» »ಗೋವಾದಲ್ಲಿ ಹೇಗೆ ಎಂಜಾಯ್ ಮಾಡಬೇಕು ಗೊತ್ತ?

ಗೋವಾದಲ್ಲಿ ಹೇಗೆ ಎಂಜಾಯ್ ಮಾಡಬೇಕು ಗೊತ್ತ?

Written By:

ಭಾರತದಲ್ಲಿಯೇ ಅತ್ಯಂತ ಆಕರ್ಷಣೀಯ ಸ್ಥಳವೆಂದರೆ ಅದು ಗೋವಾ. ಇಲ್ಲಿಗೆ ಸಾವಿರಾರು ಮಂದಿ ಎಂಜಾಯ್ ಮಾಡಲು ಭೇಟಿ ನೀಡುತ್ತಿರುತ್ತಾರೆ. ವಿಹಾರಕ್ಕೆ, ವಾಟರ್ ಗೇಮ್ಸ್ ಆಡಲು, ತಮ್ಮ ಏಕಾಂತವನ್ನು ಕಳೆಯಲು, ಪಾರ್ಟಿ ಆಚರಿಸಲು ಹೀಗೆ ಹಲವಾರು ಪ್ರವಾಸಿಗರನ್ನು ಗೋವಾ ಆಕರ್ಷಿಸುತ್ತದೆ.

ಇಲ್ಲಿನ ಕಡಲತೀರಗಳು ಎಲ್ಲರ ಆತ್ಮೀಯ ಗೆಳೆಯನಾಗಿರುತ್ತದೆ. ಕೇವಲ ಯುವಕರಿಗೆ ಅಲ್ಲದೇ ವೃದ್ಧರಿಗೂ ಕೂಡ ಒಂದೇ ಸಮನಾದ ಎಂಜಾಯ್ ನೀಡುವ ಒಂದೇ ಒಂದು ಸ್ಥಳವೆಂದರೆ ಅದು ಗೋವಾ. ದೇಶದ ಮೂಲೆ ಮೂಲೆಗಳಿಂದ ಭೇಟಿ ನೀಡುವ ಈ ತಾಣಕ್ಕೆ ಹೇಗೆ ಎಂಜಾಯ್ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ಲೇಖನದ ಮೂಲಕ ಹೇಗೆಲ್ಲಾ ಗೋವಾದಲ್ಲಿ ಎಂಜಾಯ್ ಮಾಡಬಹುದು ಎಂಬುದನ್ನು ತಿಳಿಯೋಣ.

ಮೊದಲಿಗೆ ಗೋವಾದಲ್ಲಿ ನೀವು ಬೆಳಗ್ಗೆ ಎದ್ದ ಕೂಡಲೇ ರುಚಿಕರವಾದ ಆಹಾರವನ್ನು ಹೋಟೆಲ್‍ನಲ್ಲಿ ತಿನ್ನಿ. ಸಾಮಾನ್ಯವಾಗಿ ಹೋಟೆಲ್ ಉತ್ತರಗೋವಾ ಅಥವಾ ಪಾಣಜಿಯಲ್ಲಿ ಸ್ವಾಧಿಷ್ಟವಾದ ಆಹಾರ ದೊರೆಯುತ್ತದೆ..........

ವಿಶೇಷ

ವಿಶೇಷ

ಗೋವಾದಲ್ಲಿನ ವಿಶೇಷವೆನೆಂದರೆ ಇಲ್ಲಿ ಬ್ರೆಕ್ ಫಾಸ್ಟ್ ತಿನ್ನುವ ಸಮಯದಲ್ಲಿಯೇ ಒಂದು ಬಿಯರ್ ಬಾಟಿಲ್ ತೆಗೆದುಕೊಳ್ಳುವುದು ಸರ್ವೆ ಸಾಧಾರಣವಾದ ವಿಷಯ. ಇಲ್ಲಿ ನಿಮಗೆ ಬೈಕ್ ಬಾಡಿಗೆಗೆ ಕೂಡ ನೀಡುತ್ತಾರೆ.

