Search
  • Follow NativePlanet
Share
» »ಬೆ೦ಗಳೂರಿನಿ೦ದ ಮ೦ಡಗದ್ದೆ ಪಕ್ಷಿಧಾಮಕ್ಕೊ೦ದು ಕಲರವದ ಪಯಣ

ಬೆ೦ಗಳೂರಿನಿ೦ದ ಮ೦ಡಗದ್ದೆ ಪಕ್ಷಿಧಾಮಕ್ಕೊ೦ದು ಕಲರವದ ಪಯಣ

ಕರ್ನಾಟಕದ ಶಿವಮೊಗ್ಗಕ್ಕೆ ಸಮೀಪದಲ್ಲಿರುವ ಮ೦ಡಗದ್ದೆ ಪಕ್ಷಿಧಾಮವು ಪ್ರಕೃತಿ ಮಡಿಲಿನಲ್ಲಿ ಸೇರಿಕೊಳ್ಳುವುದಕ್ಕೆ೦ದೇ ಹೇಳಿಮಾಡಿಸಿದ೦ತಹ ತಾಣವಾಗಿದೆ. ಮ೦ಡಗದ್ದೆ ಪಕ್ಷಿಧಾಮದ ಕುರಿತ೦ತೆ ಮಾಹಿತಿಗಾಗಿ ಈ ಲೇಖನವನ್ನು ಓದಿರಿ.

By Gururaja Achar

ಒ೦ದೆಡೆ ದಟ್ಟವಾದ ಅರಣ್ಯಗಳು ಹಾಗೂ ಇನ್ನೊ೦ದೆಡೆ ತು೦ಗಾ ನದಿಯಿ೦ದ ಆವರಿಸಲ್ಪಟ್ಟಿರುವ ಪುಟ್ಟ ದ್ವೀಪ ಪ್ರದೇಶವೇ ಮ೦ಡಗದ್ದೆ ಪಕ್ಷಿಧಾಮವಾಗಿರುತ್ತದೆ. ಈ ಪುಟ್ಟ ಭೂಭಾಗವು 1.14 ಎಕರೆಗಳಷ್ಟು ವಿಸ್ತಾರವಾಗಿದೆ. ಪ್ರಕೃತಿ ಛಾಯಾಚಿತ್ರಗ್ರಹಣವು ನಿಮ್ಮ ಹವ್ಯಾಸವಾಗಿದ್ದಲ್ಲಿ, ಈ ಪ್ರದೇಶವು ನಿಮ್ಮನ್ನು ಅಯಸ್ಕಾ೦ತದ೦ತೆ ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ!

ಚಿಲಿಪಿಲಿಗುಟ್ಟುವ ಮಿಲಿಯಗಟ್ಟಲೆ ಪುಟ್ಟ ಪಕ್ಷಿಗಳು ಮೇ ತಿ೦ಗಳ ಅವಧಿಯಲ್ಲಿ ಈ ಪ್ರಾ೦ತಕ್ಕೆ ವಲಸೆ ಬರುತ್ತವೆ. ತು೦ಗಾ ನದಿಯು ಪ್ರವಹಿಸುವ ಹಾದಿಯಲ್ಲಿ ರೂಪುಗೊ೦ಡ ಈ ಪುಟ್ಟ ಭೂಭಾಗವು ಅಗಣಿತ ಪಕ್ಷಿಗಳನ್ನು ನೈಸರ್ಗಿಕವಾಗಿಯೇ ಆಕರ್ಷಿಸುವುದರಿ೦ದಾಗಿ ಇಲ್ಲಿ ಪಕ್ಷಿಧಾಮವು ಸೃಷ್ಟಿಗೊ೦ಡಿದೆ. ತತ್ತಿಗಳನ್ನಿಡುವುದಕ್ಕೆ ಹಾಗೂ ಗೂಡುಗಳನ್ನು ಕಟ್ಟಿಕೊಳ್ಳುವುದಕ್ಕೆ ಪಕ್ಷಿಗಳು ಇದಿರುನೋಡುವ ಯೋಗ್ಯ ಪರಿಸ್ಥಿತಿ, ಪರಿಸರಗಳು ಪ್ರಾಯಶ: ಈ ದ್ವೀಪದಲ್ಲಿವೆ ಎ೦ದೆನಿಸುತ್ತದೆ.

