Search
  • Follow NativePlanet
Share
» »ಕೆಮ್ಮಣ್ಣುಗುಂಡಿ, ಸೋಮವಾರ ಪೇಟೆ ಹಿಲ್‌ಸ್ಟೇಶನ್‌ ನೋಡಿದ್ದೀರಾ?

ಕೆಮ್ಮಣ್ಣುಗುಂಡಿ, ಸೋಮವಾರ ಪೇಟೆ ಹಿಲ್‌ಸ್ಟೇಶನ್‌ ನೋಡಿದ್ದೀರಾ?

ನೀವು ಕೊಡಗು ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ನೀಡಿ ಬೇಜಾರಾಗಿರುವಿರಾ? ಹಾಗಿದ್ದಲ್ಲಿ ಈ ಕೆಲವು ಗುಪ್ತ ಹಾಗೂ ಕಡಿಮೆ ಪ್ರಸಿದ್ದಿಗೊಳಗಾದ, ಕಡಿಮೆ ಜನಸಂದಣೆ ಇರುವುದರ ಜೊತೆಗೆ ಭವ್ಯವಾಗಿರುವ ಈ ಕೆಲವು ಸೌಂದರ್ಯತೆಗಳ ಅನ್ವೇಷಣೆ ಮಾಡುವ ಸಮಯ ಈಗ ಬಂದಿದೆಯೆಂದುಕೊಳ್ಳಿ. ಕರ್ನಾಟಕವು ದಕ್ಷಿಣ ಭಾರತದ ಒಂದು ಅತ್ಯಂತ ಶ್ರೀಮಂತ ರಾಜ್ಯಗಳಲ್ಲೊಂದಾಗಿದೆ ಆದುದರಿಂದ ಇದು ನೂರಾರು ಕಡಿಮೆ ಪರಿಶೋಧಿತ ಕಣಿವೆಗಳು, ಬೆಟ್ಟಗಳು ಮತ್ತು ಕಾಡುಗಳನ್ನೂ ಒಳಗೊಂಡಿವೆ. ಆದುದರಿಂದ ಇಲ್ಲಿ ನಿಮ್ಮನ್ನು ತೃಪ್ತಿ ಪಡಿಸುವ ಬಂಡಾರವೇ ಇರುವಾಗ ಹೆಚ್ಚು ಅನ್ವೇಶಿತ ಸ್ಥಳಗಳಿಗೆ ಏಕೆ ಭೇಟಿ ಕೊಡಬೇಕು ಅಲ್ಲವೆ?

ಈ ಸ್ಥಳಗಳು ನಿಮಗೆ ಖಚಿತವಾಗಿಯೂ ಎಂದೂ ಮರೆಯಲಾಗದ ಅನುಭವಗಳನ್ನು ಕೊಡುವುದರಲ್ಲಿ ಸಂಶಯವೇ ಇಲ್ಲ. ಜಲಪಾತಗಳಿಂದ ನದಿಗಳವರೆಗೆ, ಸರೋವರಗಳಿಂದ ಕಾಡುಗಳು ಮತ್ತು ಹುಲ್ಲುಗಾವಲುಗಳಿಂದ ಮಂಜು ಮುಸುಕಿದ ಪರ್ವತಗಳವರೆಗೆ ನೂರಾರು ಆಸಕ್ತಿದಾಯಕ ಕೇಂದ್ರಗಳನ್ನು ಕಾಣಬಹುದು. ಆದುದರಿಂದ ಕರ್ನಾಟದದ ಬೆಟ್ಟಗಳ ಸ್ಥಳಗಳು ಅವುಗಳ ಬಗ್ಗೆ ಹೆಚ್ಚಿನ ವಿಷಯಗಳು, ನೈಸರ್ಗಿಕ ಭವ್ಯತೆ ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಯೋಣ ಬನ್ನಿ.

