• Follow NativePlanet
Share
» »ನೀವು ಎಂದಾದರು ಈ ಸ್ಥಳದಲ್ಲಿ ಸ್ಟೇ ಮಾಡಿದ್ದೀರಾ?

ನೀವು ಎಂದಾದರು ಈ ಸ್ಥಳದಲ್ಲಿ ಸ್ಟೇ ಮಾಡಿದ್ದೀರಾ?

Written By:

ವಾರಾಂತ್ಯ ಬಂದರೆ ಎಲ್ಲಿಗಾದರು ಪ್ರಯಾಣ ಮಾಡಿ ಏನ್‍ಜಾಯ್ ಮಾಡಬೇಕು ಎನ್ನಿಸುವುದು ಸಾಮಾನ್ಯವಾದ ಸಂಗತಿಯೇ. ಆದರೆ ಪ್ರಯಾಣ ಮಾಡುವ ಮುಂಚೆ ಪ್ರವಾಸಿಗರು ಮೊದಲು ಅಲ್ಲಿನ ಸೌಕರ್ಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಕೆಲವು ಬಾರಿ ತಿಳಿಯದೇ ಹೋಗಿ ಯಾಕಾದರು ಬಂದೆವೂ ಎಂದು ಅನಿಸುತ್ತದೆ.

ಕೆಲವು ಪ್ರಯಾಣಿಕರು ಮಾತ್ರ ಪ್ರಯಾಣ ಮಾಡುವ ಮುಂಚೆಯೇ ಪ್ರವಾಸಿಗರು ಮುಂಜಾಗ್ರತೆಗಾಗಿ ಹೋಟೆಲ್‍ಗಳನ್ನು ಮೊದಲೇ ಬುಕ್ ಮಾಡುತ್ತಾರೆ. ಕೆಲವು ಸ್ಥಳಗಳನ್ನು ಅಲ್ಲಿಗೆ ತಲುಪಿದಾಗ ನಿಮ್ಮನ್ನು ಬೇಸರಗೊಳಿಸುತ್ತವೆ. ಹಾಗಾಗಿಯೇ ನಿಮ್ಮ ನೇಟಿವ್ ಪ್ಲಾನೆಟ್ ಕೆಲವು ಅದ್ಭುತವಾದ ಪ್ರವಾಸಿ ತಾಣಗಳ ವಸತಿ ಸೌಕರ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ.

ಶಾಮ್-ಈ-ಸಾರ್‍ಹದ್ ವಿಲೇಜ್ ರೆರ್ಸಾಟ್, ಹೋತ್ಕ

ಶಾಮ್-ಈ-ಸಾರ್‍ಹದ್ ವಿಲೇಜ್ ರೆರ್ಸಾಟ್, ಹೋತ್ಕ

ಶಾಮ್-ಈ-ಸಾರ್‍ಹದ್ ವಿಲೆಕ್ ರೆರ್ಸಾಟ್, ಗುಜರಾತ್ ರಾಜ್ಯದಲ್ಲಿನ ಹೋತ್ಕ ಎಂಬ ಗ್ರಾಮದಲ್ಲಿ ಇದೆ. ಇಲ್ಲಿ ಸ್ಟೇ ಮಾಡಿದರೆ, ಗುಜರಾತ್‍ನ ಗ್ರಾಮೀಣದ ಸುಂದರವಾದ ವಾತವರಣವನ್ನು ಅನುಭವಿಸಬಹುದು.


PC:hodka

ಶಾಮ್-ಈ-ಸಾರ್‍ಹದ್ ವಿಲೇಜ್ ರೆರ್ಸಾಟ್, ಹೋತ್ಕ

ಶಾಮ್-ಈ-ಸಾರ್‍ಹದ್ ವಿಲೇಜ್ ರೆರ್ಸಾಟ್, ಹೋತ್ಕ

ಇಲ್ಲಿನ ರೆರ್ಸಾಟ್ ಅತ್ಯಂತ ಸೌಕರ್ಯಯುತವಾಗಿದ್ದು, ವಸತಿಯನ್ನು ಒದಗಿಸುತ್ತದೆ. ಅವುಗಳಲ್ಲಿ ಫ್ರೆಂಡ್ಲಿ ಟೆಂಟ್ಸ್, ಫ್ಯಾಮಿಲಿ ಕಾಟೇಜ್‍ಗಳು, ಸೂಟ್ ಭುನ್ಗಾಸ್. ಭುನ್ಗಾಸ್ ಎಂದರೆ ಅಲ್ಲಿನ ಬನ್ನಿ ಎಂಬ ಪ್ರದೇಶದಲ್ಲಿನ ಗುಡಿಸಲಿನಂತೆ ಹೋಲುವಂತೆ ಇರುವ ವಸತಿಯಾಗಿದೆ.

ಪ್ರಾರಂಭ: ಅಕ್ಟೋಬರ್ ನಿಂದ ಮಾರ್ಚ್

ರಾತ್ರಿ ಖರ್ಚು: ರೂ. 3400 ರೂಪಾಯಿಯಿಂದ ಪ್ರಾರಂಭವಾಗುತ್ತದೆ.