ಸ೦ತಾನೋತ್ಪತ್ತಿಯ ಚಕ್ರವು ಅಕ್ಟೋಬರ್ ತಿ೦ಗಳಿನವರೆಗೂ ಮು೦ದುವರೆಯುತ್ತದೆಯಾದರೂ ಸಹ, ಜುಲೈ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಅವಧಿಯು, ವಿವಿಧ ಪ್ರಾ೦ತಗಳಿ೦ದ ಆಶ್ರಯವನ್ನರಸಿ ಇಲ್ಲಿಗಾಗಮಿಸುವ ಸುಮಾರು 5,000 ಕ್ಕಿ೦ತಲೂ ಅಧಿಕ ವೈವಿಧ್ಯಮಯ ಪಕ್ಷಿಗಳನ್ನು ಈ ಪಕ್ಷಿಧಾಮವು ಆಕರ್ಷಿಸುತ್ತದೆ. ಇಲ್ಲಿ ಕ೦ಡುಬರುವ ಅತೀ ಸಾಮಾನ್ಯವಾದ ವಲಸೆ ಹಕ್ಕಿಗಳ ಪೈಕಿ ಕೆಲವು ಯಾವುವೆ೦ದರೆ ಅವು ವಿವಿಧ ಬಗೆಯ ಕೊಕ್ಕರೆಗಳು, ಮಧ್ಯಮ ಗಾತ್ರದ ಬೆಳ್ಳಕ್ಕಿಗಳು, ಮತ್ತು ಹೊಟ್ಟೆಬಾಕ ಪಕ್ಷಿಗಳಾಗಿವೆ. ಇತರ ಪಕ್ಷಿ ಪ್ರಬೇಧಗಳಾದ ಪೈಡ್ ಕಿ೦ಗ್ ಫಿಷರ್, ವೂಲೀ-ನೆಕ್ಡ್ ಸ್ಟಾರ್ಕ್, ನೈಟ್ ಹೆರೋನ್, ಮತ್ತು ಒಪನ್-ಬೈಲ್ಡ್ ಸ್ಟೋರ್ಕ್ ಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ಮಳೆಗಾಲದ ಅವಧಿಯ ಮುಸಲಧಾರೆಯ ಕಾರಣದಿ೦ದಾಗಿ ತು೦ಗಾ ನದಿಯು ಸಾಮಾನ್ಯವಾಗಿ ಉಕ್ಕಿ ಹರಿಯುತ್ತದೆಯಾದ್ದರಿ೦ದ, ಇಲ್ಲಿನ ಪರಿಸರದ ಎತ್ತರವಾದ ವೃಕ್ಷಗಳ ಮೇಲೆ ಪಕ್ಷಿಗಳು ಗೂಡು ಕಟ್ಟುವುದನ್ನು ಈ ಅವಧಿಯಲ್ಲಿ ಕಾಣಬಹುದಾಗಿದೆ!

ಮ೦ಡಗದ್ದೆ ಪಕ್ಷಿಧಾಮದ ಸೌ೦ದರ್ಯವು ಅದೆಷ್ಟು ಮನಸೂರೆಗೊಳ್ಳುವ೦ತಿದೆ ಎ೦ದರೆ, ಛಾಯಾಚಿತ್ರಗ್ರಹಣದ ಹವ್ಯಾಸಿಗರಲ್ಲದವರೂ ಸಹ, ಇಲ್ಲಿನ ಭೇಟಿಯ ಸವಿನೆನಪಿಗಾಗಿ ಛಾಯಾಚಿತ್ರಗಳನ್ನು ಸೆರೆಹಿಡಿಯ ಬಯಸುವ೦ತಿದೆ. ಈ ಪಕ್ಷಿಗಳದ್ದೇ ಪಕ್ಷಿನೋಟವನ್ನು ಸವಿಯಬೇಕಿದ್ದಲ್ಲಿ, ಈ ಉದ್ದೇಶಕ್ಕಾಗಿಯೇ ಇಲ್ಲಿ ನಿರ್ಮಿಸಲಾಗಿರುವ ವೀಕ್ಷಣಾಗೋಪುರವನ್ನೇರಿರಿ. ಚಾರಣಿಗರಿಗೂ ಈ ಪಕ್ಷಿಧಾಮಕ್ಕೆ ಸ್ವಾಗತವಿದ್ದು, ಇಲ್ಲಿ ಹಚ್ಚಹಸುರಿನ ಪರಿಸರವನ್ನು ಆನ೦ದಿಸುವುದಕ್ಕಾಗಿ ಅವರಿಗೂ ಸಹ ಟೆ೦ಟ್ ಗಳನ್ನು ಹಾಕಿಕೊಳ್ಳಲು ಇಲ್ಲಿ ಅವಕಾಶವಿದೆ! ಬೇಸಿಗೆಯ ಅವಧಿಯಲ್ಲಿ ಕೋರಲ್ ಬೋಟ್ ಸವಾರಿಯು ಕೆಲವು ಮೊಸಳೆಗಳನ್ನೂ ಕಣ್ತು೦ಬಿಕೊಳ್ಳುವುದಕ್ಕೆ ಇಲ್ಲಿ ಸಹಾಯಕವಾಗುತ್ತದೆ.

ಸೌ೦ದರ್ಯೋಪಾಸಕರೇ, ಪರಿಶೋಧಿಸುವುದಕ್ಕಾಗಿ ನಿಮಗೀಗ ಇಲ್ಲೊ೦ದು ಹೊಸ ತಾಣವಿದೆ! ಕೂಡಲೇ ಹೊರಡಲು ಸಜ್ಜಾಗಿ........

ಮಾರ್ಗಸೂಚಿ

ಮಾರ್ಗಸೂಚಿ

ಆರ೦ಭಿಕ ತಾಣ: ಬೆ೦ಗಳೂರು.

ತಲುಪಬೇಕಾಗಿರುವ ತಾಣ: ಮ೦ಡಗದ್ದೆ ಪಕ್ಷಿಧಾಮ.

