Search
  • Follow NativePlanet
Share
» »ಹಲವಾರು ಅದ್ಭುತಗಳನ್ನು ಹೊಂದಿರುವ ದೇವಾಲಯವಿದು!

ಹಲವಾರು ಅದ್ಭುತಗಳನ್ನು ಹೊಂದಿರುವ ದೇವಾಲಯವಿದು!

ರಾಣಾಕ್‍ಪುರ್, ರಾಜಸ್ಥಾನ ರಾಜ್ಯದ ಪಾಲಿ ಜಿಲ್ಲೆಯಲ್ಲಿನ ಸಾದ್ರಿ ಪಟ್ಟಣ ಸಮೀಪದಲ್ಲಿರುವ ಒಂದು ಚಿಕ್ಕದಾದ ನಗರ. ಕರಾವಳಿ ಪರ್ವತ ಶ್ರೇಣಿಗಳಲ್ಲಿರುವ ಈ ಪಟ್ಟಣವು, ಉದಯಪೂರ್ ಮತ್ತು ಜೋಧಪೂರ್ ನಗರದ ಮಧ್ಯದಲ್ಲಿದೆ. "ರಾಣಾಕ್‍ಪುರ್ ಜೈನ ದೇವಾಲಯ" ಇದು

ರಾಣಾಕ್‍ಪುರ್, ರಾಜಸ್ಥಾನ ರಾಜ್ಯದ ಪಾಲಿ ಜಿಲ್ಲೆಯಲ್ಲಿನ ಸಾದ್ರಿ ಪಟ್ಟಣ ಸಮೀಪದಲ್ಲಿರುವ ಒಂದು ಚಿಕ್ಕದಾದ ನಗರ. ಕರಾವಳಿ ಪರ್ವತ ಶ್ರೇಣಿಗಳಲ್ಲಿರುವ ಈ ಪಟ್ಟಣವು, ಉದಯಪೂರ್ ಮತ್ತು ಜೋಧಪೂರ್ ನಗರದ ಮಧ್ಯದಲ್ಲಿದೆ. "ರಾಣಾಕ್‍ಪುರ್ ಜೈನ ದೇವಾಲಯ" ಇದು ದೇಶದಲ್ಲಿಯೇ ಅತ್ಯಂತ ದೊಡ್ಡ ಮತ್ತು ಪ್ರಪಂಚದ ಅದ್ಭುತವಾದ ಕಟ್ಟಡಗಳಲ್ಲಿ ಒಂದಾಗಿದೆ. ಜೈನ ಧರ್ಮ ಮಹತ್ವವನ್ನು ಪಡೆದಿರುವ ಈ ದೇವಾಲಯವನ್ನು ಕ್ರಿ.ಶ 15 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು.

ಒಂದು ಕಾಲದಲ್ಲಿ ಒಬ್ಬ ಭಕ್ತನು ಇದ್ದನು. ಆತ ಒಂದು ರಾತ್ರಿ ನಿದ್ರಿಸುತ್ತಿರುವಾಗ ಕನಸ್ಸಿನಲ್ಲಿ ಒಂದು ರಥ ಕಾಣಿಸಿತಂತೆ. ಬೆಳಗ್ಗೆ ಆಗುತ್ತಿದ್ದಂತೆ ರಾಜನನ್ನು ಸಂದರ್ಶನ ಮಾಡಿ ತನ್ನ ರಾತ್ರಿಯ ಕನಸ್ಸನ್ನು ತಿಳಿಸಿದನಂತೆ. ಆ ರಾಜನು ಅಂಥಹದೇ ದೇವಾಲಯವನ್ನು ನಿರ್ಮಾಣ ಮಾಡಿದನಂತೆ. ಆ ದೇವಾಲಯವೇ ರಾಜಸ್ಥಾನದ "ರಾಣಾಕ್‍ಪುರ್ ದೇವಾಲಯ".

