Search
  • Follow NativePlanet
Share
» »ದೇಶದ ಅತ್ಯಂತ ದೊಡ್ಡ ಜಲಪಾತ ಯಾವುವು ಗೊತ್ತಾ?

ದೇಶದ ಅತ್ಯಂತ ದೊಡ್ಡ ಜಲಪಾತ ಯಾವುವು ಗೊತ್ತಾ?

By Manjula Balaraj Tantry

ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ.

ಜೋಗ್ ಜಲಪಾತ

ಜೋಗ್ ಜಲಪಾತ

Nikhilb239

ನೀವು ಭಾರತದ ಬಗ್ಗೆ ಯೋಚಿಸುವಾಗ ಅಗಾಧವಾದ ಜಲಪಾತದ ಚಿತ್ರವು ಮನಸ್ಸಿಗೆ ಬರದೇ ಇರಬಹುದು ಆದರೆ ಜೋಗ್ ಜಲಪಾತವು ದೇಶದ ಒಂದು ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದೆ. ಇದನ್ನು ಜೋಗ ಅಥವಾ ಗೇರು ಸೊಪ್ಪ ಜಲಪಾತ ಎಂದೂ ಕೂಡಾ ಕರೆಯಲಾಗುತ್ತದೆ. (ಜೋಗ ಎನ್ನುವುದು ಕನ್ನಡದ ಪದವಾಗಿದ್ದು, ಇದು "ಜಲಪಾತ" ಎಂದು ಅರ್ಥೈಸುತ್ತದೆ ಮತ್ತು ಗೇರುಸೊಪ್ಪ ಎನ್ನುವುದು ಸುತ್ತಲಿನ ಪ್ರದೇಶದ ಹೆಸರಾಗಿದೆ. ) ಈ ಧುಮ್ಮಿಕ್ಕಿ ಹರಿಯುವ ಜಲಪಾತವು ನಾಲ್ಕು ವಿಶಿಷ್ಟ ಕವಲುಗಳೊಂದಿಗೆ ಶರಾವತಿ ನದಿಯಿಂದ ವಿಭಜನೆಗೊಂಡು ಹರಿಯುತ್ತದೆ.

ರಾಜಾ, ರೋರರ್, ರಾಕೆಟ್, ರಾಣಿ

ರಾಜಾ, ರೋರರ್, ರಾಕೆಟ್, ರಾಣಿ

Love Nigam

ಈ ನಾಲ್ಕು ವಿಭಜನೆಗಳನ್ನು ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಎಂದು ಕರೆಯಲಾಗುತ್ತದೆ ಈ ಬಲಾಢ್ಯ ಜಲಪಾತಗಳು ದಟ್ಟವಾದ ಅರಣ್ಯ ಪ್ರದೇಶಗಳ ಮರಳುಗಲ್ಲಿನ ಬಂಡೆಗಳ ಮೇಲೆ ಯಾವುದೇ ಅಡಚಣೆ ಇಲ್ಲದೆ ಹರಿಯುತ್ತದೆ ಈ ನಾಲ್ಕು ಕವಲುಗಳಲ್ಲಿ ರಾಜಾ ಅತೀ ಎತ್ತರವಾದುದಾಗಿದೆ. ಹಾಗೆ ರಾಣಿಯು ಅತ್ಯಂತ ಶಾಂತಿಯುತವಾಗಿ ಹರಿಯುತ್ತದೆ ಮತ್ತು ರೋರರ್ ಅತೀ ಹೆಚ್ಚು ಸದ್ದು ಮಾಡಿಕೊಂಡು ಹರಿಯುತ್ತದೆ. ಮತ್ತು ರಾಕೆಟ್ ಹೆಸರೇ ಸೂಚಿಸುವಂತೆ ಜೆಟ್ ನ ತರಹ ಮೇಲಿಂದ ಬೀಳುತ್ತದೆ.

ವಿದ್ಯುಚ್ಚಕ್ತಿಗಾಗಿ ಬಳಸುತ್ತಿದ್ದರು

ವಿದ್ಯುಚ್ಚಕ್ತಿಗಾಗಿ ಬಳಸುತ್ತಿದ್ದರು

SajjadF

ಈ ಜಲಪಾತವು ಅತ್ಯಂತ ಶಕ್ತಿಶಾಲಿಯಾಗಿ ಹರಿಯುವುದರಿಂದ 1949 ರಲ್ಲಿ ಇದನ್ನು ವಿದ್ಯುಚ್ಚಕ್ತಿಗಾಗಿ ಬಳಸುತ್ತಿದ್ದರು ಇದು ಭಾರತದಲ್ಲಿನ ಅತ್ಯಂತ ದೊಡ್ಡ ಜಲ ವಿದ್ಯುತ್ ಕೇಂದ್ರಗಳಲ್ಲಿ ಒಂದಾಗಿದೆ. ದುರದೃಷ್ಟವಶಾತ್, ಮೇಲ್ಬಾಗದಲ್ಲಿಯ ಅಣೆಕಟ್ಟಿನಿಂದಾಗಿ ಅದರ ಹರಿವಿಗೆ ಅಡ್ಡಿಯಾಗುತ್ತಿತ್ತು

