Search
  • Follow NativePlanet
Share
» »ಕನಕಪುರದಲ್ಲಿರುವ ಈ ಅತ್ಯುತ್ತಮ ತಾಣಗಳನ್ನು ನೋಡಿದ್ದೀರಾ

ಕನಕಪುರದಲ್ಲಿರುವ ಈ ಅತ್ಯುತ್ತಮ ತಾಣಗಳನ್ನು ನೋಡಿದ್ದೀರಾ

ಬೆಂಗಳೂರಿನಲ್ಲಿರುವವರಿಗೆ ಕನಕಪುರ ಚಿರಪರಿಚಿತ. ಬೆ೦ಗಳೂರು ನಗರದಿ೦ದ 50 ಕಿ.ಮೀ. ಗಳಷ್ಟು ದೂರದಲ್ಲಿರುವ ಒ೦ದು ಪುಟ್ಟ ಪಟ್ಟಣವು ಕನಕಪುರವಾಗಿದ್ದು, ಇದು ರಾಮನಗರ ಜಿಲ್ಲೆಗೆ ಸೇರಿದೆ. ಬೆ೦ಗಳೂರಿನಿ೦ದ ಕನಕಪುರವೆ೦ಬ ಈ ಪುಟ್ಟ ಪಟ್ಟಣಕ್ಕೆ ತಲುಪಲು ಸರಿಸುಮಾರು ಎರಡು ಘ೦ಟೆಗಳ ಕಾಲಾವಧಿಯಷ್ಟೇ ಸಾಕಾಗುತ್ತದೆ. ಈ ಸ್ಥಳವು ಹಸಿರು ಮತ್ತು ಜಲಪಾತಗಳಿಂದ ಹೇರಳವಾಗಿದೆ. ಈ ಅದ್ಭುತವಾದ ಮತ್ತು ಆಕರ್ಷಕವಾದ ಸ್ಥಳದಲ್ಲಿ ಕೆಲವು ದಿನಗಳವರೆಗೆ ನೀವು ಕಾಲಕಳೆಯಬೇಕೆಂದಿದ್ದರೆ ಇಲ್ಲಿ ನೋಡಬೇಕಾದಂತಹ ತಾಣಗಳು ಹಲವಾರಿವೆ. ಇಲ್ಲಿ ಹವಾಮಾನವು ವರ್ಷದುದ್ದಕ್ಕೂ ಆಹ್ಲಾದಕರವಾಗಿರುತ್ತದೆ. ಉತ್ತಮವಾದ ಸಣ್ಣ ಪ್ರವಾಸದ ತಾಣವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ನೆಲೆಸಿರುವವರು ಪ್ರತಿದಿನ ಪ್ರತಿದಿನ ಕನಕಪುರದ ಈ ಒಂದೊಂದು ತಾಣಗಳಿಗೆ ಭೇಟಿ ನೀಡಿ ಕಾಲಕಳೆಯಬಹುದು.

ಮೇಕೆದಾಟು

ಮೇಕೆದಾಟು

PC:Madzmadz

ಮೇಕೆದಾಟು - ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದೀ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ವಿಹಾರಸ್ಥಳ, ಬೆಂಗಳೂರಿನಿಂದ ೯೦ ಕಿ. ಮೀ. ದೂರದಲ್ಲಿದೆ. ಈ ಸ್ಥಳವು ಪ್ರಕೃತಿಯ ಭವ್ಯವಾದ ವೀಕ್ಷಣೆಗಳನ್ನು ಹೊಂದಿದೆ. ಮೇಕೆದಾಟು ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಸೂಕ್ತ ಸ್ಥಳವಾಗಿದೆ. ನೀವು ಇಲ್ಲಿನ ಬಂಡೆಗಳಲ್ಲಿ ಕುಳಿತುಕೊಂಡು ನೀರಿನಲ್ಲಿ ಆಡಬಹುದು. ಇಲ್ಲಿಂದ ಸ್ವಲ್ಪವೇ ದೂರದಲ್ಲಿ ಸಂಗಮವಿದ್ದು, ಇಲ್ಲಿ ಅರ್ಕಾವತಿ ಮತ್ತು ಕಾವೇರಿ ನದಿಗಳು ಸ೦ಗಮಿಸುತ್ತವೆ. ಮಳೆಗಾಲದ ಅವಧಿಯಲ್ಲಿ ಈ ಪ್ರವಾಸೀ ತಾಣವು ನೀರಿನಿ೦ದ ತು೦ಬಿತುಳುಕುತ್ತಿರುತ್ತದೆ. ಬುಟ್ಟಿಯಾಕಾರದ ದೋಣಿವಿಹಾರದ ರೋಮಾ೦ಚಕ ಅನುಭವಕ್ಕೆ ಇಲ್ಲಿ ಅವಕಾಶವಿದೆ.

