ಸಾಮಾನ್ಯವಾಗಿ ಚಿತ್ರ ತಾರೆಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಲಕ್ಷ ಲಕ್ಷ ಜನರ ಮನಗೆದ್ದ ತಾರೆಗಳು ಬೆಳ್ಳಿ ಪರದೆಯ ಮೇಲೆ ಬಂದರೆ ಸಾಕು ಕಳೆದುಕೊಂಡ ಬಹು ಪ್ರೀತಿಯ ವಸ್ತು ಮತ್ತೆ ದೊರಕಿದಷ್ಟೆ ಆನಂದವಾಗುತ್ತದೆ. ಇನ್ನೂ ನಿಜ ಜೀವನದಲ್ಲಿ ತಾರೆಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ಸಾಕು ಜೀವನವೆ ಸಾರ್ಥಕವಾಯಿತೆಂಬ ಭಾವವಿರುವ ಸಾಕಷ್ಟು ಅಭಿಮಾನಿಗಳೂ ನಮ್ಮಲ್ಲಿದ್ದಾರೆ. ಪ್ರಖ್ಯಾತ ಚಿತ್ರ ತಾರೆಗಳ ಹೆಸರು, ಮುಖ ಪರಿಚಯ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದಾದರೂ ಅವರು ಹುಟ್ಟಿದ್ದ ಊರುಗಳ ಹೆಸರು ಖಂಡಿತವಾಗಿಯೂ ನಮ್ಮಲ್ಲಿ ಬಹುತೇಕರಿಗೆ ಗೊತ್ತಿರುವುದಿಲ್ಲ.
ಹಾಗಾದರೆ, ಈ ಲೇಖನದ ಮೂಲಕ ಪ್ರಾದೇಶಿಕ ಹಾಗು ದೇಶದ ಅಗ್ರಗಣ್ಯ, ಪ್ರಖ್ಯಾತ ಚಿತ್ರ ತಾರೆಗಳ ಹುಟ್ಟುರುಗಳ ಕುರಿತು ತಿಳಿಯೋಣ. ಈ ಊರುಗಳಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ನಿಮ್ಮೆ ನೆಚ್ಚಿನ ಈ ತಾರೆಗಳ ಹುಟ್ಟೂರುಗಳ ಪ್ರವಾಸ ಒಮ್ಮೆಯಾದರು ಮಾಡಿ ಅಲ್ಲಿನ ಪರಿಸರದ, ಇತರೆ ಆಕರ್ಷಣೆಗಳ ಮಜವನ್ನು ಜಾಲಿಯಾಗಿ ಅನುಭವಿಸಿ.
ಸೂಚನೆ: ಹಲವು ತಾರೆಗಳು ಒಂದೆ ಸ್ಥಳ ಅಥವಾ ಪಟ್ಟಣದಲ್ಲಿ ಹುಟ್ಟಿರುವುದರಿಂದ ಹೆಚ್ಚು ಅನುಭವ ಹಾಗು ಜನಪ್ರಿಯತೆಯುಳ್ಳ ತಾರೆಯನ್ನು ಮಾತ್ರ ಆಯ್ಕೆ ಮಾಡಲಾಗಿದೆ.

