ಗೋಪುರ, ಹಿಂದೂ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಮಾರಕ ರಚನೆಗಳು. ಮೂಲತಃ ಪ್ರತಿ ಹಿಂದೂ ದೇವಸ್ಥಾನಗಳ ದೈವ ಸನ್ನಿಧಿಗೆ ಆಭರಣ ಭೂಷಣವಾಗಿ ಗೋಪುರಗಳು ನಿರ್ಮಿಸಲ್ಪಟ್ಟಿರುತ್ತವೆ. ಗೋಪುರಗಳಲ್ಲಿ ದೇವ ದೇವತೆಯರ, ಪುರಾಣ ಪ್ರಸಂಗಗಳ, ಗರುಡ, ರಥ, ಸೂರ್ಯ, ಆಕಳು ಹೀಗೆ ಪವಿತ್ರ ವಸ್ತುಗಳನ್ನು ವಿಧ್ಯುಕ್ತವಾಗಿ ಕೆತ್ತಲಾಗಿರುತ್ತದೆ.
ಅಲ್ಲದೆ ಕೆಲವು ಗೋಪುರಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು, ಯಕ್ಷ, ಗಂಧರ್ವ ಮುಂತಾದವರ ಶಿಲ್ಪಗಳನ್ನೂ ಸಹ ನಿರ್ಮಿಸಲಾಗಿರುತ್ತದೆ. ಗೋಪುರಗಳ ರಚನಾ ಶೈಲಿಯಲ್ಲಿಯೂ ಸಹ ವೈವಿಧ್ಯತೆಗಳಿರುವುದನ್ನು ಕಾಣಬಹುದು. ಉದಾಹರಣೆಗೆ ಕೇರಳ ರಾಜ್ಯದಲ್ಲಿ ಸಾಮಾನ್ಯವಾಗಿ ದೇವಾಲಯಗಳ ಗೋಪುರಗಳು ವಿಶಿಷ್ಟ ವಿನ್ಯಾಸದಿಂದ ಕೂಡಿರುವುದನ್ನು ಕಾಣಬಹುದು.
ವಿಶೇಷ ಲೇಖನ : ದಕ್ಷಿಣ ಭಾರತದ ಪವಿತ್ರ ತೀರ್ಥ ಕ್ಷೇತ್ರಗಳು
ಅದೇ ರೀತಿ ಕರ್ನಾಟಕ, ತಮಿಳುನಾಡಿನಲ್ಲಿ ಒಂದೆ ಬಗೆಯ ವಿನ್ಯಾಸದ ಗೋಪುರಗಳನ್ನು ಕಾಣಬಹುದು. ಇಲ್ಲಿರುವ ದೇವಾಲಯಗಳ ಗೋಪುರಗಳು ಹೆಚ್ಚಾಗಿ ದ್ರಾವಿಡ ಶೈಲಿಯಲ್ಲೆ ಇರುವುದು ವಿಶೇಷವಾಗಿದೆ. ಅದರಂತೆ ಉತ್ತರ ಭಾರತದ ಇನ್ನೂ ಹಲವು ಬಗೆಯ ವಿನ್ಯಾಸದ ಗೋಪುರಗಳನ್ನು ಕಾಣಬಹುದು.
ಈ ಕಾರಣದಿಂದಲೆ ಗೋಪುರಗಳೂ ಸಹ ಕುತೂಹಲ ಕೆರಳಿಸುವ ಪ್ರವಾಸಿ ಆಕರ್ಷಣೆಗಳಾಗಿ ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ವಿದೇಶಿಗರನ್ನು ಸದಾ ಆಕರ್ಷಿಸುತ್ತವೆ. ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿ ಕಂಡುಬರುವ ಕೆಲವು ಪ್ರಮುಖ ಹಾಗೂ ವಿಶೇಷವಾದ ದೇವಾಲಯ ಗೋಪುರಗಳನ್ನು ನೋಡಿ ಹಾಗೂ ಅದು ಯಾವ ದೇವಸ್ಥಾನ ಮತ್ತು ಎಲ್ಲಿರುವುದೆಂಬುದು ತಿಳಿಯಿರಿ.