ಯಾವಾಗ ಹೋಗೋದು ಉತ್ತಮ

ಯಾವಾಗ ಹೋಗೋದು ಉತ್ತಮ

Thesuryajain

ಪ್ರವಾಸಿಗರು ಭಾರತದ ಮಳೆಗಾಲದ ಸಮಯದಲ್ಲಿ (ಆಗಸ್ಟ್ ನಿಂದ ಡಿಸೆಂಬರ್ವರೆಗೆ) ಭೇಟಿ ನೀಡಲು ಸೂಕ್ತ ಸಮಯವೆಂದು ಪರಿಗಣಿಸಲು ಬಯಸಬಹುದು. ಛಾಯಾಗ್ರಾಹಕರು ವಿಶೇಷವಾಗಿ ಸ್ಪಷ್ಟವಾದ , ಮಂಜಿನ -ಮುಕ್ತವಾದ ಛಾಯಾ ಚಿತ್ರಗಳನ್ನು ತೆಗೆದು ಆನಂದಿಸುತ್ತಾರೆ. ಮುಂಜಾನೆಯ ಸಮಯದಲ್ಲಿ ಇಲ್ಲಿ ಜನಸಂದಣಿ ಕಡಿಮೆ ಇರುವ ಸಮಯದಲ್ಲಿ ಭೇಟಿ ಕೊಡಬಹುದು ಮತ್ತು ಸಮಯದಲ್ಲಿ ಸೂರ್ಯನ ಕಿರಣಗಳು ಈ ಜಲಪಾತದ ಮೂಲಕ ಹಾದು ಹೋಗುವ ಸುಂದರ ನೋಟವನ್ನು ನೋಡಬಹುದಾಗಿದೆ.

1,600 ಮೆಟ್ಟಿಲುಗಳನ್ನು ಹತ್ತಬೇಕು

1,600 ಮೆಟ್ಟಿಲುಗಳನ್ನು ಹತ್ತಬೇಕು

Ramjchandran

ಜೋಗದ ಕೆಳಭಾಗಕ್ಕೆ ಹೋಗಲು ಪ್ರವಾಸಿಗರು ಈ ಸುಂದರವಾದ ದೃಶ್ಯವನ್ನು ನೋಡಲು ಅನೇಕ ಮಾರ್ಗಗಳಿಂದ ಇಲ್ಲಿಗೆ ತಲುಪುತ್ತಾರೆ. ಉದಾಹರಣೆಗೆ, ನೀವು ಅದ್ಭುತ ದೃಷ್ಟಿಕೋನವನ್ನು ನೋಡಲು ಸುಮಾರು 1,600 ಮೆಟ್ಟಿಲುಗಳನ್ನು ಹತ್ತಬೇಕಾಗುವುದು-ಮತ್ತು ಬಹುಶಃ ಈ ಜಾಗದಲ್ಲಿ ನೀರಿನ ಆವಿ ಮಳೆ ಬೀಳಬಹುದು. ಒಮ್ಮೆ ನೀವು ಜಲಪಾತದ ಕೆಳಭಾಗಕ್ಕೆ ತಲುಪಿದಲ್ಲಿ, ಇಲ್ಲಿಗೆ ಧುಮುಕುವ ಆಸೆಯಾಗುವುದು ಮತ್ತು ತಣ್ಣಗಿನ ಅನುಭವವುಂಟಾಗುವುದು. ಗೋಡೆಗಳ ಎರಡೂ ಬದಿಗಳಲ್ಲಿಯೂ ಮತ್ತು ಪಾರ್ಕಿಂಗ್ ಸ್ಥಳದಿಂದ ಅತ್ಯುತ್ತಮ ನಯನ ಮನೋಹರ ನೋಟಗಳನ್ನೂ ಸಹ ನೋಡಬಹುದಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

One of the peace maker

ಜೋಗ್ ಜಲಪಾತವನ್ನು ಭೇಟಿಕೊಡಲು ಪ್ರಯಾಣಿಕರು ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗದ ಗಡಿಯಲ್ಲಿ ಮತ್ತು ಉತ್ತರ ಕರ್ನಾಟಕ ದಲ್ಲಿ ಹಾದು ಹೋಗಬೇಕಾಗುತ್ತದೆ. ಈ ಜಲಪಾತವು ಹಚ್ಚ ಹಸಿರು ಕಾಡುಗಳ ಮಧ್ಯದಲ್ಲಿ ನೆಲೆಸಿದ್ದು, ಹತ್ತಿರದ ರೈಲು ನಿಲ್ದಾಣದಿಂದ ಸುಮಾರು 10 ಮೈಲುಗಳಷ್ಟು ದೂರದಲ್ಲಿದೆ ಮತ್ತು ಶಿವಮೊಗ್ಗದಿಂದ ಜೋಗ್ ಫಾಲ್ಸ್ ಗೆ ಹೋಗುವ ಹಲವಾರು ಬಸ್ಸುಗಳಿವೆ. ಪ್ರವಾಸಿಗರು ಹೆದ್ದಾರಿಯಿಂದ ಸುಲಭವಾಗಿ ಈ ಜಲಪಾತದ ಪ್ರದೇಶಕ್ಕೆ ಪ್ರವೇಶಿಸಬಹುದು. ನೀವು ವಿಮಾನ ಮಾರ್ಗದ ಮೂಲಕ ಭಾರತಕ್ಕೆ ಹೋಗಬೇಕಾದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಈ ಜಲಪಾತಕ್ಕೆ ಹತ್ತಿರವಾದುದಾಗಿದೆ. ಮತ್ತು ನೀವು ಇಲ್ಲಿಂದ ಬಾಡಿಗೆ ವಾಹನದ ಮೂಲಕ ಜೋಗ ಜಲಪಾತದ ಕಡೆಗೆ ಪ್ರಯಾಣ ಮಾಡಬಹುದು.

Read more about: india travel karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X