ಬೈಕ್

ಬೈಕ್

ಒಂದು ಬೈಕ್ ದಿನಕ್ಕೆ 250 ರೂ ನಿಂದ ಪ್ರಾರಂಭವಾಗುತ್ತದೆ. ನೀವು ಬೀಚ್‍ಗಳಿಗೆ ತೆರಳುವ ಮುಂಚೆಯೇ ಅತ್ಯಂತ ಕಡಿಮೆ ಬೆಲೆಯ ಕೆಲವು ವಸ್ತುಗಳನ್ನು ಷಾಪಿಂಗ್ ಮಾಡಬಹುದಾಗಿದೆ.

ಕಾಂಡೊಲಿ ಅಥವಾ ಅಂಜನಾ

ಕಾಂಡೊಲಿ ಅಥವಾ ಅಂಜನಾ

ಟಿ ಷಾರ್ಟ್‍ಗಳು, ಸನ್ ಗ್ಲಾಸ್‍ಗಳು, ರಿಫ್ರಿಜ್ ರೆಟರ್‍ಗಳಂತಹ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಇದು ಸಾಧಾರಣವಾಗಿ ಕಾಂಡೊಲಿ ಅಥವಾ ಅಂಜನಾ ಪ್ರದೇಶದಲ್ಲಿ ದೊರೆಯುತ್ತದೆ.

ಮಾರ್ಕೆಟ್

ಮಾರ್ಕೆಟ್

ಶನಿವಾರದ ದಿನದಂದು ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರ್ಕೆಟ್ ಕೂಡ ದೊರೆಯುತ್ತದೆ. ಮಧ್ಯಹ್ನಾ ಅಥವಾ ವಾರಾಂತ್ಯದಲ್ಲಿ ಗೋವಾದಲ್ಲಿನ ಬೀಚ್‍ಗಳಿಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.

ಬೀಚ್

ಬೀಚ್

ಸಾಮಾನ್ಯವಾಗಿ ಗೋವಾದಲ್ಲಿ ಅತ್ಯಂತ ಸುಂದರವಾಗಿರುವ ಬೀಚ್‍ಗಳು ಇವೆ. ಅದರಲ್ಲಿ ಕಾಂಡೊಲಿ ಪ್ರದೇಶದಲ್ಲಿ 3 ಪ್ರಧಾನವಾದ ಬೀಚ್‍ಗಳು ಇವೆ. ಅವುಗಳೆಂದರೆ ಕಾಂಡೊಲಿಂ ಬೀಚ್, ಕಾಲಾಗೂಟೆ ಬೀಚ್ ಮತ್ತು ಬಾಗಾಬೀಚ್. ಆದರೆ ಇವುಗಳಲ್ಲಿ ಬಾಗಾ ಬೀಚ್‍ನನ್ನು ಅತ್ಯಂತ ಸ್ವಚ್ಛತೆಯನ್ನು ಕಾಪಾಡುತ್ತಾರೆ.

ವಾಟರ್ ಗೇಮ್ಸ್

ವಾಟರ್ ಗೇಮ್ಸ್

ಎಲ್ಲಾ ಬೀಚ್‍ಗಳಲ್ಲಿ ವಾಟರ್ ಗೇಮ್ಸ್‍ಗಳು ಸಾಮಾನ್ಯವಾಗಿ ಇರುತ್ತದೆ. ಅಲ್ಲಿನ ಕೆಲವು ಮಂದಿ ಬ್ರೋಕರ್‍ಗಳು ನಿರ್ವಹಿಸುತ್ತಾರೆ. ಜೆಟ್ ಸ್ಕೈ, ಬನಾನಾ ರೈಡ್‍ನಂತಹ ಗೇಮ್ಸ್‍ಗಳನ್ನು ಹಾರಿಸಿಕೊಳ್ಳುತ್ತಾರೆ.