ಡಾ. ರಾಜಕುಮಾರ್:
ಕರ್ನಾಟಕ ಚಿತ್ರರಂಗದ ಅತ್ಯುನ್ನತ, ಎಂದೂ ಅಳಿಸಲಾಗದ ತಾರೆ ಡಾ. ರಾಜಕುಮಾರ್ ಎಂದರೆ ಯಾರಿಗೆ ತಾನೆ ಗೊತ್ತಿಲ್ಲ? ಹೌದು ಪ್ರೀತಿಯಿಂದ ಅಣ್ಣಾವ್ರು ಎಂತಲೆ ಕರೆಸಿಕೊಳ್ಳುತ್ತಿದ್ದ ದಿ. ಡಾ.ರಾಜಕುಮಾರ್ ಅವರು ಹುಟ್ಟಿದ್ದು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿರುವ ಗಾಜನೂರು ಎಂಬ ಹಳ್ಳಿಯಲ್ಲಿ. ಪ್ರಸ್ತುತ ಇದು ತಮಿಳುನಾಡಿನ ರಾಜ್ಯವಾಗಿದ್ದರೂ ಹೆಚ್ಚಾಗಿ ಕನ್ನಡ ಭಾಷೆಯು ಬಳಸಲ್ಪಡುತ್ತದೆ. ಇದರ ಬಳಿ ಸತ್ಯಮಂಗಲಂ ಅಭಯಾರಣ್ಯವನ್ನು ಕಾಣಬಹುದು. ಈರೋಡ್ ನ ಚಿತ್ರ.
ಚಿತ್ರಕೃಪೆ: Magentic Manifestations

ಡಾ.ವಿಷ್ಣುವರ್ಧನ್:
ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ ಎಂದೆ ಪ್ರಖ್ಯಾತರಾಗಿದ್ದ ಡಾ.ವಿಷ್ಣುವರ್ಧನ್ (ಮೂಲ ಹೆಸರು ಸಂಪತ್ ಕುಮಾರ್ )ಅವರು ಹುಟ್ಟಿದ್ದು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ. ಮೈಸೂರು ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದ್ದು ಹಲವು ಗಮ್ಯ ಸ್ಥಳಗಳನ್ನು ಇಲ್ಲಿ ಕಾಣಬಹುದು. ಮೈಸೂರಿನ ಚಿತ್ರಗಳನ್ನು ಇಲ್ಲಿ ವೀಕ್ಷಿಸಿ.
ಚಿತ್ರಕೃಪೆ: Roshan381

ಡಾ.ಅಂಬರೀಶ್:
ರೆಬೆಲ್ ಸ್ಟಾರ್, ಮಂಡ್ಯದ ಗಂಡು ಕನ್ನಡ ಚಿತ್ರರಂಗದ ಪ್ರಮುಖ ತಾರೆಗಳಲ್ಲೊಬ್ಬರಾದ ಅಂಬರೀಶ್ ರವರು ಹುಟ್ಟಿದ್ದು ಕರ್ನಾಟಕದ ಸಕ್ಕರೆ ನಾಡು ಮಂಡ್ಯದಲ್ಲಿ. ಮಂಡ್ಯವು ಕರ್ನಾಟಕದಲ್ಲೆ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆಯಾಗಿದ್ದು ಹಲವು ಧಾರ್ಮಿಕ ಕ್ಷೇತ್ರಗಳಿಗೂ ಮನೆಯಾಗಿದೆ.
ಚಿತ್ರಕೃಪೆ: Prasanth Chandran

ಶಂಕರನಾಗ್:
ಬದುಕಿದ್ದ ಅಲ್ಪಾಯುಧಿಯಲ್ಲೆ ಕನ್ನಡ ಚಿತ್ರರಂಗದ ಮಹೋನ್ನತ ಅಭಿವೃದ್ಧಿಗೆ ಕಾರಣರಾದ, ಬಹುತೇಕ ಎಲ್ಲ ಆಟೋಗಳಲ್ಲಿ ರಾರಾಜಿಸುವ ಆಟೊ ರಾಜಾ, ಕರಾಟೆ ಕಿಂಗ್ ಶಂಕರ್ ನಾಗರಕಟ್ಟೆ ಅರ್ಥಾತ್ ಶಂಕರನಾಗ್ ಅವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಹಳ್ಳಿಯಲ್ಲಿ. ಪಶ್ಚಿಮ ಕರಾವಳಿ ತೀರದ ಉತ್ತರ ಕನ್ನಡ ಜಿಲ್ಲೆಯು ಹಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳ ನೆಲೆಯಾಗಿದೆ.
ಚಿತ್ರಕೃಪೆ: Rane.abhijeet

