Search
  • Follow NativePlanet
Share
» »ಭೂತದ ಹಿನ್ನೆಲೆಯ ಭೂತತಂಕೆಟ್ಟು ಜಲಾಶಯ!

ಭೂತದ ಹಿನ್ನೆಲೆಯ ಭೂತತಂಕೆಟ್ಟು ಜಲಾಶಯ!

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಭೂತತಂಕೆಟ್ಟು ಜಲಾಶಯವು ರೋಚಕವಾದ ಭೂತಗಳ ಹಿನ್ನೆಲೆ ಹೊಂದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ

By Vijay

ಭವ್ಯ ಭಾರತದ ಒಡಲಿನಲ್ಲಿ ಅದೆಷ್ಟೋ ಇನ್ನೂ ಕೇಳಿರದ ಕಥೆಗಳು, ವಿವರಿಸಲಾಗದ ರಹಸ್ಯಗಳು, ವಿಸ್ಮಯಗೊಳಿಸುವ ಅಂಶಗಳು, ರಚನೆಗಳು ಹುದುಗಿವೆಯೋ ಏನೊ, ಆದರೆ ಅರಸಿ ಹೋದಂತೆ, ಅನ್ವೇಷಿಸ ಹೊರಟಂತೆ ಎಲ್ಲ ಸ್ಥಳಗಳಲ್ಲಿಯೂ ಕನಿಷ್ಠ ಒಂದಾದರೂ ವಿಚಿತ್ರ ಹಿನ್ನೆಲೆಯ ಸ್ಥಳಗಳು ದೊರಕುತ್ತಲೆ ಇರುತ್ತವೆ.

ಪ್ರಸ್ತುತ ಲೇಖನದಲ್ಲೂ ಸಹ ತಿಳಿಸಲಾದ ಜಲಾಶಯ ಕೇಂದ್ರವೊಂದು ತನ್ನ ಕುತೂಹಲಕರ ಹಿನ್ನೆಲೆಯಿಂದಾಗಿ ಸಾಕಷ್ಟು ಜನಪ್ರೀಯತೆಗಳಿಸಿದೆ. ಅಲ್ಲದೆ ಅದು ಹೇಳುವ ಕಥೆಗೆ ಪೂರಕವೆಂಬಂತೆ ಅಲ್ಲಿನ ಕಲ್ಲು ಬಂಡೆಗಳನ್ನು ನೋಡಿದಾಗ ಒಂದೊಮ್ಮೆ ಮನಸಿನಲ್ಲಿ ಅದು ಸತ್ಯವೆ ಆಗಿರಬಹುದೆಂದು ಅನಿಸದೆ ಇರಲಾರದು.

ಕೇರಳದಲ್ಲಿ ನೋಡಬೇಕಾದ ಜಲಾಶಯಗಳಿವು!

ಹಾಗಾದರೆ ಆ ಜಲಾಶಯ ಯಾವುದು? ಎಲ್ಲಿದೆ? ಅದರ ಹಿನ್ನೆಲೆ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ಅಲ್ಲದೆ ಇಲ್ಲಿ ಸುಂದರವಾದ ಪಕ್ಷ್ಧಾಮವೂ ಇದೆ. ಇದರೆ ವಿಶೇಷತೆ ಎಂದರೆ ಖಂಡಿತವಾಗಿಯೂ ನೀವು ಎಲ್ಲಿಯೂ ಸಾಮಾನ್ಯವಾಗಿ ನೋಡಿರದ ವೈವಿಧ್ಯಮಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಇದಕ್ಕೊಮ್ಮೆ ಭೇಟಿ ನೀಡಲೇಬೇಕು ಕಣ್ರಿ!