ಜೋಗಿಮಟ್ಟಿ

ಜೋಗಿಮಟ್ಟಿ

Nikhil0000711

ಇದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿದೆ ಜೋಗಮಟ್ಟಿ ಒಂದು ಸುಂದರವಾದ ಗಿರಿಧಾಮವಾಗಿದ್ದು ಇದು ಸ್ಥಳೀಯರಲ್ಲಿ ಪರಿಶುದ್ದವಾದ ಮತ್ತು ಮಾಲಿನ್ಯ ರಹಿತ ಪ್ರಕೃತಿಯ ಒಂದು ವಿಸ್ತೃತ ರೂಪವೆಂದು ಪರಿಗಣಿಸಲ್ಪಟ್ಟಿದೆ. ಇವುಗಳು ಹುಲ್ಲುಗಾವಲುಗಳು ,ಬೆಟ್ಟಗಳು, ಕಣಿವೆಗಳು ಮತ್ತು ಶ್ರೀಮಂತ ವನ್ಯಜೀವಿಗಳು ಇವುಗಳಿಂದ ಒಳಗೊಂಡಿರುವ ಗುಣ ಲಕ್ಷಣಗಳನ್ನು ಒಳಗೊಂಡಿದುವ ಈ ಅರಣ್ಯ ಪ್ರದೇಶವು ನಗರದ ನಿರಂತರ ಜನಸಂದಣಿಯಿಂದ ತಪ್ಪಿಸಿಕೊಂಡು ಪರಿಶುದ್ದವಾದ ಸುಂದರ ಪ್ರಕೃತಿಯಲ್ಲಿ ತನ್ನನ್ನು ತಾನು ಕಳೆದುಕೊಳ್ಳ ಬಯಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಈ ಸ್ಥಳವು ಒಂದು ಸೂಕ್ತವಾದ ಮತ್ತು ಉತ್ತಮವಾದ ಸ್ಥಳವಾಗಿದೆ.

ಸುಮಾರು 3800 ಅಡಿ ಎತ್ತರದಲ್ಲಿರುವ ಜೋಗಿಮಟ್ಟಿ ರಾಜ್ಯದ ಅತ್ಯಂತ ಎತ್ತರದ ಮತ್ತು ಅತ್ಯಂತ ತಂಪಾದ ಸ್ಥಳಗಳಲ್ಲೊಂದೆನಿಸಿದೆ ಮತ್ತು ಇದು ಆಫ್ಬೀಟ್ ಚಾರುಣಿಗರು ಮತ್ತು ಕ್ಯಾಂಪ್ ಮಾಡುವವರಿಗೆ ಒಂದು ಪರಿಪೂರ್ಣವಾದ ಮತ್ತು ಸೂಕ್ತವಾದ ಸ್ಥಳವಾಗಿದೆ. ನಿವು ಇಲ್ಲಿ ಅನೇಕ ಪ್ರಾಚೀನ ಸ್ಮಾರಕಗಳನ್ನೂ ಬೆಟ್ಟದ ಮೇಲೆ ಬಂಗಲೆಗಳು ಮತ್ತು ದೇವಾಲಯಗಳ ರೂಪದಲ್ಲಿ ಕಾಣಬಹುದಾಗಿದೆ.

ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ

Likhith N.P

ಒಂದು ಕಾಲದಲ್ಲಿ ರಾಜರು ವಿಶ್ರಾಂತಿ ಪಡೆಯುತ್ತಿದ್ದ ಜಾಗವಾಗಿದ್ದ ಕೆಮ್ಮಣ್ಣುಗುಂಡಿ ಇಂದು ಅಸಂಪ್ರದಾಯಿಕ ಪ್ರಯಾಣಿಕರು ವಾರಾಂತ್ಯದಲ್ಲಿ ಭೇಟಿ ಕೊಡುವ ತಾಣವೆನಿಸಿದೆ. ಕರ್ನಾಟಕದಲ್ಲಿ ಅತ್ಯುತ್ತಮ ಹುಲ್ಲುಗಾವಲುಗಳು ಮತ್ತು ಕಣಿವೆಗಳು ಇರುವ ಜಾಗದಲ್ಲಿ ನೀವು ಆನಂದಿಸಬೇಕೆಂದಿದ್ದರೆ ಅದು ಖಚಿತವಾಗಿಯೂ ಕೆಮ್ಮಣ್ಣುಗುಂಡಿ. ಈ ಸುಂದರವಾದ ಗಿರಿಧಾಮವು ಚಿಕ್ಕಮಗಳೂರು ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ . ಮತ್ತು ಇದರ ಸೌಂದರ್ಯತೆಯು ಸ್ವರ್ಗವೇ ಭೂಮಿಯ ಮೇಲೆ ಕೆತ್ತಿದಂತೆ ಕಾಣುತ್ತದೆ.

ಇಲ್ಲಿ ವೀಕ್ಷಿಸಬಹುದಾದಂತ ಸ್ಥಳಗಳಿಂದ ಜಲಪಾತಗಳು ಶೋಲಾ ಹುಲ್ಲುಗಾವಲುಗಳಿಂದ ಗುಲಾಬಿ ತೋಟಗಳವರೆಗೆ ಆನಂದಿಸಬಹುದಾದಂತಹ ಅನೇಕ ವಿಷಗಳು ಇದರ ಗಡಿಯೊಳಗೆ ಕಾಣಬಹುದಾಗಿದೆ. ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿರುವ ಪ್ರಮುಖ ಸ್ಥಳಗಳಲ್ಲಿ ಕಲ್ಲಾಥಿ ಜಲಪಾತ, Z ಆಕಾರದಲ್ಲಿರುವ ತಾಣ ಮತ್ತು ಹೆಬ್ಬೆ ಜಲಪಾತ ಮುಂತಾದವುಗಳನ್ನು ಒಳಗೊಂಡಿದೆ.