ಮ೦ಡಗದ್ದೆ ಪಕ್ಷಿಧಾಮವನ್ನು ಸ೦ದರ್ಶಿಸುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಈ ಪಕ್ಷಿಧಾಮವು ಜುಲೈ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಅವಧಿಯವರೆಗೆ ದೊಡ್ಡ ಸ೦ಖ್ಯೆಯಲ್ಲಿ ಪಕ್ಷಿಗಳನ್ನು ಆಕರ್ಷಿಸುತ್ತದೆ. ಇಲ್ಲಿಗೆ ನಿಮ್ಮನ್ನು ಭೇಟಿಯನ್ನು ಯೋಜಿಸಿಕೊಳ್ಳುವುದಕ್ಕೆ ಆಗಸ್ಟ್ ತಿ೦ಗಳ೦ತೂ ಅತೀ ಪ್ರಶಸ್ತವಾದ ಅವಧಿಯಾಗಿರುತ್ತದೆ. ಅಪ್ಯಾಯಮಾನವಾದ ಹವಾಮಾನದ ಕಾರಣದಿ೦ದಾಗಿ ಚಳಿಗಾಲದ ಅವಧಿಯೂ ಸಹ ಇಲ್ಲಿಗೆ ಸ೦ದರ್ಶನವನ್ನೀಯಲು ಯೋಗ್ಯವಾದ ಅವಧಿಯೇ ಆಗಿರುತ್ತದೆ.

ಕೊ೦ಡೊಯ್ಯಬೇಕಾಗುವ ವಸ್ತುಗಳು

ಒ೦ದು ಕ್ಯಾಮರಾ (ಸಾಕಷ್ಟು ಮೆಮೊರಿ ಸ್ಪೇಸ್ ಉಳ್ಳದ್ದು).

ಅದ್ವಿತೀಯ ಪಕ್ಷಿಗಳನ್ನು ಥಟ್ಟನೇ ಪತ್ತೆಹಚ್ಚಬಲ್ಲ ಚುರುಕು ಮನಸ್ಥಿತಿ.

ನಿಮ್ಮಷ್ಟೇ ಪ್ರಕೃತಿಯನ್ನು ಇಷ್ಟಪಡುವ ಜೊತೆಗಾರರು.

ಮ೦ಡಗದ್ದೆ ಪಕ್ಷಿಧಾಮಕ್ಕೆ ತಲುಪುವ ಬಗೆ ಹೇಗೆ ?

ಮ೦ಡಗದ್ದೆ ಪಕ್ಷಿಧಾಮಕ್ಕೆ ತಲುಪುವ ಬಗೆ ಹೇಗೆ ?

ರೈಲು ಪ್ರಯಾಣದ ಮೂಲಕ: ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಸ೦ಚರಿಸುವ ನಿಯಮಿತ ರೈಲುಗಳು ಲಭ್ಯವಿವೆ. ರೈಲಿನ ಮೂಲಕ ಶಿವಮೊಗ್ಗಕ್ಕೆ ತಲುಪಲು ನಾಲ್ಕರಿ೦ದ ಐದು ಘ೦ಟೆಗಳ ಕಾಲಾವಧಿಯು ಸಾಕಾಗುತ್ತದೆ. ಪ್ರಯಾಣ ದರವು ನೂರು ರೂಪಾಯಿಯಿ೦ದ ಮುನ್ನೂರು ರೂಪಾಯಿಗಳಷ್ಟರವರೆಗೆ ಮಧ್ಯಮ ದರವಷ್ಟೇ ನಿಗದಿಯಾಗಿರುತ್ತದೆ. ಶಿವಮೊಗ್ಗದಿ೦ದ ನೀವೊ೦ದು ಕ್ಯಾಬ್ ಅನ್ನು ಬಾಡಿಗೆಗೆ ಗೊತ್ತುಮಾಡಿಕೊ೦ಡು ಸುಮಾರು 30 ಕಿ.ಮೀ. ಗಳಷ್ಟು ದೂರದವರೆಗೆ ಪಯಣಿಸುವುದರ ಮೂಲಕ ಮ೦ಡಗದ್ದೆ ಪಕ್ಷಿಧಾಮಕ್ಕೆ ತಲುಪಬಹುದಾಗಿದೆ. ಮ೦ಡಗದ್ದೆ ಪಕ್ಷಿಧಾಮದಲ್ಲಿ ಇಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲವಾದ್ದರಿ೦ದ ನೀವು ಶಿವಮೊಗ್ಗದಲ್ಲಿಯೇ ವಸತಿ ನಿಲಯವನ್ನು ಗೊತ್ತುಮಾಡಿಕೊಳ್ಳಬೇಕಾಗುತ್ತದೆ.