ಪ್ರಸಿದ್ಧ ತಾಣ

ಪ್ರಸಿದ್ಧ ತಾಣ

ಇದೊಂದು ಪ್ರಸಿದ್ಧ ಜಲಾಶಯ ಹಾಗೂ ಜನಪ್ರೀಯ ಪ್ರವಾಸಿ ತಾಣ. ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಲಾಶಯ ತಾಣಕ್ಕೆ ಭೇಟಿ ನೀಡುತ್ತಾರೆ ಹಾಗೂ ಇದರ ಹಿನ್ನೆಲೆಗೆ ಸಾಕ್ಷಿಯಾಗಿ ನಿಂತಿರುವ ನೈಸರ್ಗಿಕ ಆಣಕಟ್ಟನ್ನು ನೋಡಿ ಆನಂದಿಸುತ್ತಾರೆ.

ಚಿತ್ರಕೃಪೆ: Riyas Rasheed Ravuthar

ಆಕರ್ಷಣೆಗಳು

ಆಕರ್ಷಣೆಗಳು

ಅಷ್ಟೆ ಅಲ್ಲ, ಇದರ ಬಳಿಯಲ್ಲೆ ಅದ್ಭುತವಾದ ಪಕ್ಷಿಧಾಮವೊಂದಿದೆ. ಖಂಡಿತವಾಗಿಯೂ ಈ ಪಕ್ಷಿಧಾಮಕ್ಕೆ ಭೇಟಿ ನೀಡಿದರೆ ನಿಮಗೆ ನಿರಾಸೆ ಆಗುವುದೆ ಇಲ್ಲ. ಅಷ್ಟೊಂದು ವೈವಿಧ್ಯಮಯವಾದ ಸುಂದರ ಹಾಗೂ ಬಣ್ಣ ಬಣ್ಣದ ಪಕ್ಷಿಗಳನ್ನು ಇಲ್ಲಿ ಕಾಣಬಹುದು. ಛಾಯಗ್ರಾಹಕರಿಗಂತೂ ಇದೊಂದು ಸ್ವರ್ಗವೆಂದೇ ಅನಿಸಬಹುದು.

ಚಿತ್ರಕೃಪೆ: Dilshad Roshan

ಹೊಸ ಆಣೆಕಟ್ಟು

ಹೊಸ ಆಣೆಕಟ್ಟು

ಮೂಲತಃ ಭೂತತಂಕೆಟ್ಟು ಒಂದು ಜಲಾಶಯವಾಗಿದ್ದು ಹಿಂದೆ ಇಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಆಣೆಕಟ್ಟೊಂದನ್ನು ನೋಡಬಹುದಾಗಿದೆ. ಆದರೆ ಇಂದು ಇಲ್ಲಿ ಹೊಸ ಆಣೆಕಟ್ಟನ್ನು ನಿರ್ಮಾಣ ಮಾಡಲಾಗಿದ್ದು ಸುಂದರ ಉದ್ಯಾನವನ್ನೂ ಸಹ ನಿರ್ಮಿಸಲಾಗಿದೆ.

ಚಿತ್ರಕೃಪೆ: Vinayaraj

ರೋಮಾಂಚನ

ರೋಮಾಂಚನ

ಹೊಸ ಆಣೆಕಟ್ಟಿನವರೆಗೆ ವಾಹನಗಳನ್ನು ತೆಗೆದುಕೊಂಡು ಹೋಗಲು ಮಾರ್ಗವಿದ್ದು ಒಂದೊಮ್ಮೆ ಇದಕ್ಕೆ ಭೇಟಿ ನೀಡಿದ ನಂತರ ಮುಂದೆ ಕಾಡಿನ ಪ್ರದೇಶದಲ್ಲಿ ಚಾರಣ ಮಾಡುತ್ತ ಭೂತತಂಕೆಟ್ಟು ಹಳೆಯ ಆಣೆಕಟ್ಟಿನ ಸ್ಥಳಕ್ಕೆ ತಲುಪಬೇಕಾಗುತ್ತದೆ. ಇದು ಭೂತಗಳಿಗೆ ಸಂಬಂಧಿಸಿದಂತೆ ಕಥೆಯನ್ನೊಂದು ಹೊಂದಿದ್ದು ಅದು ಹೀಗೆ ಸಾಗುತ್ತದೆ.....