ರಾಣಾಕ್‍ಪುರ್ ಸುಮಾರು 9 ಕಿ.ಮೀ ದೂರದಲ್ಲಿ ಕುಂಭಾಲ್ ಘರ್ ಎಂಬ ಮತ್ತೊಂದು ಪ್ರವಾಸಿತಾಣ ಕೂಡ ಇದೆ. ಕುಂಭಾಲ್ ಒಂದು ಚಾರಿತ್ರಿಕವಾದ ಪ್ರದೇಶ ಮತ್ತು ಈ ಸ್ಥಳದಲ್ಲಿ ರಾಜರು ನಿವಾಸಿಸಿದ್ದ ಆನೇಕ ಮಹಲ್ಸ್‍ಗಳು, ಕೋಟೆಗಳು, ರಾಜಭವನಗಳನ್ನು ಕಾಣಬಹುದಾಗಿದೆ. ಸಮಯವಿದ್ದರೆ ಪ್ರಾಣಿಗಳ ಪ್ರೇಮಿಗಳು ಸಮೀಪದಲ್ಲಿಯೇ ಇರುವ ಅಭಯಾರಣ್ಯಕ್ಕೆ ಭೇಟಿ ನೀಡಬಹುದಾಗಿದೆ.

ಜೈನ ದೇವಾಲಯ

ಜೈನ ದೇವಾಲಯ

ರಾಣಾಕ್‍ಪುರ್‍ನಲ್ಲಿನ ಜೈನ ದೇವಾಲಯವು ಸುಮಾರು 48000 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ಅದ್ಭುತವಾದ ದೇವಾಲಯವನ್ನು ಅಮೃತಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಸುಮಾರು 108 ಅಡಿ ಎತ್ತರದಲ್ಲಿ ಹಾಗು 3 ಅಂತಸ್ತನ್ನು ಹೊಂದಿರುವ ಈ ದೇವಾಲಯದ ಒಳಗೆ 1444 ಅಮೃತಶಿಲೆಯ ಸ್ತಂಭಗಳನ್ನು, 80 ಶಿಖರಗಳನ್ನು, ಹಲವಾರು ಅದ್ಭುತವಾದ ಶಿಲ್ಪಗಳನ್ನು ಹೊಂದಿದೆ.

Daniel Mennerich

ಜೈನ ದೇವಾಲಯ

ಜೈನ ದೇವಾಲಯ

ದೇವಾಲಯದ ಒಳಗೆ ಧ್ಯಾನ ಮಂದಿರದಲ್ಲಿರುವ ಸ್ತಂಭಗಳು ಸೂರ್ಯನ ಕಾಂತಿ ಚಿಮ್ಮಿ ಹಳದಿ ಹಾಗು ನೀಲಿ ಬಣ್ಣದಲ್ಲಿ ಮಾರ್ಪಾಟಾಗುತ್ತದೆ. ಇದು ಪ್ರವಾಸಿಗರಿಗೆ ಹಾಗು ಭಕ್ತರಿಗೆ ಮತ್ತಷ್ಟು ಆಕರ್ಷಿಸುತ್ತದೆ. 108 ಸರ್ಪಗಳ ಹಿಂದೆ ಕೆತ್ತನೆ ಮಾಡಲಾದ ಅಮೃತಶಿಲೆ ವಿಗ್ರಹವು ದೇವಾಲಯದಲ್ಲಿ ಮತ್ತೊಂದು ಆಕರ್ಷಣೆ. ಇದು ಏಕಶಿಲಾ ಮೂರ್ತಿಯಾಗಿದ್ದು ಅತ್ಯಂತ ಸುಂದರವಾಗಿದೆ.

Shakti

ಜೈನ ದೇವಾಲಯ

ಜೈನ ದೇವಾಲಯ

4 ದಿಕ್ಕಗಳಿಗೆ ಇರುವ ದ್ವಾರಗಳು ಇರುವ ಈ ದೇವಾಲಯದಲ್ಲಿ ಮಧ್ಯದಲ್ಲಿ ಜೈನ ತೀರ್ಥಂಕರನಾದ ಆದಿನಾಥನು ನೆಲೆಸಿದ್ದಾನೆ. ಅದರ ಸುತ್ತ 29 ಮಂದಿರಗಳು, 80 ಶಿಖರಗಳು, 84 ದೇವಾತ ಮೂರ್ತಿಗಳ ಪ್ರತಿಮೆಗಳು ಇಲ್ಲಿವೆ.

