Search
  • Follow NativePlanet
Share
» »ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಮಾನವರು ಸಾಂಕೇತಿಕವಾಗಿ ಎಷ್ಟೇ ಎತ್ತರದಲ್ಲಿ ಇದ್ದರು ಕೂಡ ಕೆಲವೊಂದು ವಿಷಯಗಳಲ್ಲಿ ಸೋಲು ಉಂಟಾಗುವುದು ಸಾಮಾನ್ಯವೇ. ಇದಕ್ಕೆ ಭಾರತ ದೇಶದ ಐಟಿ ರಾಜಧಾನಿಯಾಗಿ ಹೆಸರುವಾಸಿಯಾಗಿರುವ ಬೆಂಗಳೂರಿನ ಸಮೀಪದಲ್ಲಿರುವ ಶಿವಗಂಗೆ ಒಂದು ಪ್ರತ್ಯಕ್ಷವಾದ ನಿದರ್ಶನ. ಈ ಪುಣ್ಯಕ್ಷೇತ್ರವು ಅನೇಕ ರಹಸ್ಯಗಳಿಗೆ ನಿಲಯ. ಇನ್ನು ಪರ್ವತ ಶಿಖರದ ಮೇಲೆ ಈ ದೇವಾಲಯದ ರಹಸ್ಯವನ್ನು ಭೇದಿಸಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದಾರೆ.

ಇಲ್ಲಿ ನಡೆಯುವ ವಿಶೇಷತೆಯನ್ನು ಧಾರ್ಮಿಕ ಶಾಸ್ತ್ರಕಾರರು ಮಾತ್ರ ಇದೆಲ್ಲಾ ಆ ಪರಮೇಶ್ವರನ ಲೀಲೆ ಎಂದೇ ಹೇಳುತ್ತಿದ್ದಾರೆ. ಅದ್ದರಿಂದಲೇ ಕರ್ನಾಟಕದ ಮೂಲೆ-ಮೂಲೆಗಳಿಂದಲೇ ಅಲ್ಲದೇ ಭಾರತದಲ್ಲಿನ ಇತರ ರಾಜ್ಯಗಳಿಂದಲೂ ಕೂಡ ಪ್ರವಾಸಿಗರು ಹಾಗು ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಲೇಖನದ ಮೂಲಕ ಈ ಅದ್ಭುತವಾದ ದೇವಾಲಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯಿರಿ.

1.ಶಿವಗಂಗೆ

1.ಶಿವಗಂಗೆ

PC:YOUTUBE

ಬೆಂಗಳೂರಿನಿಂದ ಸುಮಾರು 54 ಕಿ.ಮೀ ದೂರದಲ್ಲಿರುವ ಶಿವಗಂಗೆ ಹಿಂದೂಗಳಿಗೆ ಪರಮಪವಿತ್ರವಾದ ಪುಣ್ಯಕ್ಷೇತ್ರವಾಗಿದೆ. ಪರ್ವತ ಶಿಖರವು ಶಿವಲಿಂಗದ ಆಕಾರದಲ್ಲಿದೆ. ಪರ್ವತ ಶಿಖರದ ಮೇಲಿಂದ ಕೆಳಗೆ ಜಲಪಾತದ ಹಾಗೆ ಬೀಳುವುದರಿಂದ ಈ ಪರ್ವತ ಶಿಖರವನ್ನು ಶಿವಗಂಗ ಎಂಬ ಹೆಸರಿನಿಂದ ಕರೆಯುತ್ತಾರೆ.

2.ಶಿವಗಂಗೆ

2.ಶಿವಗಂಗೆ

PC:YOUTUBE

ಈ ಪರ್ವತ ಶಿಖರದ ಎತ್ತರ ಸುಮಾರು 804.8 ಮೀಟರ್. ಅಂದರೆ ಸರಿಸುಮಾರು 2640 ಅಡಿ. ಇದನ್ನು ದಕ್ಷಿಣ ಕಾಶಿ ಎಂದು ಕೂಡ ಕರೆಯುತ್ತಾರೆ. ಈ ಪರ್ವತ ಶಿಖರದ ಮೇಲ್ಭಾಗದಲ್ಲಿ ಅನೇಕ ದೇವಾಲಯಗಳು ಇವೆ. ಅವುಗಳಲ್ಲಿ ಗಂಗಾಧರೇಶ್ವರ ದೇವಾಲಯ, ಹೊನ್ನಮ್ಮ ದೇವಿ ದೇವಾಲಯ, ನಂದಿ ವಿಗ್ರಹ, ಪಾತಾಳಗಂಗೆ ತದಿತರ ಅನೇಕ ದೇವಾಲಯಗು ಈ ಪರ್ವತ ಶಿಖರದ ಮೇಲ್ಭಾಗದಲ್ಲಿರುವುದನ್ನು ಕಾಣಬಹುದು.

