• Follow NativePlanet
Share
» »ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

Written By:

ಸಾಧಾರಣವಾಗಿ ನಾವೆಲ್ಲಾ ಪ್ರಸಿದ್ಧಿ ಹೊಂದಿರುವ ಪ್ರದೇಶಗಳನ್ನೇ ಮತ್ತೆ-ಮತ್ತೆ ನೋಡಿ ಆನಂದಿಸುತ್ತಿರುತೇವೆ. ಒಂದಕ್ಕಿಂತ ಹೆಚ್ಚಾಗಿಯೇ ಆ ಪ್ರದೇಶಗಳಿಗೆ ಭೇಟಿ ನೀಡುತ್ತಿರುತೇವೆ. ಇಂದಿನವರೆವಿಗೂ ಎಷ್ಟೋ ಪ್ರದೇಶಗಳು ನೋಡಿರುತ್ತೀರಾ. ಆದರೂ ಕೂಡ ಇನ್ನು ಕೆಲವು ಪ್ರವಾಸಿ ತಾಣಗಳು ಉಳಿದಿರುತ್ತವೆ. ಅವುಗಳನ್ನು ನೀವು ನೋಡದೇ ಇರಬಹುದು. ಆದರೆ ಇಂದಿಗೂ ಸಾಧಾರಣವಾಗಿ ಅನೇಕ ಮಂದಿ ಭೇಟಿ ನೀಡದ ಅನೇಕ ಪ್ರದೇಶಗಳು ಹಾಗೆಯೇ ಇರುವುದನ್ನು ಕಾಣಬಹುದು. ಅವುಗಳಲ್ಲಿ ಕೆಲವು ಪ್ರದೇಶಗಳನ್ನು ಲೇಖನದ ಮೂಲಕ ತಿಳಿಯೋಣ. ಈ ಎಲ್ಲಾ ಪ್ರದೇಶಗಳು ಎಲ್ಲರಿಗೂ ಇಷ್ಟವಾಗುವಂಹದು.

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಸೆಂಟ್ ಮೆರಿಸ್ ಐಲ್ಯಾಂಡ್
ಸೆಂಟ್ ಮೆರಿಸ್ ಐಲ್ಯಾಂಡ್ ಅನ್ನು ಕೊಕೊನೆಟ್ ಐಲ್ಯಾಂಟ್ ಮತ್ತು ತಾನ್ಸ್‍ಪಾರ್ ಐಲ್ಯಾಂಡ್ ಎಂದು ಕೂಡ ಕರೆಯುತ್ತಾರೆ. ಇವು ಒಟ್ಟು ನಾಲ್ಕು ದ್ವೀಪಗಳು ಅರೇಬಿಯನ್ ಸಮುದ್ರಕ್ಕೆ ಸಮೀಪದಲ್ಲಿ ಕರ್ನಾಟಕ ರಾಜ್ಯದ ಉಡುಪಿಯ ಪ್ರಸಿದ್ಧ ಮಲ್ಪೆ ಬೀಚ್‍ನ ಬಳಿ ಇರುತ್ತದೆ. ಇವುಗಳು ಲಾವಾದಿಂದ ಏರ್ಪಟ್ಟದ್ದು ಎಂದು ಹೇಳುತ್ತಾರೆ. ಈ ದ್ವೀಪಗಳು ಭಾರತದಲ್ಲಿನ 26 ಭೂ ಗರ್ಭ ಸ್ಮಾರಕಗಳಲ್ಲಿ ಇವು ಕೂಡ ಒಂದಾಗಿದೆ. ಅಷ್ಟೇ ಅಲ್ಲ ಇದೊಂದು ಅದ್ಭುತವಾದ ಪ್ರವಾಸಿ ತಾಣವೇ ಆಗಿದೆ.

PC:Wiki Commons

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಕಿಬುಲ್ ಲಾಮ್ಜಾವೊ ನ್ಯಾಷನಲ್ ಪಾರ್ಕ್
ಪ್ರಪಂಚದಲ್ಲಿನ ಇದು ಮಾತ್ರವೇ ಪ್ಲೋಟಿಂಗ್ ಪಾರ್ಕ್. ಈ ನ್ಯಾಷನಲ್ ಪಾರ್ಕ್ ತೇಲುವ ಬಗೆಯಲ್ಲಿರುತ್ತದೆ. ಸ್ಥಳೀಯವಾಗಿ ಇದನ್ನು ಫೂಮ್ದಿ ಎಂದು ಕರೆಯುತ್ತಾರೆ. ಈ ಪಾರ್ಕ್ ಸ್ಥಳೀಯವಾಗಿ ಕರೆಯುವ ಸಾಂಗಿ ಎನ್ನುವ ಅಳಿವಿನಂಚಿನಲ್ಲಿರುವ ಡಾನ್ಸಿಂಗ್ ಎಂಬ ಜಿಂಕೆಗಳಿಗೆ ಪ್ರಸಿದ್ಧಿಯನ್ನು ಹೊಂದಿದೆ.