ಬಿ ಆರ್ ಹಿಲ್ ಗಳು (ಬೆಟ್ಟಗಳು)

ಬಿ ಆರ್ ಹಿಲ್ ಗಳು (ಬೆಟ್ಟಗಳು)

Kalyan Varma

ಪಶ್ಚಿಮ ಘಟ್ಟಗಳ ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿ ಆಕರ್ಷಣೆಯಾಗಿರುವ ಬಿಆರ್ ಹಿಲ್ಸ್ ಶ್ರೀಮಂತ ಪರ್ವತ ಶ್ರೇಣಿಯನ್ನು ಹೊಂದಿದ್ದು ಇದನ್ನು ವನ್ಯಜೀವಿ ಅಭಯಾರಣ್ಯವಾಗಿ ಪರಿವರ್ತಿಸಲಾಗಿದೆ. ಆದುದರಿಂದ ಇದು ಆಫ್ಬೀಟ್ ಛಾಯಗ್ರಾಹಕರು ಮತ್ತು ಚಾರುಣಿಗರಲ್ಲಿ ಅನೇಕ ವರ್ಷಗಳಿಂದಲೂ ಜನಪ್ರಿಯತೆಯನ್ನು ಪಡೆಯುತ್ತಾ ಬಂದಿದೆ.

ಈ ಸ್ಥಳವು ಮೈಸೂರಿನಿಂದ ಸುಮಾರು 80 ಕಿಮೀ ದೂರದಲ್ಲಿದೆ ಮತ್ತು ಇದು ಪ್ರಕೃತಿಯ ಪ್ರಶಾಂತತೆಯನ್ನು ಅನುಭವಿಸಲು ಒಂದು ಸೂಕ್ತವಾದ ಸ್ಥಳವಾಗಿದೆ. ನೂರಾರು ರೋಮಾಂಚಕ ಸಸ್ಯಗಳು ಮತ್ತು ಪ್ರಾಣಿಗಳಿಗೆ ಮಾತ್ರ ನೆಲೆಯಾಗಿರುವುದಲ್ಲದೆ ಇದು , ಇದು ಸರೋವರಗಳು ಮತ್ತು ಕೆಲವು ಐತಿಹಾಸಿಕ ತಾಣಗಳಿಗೂ ನೆಲೆಯಾಗಿದೆ. ನಿಮ್ಮ ವಾರಾಂತ್ಯವನ್ನು ಈ ಆಕರ್ಷಣೀಯವಾದ ಮಾತು ಕೊಳಗಳು , ಕಾಡುಗಳು ವನ್ಯಜೀವಿಗಳು ಮತ್ತು ಬೆಟ್ಟಗಳಿಂದ ಶ್ರೀಮಂತವಾಗಿರುವ ತಾಣದಲ್ಲಿ ಸಮಯ ಕಳೆಯಲು ಇಷ್ಟ ಪಡದೆ ಇರಲು ಸಾಧ್ಯವೆ?

ಪುಷ್ಪಗಿರಿ

ಪುಷ್ಪಗಿರಿ

Manamohana Holla K

ಕುಮಾರ ಪರ್ವತವೆಂಬ ಹೆಸರಿನಿಂದಲೂ ಕರೆಯಲ್ಪಡುವ ಪುಷ್ಪಗಿರಿಯು ದಕ್ಷಿಣ ಭಾರತದ ಅತ್ಯಂತ ಎತ್ತವವಾದ ಶಿಖರಗಳಲ್ಲೊಂದೆನಿಸಿದ್ದು ಇದರ ಎತ್ತರವು 5600 ಅಡಿಗಿಂತಲೂ ಎತ್ತರದಲ್ಲಿದೆ. ಆದುದರಿಂದ ಈ ಜಾಗವು ಮಾಲಿನ್ಯರಹಿತ , ವಿರಳ ಜನನಿಬಿಡತೆ ಮತ್ತು ಕಲುಷರಹಿತವಾದ ವಾತಾವರಣವನ್ನು ಹೊಂದಿದೆ. ಪಶ್ಚಿಮಘಟ್ಟದ ಶ್ರೀಮಂತ ವಿಸ್ತಾರದಲ್ಲಿ ಹರಡಿರುವ ಪುಷ್ಪಗಿರಿಯು ಆಪ್ಭೀಟ್ ಪ್ರಯಾಣಿಕರು ಇಂತಹ ಕಾಣದೇ ಇರುವ ಪ್ರಕೃತಿಯ ಭವ್ಯತೆಯ ಸೌಂದರ್ಯತೆಯನ್ನು ಸೆರೆಹಿಡಿಯಲು ನೋಡುತ್ತಿರುವವರಿಗೆ ಒಂದು ಭೇಟಿ ಕೊಡಲೇ ಬೇಕಾದ ತಾಣವೆನಿಸಿದೆ.

ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಇಲ್ಲಿಯ ಕಣಿವೆಗಳ ಸಮ್ಮೋಹನಗೊಳಿಸುವ ನೋಟವು ನಿಜವಾಗಿಯೂ ರಮಣೀಯವಾಗಿರುತ್ತದೆ ಮತ್ತು ಪ್ರವಾಸಿಗರ ಕ್ಯಾಮಾರಾ ಕಣ್ಣಿಗೆ ಸೆರೆಯಾಗುತ್ತಿರುತ್ತದೆ. ಇದರ ಅಗಾಧ ಎತ್ತರದಿಂದಾಗಿ ಟ್ರಕ್ಕಿಂಗ್ ಮತ್ತು ಕ್ಯಾಂಪ್ ಮಾಡುವವರಿಗೆ ಪರಿಪೂರ್ಣವಾದ ತಾಣವೆನಿಸಿದೆ. ಈ ಸ್ಥಳವು ಕೂರ್ಗ್ ನಿಂದ ಸುಮಾರು 75 ಕಿ.ಮೀ ಅಂತರದಲ್ಲಿದೆ.

ಸೋಮ್‌ವಾರ್ ಪೇಟೆ

ಸೋಮ್‌ವಾರ್ ಪೇಟೆ

Akshay S A

ಕೊಡಗು ಜಿಲ್ಲೆಯಲ್ಲಿರುವ ಸೋಮ್ ವಾರ್ ಪೇಟೆ ಕಾಫಿ ಎಸ್ಟೇಟುಗಳು ಮತ್ತು ಮಸಾಲೆ ತೋಟಗಳಿಗೆ ಹೆಸರುವಾಸಿಯಾಗಿದೆ .ಆದರೂ ಇದರ ಗಡಿಯೊಳಗೆ ವೀಕ್ಷಿಸಬಹುದಾದ ಅನೇಕ ವಿಷಯಗಳನ್ನು ಹೊಂದಿರುವುದಲ್ಲದೆ ಇದು ಅನೇಕ ಮನಮೋಹಕ ದೃಶ್ಯವೀಕ್ಷಣಾ ಸ್ಥಳಗಳು ಸುಂದರವಾದ ಜಲಪಾತಗಳು ಮತ್ತು ಗಗನಚುಂಬಿ ಶಿಖರಗಳನ್ನು ಹೊಂದಿದೆ.

ನಿಮಗೆ ಮಲಗುವ ಸಮಯದಲ್ಲಿ ಹೇಳಲಾಗುತ್ತಿದ್ದ ಕಥೆಗಳಲ್ಲಿ ಬರುವ ಸ್ವರ್ಗದಂತಿರುವ ಜಾಗಗಳಲ್ಲಿ ಮಲ್ಲೈ ಜಲಪಾತ, ಅತ್ಯಂತ ಎತ್ತರವಾದ ಶಿಖರಗಳಲ್ಲೊಂದಾದ 5000 ಅಡಿ ಎತ್ತರವಿರುವ ಕೋಟೆ ಬೆಟ್ಟ, ಮತ್ತು ಗಮನ ಸೆಳೆಯುವಂತಹ ಭೂದೃಶ್ಯವಿರುವ ಮಕ್ಕಳಗುಡಿ ಇವು ಕೂಡಾ ಸೇರಿವೆ.

ನಿಮ್ಮ ವಾರಾಂತ್ಯವನ್ನು ಎಂದಿಗೂ ಮರೆಯದಂತೆ ಮಾಡಲು ಇಂತಹ ನೈಸರ್ಗಿಕ ಸೌಂದರ್ಯತೆಗೆ ಸಾಕೆನಿಸುವುದಿಲ್ಲವೆ? ಹೌದು ಎಂದಾದಲ್ಲಿ ಈ ಅದ್ಬುತಗಳ ಕಡೆಗೆ ಒಂದು ಪ್ರವಾಸವನ್ನು ಆಯೋಜಿಸಿ ಮತ್ತು ಪೂರ್ಣಪ್ರಮಾಣದಲ್ಲಿ ಈ ಭವ್ಯತೆಯ ಆನಂದವನ್ನು ಪಡೆಯಿರಿ. ಈ ಮನಮೋಹಕ ಸ್ಥಳಗಳು ಜನಸಂದಣಿಯಿಂದ ಕಿಕ್ಕಿರಿದು ತುಂಬುವ ಮುನ್ನ ಬೇಗ ಹೊರಡಲು ತಯಾರಾಗಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more