Search
  • Follow NativePlanet
Share
» »ಬಿಜಾಪುರ - ಶ್ರೀಮಂತ ಪರಂಪರೆಗೆ ಒಂದು ದರ್ಪಣ

ಬಿಜಾಪುರ - ಶ್ರೀಮಂತ ಪರಂಪರೆಗೆ ಒಂದು ದರ್ಪಣ

ಬಿಜಾಪುರವು ಹಿಂದಿನ ಕಾಲದ ಗತವೈಭವಕ್ಕೆ ಒಂದು ಕನ್ನಡಿ ಎನ್ನಬಹುದಾಗಿದೆ. ಈ ನಗರದ ವಾಸ್ತುಶಿಲ್ಪ ಮತ್ತು ಅಸಂಖ್ಯಾತ ಸ್ಮಾರಕಗಳು ಮತ್ತು ಅದರಲ್ಲಿಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಕಥೆಯನ್ನು ಪ್ರವಾಸಿಗರಿಗೆ ಸಾರುತ್ತದೆ. ಬೆಂಗಳೂರಿನಿಂದ 521 ಕಿಮೀ ದೂರದಲ್ಲಿರುವ ಈ ಸ್ಥಳವು ಇಂದು ಸಮಯದ ಆಗುಹೋಗುಗಳ ಕಾರಣದಿಂದಾಗಿ ಬಿಜಾಪುರದ ವೈಭವವನ್ನು ಕಸಿದುಕೊಂಡಿರಬಹುದು, ಆದರೆ ಅದರ ಮಸೀದಿಗಳು, ಮಿನಾರುಗಳು ಮತ್ತು ಕೋಟೆಗಳು ಇನ್ನೂ ಭವ್ಯವಾದ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿವೆ.

bijapur1

ಈ ಪ್ರದೇಶದ ಇತಿಹಾಸ ಮತ್ತು ಇತ್ಯಾದಿಗಳು

ಬಿಜಾಪುರದ ಇತಿಹಾಸದ ಕಡೆಗೆ ಇಣುಕಿದರೆ ಇದು ಇಲ್ಲಿಯ ಗತಕಾಲದ ಅದ್ಬುತ ಇತಿಹಾಸದ ಬಗ್ಗೆ ಹಾಗೂ ಆದಿಲ್ ಶಾ ವಂಶದ ಇತಿಹಾಸವನ್ನು ಹೇಳುತ್ತದೆ. ಯೂಸುಫ್ ಆದಿಲ್ ಷಾ ಅವರು 1490 ರಲ್ಲಿ ಸ್ವತಂತ್ರ ನಗರವಾದ ಬಿಜಾಪುರವನ್ನು ಸ್ಥಾಪಿಸಿದರು ಮತ್ತು ಕೆಲವು ಭವ್ಯವಾದ ವಾಸ್ತುಶಿಲ್ಪವನ್ನು ನಿರ್ಮಿಸುವುದರ ಮೂಲಕ ತಮ್ಮ ಆಳ್ವಿಕೆಯ ಕಾಲವನ್ನು ದಿವ್ಯ ಪರಂಪರೆಯ ಸಾಲಿಗೆ ಸೇರಿಸಿದರು.

