೀಡೆಯ ಸಾಹಸಗಳನ್ನು ಮೆಚ್ಚುವವರಾಗಿದ್ದಲ್ಲಿ ನೀವು ಇಲ್ಲಿ ಹೋವರ್ ಕ್ರಾಫ್ಟ್ಸ್ ಮತ್ತು ವಾಟರ್ ಸ್ಕೂಟರ್ ನಂತಹ ಚಟುವಟಿಕೆಗಳನ್ನೂ ಕೂಡಾ ಮಾಡಬಹುದಾಗಿದೆ. ಈ ಸರೋವರದ ಮತ್ತು ಸುತ್ತ ಮುತ್ತಲಿನ ಪ್ರದೇಶವು ಸುಂದರ ಜಾತಿಯ ಪಕ್ಷಿಗಳನ್ನು ಹೊಂದಿವೆ.

ಅವುಗಳಲ್ಲಿ ಕೊಕ್ಕರೆಗಳು ಮತ್ತು ಕ್ರೇನ್ ಗಳು ಮುಖ್ಯವಾಗಿ ಕಾಣಸಿಗುತ್ತವೆ. ಈ ಸಮ್ಮೋಹನಗೊಳಿಸುವ ಸರೋವರವು ಕುದುರೆ ಲಾಳದ ಆಕಾರದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮನ್ನು ನೀವು ಈ ಸುಂದರವಾದ ಅದ್ಬುತದಲ್ಲಿ ತೊಡಗಿಸಿಕೊಂಡು ನಿಮ್ಮ ಮೈ ಮನಸ್ಸು ಮತ್ತು ಆತ್ಮವನ್ನು ಈ ವಾರಾಂತ್ಯದಲ್ಲಿ ತೃಪ್ತಿಪಡಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X