PC:AnjanaChandan

ಹೌಸ್ ಬೋಟ್, ಕೇರಳ

ಹೌಸ್ ಬೋಟ್, ಕೇರಳ

ಕೇರಳ ಎಂದರೆ ಮೊದಲು ನೆನಪಾಗುವುದು ಹೌಸ್ ಬೋಟ್. ಹೌಸ್ ಬೋಟ್‍ನ ವಸತಿಯು ಎಲ್ಲಾ ವರ್ಗಗಳ ಪ್ರವಾಸಿಗರಿಗೂ ಆರ್ಕಷಿಸುತ್ತದೆ. ಬ್ಯಾಕ್ ವಾಟರ್ ಅಲೆಗಳ ಮೇಲೆ ಹಡಗಿನಲ್ಲಿ ಶಿಖಾರಿ ಮಾಡುವ ಹಾಗೆ ಜೀವನದಲ್ಲಿ ಒಂದು ನೆನಪಾಗಿ ಉಳಿಯುವ ಪ್ರವಾಸವಾಗುತ್ತದೆ.

PC:Utpal Nath

ಹೌಸ್ ಬೋಟ್, ಕೇರಳ

ಹೌಸ್ ಬೋಟ್, ಕೇರಳ

ಹಡಗಿನಲ್ಲಿ ಪ್ರಯಾಣಿಸುವಾಗ ಸುತ್ತಲೂ ಇರುವ ಹಚ್ಚ ಹಸಿರಿನಿಂದ ಕೂಡಿರುವ ವಾತಾವರಣ, ಮೊಗಿಲೆತ್ತರದ ಕೊಬ್ಬರಿ ಮರಗಳು, ಸುಂದರವಾದ ತೋಟಗಳು ಇನ್ನು ಹಲವಾರು ಪ್ರಾಕೃತಿಕ ಸೌಂದರ್ಯವನ್ನು ಕಂಡು ಆನಂದಿಸಬಹುದಾಗಿದೆ.

ಇಲ್ಲಿನ ರಾತ್ರಿಯ ಖರ್ಚು ರೂ 6000 ದಿಂದ 7000 ರೂಪಾಯಿಯಿಂದ ಪ್ರಾರಂಭವಾಗುತ್ತದೆ.


PC::Shameer Thajudeen

ಜೋಸ್ಟಲ್, ಜೈಸಲ್ಮಿರ್

ಜೋಸ್ಟಲ್, ಜೈಸಲ್ಮಿರ್

ಜೋಸ್ಟಲ್ ಹೋಟೆಲ್, ಜೈಸಲ್ಮಿರ್‍ನಲ್ಲಿನ ಗಾಡಿಸರ್ ಎಂಬ ಕೊಳದ ಅಡ್ಡಲಾಗಿ ಇದೆ. ಇಲ್ಲಿಗೆ ಪ್ರಪಂಚದಾದ್ಯಂತ ಪ್ರವಾಸಿಗರು ಇಷ್ಟ ಪಟ್ಟು ಭೇಟಿ ನೀಡುತ್ತಾರೆ.

PC:zostel


ಜೋಸ್ಟಲ್, ಜೈಸಲ್ಮಿರ್

ಜೋಸ್ಟಲ್, ಜೈಸಲ್ಮಿರ್

ಮರುಭೂಮಿಯಿಂದ ಕೂಡಿರುವ ಈ ನಗರದ ಸಂಸ್ಕøತಿ, ಸಂಪ್ರದಾಯಗಳು ಇಲ್ಲಿ ನಾವು ಸವಿಯಬಹುದಾಗಿದೆ.

ರಾತ್ರಿ ಖರ್ಚು: ರೂ. 1200 ರೂಪಾಯಿಯಿಂದ ಪ್ರಾರಂಭವಾಗುತ್ತದೆ.

PC::user:Flicka

ಗುಹಾಂತರ ಕೇವ್ ರೆರ್ಸಾಟ್, ಬೆಂಗಳೂರು

ಗುಹಾಂತರ ಕೇವ್ ರೆರ್ಸಾಟ್, ಬೆಂಗಳೂರು

ಬೆಂಗಳೂರಿನಲ್ಲಿನ ಗುಹಾಂತರ ಕೇವ್ ರೆರ್ಸಾಟ್, ಭಾರತ ದೇಶದಲ್ಲಿಯೇ ಮೊಟ್ಟ ಮೊದಲನೇ ಕೇವ್ ರೆರ್ಸಾಟ್ ಆಗಿದೆ. ಈ ರೆರ್ಸಾಟ್ ಪ್ರವಾಸಿಗರಿಗೆ ಉತ್ತಮವಾದ ಸೇವ, ಸೌಕರ್ಯವನ್ನು ಒದಗಿಸುತ್ತಿದೆ. ಹಾಗಾಗಿ ಇಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

PC:guhantara

ಗುಹಾಂತರ ಕೇವ್ ರೆರ್ಸಾಟ್, ಬೆಂಗಳೂರು

ಗುಹಾಂತರ ಕೇವ್ ರೆರ್ಸಾಟ್, ಬೆಂಗಳೂರು

ಇಲ್ಲಿ ಬಾರ್, ಸ್ವಿಮ್ಮಿಂಗ್ ಫೂಲ್, ರೆಸ್ಟೋರೆಂಟ್, ಗಾರ್ಡನ್ ಮತ್ತು ಫನ್ ಗೇಮ್ಸ್‍ನ ಜೊತೆ ಜೊತೆಗೆ ಸಾಹಸಮಯವಾದ ಕ್ರೀಡೆಯನ್ನು ಕೂಡ ಆನಂದಿಸಬಹುದು.