PC:Wiki Commons

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಡಿಬ್ರೂ-ಸೈಖೋವಾ ನ್ಯಾಷನಲ್ ಪಾರ್ಕ್
ವಿಭಿನ್ನವಾದ ಜೀವ ವೈವಿಧ್ಯತೆಯನ್ನು ಹೊಂದಿರುವ ಈ ಪಾರ್ಕ್‍ನಲ್ಲಿ ಅನೇಕ ಪ್ರಾಣಿಗಳು, ವಿವಿಧ ಜಾತಿಯ ಅಳಿವಿನಂಚಿನಲ್ಲಿರುವ ಪಕ್ಷಿಗಳು, ಪ್ರಸಿದ್ಧವಾದ ಸಾಲಿಕ್ಸ್ ವೃಕ್ಷಗಳಿಗೆ (ಇವುಗಳಿಂದ ಕ್ರಿಕೆಟ್ ಬ್ಯಾಟ್‍ಗಳನ್ನು ತಯಾರು ಮಾಡುತ್ತಾರೆ) ನೆಲೆಯಾಗಿದೆ. ಪ್ರಪಂಚದಲ್ಲಿನ 34 ರಿಸರ್ವ್ ಪ್ರದೇಶದಲ್ಲಿ ಈ ಪಾರ್ಕ್ ಕೂಡ ಒಂದು. ಇಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಬೋಟ್ ವಿಹಾರ ಮಾಡುವುದು ಎಂದಿಗೂ ಮರೆಯಬೇಡಿ.

PC:Wiki Commons

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಬೇಲೂಂ ಕೇವ್ಸ್
ಈ ಗುಹೆಗಳು ಸುಮಾರು 3229 ಮೀಟರ್ ಉದ್ದವಿದೆ. ಭಾರತ ದೇಶದ ಉಪಖಂಢದಲ್ಲಿ ಬೇಲೂಂ ಗುಹೆಯು 2 ನೇ ಅತಿ ದೊಡ್ಡದಾದ ಹಾಗು ಉದ್ದವಿರುವ ಗುಹೆ ಎಂದು ಪ್ರಸಿದ್ದಿಯನ್ನು ಹೊಂದಿದೆ. ಇದು ಒಂದು ಸಹಜಸಿದ್ಧವಾದ ಅಂಡರ್ ಗ್ರೌಂಡ್ ಕೇವ್ ಆಗಿ ಏರ್ಪಟ್ಟಿದೆ. ಅಂಡರ್ ಗ್ರೌಂಡ್‍ನ ನದಿಯಲ್ಲಿ ಪ್ರವಾಹವೊಂದು ನಿರಂತರವಾಗಿ ಏರ್ಪಟ್ಟು ಈ ಗುಹೆಯು ಏರ್ಪಟ್ಟಿದೆ ಎಂದು ಹೇಳುತ್ತಾರೆ.

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಖಜ್ಜಿಯಾರ್
ಈ ಪ್ರದೇಶವು ಅತ್ಯಂತ ಸುಂದರವಾದ ಪ್ರದೇಶವಾಗಿರುತ್ತದೆ. ಈ ಖಜ್ಜಿಯಾರ್ ಪ್ರದೇಶವನ್ನು ಇಂಡಿಯಾದ ಸ್ವಿಟ್ಜರ್ ಲ್ಯಾಂಡ್ ಎಂದು ಕೂಡ ಕರೆಯುತ್ತಾರೆ. ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಚಂಬ ಜಿಲ್ಲೆಯಲ್ಲಿರುವ ಸುಂದರವಾದ ಈ ಗಿರಿಧಾಮವು ಪೂರ್ತಿಯಾಗಿ ದೇವದಾರು ಅರಣ್ಯದಿಂದ ಅವೃತ್ತಗೊಂಡಿದೆ. ಈ ಪ್ರದೇಶವು ಆಹ್ಲಾದಕರವಾಗಿದ್ದು, ವಾರಂತ್ಯಕ್ಕೆ ಹಾಗು ವಿಹಾರಕ್ಕೆ ಸೂಕ್ತವಾದ ಸ್ಥಳವಾಗಿದೆ.