ವಿ.ರವಿಚಂದ್ರನ್:
ಕ್ರೇಜಿ ಸ್ಟಾರ್ ಎಂದು ನಾಮಾಂಕಿತವನ್ನು ಹೊಂದಿರುವ ವಿ.ರವಿಚಂದ್ರನ್ ಅವರು ಹುಟ್ಟಿದ್ದು ತಮಿಳುನಾಡಿನ ಕೋಟೆ ನಗರಿ ವೆಲ್ಲೂರಿನಲ್ಲಿ. ಪಾಲಾರ್ ನದಿ ತಟದಲ್ಲಿ ನೆಲೆಸಿರುವ ವೆಲ್ಲೂರು ಪ್ರಸಿದ್ಧ ಐತಿಹಾಸಿಕ ಪ್ರವಾಸಿ ತಾಣವಾಗಿದ್ದು ಚೆನ್ನೈನಿಂದ ಪಶ್ಚಿಮಕ್ಕೆ ಸುಮಾರು 145 ಕಿ.ಮೀ ದೂರದಲ್ಲಿದೆ.
ಚಿತ್ರಕೃಪೆ: Chandrachoodan Gopalakrishnan

ಸುದೀಪ್:
ಕನ್ನಡ ಚಿತ್ರರಂಗದಲ್ಲಿ ಕಿಚ್ಚ ನೆಂದೆ ಖ್ಯಾತರಾದ ಸುದೀಪ್ ಅವರು ಹುಟ್ಟಿದ್ದು ಕರ್ನಾಟಕದ ಮಲೆನಾಡಿನ ಭಾಗವಾದ ಶಿವಮೊಗ್ಗದಲ್ಲಿ. ಪ್ರವಾಸಿ ದೃಷ್ಟಿಯಿಂದ ಶಿವಮೊಗ್ಗವು ಕರ್ನಾಟಕದ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: Manjeshpv

ಉಪೇಂದ್ರ:
ಉಪ್ಪಿ ಎಂದೆ ಖ್ಯಾತರಾದ ಉಪೇಂದ್ರರವರು ಹುಟ್ಟಿದ್ದು ಕರ್ನಾಟಕದ ಕುಂದಾಪುರ ಪಟ್ಟಣದಲ್ಲಿ. ಈ ಪಟ್ಟಣವು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿ ನೆಲೆಸಿದೆ.
ಚಿತ್ರಕೃಪೆ: Irrigator

ರಜನಿಕಾಂತ್:
ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೂ ಹೆಸರುವಾಸಿಯಾಗಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹುಟ್ಟಿದ್ದು ಐಟಿ ಸಿಟಿ ಬೆಂಗಳೂರಿನಲ್ಲಿ. ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಬೆಂಗಳೂರಿನ ಚಿತ್ರಗಳನ್ನು ಇಲ್ಲಿ ಸವಿಯಿರಿ.

ಅಮಿತಾಭ್ ಬಚ್ಚನ್:
ಬಾಲಿವುಡ್ ಶೆಹನ್ಶಾಹ್ ಹಾಗು ಹಿಂದಿ ಚಿತ್ರರಂಗದ ಅಮೋಘ ತಾರೆ ಅಮಿತಾಭ್ ಬಚ್ಚನ್ ಅವರು ಹುಟ್ಟಿದ್ದು ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ. ಪ್ರತಿ 12 ವರುಷಗಳಿಗೊಮ್ಮೆ ಆಯೋಜನೆಗೊಳ್ಳುವ ಕುಂಭ ಮೇಳದ ಪ್ರಮುಖ ತಾಣವಾಗಿರುವ ತ್ರಿವೇಣಿ ಸಂಗಮದ ಅಲಹಾಬಾದ್ ಒಂದು ಪ್ರಖ್ಯಾತ ಧಾರ್ಮಿಕ ಕ್ಷೇತ್ರವೂ ಹೌದು.