ಬಿಳಿಕಲ್ ರಂಗಸ್ವಾಮಿ ಬೆಟ್ಟ

ಬಿಳಿಕಲ್ ರಂಗಸ್ವಾಮಿ ಬೆಟ್ಟ

PC: VikasHegde

ಬಿಳಿಕಲ್ ರಂಗಸ್ವಾಮಿ ಬೆಟ್ಟ ಕನಕಪುರ ಪಟ್ಟಣದಲ್ಲಿನ ಅತಿ ಎತ್ತರದ ಸ್ಥಳವಾಗಿದೆ. ಈ ಸ್ಥಳವು ಇಡೀ ಪಟ್ಟಣದ ಪಾರದರ್ಶಕತೆಯನ್ನು ಒದಗಿಸುತ್ತದೆ. ಈ ಬೆಟ್ಟದ ತುದಿಯನ್ನು ತಲುಪಲು ಮತ್ತು ಇಲ್ಲಿನ ಪಕ್ಷಿನೋಟವನ್ನು ಹೊಂದಲು, ನೀವು ಬೆಟ್ಟದ ಮೇಲೆ ಚಾರಣ ಮಾಡಬೇಕಾಗುತ್ತದೆ. ಈ ಚಾರಣ ಸ್ವಲ್ಪ ಕಷ್ಟವಾದರೂ ಬೆಟ್ಟದ ಮೇಲ್ಭಾಗದಿಂದ ಕೆಳಗೆ ವೀಕ್ಷಿಸಿದಾಗ ಅದ್ಭುತ ಅನುಭವವನ್ನು ನೀಡುತ್ತದೆ.

ಆರ್ಟ್ ಆಫ್ ಲೀವಿ೦ಗ್

ಆರ್ಟ್ ಆಫ್ ಲೀವಿ೦ಗ್

PC: Facebook

ಶ್ರೀ ಶ್ರೀ ರವಿಶ೦ಕರ್ ಅವರಿ೦ದ ಸ೦ಸ್ಥಾಪಿತವಾಗಿರುವ ಧ್ಯಾನ ಮತ್ತು ಯೋಗದ ಈ ಕೇ೦ದ್ರವಾಗಿರುವ ಆರ್ಟ್ ಆಫ್ ಲೀವಿ೦ಗ್ ಅ೦ತರಾಷ್ಟ್ರೀಯ ಕೇ೦ದ್ರವು ಸರ್ವೋತ್ಕೃಷ್ಟವಾದ ತಾಣವಾಗಿದೆ. ಕನಕಪುರ ರಸ್ತೆಯಲ್ಲಿದ್ದು, ಹಚ್ಚಹಸಿರಿನಿ೦ದ ಸುತ್ತುವರೆದಿದೆ. ಈ ಆಶ್ರಮದಲ್ಲಿರುವ ವಿಶಾಲಾಕ್ಷಿ ಮ೦ಟಪವು ಇಲ್ಲಿನ ಪ್ರಧಾನ ಕಾರ್ಯಕ್ಷೇತ್ರವಾಗಿದ್ದು, ಆಧ್ಯಾತ್ಮ ಸಾಧಕರು ಇಲ್ಲಿ ನಡೆಸಲ್ಪಡುವ ತರಗತಿಗಳಿಗೆ ಹಾಜರಾಗುತ್ತಾರೆ ಇಲ್ಲವೇ ಇಲ್ಲಿ ಹಾಗೆಯೇ ಕೆಲಹೊತ್ತು ಮೌನದ ಕ್ಷಣಗಳನ್ನು ಕಳೆಯುತ್ತಾರೆ. ಇಲ್ಲಿಗೆ ದೇಶ ವಿದೇಶಗಳಿಂದ ಅನುಯಾಯಿಗಳು ಬರುತ್ತಾರೆ. ಈ ಆಶ್ರಮದ ಪ್ರಾ೦ಗಣದಲ್ಲಿ ಒ೦ದು ಗುರುಕುಲ ಹಾಗೂ ಒ೦ದು ಆಯುರ್ವೇದೀಯ ಆಸ್ಪತ್ರೆಯೂ ಇದೆ. ಬಹಳಷ್ಟು ಮಂದಿ ಬೆಳಗ್ಗಿನಿಂದ ಸಂಜೆಯವರೆಗೆ ಇಲ್ಲಿ ಬಂದು ಧ್ಯಾನದಲ್ಲಿ ಮಗ್ನರಾಗುತ್ತಾರೆ.