ಆಕರ್ಷಕ ದೇವಾಲಯ ಗೋಪುರಗಳು:
ಇದು ಕರ್ನಾಟಕದ ಪ್ರಖ್ಯಾತ ಪ್ರವಾಸಿ ತಾಣವಾದ ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನದ ಗೋಪುರ.
ಚಿತ್ರಕೃಪೆ: Ajar

ಆಕರ್ಷಕ ದೇವಾಲಯ ಗೋಪುರಗಳು:
ಮೈಸೂರು ಜಿಲ್ಲೆಯ ತೀರ್ಥ ಕ್ಷೇತ್ರ ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಸ್ಥಾನದ ಗೋಪುರ.
ಚಿತ್ರಕೃಪೆ: Naveen

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಪ್ರದೇಶದಲ್ಲಿರುವ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಗೋಪುರ.
ಚಿತ್ರಕೃಪೆ: Pamri

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ ದೇವಾಲಯದ ಗೋಪುರ.
ಚಿತ್ರಕೃಪೆ: Amol.Gaitonde

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನ ಹಲಸೂರು ಸೋಮೇಶ್ವರ ದೇವಸ್ಥಾನದ ಗೋಪುರ. 1868 ರ ಸಂದರ್ಭದಲ್ಲಿ. ಈ ದೇವಸ್ಥಾನವು ಬೆಂಗಳೂರಿನ ಅತಿ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: wikimedia

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಧರ್ಮರಾಯ ದೇವಸ್ಥಾನದ ಆಕರ್ಷಕ ಗೋಪುರ.
ಚಿತ್ರಕೃಪೆ: Thigala4u

ಆಕರ್ಷಕ ದೇವಾಲಯ ಗೋಪುರಗಳು:
ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಮೇಲಿರುವ ಗೋಪಾಲಸ್ವಾಮಿ ದೇವಾಲಯದ ಗೋಪುರ.
ಚಿತ್ರಕೃಪೆ: Premnath Thirumalaisamy

ಆಕರ್ಷಕ ದೇವಾಲಯ ಗೋಪುರಗಳು:
ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ಬೈಲುಕುಪ್ಪೆಯಲ್ಲಿರುವ ಬೌದ್ಧ ದೇವಾಲಯದ ವಿಶಿಷ್ಟ ಗೋಪುರ.
ಚಿತ್ರಕೃಪೆ: Premnath Thirumalaisamy

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನಲ್ಲಿರುವ ಪ್ರತಿಷ್ಟಿತ ಇಸ್ಕಾನ್ ದೇವಾಲಯದ ಗೋಪುರ.
ಚಿತ್ರಕೃಪೆ: Ashwin Kumar

ಆಕರ್ಷಕ ದೇವಾಲಯ ಗೋಪುರಗಳು:
ಪ್ರಖ್ಯಾತ ಪ್ರವಾಸಿ ತಾಣ ಮುರುಡೇಶ್ವರದಲ್ಲಿರುವ ಶಿವ ದೇವಾಲಯದ ಅತಿ ಎತ್ತರದ ಹಾಗೂ ಆಕರ್ಷಕವಾದ ಗೋಪುರ.
ಚಿತ್ರಕೃಪೆ: ramesh Iyanswamy

ಆಕರ್ಷಕ ದೇವಾಲಯ ಗೋಪುರಗಳು:
ಪ್ರಖ್ಯಾತ ಧಾರ್ಮಿಕ ಪ್ರವಾಸಿ ಕೇಂದ್ರ ಶೃಂಗೇರಿಯಲ್ಲಿರುವ ವಿದ್ಯಾಶಂಕರ ದೇವಾಲಯದ ಗೋಪುರ.
ಚಿತ್ರಕೃಪೆ: Darshan Simha

ಆಕರ್ಷಕ ದೇವಾಲಯ ಗೋಪುರಗಳು:
ಮೈಸೂರಿನ ಮೈಸೂರು ಅರಮನೆ ಆವರ್ಣದಲ್ಲಿರುವ ಒಂದು ದೇವಾಲಯದ ಗೋಪುರ.
ಚಿತ್ರಕೃಪೆ: Patrick