Daniel Mennerich

ಜೈನ ದೇವಾಲಯ

ಜೈನ ದೇವಾಲಯ

ದೇವಾಲಯದಲ್ಲಿನ ಸುಂದರವಾದ ಗಂಟೆಗಳು ದೇವಾಲಯಕ್ಕೆ ಮತ್ತಷ್ಟು ಮೆರುಗನ್ನು ನೀಡುತ್ತದೆ. ಸುಮಾರು 108 ಕಿ.ಮೀ ಭಾರವಾಗಿರುವ ಇಲ್ಲಿನ ಗಂಟೆಗಳು ಬಾರಿಸಿದರೆ ಸುತ್ತಮುತ್ತಲಿನ ಸ್ಥಳಗಳಿಗೆಲ್ಲಾ ಪ್ರತಿಧ್ವನಿಸುತ್ತದೆ.


Daniel Mennerich

ಜೈನ ದೇವಾಲಯ

ಜೈನ ದೇವಾಲಯ

ತನ್ನ ರಾಜ್ಯದಲ್ಲಿನ ಭಕ್ತನ ಕನಸ್ಸನ್ನು ಆಧಾರವಾಗಿಟ್ಟುಕೊಂಡು ಮೇವಾರದ ರಾಜ ರಣಕುಂಭನು ದೇವಾಲಯವನ್ನು ನಿರ್ಮಾಣ ಮಾಡಿದನು. ಈ ದೇವಾಲಯದ ನಿರ್ಮಾಣ ಶೈಲಿಯು ಮಂತ್ರಮುಗ್ಧಗೊಳಿಸುವಂತೆ ಇದ್ದು, ಈ ಕಟ್ಟಡದ ನಿರ್ಮಾಣವನ್ನು ಪೂರ್ತಿ ಮಾಡಲು ಸುಮಾರು 65 ವರ್ಷಗಳು ತೆಗೆದುಕೊಂಡಿತು ಎಂದು ಹೇಳಲಾಗುತ್ತಿದೆ.

Stf&Claire

ದೆಸೂರಿ

ದೆಸೂರಿ

ದೆಸೂರಿ, ರಾಣಾಕ್‍ಪೂರ್‍ಯಿಂದ 25 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಶಿವನು, ನವಿಮಾತ, ಹನುಮಂತ ದೇವಾಲಯಗಳು ಇವೆ. ಸಮೀಪದಲ್ಲಿನ ಬೆಟ್ಟದ ಮೇಲೆ ಪರಶುರಾಮ ಮಹಾದೇವ ದೇವಾಲಯವನ್ನು ಕೂಡ ಕಾಣಬಹುದಾಗಿದೆ.

Tomas Belcik


ಘನೆರಾವ್

ಘನೆರಾವ್

ಘನೆರಾವ್ ಕೂಡ ರಾಣಾಕ್‍ಪುರ್ ಸಮೀಪದಲ್ಲಿನ ಒಂದು ಗ್ರಾಮವಾಗಿದೆ. ಇಲ್ಲಿಯೂ ಕೂಡ ಮಹಾವೀರನ ದೇವಾಲಯ, ಗಜಾನಂದ ದೇವಾಲಯಗಳು ಅತ್ಯಂತ ಪ್ರಸಿದ್ಧವನ್ನು ಹೊಂದಿರುವ ದೇವಾಲಯಗಳಾಗಿವೆ.