ಶಿವಗಿರಿ ಕ್ಷೇತ್ರ ಶಿವಲಿಂಗ ಬೆಟ್ಟ

ಶಿವಗಿರಿ ಕ್ಷೇತ್ರ ಶಿವಲಿಂಗ ಬೆಟ್ಟ

ಶಿವಗಿರಿ ಕ್ಷೇತ್ರ ಶಿವಲಿಂಗ ಬೆಟ್ಟ ಕನಕಪುರದಲ್ಲಿನ ಅದ್ಭುತವಾದ ಸ್ಥಳವಾಗಿದೆ. ಇದು ಪ್ರಕೃತಿಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ಜನರಲ್ಲಿ ಜನಪ್ರಿಯವಾಗಿದೆ ಮತ್ತು ಪ್ರತಿವರ್ಷವೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಕೆಲವು ಏಕಾಂತತೆಯನ್ನು ಆನಂದಿಸಲು ಈ ಸ್ಥಳಕ್ಕೊಮ್ಮೆ ಭೇಟಿ ನೀಡಿ.

ಜನಪದ ಲೋಕ

ಜನಪದ ಲೋಕ

ಜನಪದ ಲೋಕ ಕನಕಪುರದಿಂದ ಸುಮಾರು25 ಕಿ.ಮೀ ದೂರದಲ್ಲಿದೆ. ಜನಪದ ಲೋಕವು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗಿದೆ. ಈ ಸ್ಥಳವು ಕರ್ನಾಟಕ ರಾಜ್ಯದ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ವರ್ಣಚಿತ್ರಗಳು, ಛಾಯಾಚಿತ್ರಗಳು ಮತ್ತು ಪ್ರತಿಮೆಗಳ ಮೂಲಕ ಪ್ರದರ್ಶಿಸುತ್ತದೆ. ಇದು ವಿವಿಧ ಆಸಕ್ತಿದಾಯಕ ಕಲಾಕೃತಿಗಳು ಮತ್ತು ಲೇಖನಗಳನ್ನು ಪ್ರದರ್ಶಿಸುವ ಮ್ಯೂಸಿಯಂ ಆಗಿದೆ.

ಸ್ಕೈಡ್ರೈಮ್ ಅಡ್ವೆಂಚರ್ ಸರ್ವಿಸ್‌

ಸ್ಕೈಡ್ರೈಮ್ ಅಡ್ವೆಂಚರ್ ಸರ್ವಿಸ್‌

PC: Facebook

ನೀವು ನಿಮ್ಮ ಸ್ನೇಹಿತರ ಜೊತೆ ಕನಕುಪುರಕ್ಕೆ ಭೇಟಿ ಮಾಡುತ್ತಿದ್ದೀರೆಂದಾದರೆ, ನೀವು ಸ್ಕೈಡ್ರೈಮ್ ಅಡ್ವೆಂಚರ್ ಸರ್ವಿಸ್‌ಗೆ ಹೋಗುವುದುನ್ನುತಪ್ಪಿಸಿಕೊಳ್ಳಬಾರದು. ಇದು ಕನಕಪುರದಿಂದ 15 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಸಾಹಸಮಯ ಜನರ ಸ್ವರ್ಗವಾಗಿದ್ದು, ಇದು ಹಚ್ಚ ಹಸಿರಿನ ಮರ ಮತ್ತು ಸಣ್ಣ ಬೆಟ್ಟಗಳ ಮಧ್ಯದಲ್ಲಿ ಸಾಕಷ್ಟು ರೋಮಾಂಚಕ ಚಟುವಟಿಕೆಗಳನ್ನು ಒದಗಿಸುತ್ತದೆ. ಪರ್ವತ ಹತ್ತುವುದು, ಚಾರಣ, ಕ್ಯಾಂಪಿಂಗ್ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳಬಹುದು. ನೀವು ಸಾಹಸ ಪ್ರೀಯರಾಗಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸದಲ್ಲಿ ಸ್ವಲ್ಪ ರೋಮಾಂಚನವನ್ನು ಸೇರಿಸಿ.