ಆಕರ್ಷಕ ದೇವಾಲಯ ಗೋಪುರಗಳು:
ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ವಿಶ್ವವಿಖ್ಯಾತ ಚೆನ್ನಕೇಶವ ದೇವಸ್ಥಾನದ ಗೋಪುರ.
ಚಿತ್ರಕೃಪೆ: Ashok Prabhakaran

ಆಕರ್ಷಕ ದೇವಾಲಯ ಗೋಪುರಗಳು:
ಹಂಪಿಯಲ್ಲಿರುವ ರಘುನಾಥ ದೇವಾಲಯ ಗೋಪುರ.
ಚಿತ್ರಕೃಪೆ: fraboof

ಆಕರ್ಷಕ ದೇವಾಲಯ ಗೋಪುರಗಳು:
ಬಾಗಲಕೋಟೆ ಜಿಲ್ಲೆಯಲ್ಲಿರುವ ಲಿಂಗಾಯತ ಸಮುದಾಯದವರ ಪ್ರಖ್ಯಾತ ತೀರ್ಥ ಕ್ಷೇತ್ರವಾದ ಕೂಡಲ ಸಂಗಮ ದೇವಾಲಯ ಗೋಪುರ.
ಚಿತ್ರಕೃಪೆ: damaru

ಆಕರ್ಷಕ ದೇವಾಲಯ ಗೋಪುರಗಳು:
ಹಂಪಿಯ ಹೇಮಕೂಟ ಬೆಟ್ಟದ ಮೇಲೆ ಕಾಲಕ್ಕೆ ಸೆಡ್ಡು ಹೊಡೆದು ಅಳುಕದೆ ನಿತಿರುವ ತ್ರಿವಳಿ ದೇಗುಲಗಳ ವಿಶಿಷ್ಟವಾಗಿ ವಿನ್ಯಸಿಸಲ್ಪಟ್ಟ ಗೋಪುರಗಳು.
ಚಿತ್ರಕೃಪೆ: fraboof

ಆಕರ್ಷಕ ದೇವಾಲಯ ಗೋಪುರಗಳು:
ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣ ಪಟ್ಟದಕಲ್ಲಿನ ಸ್ಮಾರಕ ಸಂಕೀರ್ಣದಲ್ಲಿರುವ ಶಿವ ದೇವಾಲಯ ಗೋಪುರ.
ಚಿತ್ರಕೃಪೆ: Jean-Pierre Dalbéra

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನ ಹೊರವಲಯದಲ್ಲಿರುವ "ಆರ್ಟ್ ಆಫ್ ಲಿವಿಂಗ್" ಕೇಂದ್ರದಲ್ಲಿರುವ ಮುಖ್ಯ ದೇವಾಲಯ ಗೋಪುರ.
ಚಿತ್ರಕೃಪೆ: solarisgirl

ಆಕರ್ಷಕ ದೇವಾಲಯ ಗೋಪುರಗಳು:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಕುದ್ರೋಳಿ ದೇವಾಲಯ ಗೋಪುರ. ನವರಾತ್ರಿಯ ಉತ್ಸವದ ಸಂದರ್ಭದಲ್ಲಿ...
ಚಿತ್ರಕೃಪೆ: Karunakar Rayker

ಆಕರ್ಷಕ ದೇವಾಲಯ ಗೋಪುರಗಳು:
ಉಡುಪಿಯಲ್ಲಿರುವ ಶ್ರೀಕೃಷ್ಣ ಮಠದ ದೇವಾಲಯ ಗೋಪುರ.
ಚಿತ್ರಕೃಪೆ: Ashok Prabhakaran

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರು ಬಳಿಯಿರುವ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿರುವ ಪ್ರಖ್ಯಾತ ಭೋಗ ನಂದೀಶ್ವರ ದೇವಾಲಯ ಗೋಪುರ.
ಚಿತ್ರಕೃಪೆ: getmahesh

ಆಕರ್ಷಕ ದೇವಾಲಯ ಗೋಪುರಗಳು:
ಬೆಂಗಳೂರಿನ ಬಿಇಎಂಎಲ್ ಲೇ ಔಟಿನಲ್ಲಿರುವ ಷಣ್ಮುಖ (ಮುರುಗ) ಸ್ವಾಮಿ ದೇವಾಲಯದ ಆಕರ್ಷಕ ಗೋಪುರ.
ಚಿತ್ರಕೃಪೆ: Hari Prasad Nadig