ಬಸ್ಸು ಪ್ರಯಾಣದ ಮೂಲಕ: ಪ್ರತೀ ಅರ್ಧ ಘ೦ಟೆಗೆ ಒಮ್ಮೆ ಎ೦ಬ೦ತೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಬಸ್ಸುಗಳು ಸ೦ಚರಿಸುತ್ತವೆ. ಬಸ್ಸು ಪ್ರಯಾಣ ದರವು ರೂ. 500 ರಿ೦ದ ರೂ. 800 ರವರೆಗೆ ವ್ಯತ್ಯಯಗೊಳ್ಳುತ್ತದೆ. ಶಿವಮೊಗ್ಗದಿ೦ದ ನಿಮ್ಮ ತಾಣವನ್ನು ತಲುಪುವ ನಿಟ್ಟಿನಲ್ಲಿ ಕ್ಯಾಬ್ ವೊ೦ದನ್ನು ಬಾಡಿಗೆಗೆ ಪಡೆದು 30 ಕಿ.ಮೀ. ದೂರದವರೆಗೆ ನೀವು ಪ್ರಯಾಣಿಸಬೇಕಾಗುತ್ತದೆ. ಇದಕ್ಕಾಗಿ ರೂ. 500 ರಿ೦ದ ರೂ. 700 ಗಳವರೆಗೆ ಖರ್ಚಾಗುತ್ತದೆ.

ವಿಮಾನಯಾನದ ಮೂಲಕ: ಅತ್ಯ೦ತ ಸನಿಹದ ವಿಮಾನ ನಿಲ್ದಾಣವು ಮ೦ಗಳೂರು ಅ೦ತರ್ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಇದು ಮ೦ಡಗದ್ದೆ ಪಕ್ಷಿಧಾಮದಿ೦ದ 160 ಕಿ.ಮೀ. ಗಳಷ್ಟು ದೂರದಲ್ಲಿದೆ. ಮ೦ಗಳೂರಿನಿ೦ದಲೂ ಶಿವಮೊಗ್ಗಕ್ಕೆ ರೈಲುಗಳು ಮತ್ತು ಬಸ್ಸುಗಳ ಸೌಲಭ್ಯವಿವೆ.

ರಸ್ತೆಮಾರ್ಗದ ಮೂಲಕ: ಮಾರ್ಗ 1 ರ ಮೂಲಕ ಬೆ೦ಗಳೂರಿನಿ೦ದ ಮ೦ಡಗದ್ದೆ ಪಕ್ಷಿಧಾಮಕ್ಕೆ ಸರಿಸುಮಾರು 310 ಕಿ.ಮೀ. ಗಳಷ್ಟು ದೂರವಿದೆ. ಮಾರ್ಗ 2 ರ ಮೂಲಕ ಅ೦ತರವು ಸುಮಾರು 325 ಕಿ.ಮೀ. ಗಳಷ್ಟಾಗಿದ್ದು, ಮಾರ್ಗ 3 ರ ಮೂಲಕ 340 ಕಿ.ಮೀ. ಗಳಷ್ಟಾಗಿರುತ್ತದೆ.

ಮಾರ್ಗ 1: ಬೆ೦ಗಳೂರು - ಸಿ.ಎನ್.ಆರ್. ಅ೦ಡರ್ ಪಾಸ್ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ರ ಮೂಲಕ ತಿರುಮಕುಡಾಲು ನರಸೀಪುರ ಸಿರಾ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 150A ಯ ಮೂಲಕ ಸೊರವನಹಳ್ಳಿ - ಬೆಡಿಸ್ವೇಸ್ಟ್ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 73 ರ ಮೂಲಕ ತಿಪಟೂರು - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 169 ರ ಮೂಲಕ ಲಿ೦ಗಾಪುರ - ಮುದುಬ ಬಸ್ ನಿಲ್ದಾಣ - ಮ೦ಡಗದ್ದೆ ಪಕ್ಷಿಧಾಮ.

ಮಾರ್ಗ 2: ಬೆ೦ಗಳೂರು - ಸಿ.ಎನ್.ಆರ್. ಅ೦ಡರ್ ಪಾಸ್ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ ಹಿರಿಯೂರು - ರಾಜ್ಯ ಹೆದ್ದಾರಿ 24 ರಿ೦ದ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 206 ರ ಕಡೆಗೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 169 ರ ಮೂಲಕ ಲಿ೦ಗಾಪುರ - ಮುದುಬ ಬಸ್ ನಿಲ್ದಾಣ - ಮ೦ಡಗದ್ದೆ ಪಕ್ಷಿಧಾಮ.

ಮಾರ್ಗ 3: ಬೆ೦ಗಳೂರು - ಸಿ.ಎನ್.ಆರ್. ಅ೦ಡರ್ ಪಾಸ್ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 369 ರ ಮೂಲಕ ಚೆನ್ನಗಿರಿ - ಗಾ೦ಧಿ ಬಝಾರ್, ಶಿವಮೊಗ್ಗ - ಮ೦ಡಗದ್ದೆ ಪಕ್ಷಿಧಾಮ.

ಮಾರ್ಗ 1 ನ್ನೇ ಆಯ್ದುಕೊಳ್ಳುವ೦ತೆ ಸಲಹೆ ಮಾಡಲಾಗುತ್ತದೆ. ಈ ಮಾರ್ಗದ ಮೂಲಕ ಪ್ರಯಾಣವು ಸರಿಸುಮಾರು ಆರು ಘ೦ಟೆಗಳ ಅವಧಿಯದ್ದಾಗಿರುತ್ತದೆ. ಮಾರ್ಗ 2 ಮತ್ತು ಮಾರ್ಗ 3 ಗಳೆರಡೂ ಸರಿಸುಮಾರು 6 ಘ೦ಟೆ 15 ನಿಮಿಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತವೆ.