ಸಲ್ಮಾನ್ ಖಾನ್:
ದಾಖಲೆ ನಿರ್ಮಿಸಿದ್ದ ಹಿಂದಿ ಚಲನ ಚಿತ್ರ ದಬ್ಬಂಗ್ ನಿಂದ ಹೆಚ್ಚು ಜನಪ್ರಿಯರಾಗಿರುವ ದಬ್ಬಂಗ್ ಖಾನ್ ಅರ್ಥಾತ್ ಅಬ್ದುಲ್ ರಶಿದ್ ಸಲೀಮ್ ಸಲ್ಮಾನ್ ಖಾನ್ ಹುಟ್ಟಿದ್ದು ಮಧ್ಯ ಪ್ರದೇಶ ರಾಜ್ಯದ ದೊಡ್ಡ ಹಾಗು ವಾಣಿಜ್ಯ ನಗರ ಇಂದೋರ್ ನಲ್ಲಿ. ಪ್ರವಾಸಿ ಆಕರ್ಷಣೆ ಇಂದೋರ್ ನ ಪ್ರವಾಸ ಇಲ್ಲಿ ಮಾಡಿ.
ಚಿತ್ರಕೃಪೆ

ಶಾರೂಕ್ ಖಾನ್:
ಬಾಲಿವುಡ್ ಕಾ ಬಾದಶಾಹ್ ಎಂದೆ ಪ್ರಖ್ಯಾತರಾದ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಶಾರೂಕ್ ಖಾನ್ ಹುಟ್ಟಿದ್ದು ಭಾರತದ ಹೃದಯ ಹಾಗು ರಾಜಧಾನಿಯಾದ ದೆಹಲಿಯಲ್ಲಿ. ದೆಹಲಿಯ ಸುಮಧುರವಾದ ಚಿತ್ರಗಳ ಪ್ರವಾಸವನ್ನು ಇಲ್ಲಿ ಮಾಡಿ.

ಆಮೀರ್ ಖಾನ್:
ಮುಂಬೈ ಭಾರತದ ಆರ್ಥಿಕ ರಾಜಧಾನಿಯಾಗಿರುವುದು ಅಲ್ಲದೆ ಹಿಂದಿ ಚಿತ್ರರಂಗದ ಕೇಂದ್ರ ಸ್ಥಳವೂ ಹೌದು. ಪ್ರವಾಸಿ ಪ್ರಖ್ಯಾತಿಯ ಮುಂಬೈ ಹಲವು ಬಾಲಿವುಡ್ ತಾರೆಗಳ ಜನ್ಮ ಸ್ಥಳವೂ ಆಗಿದೆ. ಅವರಲ್ಲೊಬ್ಬ ಪ್ರಮುಖ ತಾರೆಯಾದ ಆಮೀರ್ ಖಾನ್ ಹುಟ್ಟಿದ್ದು ಮುಂಬೈನಲ್ಲೆ.
ಚಿತ್ರಕೃಪೆ: Jasvipul Chawla

ಅಕ್ಷಯ ಕುಮಾರ್:
ಹಿಂದಿ ಚಿತ್ರರಂಗದ ಪ್ರಸಿದ್ಧ ಖಿಲಾಡಿ ಅಕ್ಷಯ ಕುಮಾರ್ ಅವರ ಮೂಲ ಹೆಸರು ರಾಜೀವ್ ಹರಿ ಓಂ ಭಾಟಿಯಾ ಹಾಗು ಇವರು ಜನಿಸಿದ್ದು ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿ. ಭಾರತ ಹಾಗು ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ ವಾಘಾ ಬಾರ್ಡರ್ ಒಂದು ಪ್ರವಾಸಿ ಆಕರ್ಷಣೆಯಾಗಿದ್ದು ಅಮೃತಸರ್ ನಲ್ಲಿ ಇದನ್ನು ಕಾಣಬಹುದಾಗಿದೆ.


Click it and Unblock the Notifications



