Sreenivasan Ramakrishnan

ಸಾದ್ರಿ

ಸಾದ್ರಿ

ಸಾದ್ರಿ, ರಾಣಾಕ್‍ಪುರ್ ಸಮೀಪದಲ್ಲಿನ ಒಂದು ಪ್ರಮುಖವಾದ ತೀರ್ಥಯಾತ್ರಾ ಕೇಂದ್ರ. ಒಂದು ಕಾಲದಲ್ಲಿ "ಗೇಟ್ ಆಫ್ ಮೆವಾರ್ ಟು ಮಾರ್ವಾರ್" ಎಂದು ಕರೆಯುತ್ತಿದ್ದರಂತೆ. ವರಹಾವಾತರ ದೇವಾಲಯ, ಚಿಂತಾಮಣಿ ಪಾಶ್ವನಾಥ ದೇವಾಲಯ, ಖುದಾ ಬಕ್ಷ್ ಬಾಬಾ ದರ್ಗಾ ಇವೆಲ್ಲಾ ಈ ಪ್ರದೇಶದ ಆಕರ್ಷಣೆಗಳು.


Walter Braun

ನಾರ್ಲೈ

ನಾರ್ಲೈ

ನಾರ್ಲೈ ರಾಣಾಕ್‍ಪುರ್‍ಗೆ ಸುಮಾರು 6 ಕಿ.ಮೀ ದೂರದಲ್ಲಿರುವ ಮತ್ತೊಂದು ಚಿಕ್ಕದಾದ ಗ್ರಾಮವಾಗಿದೆ. ಈ ಪ್ರದೇಶವು ಪ್ರವಾಸಿಗರಿಗೆ ಆನೇಕ ಜೈನ ದೇವಾಲಯವನ್ನು, ಹಿಂದೂ ದೇವಾಲಯವನ್ನು ಕಾಣಬಹುದು. ಸಮಯವಿದ್ದರೆ ಒಮ್ಮೆ ಆದಿನಾಥ ದೇವಾಲಯಕ್ಕೂ ಕೂಡ ಭೇಟಿ ನೀಡಿ.

Tomas Belcik


ಸೂರ್ಯನಾರಾಯಣ ದೇವಾಲಯ

ಸೂರ್ಯನಾರಾಯಣ ದೇವಾಲಯ

ಸೂರ್ಯನಾರಾಯಣ ದೇವಾಲಯವು ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ. ಇಲ್ಲಿ ಅದ್ಭುತವಾದ ಕಲಾಸಂಪತ್ತನ್ನು ಕಾಣಬಹುದು. ದೇವಾಲಯದ ಗೋಡೆಗಳ ಮೇಲೆ ಕೆತ್ತನೆ ಮಾಡಿರುವ ಯೋಧರ, ಅಶ್ವಗಳ, ಗಜಗಳ, ದೇವತೆಗಳ ಚಿತ್ರಗಳು ಅಪೂರ್ವವಾದುದು. ಸೂರ್ಯ ಭಗವಂತನು ರಥವನ್ನು ನಡೆಸುತ್ತಿರುವ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ. ಸಮಯವಿದ್ದರೆ ಸಮೀಪದ ಅಂಬಾಮಾತ ದೇವಾಲಯಕ್ಕೂ ಭೇಟಿ ನೀಡಿ ಬನ್ನಿ.

Tomas Belcik

ಕುಂಭಾಲ್ ಘರ್ ಕೋಟೆ

ಕುಂಭಾಲ್ ಘರ್ ಕೋಟೆ

ಕುಂಭಾಲ್ ಘರ್ ಕೋಟೆ, ರಾಣಾಕ್‍ಪೂರ್‍ನಿಂದ ಕೇವಲ 9 ಕಿ.ಮೀ ದೂರದಲ್ಲಿದೆ. ಬಾಣಾ ನದಿಯ ತೀರದಲ್ಲಿ ಕ್ರಿ.ಶ 15 ನೇ ಶತಮಾನದಲ್ಲಿ ರಾಜ ರಾಣಾ ಕುಂಭ ಈ ಕೋಟೆಯನ್ನು ನಿರ್ಮಾಣ ಮಾಡಿದನು. ಕೋಟೆಯು 7 ದ್ವಾರಗಳನ್ನು, ವಾಚ್ ಟವರ್‍ಗಳನ್ನು, 13 ಶಿಖರಗಳನ್ನು ಕಾಣಬಹುದು. ಕೋಟೆಯಲ್ಲಿಯೇ ಮತ್ತೊಂದು ಕೋಟೆ "ಕರ್ತಾರ್ ಘರ್" ಕೂಡ ಸಂದರ್ಶಿಸಬಹುದು.