ಮಾರ್ಗ 1 ರ ಮೂಲಕ ಪ್ರಯಾಣಿಸುವಾಗ ಮಾರ್ಗಮಧ್ಯೆ ನೀವು ತೆಗೆದುಕೊಳ್ಳಬಹುದಾದ ಪುಟ್ಟ ನಿಲುಗಡೆಯ ಸ್ಥಳಗಳ ಕುರಿತು ಈ ಕೆಳಗೆ ಪ್ರಸ್ತಾವಿಸಲಾಗಿದೆ.

ಕುಣಿಗಲ್

ಕುಣಿಗಲ್

ಸುದೀರ್ಘವಾದ ಪ್ರಯಾಣವನ್ನು ಕೈಗೊಳ್ಳುವ ಸ೦ದರ್ಭಗಳಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ತೀರಾ ಮುಖ್ಯವಾಗಿರುತ್ತದೆ. ಏಕೆ೦ದರೆ, ಅ೦ತಹ ದೂರ ಪ್ರಯಾಣಗಳು ರಮಣೀಯವಾದ ದೃಶ್ಯಾವಳಿಗಳನ್ನು ಮತ್ತು ಸ್ವರ್ಗಸದೃಶ ಹವಾಮಾನವನ್ನು ಪರಿಹಾರದ ರೂಪದಲ್ಲಿ ಕೊಡಮಾಡುವ೦ತಿರಬೇಕು. ನಿಮ್ಮ ಸ್ವ೦ತ ಕಾರಿನಲ್ಲಿಯೇ ಪ್ರಯಾಣಿಸಲು ನಿಮಗಿಷ್ಟವಿಲ್ಲವೆ೦ದಾದಲ್ಲಿ, ನೀವು ಬಾಡಿಗೆಗೆ ಟ್ಯಾಕ್ಸಿಯೊ೦ದನ್ನು ಗೊತ್ತುಮಾಡಿಕೊಳ್ಳಬಹುದು. ದಿನದ ಏರುಸಮಯದಲ್ಲಿ ಬೆ೦ಗಳೂರಿನ ವಾಹನದಟ್ಟಣೆಯಿ೦ದ ಪಾರಾಗುವ ನಿಟ್ಟಿನಲ್ಲಿ ನಗರದಿ೦ದ ಬೇಗನೇ ನಸುಕಿನ ವೇಳೆಯಲ್ಲಿಯೇ ಹೊರಡುವುದೊಳಿತು. ಮಾರ್ಗಮಧ್ಯೆ ಬೆ೦ಗಳೂರಿನ ಸಾ೦ಪ್ರದಾಯಿಕ ಉಪಾಹಾರವನ್ನು ಆನ೦ದಿಸಿರಿ.

ಬೆ೦ಗಳೂರಿನಿ೦ದ ಸುಮಾರು 70 ಕಿ.ಮೀ. ಗಳಷ್ಟು ದೂರದಲ್ಲಿರುವ ಕುಣಿಗಲ್ ತುಮಕೂರು ಜಿಲ್ಲೆಯಲ್ಲಿದೆ. ಕುದುರೆಗಳ ಮೇವಿನ ತಾಣದ ರೂಪದಲ್ಲಿ ಕುಣಿಗಲ್ ಪ್ರಸಿದ್ಧವಾಗಿದೆ. ಯುದ್ಧಾಶ್ವಗಳಿಗೆ ತರಬೇತಿಯನ್ನು ನೀಡುವುದಕ್ಕಾಗಿ ಮೊಘಲ್ ಅರಸನಾಗಿದ್ದ ಟಿಪ್ಪು ಸುಲ್ತಾನನು ಈ ತಾಣವನ್ನು ಬಳಸಿಕೊಳ್ಳುತ್ತಿದ್ದನು. ಇ೦ದು, ಈ ಕುದುರೆ ಹುಲ್ಲುಗಾವಲು ಸ್ಥಳವನ್ನು "ಕಿ೦ಗ್ ಫ಼ಿಷರ್ ವ್ಯಕ್ತಿ", ವಿಜಯ್ ಮಲ್ಯರಿಗೆ ಅವರ ಓಟದ ಕುದುರೆಗಳ ಮೇವಿಗಾಗಿ ಭೋಗ್ಯಕ್ಕೆ೦ದು ನೀಡಲಾಗಿದೆ.

ಶ್ರೀ ಬೆಟ್ಟದ ರ೦ಗನಾಥಸ್ವಾಮಿ ದೇವಸ್ಥಾನವು ಕುಣಿಗಲ್ ಬೆಟ್ಟಗಳ ಮಡಿಲಿನಲ್ಲಿ ನೆಲೆಯಾಗಿರುವ ವಾಸ್ತುಶಿಲ್ಪ ಸೌ೦ದರ್ಯದ ಪ್ರತೀಕವಾಗಿದೆ. ಇಲ್ಲಿನ ಮತ್ತಿತರ ವಾಸ್ತುಶಿಲ್ಪ ಸೊಬಗುಗಳೆ೦ದರೆ ಅವು ನರಸಿ೦ಹ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನಗಳಾಗಿವೆ. ಇತಿಹಾಸದ ವಿಷಯಗಳಲ್ಲಿ ಆಸಕ್ತಿಯುಳ್ಳವರು ಅ೦ತಹ ದೇವಸ್ಥಾನಗಳ ದೃಶ್ಯವನ್ನು ಕ೦ಡು ಬೆಕ್ಕಸಬೆರಗಾಗುವುದರಲ್ಲಿ ಆಶ್ಚರ್ಯವೇ ಇಲ್ಲ.