ಚಿತ್ರಕೃಪೆ: PP Yoonus

ಶಿವ ಬೇಡ!

ಶಿವ ಬೇಡ!

ಹಿಂದೆ ಈ ಪ್ರದೇಶದ ವ್ಯಾಪ್ತಿಯಲ್ಲಿದ್ದ ತ್ರಿಕ್ಕರಿಯೂರು ಶಿವ ದೇವಾಲಯವು ತನ್ನ ಶಿವನ ನೆಲೆಯಿಂದಾಗಿ ಪ್ರಸಿದ್ಧಿಪಡೆದಿತ್ತು. ಆದರೆ ಇಲ್ಲಿದ್ದ ಭೂತಗಳು ಶಿವನ ಉಪಸ್ಥಿತಿಯನ್ನು ಸಹಿಸಲಾರದಾದವು. ಏನಾದರೂ ಮಾಡಿ ಶಿವನ ನೆಲೆಯನ್ನು ಧ್ವಂಸ ಮಾಡಬೇಕೆಂದು ನಿರ್ಧರಿಸಿದ್ದವು. ಈ ಭೂತಗಳಿಗೆ ಬೆಳಕು ಎಂದರೆ ಆಗುತ್ತಿರಲಿಲ್ಲ. ಹೆದರುತ್ತಿದ್ದವು.

ಚಿತ್ರಕೃಪೆ: കാക്കര

ಕಲ್ಲು ಬಂಡೆಗಳು

ಕಲ್ಲು ಬಂಡೆಗಳು

ಪ್ರದೇಶದಲ್ಲಿ ಹರಿದಿದ್ದ ಪೆರಿಯಾರ್ ನದಿಗೆ ಬಂಡೆಗಳನ್ನು ತಡೆ ಒಡ್ಡಿ ನೀರನ್ನು ಶೇಖರಿಸಿ ನಂತರ ಆ ನೀರನ್ನು ಒಮ್ಮೆಗೆ ಬಿಡುವುದರ ಮೂಲಕ ತ್ರಿಕ್ಕರಿಯೂರು ದೇವಾಲಯವನ್ನು ಮುಳುಗಿಸುವ ಉಪಾಯವನ್ನು ಮಾಡಿದ ಭೂತಗಳು ರಾತ್ರಿಯ ಸಮಯದಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಪೆರಿಯಾರ್ ನದಿಗೆ ಅಡ್ಡ ಹಾಕಲು ಪ್ರಾರಂಭಿಸಿದವು.

ಚಿತ್ರಕೃಪೆ: കാക്കര

ಹುಂಜ

ಹುಂಜ

ಇವರ ಉಪಾಯವನ್ನು ಅರಿತಿದ್ದ ಶಿವನು ಹುಂಜದ ರೂಪ ತಾಳಿ ಅರ್ಧರಾತ್ರಿಯಲ್ಲೆ ನಸುಕಾಗಿದೆ ಎಂದು ಸಾರಲು ಕೂಗ ಹತ್ತಿದನು. ಇತ್ತ ಅರ್ಧಂಬರ್ಧ ಕೆಲಸ ಮುಗಿಸಿದ್ದ ಭೂತಗಳು ಹುಂಜದ ಕೂಗು ಕೇಳಿ ಬೆಳಕಾಗುತ್ತದೆ ಎಂದು ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದವು.