bijapur21

ಬಿಜಾಪುರದಲ್ಲಿರುವ ಪ್ರವಾಸಿ ತಾಣಗಳು

ಬಿಜಾಪುರದ ಹೆಸರು ಹೇಳಿದ ಕೂಡಲೇ ಮನಸಿಗೆ ಬರುವ ಮೊದಲ ಹೆಸರು ಗೋಲ್ ಗುಂಬಾಜ್ . ಆದಿಲ್ ಷಾನ ಸಮಾಧಿಯಾಗಿರುವ ಗೋಲ್ ಗುಂಬಾಜ್ ಒಂದು ಅತ್ಯಂತ ದೊಡ್ಡ ಸಮಾಧಿಯಾಗಿದ್ದು, ಬೆಸಿಲಿಕಾದ ಸೈಂಟ್ ಪೀಟರ್ಸ್ ನ ಸಮಾಧಿಯ ನಂತರ ಇದು ಗಾತ್ರದಲ್ಲಿ ಎರಡನೆ ಅತಿ ದೊಡ್ಡ ಸಮಾಧಿಯಾಗಿದೆ. ಇಲ್ಲಿಯ ಇತರ ಪ್ರಮುಖ ಸ್ಮಾರಕಗಳಲ್ಲಿ ವಿಶ್ವದ ಅತಿದೊಡ್ಡ ಮಧ್ಯಕಾಲೀನ ಫಿರಂಗಿಗಗಳನ್ನು ಒಳಗೊಂಡ ಸ್ಥಳಗಳಲ್ಲಿ ಒಂದಾದ ಮಲಿಕ್-ಎ-ಮೈದನ್, ಉಪ್ಲಿ ಬುರುಜ್‌ನ ಎತ್ತರದ ಗೋಪುರ ಮತ್ತು ಚಾಂದ್ ಬವ್ಡಿ ಇದು 20 ಮಿಲಿಯನ್ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ನಗರದ ಬೃಹತ್ ಟ್ಯಾಂಕ್ ಎನಿಸಿದೆ.

bijapur31

ನಗರವು ಪುರಾತನ ಕಾಲದ ಕೋಟೆಗಳು ಮತ್ತು ಸಮಾಧಿಗಳು, ಮಸೀದಿಗಳು ಮತ್ತು ಇತರ ರಚನೆಗಳೊಂದಿಗೆ ವಿಸ್ತಾರವಾದ ಅವಶೇಷಗಳನ್ನು ಹೊಂದಿದೆ. ಅಲ್ಲದೆ ಮೊಘಲ್ ಪ್ರಭಾವವು ಬಿಜಾಪುರಕ್ಕೆ ಮಾತ್ರ ಸೀಮಿತವಾಗಿರದೆ ಇದರ ಸಮೀಪದಲ್ಲಿರುವ ಐಹೊಳೆ, ಪಟ್ಟದಕಲ್ ಮತ್ತು ಬಾದಾಮಿಯ ಚಾಲುಕ್ಯ ದೇವಾಲಯಗಳಲ್ಲಿಯೂ ಕಂಡು ಬರುತ್ತದೆ.

ಬಿಜಾಪುರವನ್ನು ತಲುಪುವುದು ಹೇಗೆ?

ಬಿಜಾಪುರವು ದೇಶದ ಇತರ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಳಗಾವಿ, ಅಲ್ಲದೆ ಇಲ್ಲಿಂದ ಬೆಂಗಳೂರು ಮತ್ತು ಗೋವಾಗಳಿಗೂ ರೈಲುಗಳು ಓಡಾಡುತ್ತವೆ.

ಬಿಜಾಪುರಕ್ಕೆ ಭೇಟಿ ನೀಡಲು ಉತ್ತಮ ಸಮಯ

ಅಕ್ಟೋಬರ್ ನಿಂದ ಮಾರ್ಚ್ ಬಿಜಾಪುರದ ಸೌಂದರ್ಯವನ್ನು ಅನ್ವೇಷಿಸಲು ಸೂಕ್ತ ಸಮಯ.

FAQ's
  • ಬಿಜಾಪುರಕ್ಕೆ ಭೇಟಿ ನೀಡಲು ಉತ್ತಮ ಸಮಯ

    ಅಕ್ಟೋಬರ್ ನಿಂದ ಮಾರ್ಚ್ ಬಿಜಾಪುರದ ಸೌಂದರ್ಯವನ್ನು ಅನ್ವೇಷಿಸಲು ಸೂಕ್ತ ಸಮಯ.

  • ಬಿಜಾಪುರವನ್ನು ತಲುಪುವುದು ಹೇಗೆ?

    ಬಿಜಾಪುರವು ದೇಶದ ಇತರ ಭಾಗಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಳಗಾವಿ, ಅಲ್ಲದೆ ಇಲ್ಲಿಂದ ಬೆಂಗಳೂರು ಮತ್ತು ಗೋವಾಗಳಿಗೂ ರೈಲುಗಳು ಓಡಾಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X