ಇದನ್ನು ಮಾತ್ರ ಮರೆಯಬೇಡಿ..

ಇದನ್ನು ಮಾತ್ರ ಮರೆಯಬೇಡಿ..

ಬೀಚ್‍ಗಳಲ್ಲಿನ ಗುಡಿಸಲುಗಳಲ್ಲಿ ದೊರೆಯುವ ಸ್ವಚ್ಛವಾದ ಗೋವಾದ ಸಮುದ್ರ ತಿನಿಸು ಹಾಗು ಮಧ್ಯವನ್ನು ಮಾತ್ರ ತಿನ್ನುವುದು ಮರೆಯಬೇಡಿ.

ಅಂಜನಾ ಬೀಚ್

ಅಂಜನಾ ಬೀಚ್

ಈ ಮೂರು ಪ್ರಧಾನವಾದ ಬೀಚ್‍ನ ಸಮೀಪದಿಂದ ಸ್ವಲ್ಪ ದೂರದಲ್ಲಿ ಅಂಜನಾ ಬೀಚ್ ಇರುತ್ತದೆ. ಅಂಜನಾ ಬೀಚ್ ಸುಂದರವಾದ ವಾತಾವರಣ ಹಾಗು ಪ್ರಶಾಂತತೆಯಿಂದ ಕೂಡಿರುತ್ತದೆ.

ಸೌಕರ್ಯ

ಸೌಕರ್ಯ

ಒಂದು ಪುಸ್ತಕವನ್ನು ಓದಬೇಕು ಎಂದು ಅನಿಸಿದರೂ, ಏಕಾಂತವಾಗಿ ಕಾಲ ಕಳೆಯಬೇಕು ಎಂದು ಅನಿಸಿದರು ಕೂಡ ಈ ಬೀಚ್ ಅತ್ಯಂತ ಸೌಕರ್ಯಯುತವಾಗಿದೆ.

ಇಲ್ಲಿನ ವಿಶೇಷತೆ

ಇಲ್ಲಿನ ವಿಶೇಷತೆ

ನಿಶ್ಯಬ್ಧ ಮತ್ತು ಪ್ರಶಾಂತತೆ ಇಲ್ಲಿನ ಮುಖ್ಯವಾದ ವಿಶೇಷವಾಗಿದೆ. ಗೋವಾದಲ್ಲಿನ ಗುಡಿಸಲುಗಳಲ್ಲಿ ಕನಿಷ್ಟ ಬೆಲೆಗೆ ಒಡ್ಕಾ ದೊರೆಯುತ್ತದೆ.

ಚರ್ಚ್‍ಗಳು

ಚರ್ಚ್‍ಗಳು

ಗೋವಾದಲ್ಲಿನ ದಕ್ಷಿಣ ಭಾಗವನ್ನು ಪರಿಶೀಲಿಸಿದರೆ ಆ ಪ್ರದೇಶವು ಅತ್ಯಂತ ಪ್ರಶಾಂತವಾಗಿರುತ್ತದೆ. ಇಲ್ಲಿ ಪ್ರಸಿದ್ಧಿ ಪಡೆದ ಚರ್ಚ್‍ಗಳು, ಬೀಚ್‍ಗಳನ್ನು ಕಾಣಬಹುದಾಗಿದೆ.

ಕೊಲ್ವಾ ಬೀಚ್

ಕೊಲ್ವಾ ಬೀಚ್

ಗೋವಾದಲ್ಲಿ ಎಷ್ಟೊ ಹೆಸರುವಾಸಿಯಾಗಿರುವ ಕೊಲ್ವಾ ಬೀಚ್ ದಕ್ಷಿಣ ಪ್ರದೇಶದಲ್ಲಿದೆ. ಈ ಪ್ರದೇಶದಲ್ಲಿ ಅತ್ಯಂತ ದುಬಾರಿ ಹೋಟೆಲ್‍ಗಳನ್ನು ಕಾಣಬಹುದಾಗಿದೆ. ಕ್ರಮಶಿಕ್ಷಣವನ್ನು ಅನುಸರಿಸುವವರಿಗೆ ಈ ಪ್ರದೇಶವು ಸುಂದರವಾಗಿರುತ್ತದೆ.