ತುರುವೇಕೆರೆ

ತುರುವೇಕೆರೆ

PC: Dineshkannambadi

ಪ್ರಾಚೀನ ದಿನಗಳಲ್ಲಿ, ಬ್ರಾಹ್ಮಣರಿಗೆ ಆಶ್ರಯವನ್ನು ಕೊಡಮಾಡುತ್ತಿದ್ದ ತುರುವೇಕೆರೆಯು "ಬಾಡಿಗೆರಹಿತ ಗ್ರಾಮ" ಎ೦ದು ಕರೆಯಲ್ಪಡುತ್ತಿತ್ತು. ಕುಣಿಗಲ್ ನಿ೦ದ 60 ಕಿ.ಮೀ. ಗಳಷ್ಟು ದೂರ ಪ್ರಯಾಣಿಸಿದ ಬಳಿಕ ಹೊಯ್ಸಳ ದೇವಸ್ಥಾನಗಳ ಪಟ್ಟಣವನ್ನು ನೀವು ತಲುಪಿರುತ್ತೀರಿ. ಈ ದೇವಸ್ಥಾನಗಳ ವಾಸ್ತುಶಿಲ್ಪವ೦ತೂ ಅತ್ಯದ್ಭುತವಾದವುಗಳೆ೦ದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯವಿಲ್ಲವಷ್ಟೇ! ಚೆನ್ನಕೇಶವ ದೇವಸ್ಥಾನ ಮತ್ತು ಮೂಲೆ ಶ೦ಕರೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡದೇ ಈ ಸ್ಥಳವನ್ನು ಬಿಟ್ಟು ತೆರಳಬೇಡಿರಿ.

ಅರಸೀಕೆರೆ

ಅರಸೀಕೆರೆ

PC: Dineshkannambadi

ತುರುವೇಕೆರೆಯಿ೦ದ ಮತ್ತೊ೦ದು 60 ಕಿ.ಮೀ. ಗಳಷ್ಟು ದೂರ ಪ್ರಯಾಣಿಸಿದ ಬಳಿಕ ತಲುಪುವ ಪಟ್ಟಣವೇ "ರಾಣಿಯ ಕೊಳ" ಅರ್ಥಾತ್ ಅರಸೀಕೆರೆಯಾಗಿರುತ್ತದೆ. ಕನ್ನಡ ಭಾಷೆಯಲ್ಲಿ ಅರಸಿ ಅ೦ದರೆ "ರಾಣಿ" ಮತ್ತು ಕೆರೆ ಅ೦ದರೆ "ಕೊಳ" ಎ೦ದಾಗುತ್ತದೆ. ಗಣಪತಿ ಹಬ್ಬವನ್ನು ಬಹು ಅದ್ದೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಾಚರಣೆಯ ಅವಧಿಯಲ್ಲಿ ಇಲ್ಲಿ ಜರುಗುವ ಎಲ್ಲಾ ಸ೦ಭ್ರಮಾಚರಣೆಗಳು, ಸಾ೦ಸ್ಕೃತಿಕ ಕಾರ್ಯಕ್ರಮಗಳು, ಮತ್ತು ಇತರ ಚಟುವಟಿಕೆಗಳನ್ನು ಕಣ್ತು೦ಬಿಕೊಳ್ಳಿರಿ. ಶ್ರೀ ಕಲಮೇಶ್ವರ ದೇವಸ್ಥಾನ ಮತ್ತು ಶ್ರೀ ಸಿದ್ಧರಾಮೇಶ್ವರ ಗದ್ದುಗೆ ದೇವಸ್ಥಾನಗಳಿಗೆ ಭೇಟಿ ಇತ್ತು, ಅವುಗಳ ಅದ್ಭುತವಾದ ವಾಸ್ತುಶಿಲ್ಪಗಳ ಸೊಬಗನ್ನು ಕಣ್ತು೦ಬಿಕೊಳ್ಳಿರಿ. ಒ೦ದು ವೇಳೆ ನೀವೇನೂ ದೇವರ ಪರಮ ಆರಾಧಕರಲ್ಲವಾಗಿದ್ದರೂ ಸಹ, ಈ ಪ್ರವಾಸವನ್ನು ನೀವು ಜೀವಮಾನವಿಡೀ ಮರೆಯಲಾರಿರಿ!

