Search
  • Follow NativePlanet
Share
» »ಭಟ್ಕಳದಲ್ಲಿ ನೀವು ನೋಡಲೇ ಬೇಕಾದ ತಾಣಗಳಿವು…

ಭಟ್ಕಳದಲ್ಲಿ ನೀವು ನೋಡಲೇ ಬೇಕಾದ ತಾಣಗಳಿವು…

ಭಟ್ಕಳ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದು ಭಾರತದ ಹಳೆಯ ಬಂದರುಗಳಲ್ಲಿ ಒಂದಾಗಿದೆ. ಉತ್ತರ ಕನ್ನಡದಲ್ಲಿರುವ ಭಟ್ಕಳವು ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ ಮತ್ತು ಕೆಲವು ಸುಂದರವಾದ ಬೀಚ್‌ಗಳನ್ನು ಹೊಂದಿದೆ. ಈ ಪಟ್ಟಣವು NH 17 ರಲ್ಲಿದೆ ಮತ್ತು ಕೊಂಕಣ ರೈಲ್ವೆ ಮೂಲಕ ಸುಲಭವಾಗಿ ತಲುಪಬಹುದು.

ಭಟ್ಕಳದ ಇತಿಹಾಸ

ಭಟ್ಕಳದ ಇತಿಹಾಸ

PC: Ashwin Kumar
ಭಟ್ಕಳಕ್ಕೆ ಆಸಕ್ತಿದಾಯಕ ಇತಿಹಾಸವಿದೆ. ಇದು ಹೊಯ್ಸಳ ರಾಜವಂಶದ ಭಾಗವಾಗಿತ್ತು . ವಿಜಯನಗರ ಸಾಮ್ರಾಜ್ಯ, ಸಾಲುವಾ ಆಡಳಿತಗಾರರು ಮತ್ತು ಚೋಳರು ಸೇರಿದಂತೆ ಅನೇಕ ರಾಜವಂಶಗಳು ಭಟ್ಕಳ ಭೂದೃಶ್ಯದ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಈ ಪಟ್ಟಣವು ಪೋರ್ಚುಗೀಸ್ ಪ್ರಭಾವವನ್ನೂ ಹೊಂದಿತ್ತು. ಬ್ರಿಟಿಷರಿಂದ ಸೋಲಲ್ಪಡುವ ವರೆಗೂ ಟಿಪ್ಪು ಸುಲ್ತಾನ್ ಭಟ್ಕಳನ್ನು ಆಳಿದನು.