ಪಾರ್ಟಿ ಪ್ರಿಯರಿಗೆ ಸ್ವರ್ಗ

ಪಾರ್ಟಿ ಪ್ರಿಯರಿಗೆ ಸ್ವರ್ಗ

ಅದರಲ್ಲೂ ಸಾಯಂಕಾಲವಾಗುತ್ತಿದ್ದಂತೆ ಗೋವಾ ಪಟ್ಟಣ ಪಾರ್ಟಿ ಪಟ್ಟಣವಾಗಿ ಮಾರ್ಪಾಟಾಗುತ್ತದೆ. ಪಾರ್ಟಿ ಪ್ರಿಯರಿಗೆ ಇದೊಂದು ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಪಾರ್ಟಿಗಳು ಬೆಳಗಿನ ಜಾವ 3 ಗಂಟೆಯವರೆವಿಗೂ ನಡೆಯುತ್ತಿರುತ್ತದೆ.

ಸೌಕರ್ಯ

ಸೌಕರ್ಯ

ಪಬ್ ಯಜಮಾನರು ಬೆಳಗಿನ ಜಾವದವರೆವಿಗೂ ಸಂಗೀತವನ್ನು ಹಾಕುತ್ತಲೇ ಇರುತ್ತಾರೆ. ಆದರೆ ಯಾವುದೇ ಭದ್ರತಾ ಸೌಕರ್ಯವಿಲ್ಲದೇ ಗೋವಾದಲ್ಲಿ ರಾತ್ರಿಯ ಸಮಯದಲ್ಲಿ ಇರುವುದು ಅಷ್ಟು ಒಳ್ಳೆಯದಲ್ಲ.

ನೈಟ್ ಕ್ಲಬ್

ನೈಟ್ ಕ್ಲಬ್

ಆ ಸಮಯದಲ್ಲಿ ನಿಮಗೆ ಕ್ಯಾಬ್ ದೊರೆಯುವುದು ಕಷ್ಟವೇ ಸರಿ. ಉತ್ತರಗೋವಾದಲ್ಲಿ ಕೆಫಿಟಿತೊಸ್ ಮತ್ತು ಮಾಂಬೊಸ್ ಎಂಬ 2 ಪ್ರಮುಖವಾದ ನೈಟ್ ಕ್ಲಬ್‍ಗಳು ಇವೆ.

ಜಾಗ್ರತೆ

ಜಾಗ್ರತೆ

ಆದರೆ ಬೀಚ್‍ನ ಒಳಗೆ ಹೋಗುವುದು ರಾತ್ರಿ ಸಮಯದಲ್ಲಿ ಅಷ್ಟೊ ಒಳ್ಳೆಯದು ಅಲ್ಲ. ಇಲ್ಲಿನ ಬೀಚ್‍ಗಳಿಗೆ ಏಕಾಂತವಾಗಿ ಹೋದರೆ ಕಳ್ಳರು ಹಾಗು ನಾಯಿಗಳ ಕಾಟ ಹೆಚ್ಚಾಗಿರುತ್ತದೆ.

ಭಾರತೀಯ ಜೀವನ ವಿಧಾನಗಳು

ಭಾರತೀಯ ಜೀವನ ವಿಧಾನಗಳು

ರಜೆ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವ ವಿದೇಶಿಯರು ಭಾರತೀಯರ ಜೀವನ ವಿಧಾನವನ್ನು ಇಷ್ಟ ಪಡುತ್ತಾರೆ.

Please Wait while comments are loading...