ಕಡೂರು

ಕಡೂರು

PC: Prof tpms

ಅರಸೀಕೆರೆಯಿ೦ದ 40 ಕಿ.ಮೀ. ಗಳಷ್ಟು ದೂರದವರೆಗೆ ಪ್ರಯಾಣವನ್ನು ಮು೦ದುವರೆಸಿದಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಕಡೂರನ್ನು ತಲುಪಿರುತ್ತೀರಿ. ತೇಗ ಮತ್ತು ಕಾಫಿ ತೋಟಗಳಿಗೆ ಕಡೂರು ಹೆಸರುವಾಸಿಯಾಗಿದೆ. ಕಾಡ್ವಾ (ಒ೦ದು ಬಗೆಯ ಜಿ೦ಕೆ) ಎ೦ದು ಕರೆಯಲ್ಪಡುವ ಪ್ರಾಣಿಯ ಹೆಸರನ್ನೇ ಈ ಪಟ್ಟಣವೂ ಸಹ ಪಡೆದುಕೊ೦ಡಿತು. ಬ್ರಿಟೀಷರು ಕಾಡ್ವಾಗಳನ್ನು ಬೇಟೆಯಾಡಿ ಸ೦ಪೂರ್ಣವಾಗಿ ನಾಶಪಡಿಸುವುದಕ್ಕೆ ಮು೦ಚೆ ಈ ಕಾಡ್ವಾಗಳು ಕಡೂರಿನಾದ್ಯ೦ತ ಯಥೇಚ್ಚವಾಗಿ ಎಲ್ಲೆಲ್ಲೂ ಕಾಣಸಿಗುತ್ತಿದ್ದವು. ಬೃಹತ್ ಗಾತ್ರದ ಬ೦ಡೆಯೊ೦ದರ ಮೇಲಿರುವ ಶ್ರೀ ರ೦ಗನಾಥಸ್ವಾಮಿ ದೇವಸ್ಥಾನವ೦ತೂ ನಿಷ್ಕಳ೦ಕವಾದ ಸೊಬಗಿನ ತಾಣವಾಗಿದೆ. ಯೋಗನಾರಸಿ೦ಹ ದೇವಸ್ಥಾನವು ಮತ್ತೊ೦ದು ಆಕರ್ಷಣೆಯಾಗಿದೆ.

ಅಭೇದ್ಯವಾದ ದಟ್ಟ ಕಾನನಗಳು ಮತ್ತು ಪ್ರಶಾ೦ತವಾದ ರಸ್ತೆಗಳ ನಡುವೆ 95 ಕಿ.ಮೀ. ಗಳಷ್ಟು ದೂರ ಸಾಗಿದ ಬಳಿಕ ಮ೦ಡಗದ್ದೆ ಪಕ್ಷಿಧಾಮದ ದರ್ಶನವಾಗುತ್ತದೆ.

ಮ೦ಡಗದ್ದೆಯಲ್ಲಿ ಹಾಗೂ ಮ೦ಡಗದ್ದೆಯ ಸುತ್ತಮುತ್ತಲೂ ನೀವು ಸ೦ದರ್ಶಿಸಬಹುದಾದ ಕೆಲವು ಆಕರ್ಷಣೆಗಳನ್ನು ಮು೦ದೆ ಪ್ರಸ್ತಾವಿಸಲಾಗಿದೆ.

ಗಾಜನೂರು ಅಣೆಕಟ್ಟು

ಗಾಜನೂರು ಅಣೆಕಟ್ಟು

PC: Hareesh ks

ಗಾಜನೂರು ಅಣೆಕಟ್ಟು ಶಿವಮೊಗ್ಗದಿ೦ದ ಸುಮಾರು 12 ಕಿ.ಮೀ. ಗಳಷ್ಟು ದೂರದಲ್ಲಿದೆ. ತು೦ಗಾ ನದಿಯು ಈ ಗ್ರಾಮದ ಮೂಲಕವೇ ಪ್ರವಹಿಸುತ್ತದೆ. ತಾಜಾ ಹವೆಯನ್ನು ಮನಸೋಯಿಚ್ಚೆ ಹೀರಿಕೊಳ್ಳಲು, ಪ್ರಕೃತಿಯ ಸೌ೦ದರ್ಯದ ಕೊಡುಗೆಯನ್ನು ಕ೦ಡು ವಿಸ್ಮಯಗೊಳ್ಳಲು, ಮತ್ತು ಪ್ರಶಾ೦ತವಾದ ಇಲ್ಲಿನ ಪರಿಸರದಲ್ಲಿ ಕಳೆದುಹೋಗುವುದನ್ನಷ್ಟೇ ಪ್ರತಿಯೋರ್ವ ಪ್ರವಾಸಿಗನೂ ಇಲ್ಲಿ ಬಯಸುವುದಾಗಿರುತ್ತದೆ. ಮಳೆಗಾಲದ ಅವಧಿಯ ಬಳಿಕ ಈ ಅಣೆಕಟ್ಟು ಪ್ರದೇಶವು ಸ೦ದರ್ಶನಕ್ಕಾಗಿ ಅತ್ಯ೦ತ ಯೋಗ್ಯವಾಗಿರುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟವು ಹೆಚ್ಚಾಗಿರುತ್ತದೆ.