ಕದವಿನಕಟ್ಟ ಅಣೆಕಟ್ಟು, ಭಟ್ಕಳ

ಕದವಿನಕಟ್ಟ ಅಣೆಕಟ್ಟು, ಭಟ್ಕಳ


ವೆಂಕಟಾಪುರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕದವಿನಕಟ್ಟ ಅಣೆಕಟ್ಟು ಭಟ್ಕಳದ ನೀರಿನ ಪೂರೈಕೆಯ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಕದವಿನಕಟ್ಟ ಅಣೆಕಟ್ಟು ಸಮೃದ್ಧವಾದ ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿದೆ. ಈ ಸ್ಥಳವು ವರ್ಷದುದ್ದಕ್ಕೂ ಭೇಟಿ ನೀಡಲು ಅದ್ಭುತ ತಾಣವಾಗಿದೆ. ಆದರೆ ಮಳೆಗಾಲದಲ್ಲಿ ಈ ಅಣೆಕಟ್ಟಿನ ಸೌಂದರ್ಯವು ಇನ್ನಷ್ಟು ಹೆಚ್ಚುತ್ತದೆ. ಮಳೆಗಾಲವು ಅಣೆಕಟ್ಟನ್ನು ತುಂಬುತ್ತದೆ ಮತ್ತು ಪ್ರವಾಸಿಗರಿಗೆ ಮನೋಹರವಾದ ನೋಟವನ್ನು ನೀಡುತ್ತದೆ. ಪ್ರವಾಸಿಗರಿಗೆ ಅತ್ಯುತ್ತಮ ದೃಶ್ಯವನ್ನು ಒದಗಿಸುತ್ತದೆ. ಸುತ್ತಲಿನ ಹಸಿರು ಬೆಟ್ಟಗಳು ಅಣೆಕಟ್ಟಿನ ಮಾಂತ್ರಿಕ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಈಜು ಚಟುವಟಿಕೆಗಳನ್ನು ಆನಂದಿಸಲು ಈ ಅಣೆಕಟ್ಟು ಅಪಾಯಕಾರಿಯಾಗಿದೆ. ಈ ಅಣೆಕಟ್ಟಿನ ದಡದಲ್ಲಿ ದುರ್ಗಾ ದೇವಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯವಿದೆ. ಈ ಅಣೆಕಟ್ಟನ್ನು ಭೇಟಿ ನೀಡುವ ಜನರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 8 ಗಂಟೆಯವರೆಗೆ ಈ ಅಣೆಕಟ್ಟು ಸಾರ್ವಜನಿಕರಿಗೆ ತೆರೆದಿರುತ್ತದೆ.

 ಭಟ್ಕಳ ಲೈಟ್ ಹೌಸ್

ಭಟ್ಕಳ ಲೈಟ್ ಹೌಸ್

PC:Kovalam Beach, Kerala
ಬೆಟ್ಟದ ಮೇಲೆ ಕೋಟೆಯ ಅವಶೇಷಗಳ ಮೇಲೆ ಭಟ್ಕಳ ಲೈಟ್ ಹೌಸ್ ಇದೆ. ಒಂದು ಕಾಂಕ್ರೀಟ್ ರಸ್ತೆ ಲೈಟ್ ಹೌಸ್‌ಗೆ ದಾರಿ ಮಾಡಿಕೊಡುತ್ತದೆ. 1891 ರಲ್ಲಿ ಸ್ಥಾಪನೆಯಾದ ಈ ಲೈಟ್ಹೌಸ್ ಹಿಂದಿನ ಕಾಲದಲ್ಲಿ ಡಬಲ್ ವಿಕ್ ಲ್ಯಾಂಪ್‌ನೊಂದಿಗೆ ಕಲ್ಲಿನ ಅಂಕಣದಲ್ಲಿ ಸ್ಥಾಪಿಸಲಾಗಿತ್ತು. ಆದಾಗ್ಯೂ, ಇದು 1956 ಮತ್ತು 1958 ರ ನಡುವೆ ಹೊಸ ಕಲ್ಲಿನ ಲೈಟ್ಹೌಸ್ ಟವರ್, ಫಾಗ್ ಸಿಗ್ನಲ್ ಬ್ಯಾಫಲ್ ವಾಲ್ ಮತ್ತು ಆಕ್ಸಿಲಿಯರಿ ಲೈಟ್ ಕ್ಯಾಬಿನ್‌ಗಳನ್ನು ಸ್ಥಾಪಿಸಲಾಯಿತು. ಆದರೆ ಫಾಗ್ ಸಿಗ್ನಲ್ ಬಳಕೆಯನ್ನು 1988 ರಲ್ಲಿ ನಿಲ್ಲಿಸಲಾಯಿತು. ಇದು ಭಟ್ಕಳ ನದಿಯ ಪ್ರವೇಶ ದ್ವಾರದಲ್ಲಿ ದಕ್ಷಿಣ ಭಾಗದಲ್ಲಿದೆ.