3.ಶಿವಗಂಗೆ

3.ಶಿವಗಂಗೆ

PC:YOUTUBE

ಅದೇ ವಿಧವಾಗಿ ಈ ಪರ್ವತ ಶಿಖರದ ಮೇಲ್ಭಾಗದಲ್ಲಿರುವ ಶಾರದಾಂಬ ದೇವಾಲಯದ ಸುತ್ತಮುತ್ತ ಅನೇಕ ಪವಿತ್ರವಾದ ಸರೋವರಗಳು ಕೂಡ ಇವೆ. ಮುಖ್ಯವಾಗಿ ಈ ಶಾರದಾಂಬ ದೇವಾಲಯದ ಸುತ್ತಲಿರುವ ಅಗಸ್ತ್ಯ ತೀರ್ಥ, ಕಪಿಲ ತೀರ್ಥ, ಪಾತಳಗಂಗೆ ಇನ್ನು ಅನೇಕ ಸರೋವರದಲ್ಲಿನ ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪುಣ್ಯ ಲಭಿಸುತ್ತದೆ ಎಂದು ನಂಬುತ್ತಾರೆ.

4.ಶಿವಗಂಗೆ

4.ಶಿವಗಂಗೆ

PC:YOUTUBE

ಇಲ್ಲಿರುವಂತಹ ಹೊನ್ನಮ್ಮ ದೇವಿ ದೇವಾಲಯವು ಒಂದು ಗುಹಾ ದೇವಾಲಯವಾಗಿದೆ. ಅದೇ ವಿಧವಾಗಿ ಗವಿ ಗಂಗಾಧರೇಶ್ವರ ದೇವಾಲಯವು ಕೂಡ ಒಂದು ಗುಹಾ ದೇವಾಲಯವಾಗಿದೆ. ಪ್ರತಿ ವರ್ಷ ಸಂಕ್ರಾತಿಯ ಸಮಯದಲ್ಲಿ ಇಲ್ಲಿರುವ ಗಂಗಾಧರೇಶ್ವರ ಹಾಗು ಹೊನ್ನಮ್ಮ ದೇವಿಗೆ ವಿವಾಹ ಮಹೋತ್ಸವವನ್ನು ಮಾಡುತ್ತಾರೆ.

5.ಶಿವಗಂಗೆ

5.ಶಿವಗಂಗೆ

PC:YOUTUBE

ಈ ಉತ್ಸವವನ್ನು ನೋಡುವ ಸಲುವಾಗಿ ಕರ್ನಾಟಕದಿಂದಲೇ ಅಲ್ಲದೇ ದೇಶದಲ್ಲಿನ ಅನೇಕ ಪ್ರದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಚರಿತ್ರಾತ್ಮಕವಾಗಿ ನೋಡಿದರೆ ಈ ಶಿವಗಂಗೆ ಪ್ರದೇಶವು ಹೊಯ್ಸಳ ರಾಜ್ಯದ ಭಾಗವಾಗಿ ಇರುತ್ತಿತ್ತು. ಆ ರಾಜ್ಯದ ರಾಜನಾದ ವಿಷ್ಣುವರ್ಧನ ಪತ್ನಿ ಶಾಂತಲ ಈ ಪರ್ವತ ಶಿಖರದ ಮೇಲಿನಿಂದ ಹಾರಿ ಆತ್ಮಕತ್ಯೆ ಮಾಡಿಕೊಂಡಳು ಎಂದು ಹೇಳುತ್ತಾರೆ.

6.ಶಿವಗಂಗಾ

6.ಶಿವಗಂಗಾ

PC:YOUTUBE

ಅದ್ದರಿಂದಲೇ ಈ ಪ್ರದೇಶವನ್ನು ಶಾಂತಲಾ ಡ್ರಾಪ್ ಎಂದು ಕೂಡ ಕರೆಯುತ್ತಾರೆ. ಇನ್ನು ಇಲ್ಲಿ ನಡೆಯುವ ಒಂದು ವಿಚಿತ್ರವನ್ನು ನೋಡುವ ಸಲುವಾಗಿ ದೇಶದಲ್ಲಿನ ವಿವಿಧ ಪ್ರದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಈ ಪರ್ವತ ಶಿಖರದ ಮೇಲಿರುವ ಗಂಗಾಧರೇಶ್ವರ ಶಿವಲಿಂಗಕ್ಕೆ ತುಪ್ಪದಿಂದ ಬರೆದರೆ ಅದು ಬೆಣ್ಣೆಯಾಗಿ ಮಾರ್ಪಾಟಾಗುತ್ತದೆಯಂತೆ.

7.ಶಿವಗಂಗೆ

7.ಶಿವಗಂಗೆ

PC:YOUTUBE

ಇದಕ್ಕೆ ಮುಖ್ಯವಾದ ಕಾರಣವೇನು ಎಂದು ತಿಳಿದುಕೊಳ್ಳುವ ಸಲುವಾಗಿ ಅನೇಕ ಪರಿಶೋಧನೆಗಳು ನಡೆದಿವೆ. ಆದರೂ ಕೂಡ ಯಾವುದೇ ಉತ್ತರ ದೊರೆತಿಲ್ಲ. ಇದು ಹೀಗೆ ಇದ್ದರೆ, ಈ ಬೆಣ್ಣೆಯನ್ನು ಮೈಗೆ ಹಾಕಿಕೊಂಡರೆ ಅನೇಕ ರೋಗಗಳು ಗುಣವಾಗುತ್ತದೆ ಎಂದು ಭಕ್ತರು ನಂಬಲಾಗಿದೆ. ಇನ್ನು ವಾರಾಂತ್ಯದ ಸಮಯದಲ್ಲಿ ಬೆಂಗಳೂರಿಗರು ಹೆಚ್ಚಿನ ಮಂದಿ ತಪ್ಪದೇ ಇಲ್ಲಿ ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X