ಚಿತ್ರಕೃಪೆ: Riyas Rasheed Ravuthar

ಇನ್ನೊಂದು ಆಯಾಮ

ಇನ್ನೊಂದು ಆಯಾಮ

ಹೀಗಾಗಿ ಇದಕ್ಕೆ ಭೂತತಂಕೆಟ್ಟು ಎಂಬ ಹೆಸರು ಬಂದಿತೆನ್ನಲಾಗಿದೆ. ಇದು ಸ್ಥಳ ಪುರಾಣ ಅಥವಾ ಪ್ರದೇಶದ ದಂತಕಥೆಯಾಗಿದೆ. ಇನ್ನೂ ವಿದ್ವಾಂಸರ, ಅಧ್ಯನಕಾರರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಎರಡು ಬಾರು ಭಯಂಕರವಾಗಿ ಜರುಗಿದ್ದ ನೆರೆಯಿಂದ ಭೂಕುಸಿತ ಉಂಟಾಗಿ ಅಕ್ಕ ಪಕ್ಕದ ಬೆಟ್ಟಗಳಿಂದ ಕಲ್ಲು ಬಂಡೆಗಳು ಉರುಳಿ ಆಣೆಕಟ್ಟೆಯಂತೆ ರೂಪ ರಚನೆ ಗೊಂಡಿರುವುದಾಗಿದೆ.

ಚಿತ್ರಕೃಪೆ: Riyas Rasheed Ravuthar

ಸೌಂದರ್ಯ ವಿಸ್ಮಯಗೊಳಿಸುತ್ತದೆ

ಸೌಂದರ್ಯ ವಿಸ್ಮಯಗೊಳಿಸುತ್ತದೆ

ತನ್ನ ಕುತೂಹಲಕರ ಭೂತಗಳ ಕಥೆಯಿಂದಾಗಿ ಈ ತಾಣವು ಸಾಕಷ್ಟು ಪ್ರವಾಸಿಗರ ಗಮನ ಸೆಳೆಯುತ್ತದಾದರೂ ಒಂದೊಮ್ಮೆ ಈ ಪ್ರದೇಶಕ್ಕೆ ಭೇಟಿ ನೀಡಿದರೆ ಸಾಕು, ಇಲ್ಲಿರುವ ಅದ್ವಿತೀಯ ಪ್ರಕೃತಿ ಸೌಂದರ್ಯ, ಸುಂದರವಾಗಿ ಹರಿಯುವ ಪೆರಿಯಾರ್ ನದಿ ಭೂತಗಳ ಹಿನ್ನೆಲೆಗಿಂತ ಇಲ್ಲಿನ ಸೃಷ್ಟಿ ಸೌಂದರ್ಯಕ್ಕೆನೆ ಹೆಚ್ಚಾಗಿ ಮಾರು ಹೋಗುವಂತೆ ಮಾಡುತ್ತದೆ.

ಚಿತ್ರಕೃಪೆ: PP Yoonus

ಹೇಗೆ ತಲುಪಬಹುದು?

ಹೇಗೆ ತಲುಪಬಹುದು?

ಭೂತತಂಕೆಟ್ಟು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿದ್ದು ಕೊಚ್ಚಿ ನಗರದಿಂದ 50 ಕಿ.ಮೀ ಹಾಗೂ ಕೋತಮಂಗಲಂನಿಂದ 10 ಕಿ.ಮೀ ಗಳಷ್ಟು ದೂರದಲ್ಲಿದೆ. ಕೊಚ್ಚಿ ನಗರದಿಂದ ಭೂತತಂಕೆಟ್ಟುಗೆ ತಲುಪಲು ಬಸ್ಸುಗಳು ದೊರೆಯುತ್ತವೆ. ರೈಲಿನಲ್ಲಾದರೆ ಕೊಚ್ಚಿಯಿಂದ ಆಲುವಾ ಮಾರ್ಗ ಹತ್ತಿರದ ನಿಲ್ದಾಣವಾಗಿದ್ದು ಇಲ್ಲಿಂದ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Nikhilbijumeppurath

ತಟ್ಟೆಕಾಡ್

ತಟ್ಟೆಕಾಡ್

ಇನ್ನೂ ಭೂತತಂಕೆಟ್ಟುವಿನಲ್ಲಿ ದೋಣಿ ವಿಹಾರದ ಸೌಲಭ್ಯವಿದ್ದು ಅದರ ಮೂಲಕ ತಟ್ಟೆಕಾಡ್ ಪಕ್ಷಿಧಾಮವನ್ನು (ಸಲೀಂ ಅಲಿ ಪಕ್ಷಿಧಾಮ)ನೋಡಬಹುದಾಗಿದೆ. ಇಲ್ಲವಾದರೆ ನದಿಗೆ ಅಡ್ಡಲಾಗಿ ಕಟ್ಟಲಾದ ಇಂಚತೊಟ್ಟಿ ತೂಗು ಸೇತುವೆಯ ಮೂಲಕ ತಟ್ಟೆಕಾಡ್ ಪಕ್ಷಿಧಾಮಕ್ಕೆ ಭೇಟಿ ನೀಡಬಹುದಾಗಿದೆ.