ಆಕರ್ಷಕ ದೇವಾಲಯ ಗೋಪುರಗಳು:
ಉಡುಪಿಯಿಂದ 11 ಕಿ.ಮೀ ದೂರದಲ್ಲಿ ಕುಂಜಾರುಗಿರಿ ಎಂಬಲ್ಲಿರುವ ದುರ್ಗಾ ದೇವಿ ದೇವಾಲಯದ ವಿಶಿಷ್ಟ ಗೋಪುರ. ಇದು ಸಾಮಾನ್ಯವಾಗಿ ಕೇರಳದಲ್ಲಿ ಕಂಡುಬರುವ ದೇವಾಲಯ ಗೋಪುರಗಳಂತೆ ಕಂಡುಬರುತ್ತದೆ.
ಚಿತ್ರಕೃಪೆ: Arun Prabhu

ಆಕರ್ಷಕ ದೇವಾಲಯ ಗೋಪುರಗಳು:
ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯದ ಗೋಪುರ. ಇದೂ ಸಹ ಬೇಲೂರಿನ ಚೆನ್ನಕೇಶವ ದೇವಸ್ಥಾನದಷ್ಟೆ ಅತ್ಯಂತ ಸುಂದರವಾದ ಶಿಲ್ಪ ಕಲೆಗಳ ಕೆತ್ತನೆಗಳಿಂದ ಸಂಪದ್ಭರಿತವಾಗಿದೆ.
ಚಿತ್ರಕೃಪೆ: Arun Prabhu

ಆಕರ್ಷಕ ದೇವಾಲಯ ಗೋಪುರಗಳು:
ಮಂಡ್ಯದ ಮೇಲುಕೋಟೆಯಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯ ಗೋಪುರ.
ಚಿತ್ರಕೃಪೆ: Pradeep Kumbhashi

ಆಕರ್ಷಕ ದೇವಾಲಯ ಗೋಪುರಗಳು:
ತುಮಕೂರು ಜಿಲ್ಲೆಯ ದಸರಿಘಟ್ಟದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಗೋಪುರ.
ಚಿತ್ರಕೃಪೆ: Bp

ಆಕರ್ಷಕ ದೇವಾಲಯ ಗೋಪುರಗಳು:
ಪ್ರಸಿದ್ಧ ಪ್ರವಾಸಿ ತಾಣವಾದ ಹಾಗೂ ಮೈಸೂರಿಗೆ ಬಲು ಹತ್ತಿರದಲ್ಲಿರುವ ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದ ಅದ್ದೂರಿ ಗೋಪುರ.
ಚಿತ್ರಕೃಪೆ: Knowledge.ecstasy

ಆಕರ್ಷಕ ದೇವಾಲಯ ಗೋಪುರಗಳು:
ಮೈಸೂರಿನ ಅರಮನೆ ಮೈದಾನದಲ್ಲಿರುವ ಶ್ವೇತ ವರಾಹಸ್ವಾಮಿ ದೇವಾಲಯದ ಗೋಪುರ.
ಚಿತ್ರಕೃಪೆ: Lexicofreak

ಆಕರ್ಷಕ ದೇವಾಲಯ ಗೋಪುರಗಳು:
ಸರ್ಪ ದೋಷ ನಿವಾರಣಾ ಕ್ಷೇತ್ರವಾಗಿ ದೇಶದಲ್ಲೆ ಹೆಚ್ಚು ಪ್ರಖ್ಯಾತಿ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರ.
ಚಿತ್ರಕೃಪೆ: Soorajna

ಆಕರ್ಷಕ ದೇವಾಲಯ ಗೋಪುರಗಳು:
ಚಿನ್ನದ ಗಣಿ ಕೋಲಾರ ನಗರದಲ್ಲಿರುವ ಸೋಮೇಶ್ವರ ದೇವಾಲಯ ಗೋಪುರ.
ಚಿತ್ರಕೃಪೆ: Dineshkannambadi


Click it and Unblock the Notifications


















