Search
  • Follow NativePlanet
Share
» »ಗುಜರಾತಿನ ಈ ಸ್ಥಳಗಳಲ್ಲಿ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡು ಆನಂದಿಸಿ!

ಗುಜರಾತಿನ ಈ ಸ್ಥಳಗಳಲ್ಲಿ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡು ಆನಂದಿಸಿ!

ಗರ್ಬಾ ನೃತ್ಯವನ್ನು ನಂದಿಸಬಹುದಾದ ಗುಜರಾತಿನ ಅತ್ಯುತ್ತಮ ಸ್ಥಳಗಳು

ನವರಾತ್ರಿಯನ್ನು ವಿಶ್ವದ ಅತ್ಯಂತ ಹೆಚ್ಚಿನ ದಿನಗಳ ಕಾಲ ನಡೆಯುವ ನೃತ್ಯದ ಉತ್ಸವವೆಂದು ಪರಿಗಣಿಸಲಾಗಿದ್ದು, ಇದನ್ನು ಕೇವಲ ಗುಜರಾತ್ ನಲ್ಲಿ ಮಾತ್ರವಲ್ಲದೆ ಭಾರತದೆಲ್ಲೆಡೆ ಅತ್ಯಂತ ಉತ್ಸಾಹ ಹಾಗೂ ಭಕ್ತಿಯಿಂದ ಎಲ್ಲರೂ ಭಾಗವಹಿಸುತ್ತಾರೆ. ಗುಜರಾತಿನಲ್ಲಿ ಈ ಹಬ್ಬವು ಗುಜರಾತಿನ ಒಂದು ಅವಿಭಾಜ್ಯ ಅಂಗವೆಂದೇ ಹೇಳಬಹುದು. ಗಾರ್ಬೋ ಎಂದೂ ಕರೆಯಲ್ಪಡುವ ಮಣ್ಣಿನ ಪಾತ್ರೆಯಲ್ಲಿ ಇರಿಸಲಾದ ದೀಪದ ಪಕ್ಕದಲ್ಲಿ ದೇವಿಯನ್ನು ಸ್ತುತಿಸುವ ಭಜನೆಗಳು ಹಾಡಲಾಗುತ್ತದೆ ಮತ್ತು ಗರ್ಬಾ ನೃತ್ಯಗಳನ್ನು ಮಾಡಲಾಗುತ್ತದೆ.

ಇಲ್ಲಿ ನಡೆಸಲಾಗುವ ಹಲವಾರು ನೃತ್ಯಗಳಲ್ಲಿ, ಗರ್ಬಾ, ಗೋಫ಼ಾನ್, ಗರ್ಬಿ, ದಾಂಡಿಯಾ, ಹಿಂಚ್ ಮತ್ತು ಹುಡೊ ಇವು ಪ್ರಮುಖವಾದವುಗಳಾಗಿವೆ. ಒಂಬತ್ತು ದಿನಗಳ ಕಾಲ ನಡೆಸಲಾಗುವ ಈ ಹಬ್ಬದ ಸಮಯದಲ್ಲಿ ರಾಜ್ಯವು ವಿಶ್ವದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಬ್ಬಕ್ಕೆ ಭಾರತದಲ್ಲಿ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಗುಜರಾತಿನಲ್ಲಿ ನವರಾತ್ರಿ ಎಂದು ಕರೆದರೆ, ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜಾ ಎಂದೂ, ಉತ್ತರ ಪ್ರದೇಶ , ಬಿಹಾರಗಳಲ್ಲಿ ಈ ಹಬ್ಬವನ್ನು ದಶೇರಾ ಎಂದೂ ಕರ್ನಾಟಕದಲ್ಲಿ ದಸರಾ ಎಂದೂ ಕರೆಯಲಾಗುತ್ತದೆ.

07-garba-1663150027.jpg -Properties

ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿ ಈ ಮೂರು ದೇವಿಯರ ಪೂಜೆಯನ್ನು ನವರಾತ್ರಿಯಲ್ಲಿ ನಡೆಸಲಾಗುತ್ತಈ. ಈ ಮೂರೂ ಪೂಜ್ಯನೀಯ ದೇವತೆಯರು ಈ ಎಲ್ಲಾ ವಿಭಿನ್ನ ಸದ್ಗುಣಗಳನ್ನು ಸೂಚಿಸುತ್ತಾರೆ, ಶಕ್ತಿಯ ಸ್ವರೂಪವಾಗಿ ದುರ್ಗಾದೇವಿಯನ್ನೂ, ಸಂಪತ್ತಿನ ಪ್ರತಿರೂಪವಾಗಿ ಲಕ್ಷ್ಮಿ ದೇವಿಯನ್ನೂ ಮತ್ತು ಜ್ಞಾನದ ಅಧಿ ದೇವತೆಯಾಗಿ ಸರಸ್ವತಿ ದೇವಿಯನ್ನೂ ಪೂಜಿಸಲಾಗುತ್ತದೆ. ಗುಜರಾತ್ ರಾಜ್ಯದಲ್ಲಿ, ಒಂಬತ್ತು ರಾತ್ರಿ ಉತ್ಸವದ ಪ್ರಮುಖ ಅಂಶವೆಂದರೆ ಗರ್ಬಾ ಎಂಬ ನೃತ್ಯವಾಗಿದ್ದು, ಗರ್ಬಾವೆಂದರೆ ನಿಖರವಾಗಿ ಏನು? ನಿಮಗೆ ಗೊತ್ತೇ ?