Antoine Taveneaux

ಬಾದಲ್ ಮಹಲ್

ಬಾದಲ್ ಮಹಲ್

ಕುಂಭಾಲ್ ಘರ್‍ನಲ್ಲಿರುವ ಸುಂದರವಾದ ಪ್ಯಾಲೆಸ್‍ನಲ್ಲಿ ಬಾದಲ್ ಮಹಲ್ ಕೂಡ ಒಂದು. ಅಲ್ಲಿನ ಭಾಷೆಯಲ್ಲಿ ಬಾದಲ್ ಎಂದರೆ ಮೇಘಗಳು. ಹಾಗಾಗಿ ಅದನ್ನು ಮೇಘಗಳ ಮಹಲ್ ಎಂದು ಕೂಡ ಕರೆಯುತ್ತಾರೆ. ಇದರಲ್ಲಿ ಮರ್ಥನಾ ಮಹಲ್ ಮತ್ತು ಜನಾನಾ ಮಹಲ್ ಎಂಬುದು ಕೂಡ ಇವೆ.


Sujay25

ಕುಂಭಾಲ್ ಘರ್ ವನ್ಯ ಪ್ರಾಣಿಗಳ ಅಭಯಾರಣ್ಯ

ಕುಂಭಾಲ್ ಘರ್ ವನ್ಯ ಪ್ರಾಣಿಗಳ ಅಭಯಾರಣ್ಯ

ಈ ಅಭಯಾರಣ್ಯವು ಉದಯ್‍ಪುರ್‍ನಿಂದ ಸುಮಾರು 65 ಕಿ.ಮೀ ದೂರದಲ್ಲಿ ಕುಂಭಾಲ್ ಘರ್ ಕೋಟೆ ಸಮೀಪದಲ್ಲಿದೆ. ಸುಮಾರು 578 ಚದರ ಕಿ.ಮೀಗಳು ವಿಸ್ತರಿಸಿದ ಈ ಅಭಯಾರಣ್ಯವು ಜಿಂಕೆ, ಚಿರತೆ, ನರಿಗಳು ಹುಲಿಗಳು ಇನ್ನು ಹಲವಾರು ಪ್ರಾಣಿಗಳನ್ನು ಇಲ್ಲಿ ಕಂಡು ಆನಂದಿಸಬಹುದು.

ಮುಚ್ಚಲ್ ಮಹಾವೀರ್ ದೇವಾಲಯ

ಮುಚ್ಚಲ್ ಮಹಾವೀರ್ ದೇವಾಲಯ

ಈ ದೇವಾಲಯವನ್ನು ಜೈನ ದೇವಾಲಯ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದೊಂದು ಶಿವನ ದೇವಾಲಯವಾಗಿದೆ. ಕುಂಭಾಲ್ ಘರ್ ಅಭಯಾರಣ್ಯದಲ್ಲಿರುವ ಈ ದೇವಾಲಯದಲ್ಲಿ ಶಿವನಿಗೆ ಮೀಸಲಾಗಿರುವ ವಿಗ್ರಹ ಇಲ್ಲಿರುತ್ತದೆ. ದೇವಾಲಯದ ಪ್ರವೇಶ ದ್ವಾರದ ಬಳಿ 2 ಆನೆಗಳ ಸುಂದರವಾದ ಪ್ರತಿಮೆ ಇದೆ.