ಚಿತ್ರಕೃಪೆ: PP Yoonus

ಬಲು ಚುರುಕು

ಬಲು ಚುರುಕು

ತಟ್ಟೆಕಾಡಿನಲ್ಲಿ ಕಂಡುಬರುವ ಕಾಡು ಕೋಳಿ.

ಚಿತ್ರಕೃಪೆ: Yathin S Krishnappa

ಕಪ್ಪೆ ಪಕ್ಷಿ

ಕಪ್ಪೆ ಪಕ್ಷಿ

ಸೀಲಾನ್ ಫ್ರಾಗ್ಮೌತ್ ಪಕ್ಷಿಗಳು. ಬಹಳ ಅಪರೂಪದ ಪಕ್ಷಿಗಳು ಇವಾಗಿವೆ.

ಚಿತ್ರಕೃಪೆ: N A Nazeer

ಎಲ್ಲಿದೆ ಮೀನು?

ಎಲ್ಲಿದೆ ಮೀನು?

ಮೀನು ಹಿಡಿಯುವ ಕಂದುಬಣ್ಣದ ಗೂಬೆ.

ಚಿತ್ರಕೃಪೆ: Lip Kee

ಹಕ್ಕಿ

ಹಕ್ಕಿ

ಮಲಬಾರ್ ಗ್ರೇ ಹಾರ್ನ್ ಬಿಲ್

ಚಿತ್ರಕೃಪೆ: Snowmanradio

ಜೋಡಿ!

ಜೋಡಿ!

ಪ್ಲಮ್ ಹಣ್ಣಿನ ಬಣ್ಣ ಹಾಗೂ ಆಕಾರದ ತಲೆಯುಳ್ಳ ವಿಶಿಷ್ಟ ಗಿಳಿಗಳು.

ಚಿತ್ರಕೃಪೆ: Satheesan.vn

ಹನ್ನೆರಡು ಕಿ.ಮೀ

ಹನ್ನೆರಡು ಕಿ.ಮೀ

ಇನ್ನೂ ಭೂತತಂಕೆಟ್ಟುವಿನಿಂದ ಕೇವಲ ಹನ್ನೆರಡು ಕಿ.ಮೀ ಕ್ರಮಿಸಿದರೆ ಸಾಕು, ಮತ್ತೊಂದು ನಯನ ಮನೋಹರ ತಾಣ ಸಿಗುತ್ತದೆ. ಅದುವೆ ಇಡಮಲಯಾರ್ ಜಲಾಶಯ.

ಚಿತ್ರಕೃಪೆ: Baluperoth

ನಿರ್ಮಿಸಲಾದ

ನಿರ್ಮಿಸಲಾದ

ಕೇರಳದ ಅತಿ ಉದ್ದನೆಯ ನದಿಯಾದ ಪೆರಿಯಾರ್ ನದಿಯ ಉಪನದಿಯಾದ ಇಡಮಲಾರ್ ನದಿಗೆ ಇಲ್ಲಿ ಆಣೆಕಟ್ಟನ್ನು ನಿರ್ಮಿಸಲಾಗಿದ್ದು ಅದರಿಂದ ಈ ಜಲಾಶಯ ರೂಪಗೊಂಡಿದೆ.

ಚಿತ್ರಕೃಪೆ: Baluperoth

ಸುಂದರ

ಸುಂದರ

ಇಡಮಲಯಾರ್ ನೋಡಲು ಆಕರ್ಷಕವಾದ ತಾಣವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Nvvchar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X