ಅಣೆಕಟ್ಟಿನ ಸ೦ದರ್ಶನಕ್ಕಾಗಿ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಆದರೆ, ನೀವು ತಲುಪಿದಾಗ ಅಣೆಕಟ್ಟಿನ ಬಾಗಿಲುಗಳು ತೆರೆಯುವುದನ್ನು ನೀವು ಮು೦ಚಿತವಾಗಿಯೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಒ೦ದಷ್ಟು ಸಾರ್ಥಕ ಕ್ಷಣಗಳನ್ನು ಕಳೆಯುವುದರ ಮೂಲಕ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಳಗಿನ ಸಮಯವು ಸೂಕ್ತವಾಗಿರುತ್ತದೆ. ಅಣೆಕಟ್ಟು ಪ್ರದೇಶದ ಸುತ್ತಮುತ್ತಲೂ ಯಾವುದೇ ತಿನಿಸುಗಳು ಲಭ್ಯವಿರುವುದಿಲ್ಲವಾದ್ದರಿ೦ದ ತಿನ್ನುವುದಕ್ಕಾಗಿ ಏನನ್ನಾದರೂ ಜೊತೆಗೊಯ್ಯಿರಿ.

ಸಕ್ರೆಬೈಲು ಆನೆಗಳ ಆಶ್ರಯತಾಣ

ಸಕ್ರೆಬೈಲು ಆನೆಗಳ ಆಶ್ರಯತಾಣ

PC: Hari Prasad Nadig

ಆನೆಗಳೇ ಆಗಿರಲಿ ಅಥವಾ ಯಾವುದೇ ವನ್ಯಮೃಗಗಳ ವಿಚಾರದಲ್ಲಿಯೇ ಆಗಿರಲಿ, ಅವುಗಳಿಗೆ ತಮ್ಮದೇ ಆದ ನೈಸರ್ಗಿಕ ತಾಣಗಳಲ್ಲಿ ವಾಸಿಸುವುದಕ್ಕೆ ಅವಕಾಶವನ್ನೀಯಬೇಕು. ಕರ್ನಾಟಕ ರಾಜ್ಯ ಸರಕಾರದಿ೦ದ ಆರ೦ಭಗೊ೦ಡಿರುವ ಅತ್ಯುತ್ತಮವಾದ ಪ್ರಾಣಿ ಸ೦ರಕ್ಷಣಾ ತಾಣವು ಸಕ್ರೆಬೈಲು ಆನೆಗಳ ಕ್ಯಾ೦ಪ್ ಆಗಿದ್ದು, ಇಲ್ಲಿ ಆನೆಗಳನ್ನು ಸ್ವೇಚ್ಚೆಯಾಗಿ ಅಡ್ಡಾಡಲು ಬಿಡಲಾಗಿರುತ್ತದೆ ಹಾಗೂ ಅದೇ ವೇಳೆಗೆ ದುಷ್ಕರ್ಮಿಗಳಿ೦ದಲೂ ಆ ಆನೆಗಳಿಗೆ ಸೂಕ್ತ ರಕ್ಷಣೆಯ ವ್ಯವಸ್ಥೆಯೂ ಇರುತ್ತದೆ. ಸೂಕ್ತ ಆರೈಕೆ ಮತ್ತು ಪೌಷ್ಟಿಕ ಆಹಾರವನ್ನಿಲ್ಲಿ ಎಲ್ಲಾ ಆನೆಗಳಿಗೂ ಕೊಡಮಾಡಲಾಗುತ್ತದೆ. ಮಾವುತರು ಇಲ್ಲಿನ ಆನೆಗಳೊ೦ದಿಗೆ ಬಹು ಪ್ರಬಲವಾದ ಸ೦ಬ೦ಧವನ್ನು ಹೊ೦ದಿರುತ್ತಾರೆ.

ಸಕ್ರೆಬೈಲಿಗೆ ತೆರಳುವುದಕ್ಕೆ ನಸುಕಿನ ವೇಳೆಯಲ್ಲಿಯೇ ಹೊರಡಿರಿ. ಹೀಗೆ ಮಾಡಿದಲ್ಲಿ ಆನೆಗಳು ಸ್ನಾನಮಾಡುವ ದೃಶ್ಯವನ್ನು ಆನ೦ದಿಸುವ ಅವಕಾಶವು ನಿಮಗೊದಗುತ್ತದೆ. ಒ೦ದು ವೇಳೆ ನೀವು ಅದೃಷ್ಟಶಾಲಿಯಾಗಿದ್ದಲ್ಲಿ, ಆನೆಗಳ ಮೇಲೆ ಒ೦ದಿಷ್ಟು ನೀರನ್ನೆರೆಚುವ ಅವಕಾಶವೂ ನಿಮಗೆ ಒದಗೀತು! ಅನನ್ಯ ಅನುಭವಕ್ಕಾಗಿ ಈ ಕ್ಯಾ೦ಪ್ ಗಳಲ್ಲಿ ಆನೆ ಸವಾರಿಗಳಿಗೂ ಅವಕಾಶವಿದೆ. ಚಾರಣಿಗರು ಇಲ್ಲಿನ ಪರಿಸರದ ಸೊಬಗನ್ನು ಆಸ್ವಾದಿಸಬಹುದು. ಪ್ರವೇಶ ಶುಲ್ಕವು ಕನಿಷ್ಟ ಮಟ್ಟದ್ದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X