PC:Wiki Commons

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ದೊಯರ್ಸ್
ಈ ಪ್ರದೇಶವು ಒಂದು ಕಣಿವೆ. ಇದು ಹಿಮಾಲಯ ಪರ್ವತ ಪ್ರದೇಶ ಮತ್ತು ಈಶಾನ್ಯ ಪ್ರದೇಶದ ಅರಣ್ಯದ ಮಧ್ಯೆ ಇದೆ. ಇಲ್ಲಿನ ಆಕರ್ಷಣೆಗಳಲ್ಲಿ ಜಲದಪರ ಆಭಯಾರಣ್ಯ, ಗೋರುಮರ ನ್ಯಾಷನಲ್ ಪಾರ್ಕ್. ರಸಿಕ್ ಬಿಲ್ ಪಕ್ಷಿಧಾಮ, ಬುಕ್ಸಾ ಟೈಗರ್ ರಿಜರ್ವ್‍ಗಳು ಪ್ರಸಿದ್ಧವಾದ ಪ್ರವಾಸಿ ತಾಣಗಳಾಗಿವೆ. ಈ ಸುಂದರವಾದ ಪ್ರದೇಶವನ್ನು ತಪ್ಪದೇ ನೋಡಲೇಬೇಕು.

PC:Wiki Commons

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಪಿತೋರ್ ಘರ್
ಪಿತೋರ್ ಘರ್ ಅನ್ನು "ಲಿಟಿಲ್ ಕಾಶ್ಮೀರ್" ಎಂದು ಕೂಡ ಕರೆಯುತ್ತಾರೆ. ಈ ಪ್ರದೇಶವು ಉತ್ತರಾಖಂಡ ರಾಜ್ಯದಲ್ಲಿನ ಕುಮಾವೋನ್ ಎಂಬ ಪ್ರದೇಶದಲ್ಲಿದೆ. ಇಲ್ಲಿಂದ ನೀವು ಮೌಂಟ್ ಕೈಲಾಶ್ ಮತ್ತು ಮಾನಸ ಸರೋವರ ಯಾತ್ರಾ ಸ್ಥಳಗಳಿಗೂ ಕೂಡ ಭೇಟಿ ನೀಡಬಹುದು. ಸಾಹಸ ಕ್ರೀಡೆಗಾರರಿಗೆ ಈ ಪ್ರದೇಶ ಒಂದು ಸ್ವರ್ಗವೇ ಸರಿ. ಅನೇಕ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಭಾರತದಲ್ಲಿ ಈ ಹೊಸ ಪ್ರದೇಶಗಳು ನಿಮಗೆ ಗೊತ್ತ?

ಇಲಾ ವಿಜ ಪೂನ್ಚಿರ
ಈ ಪ್ರದೇಶವು ಅನೇಕ ಸುಂದರವಾದ ದೃಶ್ಯಗಳನ್ನು ಹೊಂದಿದೆ. ವಿಶೇಷವಾಗಿ ಪ್ರವಾಸಿಗರು ಇಲ್ಲಿ ಸೂರ್ಯೋದಯ ಹಾಗು ಸೂರ್ಯಾಸ್ತವನ್ನು ಆನಂದಿಸಬಹುದು. ಪರ್ವತ ಶ್ರೇಣಿಗಳ ಮಧ್ಯೆ ಇರುವ ಇಲಾವಿಝೂಫೂನ್ಪಿರ ಪ್ರದೇಶವು ಒಂದು ಒಳ್ಳೆಯ ಟ್ರೆಕ್ಕಿಂಗ್ ಪ್ರದೇಶ ಕೂಡ ಆಗಿದೆ. ಅನೇಕ ಮಂದಿ ಟ್ರೆಕ್ಕಿಂಗ್ ಪ್ರಿಯರು ಈ ಪ್ರದೇಶದಲ್ಲಿ ಟ್ರೆಕ್ಕಿಂಗ್ ಕೂಡ ಮಾಡಬಹುದು. ಮಳೆಗಾಲದಲ್ಲಿ ಭೇಟಿ ನೀಡಿದರೆ, ಇಲ್ಲಿನ ದಟ್ಟವಾದ ಅರಣ್ಯ ಪ್ರದೇಶಗಳನ್ನು ಹಾಗು ಸುಂದರವಾದ ದೃಶ್ಯವನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ.

PC:Wiki Commons

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