ಗುಜರಾತಿನಲ್ಲಿ ಗರ್ಬಾವನ್ನು ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ. ಗುಜರಾತಿನಲ್ಲಿ ಗರ್ಬಾ ನೃತ್ಯವನ್ನು ಗುಜರಾತಿ ಗಾರ್ಬಾವು ಒಂದು ವೃತ್ತಾಕಾರದ ನೃತ್ಯವಾಗಿದ್ದು, ಇದು ಸಾಮಾನ್ಯವಾಗಿ ಮಧ್ಯದಲ್ಲಿರುವ ಮಾತೃದೇವತೆಯ ವಿಗ್ರಹದ ಸುತ್ತಲೂ ಚಪ್ಪಾಳೆ ತಟ್ಟುವುದು ಮತ್ತು ಸುತ್ತುವುದನ್ನು ಒಳಗೊಂಡಿದ್ದು, ಇದನ್ನು ಹಾಡಿನ ಜೊತೆ ನರ್ತಿಸಲಾಗುತ್ತದೆ. ದಾಂಡಿಯಾವೂ ಒಂದು ವಿಭಿನ್ನವಾದ ನೃತ್ಯವಾಗಿದ್ದು ಇದರ ನೃತ್ಯದಲ್ಲಿ ಎರಡು ಕೋಲುಗಳನ್ನು ಹಿಡಿದುಕೊಂಡು ತಾಳಕ್ಕೆ ತಕ್ಕಂತೆ ನೃತ್ಯಮಾಡಲಾಗುತ್ತದೆ. ಇದಕ್ಕಾಗಿ ವರ್ಣರಂಜಿತ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವುದು ಅತ್ಯಗತ್ಯವಾಗಿರುತ್ತದೆ ಆದ್ದರಿಂದ ವಿಶೇಷವಾಗಿ ಹಬ್ಬದ ಪ್ರತಿ ರಾತ್ರಿಗೆ ವಿಭಿನ್ನ ವೇಷಭೂಷಣವನ್ನು ಧರಿಸಲು ಮಹಿಳೆಯರು ಹೆಚ್ಚಿನ ಶ್ರಮವನ್ನುವಹಿಸುತ್ತಾರೆ. ನವರಾತ್ರಿಯ ಸಮಯದಲ್ಲಿ ಗುಜರಾತ್‌ನಾದ್ಯಂತ ಹಳ್ಳಿಗಳು ಮತ್ತು ನೆರೆಹೊರೆಗಳಲ್ಲಿ ರಾತ್ರಿಯಲ್ಲಿ ಗರ್ಬಾ ನಡೆಯುತ್ತದೆ.

ನವರಾತ್ರಿಯನ್ನು ಅನುಭವಿಸಲು ಉತ್ತಮ ಸ್ಥಳವೆಂದರೆ ಸಾಂಸ್ಕೃತಿಕ ರಾಜಧಾನಿ ವಡೋದರಾ. ಅಲ್ಲಿ ಎರಡು ಪ್ರಸಿದ್ಧ ಗರ್ಬಾ ಕಾರ್ಯಕ್ರಮಗಳು ನಡೆಯುತ್ತವೆ. ಇದರಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಹಾಜರಾಗುವುದು ಸಾಮಾನ್ಯವಾಗಿದೆ.