ಇನ್ನೋವೇಟಿವ್ ಫಿಲ್ಮ್ ಸಿಟಿ

ಇನ್ನೋವೇಟಿವ್ ಫಿಲ್ಮ್ ಸಿಟಿ

ಇನ್ನೋವೇಟಿವ್ ಫಿಲ್ಮ್ ಸಿಟಿ ಕನಕಪುರದಿಂದ 25 ಕಿ.ಮೀ ದೂರದಲ್ಲಿದೆ . ಫ್ಯಾಮಿಲಿ ಜೊತೆ ಆನಂದಿಸಲು ಅತ್ಯುತ್ತಮ ಸ್ಥಳವಾಗಿದೆ. ಇದು ವಿನೋದ ಚಟುವಟಿಕೆಗಳು ಮತ್ತು ವಿವಿಧ ರೀತಿಯ ಸವಾರಿಗಳನ್ನು ಹೊಂದಿರುವ ಮನೋರಂಜನಾ ಉದ್ಯಾನವಾಗಿದೆ. ಪರ್ವತಾರೋಹಣ ಮತ್ತು ರಾಪ್ಪೆಲಿಂಗ್ ಮುಂತಾದ ಹಲವು ಚಟುವಟಿಕೆಗಳಲ್ಲಿ ಇಲ್ಲಿ ಭಾಗವಹಿಸ ಬಹುದು. ವಿಶೇಷವಾಗಿ ಮಕ್ಕಳಿಗೆ ಮನೋರಂಜನೆಯನ್ನು ಒದಗಿಸುವ ಈ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಭೇಟಿ ನೀಡಿದಾಗ ಮ್ಯಾಜಿಕ್ ಶೋವನ್ನು ನೋಡಲು ಮರೆಯದಿರಿ.

ಚುಂಚಿ ಜಲಪಾತ

ಚುಂಚಿ ಜಲಪಾತ

ಕನಕಪುರದಿ೦ದ ಸರಿಸುಮಾರು 30 ಕಿ.ಮೀ. ಗಳಷ್ಟು ದೂರದಲ್ಲಿದೆ. ಕನಕಪುರಕ್ಕೆ ನೀವು ಭೇಟಿ ನೀಡಿದ್ದೇ ಆದಲ್ಲಿ, ಮತ್ತೊ೦ದೆರಡು ಘ೦ಟೆಗಳ ಪ್ರಯಾಣವು ಪ್ರಯಾಸವೆನಿಸಿದರೂ ಕೂಡಾ ಈ ಮನೋಹರ ಜಲಪಾತದ ದೃಶ್ಯವನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಅ೦ತಹ ಪ್ರಯಾಸವು ಯೋಗ್ಯವಾದುದೇ ಆಗಿರುತ್ತದೆ. ಅರ್ಕಾವತಿ ನದಿಯು ಹರಿಯುವ ಮಾರ್ಗದಲ್ಲಿ ಸ೦ಭವಿಸುವ ಈ ಜಲಪಾತವು ಬ೦ಡೆಗಳ ಶ್ರೇಣಿಗಳಿ೦ದ ಸುತ್ತುವರೆದಿದ್ದು, ಜಲಪಾತದ ಸುತ್ತಮುತ್ತಲಿನ ಸ್ಥಳದೆಲ್ಲೆಡೆಯಲ್ಲಿಯೂ ಅನೇಕ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ಜಲಪಾತವನ್ನು ಸುತ್ತುವರೆದಿರುವ ಬ೦ಡೆಗಳ ಮೇಲಿನ ಒ೦ದು ಸಣ್ಣ ಚಾರಣವು ನಿಮ್ಮನ್ನು ಬೆಟ್ಟದ ತುದಿಗೆ ತಲುಪಿಸುತ್ತದೆ. ಬೆಟ್ಟದ ಅಗ್ರಭಾಗದಿ೦ದ ಕ೦ಡುಬರುವ ಈ ಭವ್ಯ ಜಲಪಾತದ ದೃಶ್ಯವ೦ತೂ ಅದ್ಭುತವಾಗಿರುತ್ತದೆ.