PC::wikimedia.org

ಟ್ರಿ ಹೌಸ್ ರೆರ್ಸಾಟ್, ಜೈಪೂರ್

ಟ್ರಿ ಹೌಸ್ ರೆರ್ಸಾಟ್, ಜೈಪೂರ್

ಪ್ರಕೃತಿಯ ಮೇಲೆ ಆಸಕ್ತಿ ಇರುವವರು ಒಮ್ಮೆ ಜೈಪುರದಲ್ಲಿನ ಟ್ರಿ ಹೌಸ್ ರೆರ್ಸಾಟ್‍ಗೆ ಒಮ್ಮೆ ಭೇಟಿ ಕೊಡಿ. ಇಲ್ಲಿನ ವಸತಿಗಳು ಫೈವ್ ಸ್ಟಾರ್ ಹೋಟೆಲ್‍ಗಳಿಗಿಂತ ಸುಂದರವಾಗಿರುತ್ತದೆ. ಹಾಗಾಗಿಯೇ ಇಲ್ಲಿಗೆ ದೇಶ, ವಿದೇಶದಿಂದ ಟ್ರಿ ಹೌಸ್ ರೆರ್ಸಾಟ್‍ಗೆ ಭೇಟಿ ನೀಡುತ್ತಾರೆ.


PC:guhantara

ಟ್ರಿ ಹೌಸ್ ರೆರ್ಸಾಟ್, ಜೈಪೂರ್

ಟ್ರಿ ಹೌಸ್ ರೆರ್ಸಾಟ್, ಜೈಪೂರ್

ಬಾರ್ ಮತ್ತು ಪಬ್, ಬಿಸೆನೆಸ್ ಸೆಂಟರ್, ಕಾಫಿ ಷಾಪ್, ಜಿಮ್ ಸೆಂಟರ್, ರೆಸ್ಟೋರೆಂಟ್, ಸ್ವಿಮ್ಮಿಂಗ್ ಫೂಲ್, ಫನ್ ಅಡ್ವೆಂಚರ್ ಆಟಗಳಂತಹ ಇತರ ಸೌಲಭ್ಯಗಳು ಕೂಡ ಈ ರೆರ್ಸಾಟ್ ಒದಗಿಸುತ್ತದೆ.

PC:treehouseresort

ಹೋಮಿಸ್ ಮೊನಾಸ್ಟರಿ, ಲಡಖ್

ಹೋಮಿಸ್ ಮೊನಾಸ್ಟರಿ, ಲಡಖ್

ಹೋಮಿಸ್ ಮೊನಾಸ್ಟರಿ ಜಮ್ಮು ರಾಜ್ಯದಲ್ಲಿನ ಲಡಖ್‍ನಲ್ಲಿದೆ. ಇಲ್ಲಿ ಟಿಬೆಟ್ ಬುದ್ಧರು ವಾಸಿಸುತ್ತಾರೆ. ಹಿಂದೂಗಳಿಗೆ ವೇದ ಪಾಠಶಾಲೆಗಳು ಹೇಗೂ ಬೌದ್ಧರಿಗೂ ಈ ಮೊನಾಸ್ಟರಿ ಹಾಗೆ. ಟಿಬೆಟ್ ನಿರ್ಮಾಣ ಶೈಲಿಯಲ್ಲಿರುವ ಈ ಆಶ್ರಮಗಳು ಸಂಸ್ಕøತಿ ಹಾಗು ಜೀವನ ಶೈಲಿಗಳನ್ನು ಕಾಣಬಹುದಾಗಿದೆ.


PC: hamon jp

ಹೋಮಿಸ್ ಮೊನಾಸ್ಟರಿ, ಲಡಖ್

ಹೋಮಿಸ್ ಮೊನಾಸ್ಟರಿ, ಲಡಖ್

ಒಂದು ದಿನ ಇಂಥಹ ಸುಂದರವಾದ ಪ್ರದೇಶದಲ್ಲಿ ಇರಬೇಕು ಎಂದು ನೀವು ಬಯಸಿದರೆ ನಿಮ್ಮ ಹಲವಾರು ಚಿಂತೆಗಳು ದೂರವಾಗಿ ನೆಮ್ಮದಿಯಾಗಿರಬಹುದು.

ರಾತ್ರಿ ಖರ್ಚು: ರೂ. 250 ರೂಪಾಯಿಯಿಂದ ಪ್ರಾರಂಭವಾಗುತ್ತದೆ.


PC: Ineb-2553

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