ಭಟ್ಕಳ ಬೀಚ್

ಭಟ್ಕಳ ಬೀಚ್

PC: Sankara Subramanian
ಉತ್ತರ ಕನ್ನಡ ಪ್ರದೇಶದಲ್ಲಿರುವ ಪ್ರಸಿದ್ಧ ಮುರುಡೇಶ್ವರ ದೇವಸ್ಥಾನದ ಹತ್ತಿರ ಇರುವ ಭಟ್ಕಳ ಬೀಚ್ ಅತ್ಯಂತ ಸುಂದರ ಬೀಚ್ ಆಗಿದೆ. ಭಟ್ಕಳ ಬೀಚ್ ಬಳಿ ಹಲವು ಐತಿಹಾಸಿಕ ಮತ್ತು ಪ್ರಮುಖವಾದ ದೇವಾಲಯಗಳು ಇರುವುದರಿಂದ, ಇದು ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ ಮತ್ತು ಮುಖ್ಯವಾಗಿ ತೀರ್ಥಯಾತ್ರೆಗಾಗಿ ಬರುವ ಭಕ್ತರು ಭಟ್ಕಳದ ಕಡಲ ತೀರದಲ್ಲಿ ಬಂದು ಕಾಲ ಕಳೆಯುತ್ತಾರೆ. ಇಳಿಜಾರು ತೆಂಗಿನ ಮರಗಳು, ಪ್ರಶಾಂತವಾದ ನೀರು ಮತ್ತು ಸ್ಫಟಿಕ ಬಿಳಿ ಮರಳುಗಳಿಂದ ಕೂಡಿದ ಕಡಿದಾದ ಕಡಲ ತೀರವು ಬೋಟ್‌ ಸವಾರಿ ಮಾಡುವವರಿಗೆ ಹಾಗೂ ಸಾಹಸವನ್ನು ಇಷ್ಟ ಪಡುವವರಿಗೆ ಉತ್ತಮ ಆಯ್ಕೆಯಾಗಿದೆ. ಕಲ್ಲಿನ ತೀರಗಳ ಉದ್ದಕ್ಕೂ ಬೆಟ್ಟಗಳು ಅನುಭವಿ ಚಾರಣಿಗರಿಗೂ ಸಹ ಸಾಕಷ್ಟು ಅಡೆತಡೆಗಳನ್ನು ನೀಡುತ್ತವೆ.

ಮುರುಡೇಶ್ವರ

ಮುರುಡೇಶ್ವರ


ಮುರುಡೇಶ್ವರ ರೈಲ್ವೇ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿ, ಭಟ್ಕಳವು ಐತಿಹಾಸಿಕ ಮತ್ತು ಪ್ರಾಚೀನ ಬಂದರು ಪಟ್ಟಣವಾಗಿದ್ದು, ಉಡುಪಿಗೆ NH17 ನಲ್ಲಿದೆ. ಭಟ್ಕಳದಲ್ಲಿ ವಿಜಯನಗರ ಕಾಲ ಮತ್ತು ಅನೇಕ ಪುರಾತನ ಜೈನ ಸ್ಮಾರಕಗಳಿವೆ.
123 ಅಡಿ ಎತ್ತರದ ಶಿವನ ಮೂರ್ತಿಯು ನೋಡುವುದಕ್ಕೆ ಸುಂದರ ದೃಶ್ಯವಾಗಿದೆ. ಈ ಅದ್ಭುತವಾದ ಶಿವನ ಪ್ರತಿಮೆಯು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಇದು ಮೂರು ಬದಿಗಳಲ್ಲಿ ಭವ್ಯವಾದ ಅರೇಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಆಸಕ್ತಿದಾಯಕವಾಗಿ ಕಾಣುತ್ತಿದೆ? ಭಟ್ಕಳದ ಮುರುಡೇಶ್ವರ ಪಟ್ಟಣದಲ್ಲಿರುವ ಈ ಶಿವನ ವಿಗ್ರಹವು ವಿಶ್ವದ ಎರಡನೆಯ ಅತಿದೊಡ್ಡ ಶಿವನ ಪ್ರತಿಮೆಯಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಕರಾವಳಿ ಪಟ್ಟಣವಾಗಿರುವುದರಿಂದ, ವರ್ಷದ ಹೆಚ್ಚಿನ ಭಾಗಗಳಲ್ಲಿ ಈ ಸ್ಥಳವು ಬಿಸಿ ಮತ್ತು ತೇವವಾಗಿರುತ್ತದೆ ಮತ್ತು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಫೆಬ್ರವರಿ ತಿಂಗಳಲ್ಲಿ ಶಿವರಾತ್ರಿಯು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ. ಪಟ್ಟಣದ ಜನಪ್ರಿಯ ಪ್ರವಾಸಿ ತಾಣವಾಗಿದೆ ಮತ್ತು ಬಜೆಟ್ ಪ್ರಯಾಣಿಕರಿಗೆ ಮತ್ತು ಐಷಾರಾಮಿ ವ್ಯವಸ್ಥೆ ಬಯಸುವವರಿಗೆ ಇಲ್ಲಿ ಉಳಿದುಕೊಳ್ಳಲು ಅನೇಕ ಆಯ್ಕೆಗಳಿವೆ.