Antoine Taveneaux

ನೀಲಕಂಠ ಮಹಾದೇವ ದೇವಾಲಯ

ನೀಲಕಂಠ ಮಹಾದೇವ ದೇವಾಲಯ

ಈ ದೇವಾಲಯ ಕುಂಭಾಲ್ ಘರ್ ಕೋಟೆ ಸಮೀಪದಲ್ಲಿಯೇ ಇರುವ ಬೆಟ್ಟದ ಮೇಲೆ ಇದೆ. ಈ ದೇವಾಲಯದಲ್ಲಿ 6 ಅಡಿ ಎತ್ತರದ ಶಿವಲಿಂಗವನ್ನು ಕಾಣಬಹುದು. ಮಹಾಶಿವರಾತ್ರಿಯಂತಹ ಪರ್ವದಿನಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

Shakti

ಪರಶುರಾಮ ದೇವಾಲಯ

ಪರಶುರಾಮ ದೇವಾಲಯ

ಈ ದೇವಾಲಯವು ಒಂದು ಗುಹೆಯಲ್ಲಿದೆ. ಇದೊಂದು ಗುಹಾ ದೇವಾಲಯ ಎಂದೇ ಹೇಳಬಹುದು. ಅದರಲ್ಲಿ ಪರಶುರಾಮನ ವಿಗ್ರಹವಿದೆ. ಈ ದೇವಾಲಯಕ್ಕೆ ಸೇರಬೇಕಾದರೆ 500 ಮೆಟ್ಟಿಲು ಹತ್ತಬೇಕಾಗುತ್ತದೆ. ಪುರಾಣಗಳ ಪ್ರಕಾರ ಪರಶುರಾಮನು ಈ ಸ್ಥಳದಲ್ಲಿಯೇ ಧ್ಯಾನ ಮಡಿದನು ಎಂದೂ, ಶ್ರೀ ರಾಮನ ಆರ್ಶೀವಾದ ಪಡೆದನೆಂದು ಹೇಳುತ್ತಾರೆ.


Antoine Taveneaux

ರಾಣಾಕ್‍ಪುರ್‍ಗೆ ಹೇಗೆ ತಲಯಪಬೇಕು?

ರಾಣಾಕ್‍ಪುರ್‍ಗೆ ಹೇಗೆ ತಲಯಪಬೇಕು?

ವಾಯು ಮಾರ್ಗದ ಮೂಲಕ
ಉದಯ್‍ಪುರ್‍ನಲ್ಲಿನ ಮಹಾರಾಣಾ ಪ್ರತಾಪ್ ವಿಮಾನ ನಿಲ್ದಾಣವು (106 ಕಿ.ಮೀ) ರಾಣಾಕ್ ಪೂರ್‍ಗೆ, ಕುಂಭಾಲ್ ಘರ್‍ನಿಂದ (112 ಕಿ.ಮೀ) ಸಮೀಪದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಜೈಪುರ್, ಜೋಧಪುರ್‍ನಿಂದ ಸುಲಭವಾಗಿ ವಿಮಾನದ ಮೂಲಕೆ ತೆರಳಬಹುದಾಗಿದೆ.

ರಾಣಾಕ್‍ಪುರ್‍ಗೆ ಹೇಗೆ ತಲಯಪಬೇಕು?

ರಾಣಾಕ್‍ಪುರ್‍ಗೆ ಹೇಗೆ ತಲಯಪಬೇಕು?

ರೈಲ್ವೆ ಮಾರ್ಗದ ಮೂಲಕ
ರಾಣಾಕ್‍ಪೂರ್‍ಗೆ ಕುಂಭಾಲ್ ಘರ್‍ಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಫಲ್ನ(35 ಕಿ.ಮೀ) ದೂರದಲ್ಲಿದೆ. ದೆಹಲಿ, ಮುಂಬೈ, ಅಜ್ಮಿರ, ಜೈಪುರ್, ಅಹಮಾದಾಬ್, ಜೈಪುರ್ ನಗರಗಳಿಂದ ರೈಲುಗಳ ನಿಲ್ದಾಣವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X