Search
  • Follow NativePlanet
Share
» »ಆಧಾರ್‌ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆ

ಆಧಾರ್‌ ಲಿಂಕ್ ಮಾಡಿದ್ರೆ ತಿಂಗಳಲ್ಲಿ 12 ಟಿಕೇಟ್ ಬುಕ್ ಮಾಡಬಹುದಂತೆ

ರೈಲಿನಲ್ಲಿ ಓಡಾಡೋದಂದ್ರೆ ಬಹಳಷ್ಟು ಜನರಿಗೆ ಕಂಫರ್ಟ್‌ ಆಗಿರುತ್ತದೆ. ಪ್ರಯಾಣನೂ ಆರಾಮದಾಯಕವಾಗಿರುತ್ತದೆ. ಹಾಗೆಯೇ ಟಿಕೇಟ್‌ ದರವೂ ಕಡಿಮೆ ಇರುತ್ತದೆ. ಪ್ರಯಾಣಿಕರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆಯಾಗಬಾರದೆಂದು ಐಆರ್‌ಸಿಟಿಸಿಯು ಟಿಕೇಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಪ್ರಯತ್ನಿಸುತ್ತಿದೆ.

ಟಿಕೇಟ್ ಬುಕ್

ರೈಲು ನಿಲ್ದಾಣಕ್ಕೆ ಹೋಗಿ ಟಿಕೇಟ್ ಬುಕ್ ಮಾಡೊದಕ್ಕಿಂತ ಆನ್‌ಲೈನ್ ಮೂಲಕ ಮುಂಚಿತವಾಗಿ ಟಿಕೇಟ್ ಬುಕ್ ಮಾಡೋದು ಬಹಳ ಸುಲಭ. ಇನ್ನು ತತ್ಕಾಲ್ ಮೂಲಕವಂತೂ ಬಹಳ ಬೇಗನೇ ಟಿಕೇಟ್ ಬುಕ್ ಮಾಡಬಹುದಾಗಿದೆ.

ಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿಮಕರ ಸಂಕ್ರಾಂತಿಯಂದು ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗೋದನ್ನು ಮಿಸ್ ಮಾಡಬೇಡಿ

ಒಂದು ತಿಂಗಳಲ್ಲಿ 12 ಟಿಕೇಟ್ ಬುಕಿಂಗ್

ರೈಲಿನಲ್ಲಿ ಪ್ರಯಾಣ ಮಾಡುವ ಬಹುತೇಕರು ಐಆರ್‌ಸಿಟಿಸಿ ವೆಬ್‌ಸೈಟ್‌ ಯೂಸರ್‌ ಐಡಿಯನ್ನು ಹೊಂದಿರುತ್ತಾರೆ. ಈ ಹಿಂದೆ ಒಂದು ಯೂಸರ್‌ ಐಡಿಯಲ್ಲಿ ತಿಂಗಳಿಗೆ ಬರೀ 6 ಟಿಕೇಟ್‌ ಬುಕ್ ಮಾಡಬಹುದಾಗಿತ್ತು. ಆದರೆ ಇದೀಗ ಒಂದು ಯೂಸರ್ ಐಡಿಯಲ್ಲಿ ತಿಂಗಳಿಗೆ 12 ಟಿಕೇಟ್ ಬುಕ್ ಮಾಡಬಹುದಾಗಿದೆ.

120ದಿನ ಮುಂಚಿತವಾಗಿ ಬುಕ್ ಮಾಡಬಹುದು

ಯಾತ್ರಾ ನಿಯಮದ ಪ್ರಕಾರ ಪ್ರಯಾಣಿಕರು ಹೊರಡುವ ದಿನದಿಂದ 120ದಿನ ಮುಂಚಿತವಾಗಿ ಟಿಕೇಟ್ ಬುಕ್ ಮಾಡಬಹುದು. ಒಂದು ದಿನದಲ್ಲಿ ಒಂದು ಯೂಸರ್ ಐಡಿಯಿಂದ ಬೆಳಗ್ಗೆ 8 ಗಂಟೆಯಿಂದ 10 ಗಂಟೆಬರೆಗೆ ಕೇವಲ 2 ಟಿಕೇಟ್ ಮಾತ್ರ ಬುಕ್ ಮಾಡಬಹುದು.

ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ! ತ್ರೇತಾಯುಗದಿಂದಲೂ ಇಂದಿನವರೆಗೆ ಇಲ್ಲಿ ಉರಿಯುತ್ತಿದೆ ಅಖಂಡ ಜ್ಯೋತಿ!

ಯೂಸರ್ ಅಕೌಂಟ್‌

ಐಆರ್‌ಸಿಟಿಸಿಯ ವೆಬ್‌ಸೈಟ್‌ನಲ್ಲಿ ನಿಮ್ಮ ಯೂಸರ್ ಅಕೌಂಟ್‌ನಿಂದ ಆಧಾರ್‌ ಕಾರ್ಡ್‌ನ ಐಡಿ ಲಿಂಕ್‌ ಮಾಡಲು ನಿಮಗೆ ಮೈ ಪ್ರೊಫೈಲ್ ಕೆಟಗರಿಯ ಕೆಳಗೆ ನೀಡಲಾಗಿರುವ ಕೆವೈಸಿ ಕ್ಲಿಕ್ ಮಾಡಬೇಕು. ಆನಂತರ ನಿಮ್ಮ ಆಧಾರ್‌ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನೀಡಲಾಗಿರುವ ಜಾಗದಲ್ಲಿ ತುಂಬಬೇಕು. ಒಮ್ಮೆ ಈ ಪ್ರಕ್ರಿಯೆ ಪೂರ್ಣಗೊಂಡರೆ ನೀವು ಒಂದು ತಿಂಗಳಲ್ಲಿ 12 ರೈಲು ಟಿಕೇಟ್‌ನ್ನು ಬುಕ್ ಮಾಡಬಹುದು.

ತತ್ಕಾಲ್ ಟಿಕೇಟ್

ತತ್ಕಾಲ್ ಟಿಕೇಟ್ ಪ್ರಯಾಣದ ಒಂದು ದಿನ ಮುಂಚಿತವಾಗಿಯೂ ಬುಕ್ ಮಾಡಬಹುದು. ತತ್ಕಾಲ್ ಟಿಕೇಟ್ ಬುಕ್ ಮಾಡುವುದಾದರೆ ಬುಕ್ಕಿಂಗ್ ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾಗುತ್ತದೆ. ಸ್ಲೀಪರ್‌ ಕೋಚ್‌ಗಾಗಿ 11 ಗಂಟೆಯಿಂದ ಆರಂಭವಾಗುತ್ತದೆ.

ಮುದುಮಲೈಯಲ್ಲಿ ಜಂಗಲ್ ಸಫಾರಿ ಮಜಾ ಅನುಭವಿಸಿ ಮುದುಮಲೈಯಲ್ಲಿ ಜಂಗಲ್ ಸಫಾರಿ ಮಜಾ ಅನುಭವಿಸಿ

ಟ್ರಾವೆಲ್ ಏಜೆಂಟ್ಸ್‌

ಐಆರ್‌ಸಿಟಿಸಿ ಮಾಹಿತಿ ಪ್ರಕಾರ ಬೆಳಗ್ಗೆ 8 ಗಂಟೆಯಿಂದ 8.30 ರವರೆಗೆ. 10 ಗಂಟೆಯಿಂದ 10.30 ರ ನಡುವೆ ಟ್ರಾವೆಲ್ ಏಜೆಂಟ್ಸ್‌ ಮೂಲಕ ಟಿಕೇಟ್ ಬುಕಿಂಗ್ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X