ಖಲೀಫಾ ಜಾಮಿಯಾ ಮಸೀದಿ

ಖಲೀಫಾ ಜಾಮಿಯಾ ಮಸೀದಿ


ಭಟ್ಕಳದ ಎಂಟು ಹಳೆಯ ಮಸೀದಿಗಳಲ್ಲಿ ಒಂದಾಗಿರುವ ಖಲೀಫಾ ಜಾಮಿಯಾ ಮಸೀದಿ ಸುಮಾರು 200 ವರ್ಷ ಹಳೆಯದಾಗಿದೆ. ಪ್ರವಾಸಿಗರು ಈ ಬಂದರು ಪಟ್ಟಣವನ್ನು ಹಾದು ಹೋಗಬೇಕು. ಖಲೀಫಾ ಸ್ಟ್ರೀಟ್‌ನಲ್ಲಿ ಶರಬಿ ನದಿ ತೀರದಲ್ಲಿ ಈ ಮಸೀದಿ ಇದೆ. ಮೂಲ ಮಸೀದಿಯನ್ನು 1966 ರಲ್ಲಿ ಕೈಬಿಡಲಾಯಿತು ಮತ್ತು ಎರಡು ಎತ್ತರದ ಗೋಪುರಗಳನ್ನು ಹೊಂದಿರುವ ಹೊಸ ರಚನೆಯು 1972 ರಲ್ಲಿ ಪೂರ್ಣಗೊಂಡಿತು.

ನೂರ್ ಮಸೀದಿ

ನೂರ್ ಮಸೀದಿ

PC:Nvvchar
1966 ರಲ್ಲಿ ನಿರ್ಮಿಸಲಾದ ನೂರ್ ಮಸೀದಿ, ಭಟ್ಕಳ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಇಡೀ ರಾಜ್ಯದ ಅತ್ಯುತ್ತಮ ಮಸೀದಿಗಳಲ್ಲಿ ಒಂದಾಗಿರುವ ಈ ಮಸೀದಿಯು ಹಳೆಯ ಆವೃತ್ತಿಯನ್ನು ನೆಲಸಮಗೊಳಿಸಿದ ನಂತರ 1987 ರಲ್ಲಿ ಮರುನಿರ್ಮಿಸಲಾಯಿತು. ಈ ಮಸೀದಿಯಲ್ಲಿ ಸುಮಾರು 1500 ಜನರು ಪ್ರಾರ್ಥನೆ ಮಾಡುವ ಅವಕಾಶವಿದೆ. ಭಟ್ಕಳಾದ್ಯಂತ ಪ್ರಯಾಣಿಸುವಾಗ ಪ್ರವಾಸಿಗರು ನೂರ್ ಮಸೀದಿಗೂ ಭೇಟಿ ನೀಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X