07-gujaratgarba1-1663150019.jpg -Properties

ಎಲ್ಲರೂ ಕೂಡಿ ಆಚರಿಸುವ ಗರ್ಬಾ, ವಡೋದರಾ

ಯುನೈಟೆದ್ ವೇ ಗರ್ಬಾ ಅಥವಾ ಎಲ್ಲರೂ ಕೂಡಿ ನಡೆಸಲಾಗುವ ಗರ್ಬಾ ಕಾರ್ಯಕ್ರಮವು ಹೆಚ್ಚಿನ ಜನರ ಅಚ್ಚುಮೆಚ್ಚಿನದ್ದಾಗಿದ್ದು ಜನಪ್ರಿಯತೆಯನ್ನು ಗಳಿಸುತ್ತಿದೆ. ಸುಮಾರು 30,000 ಜನರು ಪ್ರತೀ ರಾತ್ರಿ ಸೇರುತ್ತಾರೆ. ಈ ಕಾರ್ಯಕ್ರಮದ ಸಂಯೋಜಕರಿಂದ ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ. ಉನ್ನತ ಗಾಯಕರು ಮತ್ತು ಅತ್ಯುತ್ತಮ ಪರಿಸರದಲ್ಲಿ ನಡೆಯಲಾಗುವ ಈ ಕಾರ್ಯಕ್ರಮದಲ್ಲಿ ವಡೋದರಕ್ಕೆ ಅಸಂಖ್ಯಾತ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಸಮಯದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅತ್ಯುತ್ತಮವಾದ ರಕ್ಷಣಾ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಪ್ರಯಾಣಿಕರ ಮಾಹಿತಿಗಾಗಿ, ರಾಜಮಹಲ್ ರಸ್ತೆಯಲ್ಲಿರುವ ನವಲಾಖಿ ಮೈದಾನದಲ್ಲಿ ಯುನೈಟೆಡ್ ವೇ ಗಾರ್ಬಾವನ್ನು ಆಯೋಜಿಸಲಾಗುತ್ತದೆ.

14-1444804233-khandvie1-1663150003.jpg -Properties

ಮಾ ಶಕ್ತಿ ಗರ್ಬಾ

ವಡೋದರಾದಲ್ಲಿ ಗರ್ಬಾವು ಕೇವಲ ಒಂದು ದೊಡ್ಡ ಸಮಾರಂಭ ಮಾತ್ರವಾಗಿರದೆ, ಮಾ ಶಕ್ತಿ ಗರ್ಬಾವು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದ ಅತಿದೊಡ್ಡ ಗರ್ಬಾ ಎಂದು ಪಟ್ಟಿ ಮಾಡಲಾಗಿದ್ದು, ಸುಮಾರು 9 ವರ್ಷಗಳ ಹಿಂದೆ ಸುಮಾರು 40,000 ನೃತ್ಯಗಾರರು ಈ ಗೌರವವನ್ನು ಗಳಿಸಲು ಭಾಗವಹಿಸಿದ್ದರು. ಮಾ ಶಕ್ತಿ ಗರ್ಬಾ ಗುಜರಾತ್ ಹೌಸಿಂಗ್ ಬೋರ್ಡ್ ಮೈದಾನದಲ್ಲಿ ನಡೆಯುತ್ತದೆ.

ರಾಜ್ಯದ ಅತ್ಯಂತ ದೊಡ್ಡ ನಗರ ಅಹಮ್ಮದಾಬಾದ್ ಕೂಡಾ ಜನಪ್ರಿಯ ಗರ್ಬಾ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಜಿ ಎಮ್ ಡಿಸಿ ಮೈದಾನದಲ್ಲಿ ಗುಜರಾತ್ ಪ್ರವಾಸೋದ್ಯಮವು ಆಯೋಜಿಸುವ ಈ ಕಾರ್ಯಕ್ರಮವು ಅತಿ ದೊಡ್ಡದು ಮತ್ತು ಅತ್ಯಂತ ಪ್ರಸಿದ್ಧವಾದದ್ದು. ಈ ಸಮಯದಲ್ಲಿ ಇಲ್ಲಿ ಕರಕುಶಲ ವಸ್ತುಗಳು, ಮಕ್ಕಳಿಗೆ ವಿನೋದ ಮತ್ತು ರಾಜ್ಯ ಮಟ್ಟದ ಗರ್ಬಾ ಸ್ಪರ್ಧೆಗಳನ್ನೂ ಕೂಡಾ ಆಯೋಜಿಸಲಾಗುತ್ತದೆ. ಅಹಮದಾಬಾದ್ ಅನ್ನು ರಾಜ್ಯದ ರಾಜಧಾನಿಯಾದ ಗಾಂಧಿನಗರದೊಂದಿಗೆ ಸಂಪರ್ಕಿಸುವ ಸರ್ಖೇಜ್-ಗಾಂಧಿನಗರ ಹೆದ್ದಾರಿ (ಎಸ್ .ಜಿ. ರಸ್ತೆ) ಉದ್ದಕ್ಕೂ ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಗಾರ್ಬಾ ಸ್ಥಳಗಳನ್ನು ಸಹ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಂಪ್ರದಾಯಿಕ ಮೌಲ್ಯಗಳು ಮತ್ತು ಸಮಕಾಲೀನ ಶೈಲಿಗಳ ನಡುವಿನ ಈ ಮೋಜು-ತುಂಬಿದ ಸಂಭ್ರಮಾಚರಣೆಯನ್ನು ವೀಕ್ಷಿಸಲು ಪ್ರವಾಸಿಗರು ಗುಜರಾತ್‌ನಲ್ಲಿ ನವರಾತ್ರಿ ಉತ್ಸವಕ್ಕೆ ಹಾಜರಾಗಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X