ಪಿರಮಿಡ್ ವ್ಯಾಲಿ

ಪಿರಮಿಡ್ ವ್ಯಾಲಿ

ಪಿರಮಿಡ್ ವ್ಯಾಲಿಗೆ ಭೇಟಿ ನೀಡಲೇ ಬೇಕು. ಇದು ಅಂತರಾಷ್ಟ್ರೀಯ ಧ್ಯಾನ ಕೇಂದ್ರ.ಇದನ್ನು ಹಿಂದೆ ಮೈತ್ರೇಯ ಬುದ್ಧ ವಿಶ್ವಾಲಯ ಎನ್ನುತ್ತಿದ್ದರು. ಅದನ್ನೇ ಈಗ ಪಿರಮಿಡ್ ವ್ಯಾಲಿ ಎನ್ನುತ್ತಾರೆ.ವಿಶ್ವದ ಅತಿದೊಡ್ಡ ಧ್ಯಾನದ ಪಿರಮಿಡ್ ಇಲ್ಲಿದೆ. ಇದು ಅಂತರರಾಷ್ಟ್ರೀಯ ಧ್ಯಾನ ಕೇಂದ್ರವಾಗಿದೆ. ಈ ಪಿರಮಿಡ್‌ನಲ್ಲಿ ಸುಮಾರು 5000ಜನರು ಕುಳಿತು ಧ್ಯಾನಮಾಡುವಷ್ಟು ಸ್ಥಳವಕಾಶವಿದೆ. ಹೊರಗಿ ಪ್ರಪಂಚದಲ್ಲಿ ಆಧ್ಯಾತ್ಮಿಕತೆಯನ್ನು ಹುಡುಕುವವರಿಗೆ ಇದು ಒಳ್ಳೆಯ ಸ್ಥಳವಾಗಿದೆ.

ಮಂಚನಾಬೆಲೆ ಅಣೆಕಟ್ಟು

ಮಂಚನಾಬೆಲೆ ಅಣೆಕಟ್ಟು

PC:Subhashish Panigrahi

ಮಂಚನಾಬೆಲೆ ಅಣೆಕಟ್ಟು ಕನಕಪುರದಲ್ಲಿರುವ ಒಂದು ಸುಂದರವಾದ ಸ್ಥಳವಾಗಿದೆ. ಇದು ಕನಕಪುರದಿಂದ 30 ಕಿ.ಮೀ ದೂರದಲ್ಲಿದೆ. ಈ ಸ್ಥಳವು ತಂಪಾದ ನೀರು ಮತ್ತು ಸುತ್ತಲೂ ಮರಗಳಿಂದ ಕೂಡಿದೆ. ಇದು ಇಡೀ ಸ್ಥಳವು ಛಾಯಾಚಿತ್ರಗಳನ್ನು ಕಾಣುವಂತೆ ಮಾಡುತ್ತದೆ. ಈ ಸ್ಥಳವು ಸುಂದರವಾದ ವೀಕ್ಷಣೆಗಳನ್ನು ನೀಡುತ್ತದೆ.

ಭೀಮೇಶ್ವರಿ ವನ್ಯಜೀವಿ ಧಾಮ

ಭೀಮೇಶ್ವರಿ ವನ್ಯಜೀವಿ ಧಾಮ

ಭೀಮೇಶ್ವರಿ ವನ್ಯಜೀವಿ ಧಾಮವು ಕನಕಪುರದಿಂದ 30 ಕಿ.ಮೀ ದೂರದಲ್ಲಿದೆ. ಭೀಮೇಶ್ವರಿ ವನ್ಯಜೀವಿ ಧಾಮವು ಪ್ರಾಣಿ ಮತ್ತು ಪ್ರಕೃತಿ ಪ್ರಿಯರು ಭೇಟಿ ನೀಡಲೇ ಬೇಕಾದ ತಾಣವಾಗಿದೆ. ಈ ಸ್ಥಳವು ತಂಪಾದ ಹರಿಯುವ ನೀರಿನಿಂದ ಹಚ್ಚ ಹಸಿರಿನಿಂದ ಕೂಡಿದೆ. ಕಾಡು ಹಂದಿಗಳು, ಕೋತಿಗಳು ಮತ್ತು ಮಚ್ಚೆಯುಳ್ಳ ಜಿಂಕೆಗಳು ಇಲ್ಲಿ ಸುಲಭವಾಗಿ ಕಂಡುಬರುವ ಪ್ರಾಣಿಗಳಾಗಿವೆ. ಇಲ್ಲಿ ಸಫಾರಿ ರೈಡ್ ಅನ್ನು ಪೂರ್ಣವಾಗಿ ಆನಂದಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more