Search
  • Follow NativePlanet
Share
» »ಜಮ್ಮು ಮತ್ತು ಕಾಶ್ಮೀರದ ಅತ್ಯದ್ಭುತ ಕೆರೆಗಳು

ಜಮ್ಮು ಮತ್ತು ಕಾಶ್ಮೀರದ ಅತ್ಯದ್ಭುತ ಕೆರೆಗಳು

By Vijay

ಭಾರತ ಮಾತೆಯ ಸುಂದರ ಮುಕುಟ ಎಂದೆ ಹೇಳಬಹುದಾದ ವೈಭವಯುತ ರಾಜ್ಯ ಉತ್ತರದ ತುತ್ತುದಿಯಾದ ಜಮ್ಮು ಮತ್ತು ಕಾಶ್ಮೀರ. "ಕಣಿವೆಗಳ ರಾಜ್ಯ" ಎಂಬ ಹೆಗ್ಗಳಿಕೆಯನ್ನೂ ಸಹ ಪಡೆದಿರುವ ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಇಲ್ಲಿನ ಪ್ರಕೃತಿಯ ಸೊಬಗನ್ನು ನೋಡಿಯೇ ಅನುಭವಿಸಬೇಕು.

ನಿಪುಣ ವರ್ಣಚಿತ್ರಗಾರನು ತನ್ನ ಕುಂಚವನ್ನು ಹಿಡಿದು ಕಲ್ಪನಾ ಲೋಕಕ್ಕೆ ಜಾರಿ ಗರಿ ಗರಿಯಾಗಿ ಪ್ರಕೃತಿಯ ಚಿತ್ತಾರಗಳನ್ನು ಸುಮಧುರವಾಗಿ ಬಿಡಿಸಿದಂತೆ, ಜಮ್ಮು ಕಾಶ್ಮೀರದ ಪ್ರಕೃತಿಯ ಅಂದಚೆಂದಗಳು ಭೇಟಿ ನೀಡಿದವರಿಗೆ ಕಂಡುಬರುವುದರಲ್ಲಿ ಯಾವುದೆ ಸಂಶಯವಿಲ್ಲ.

ವಿಶೇಷ ಲೇಖನ : ದಕ್ಷಿಣ ಭಾರತದ ಸುಂದರ ಪ್ರವಾಸಿ ಕೆರೆಗಳು

ತಣ್ಣನೆಯ ಮಣ್ಣಿನಲಿ ಜುಳು ಜುಳು ಎಂದು ಹರಿಯುವ ಶುಭ್ರ ನೀರಿನ ತೊರೆಗಳು, ಬಾನೆತ್ತರದ ಆಗಸದಲಿ ಚಿಲಿಪಿಲಿಗುಟ್ಟುತ್ತ ಸ್ವಚ್ಛಂದವಾಗಿ ಹಾರುತಿರುವ ಹಕ್ಕಿಗಳು, ಮದುವೆ ಮನೆಯ ಹಸಿರಿನ ಚಪ್ಪರದಂತೆ ಅಲಂಕೃತಗೊಂಡಿರುವ ವನಸಿರಿಗಳು, ತಲೆ ತಿರುಗಿಸುವಂತಹ ಪ್ರಪಾತಗಳೊಂದೆಡೆಯಾದರೆ ಮೈ ಜುಮ್ಮೆನಿಸುವ ಹಿಮಪರ್ವತಗಳು ಇನ್ನೊಂದೆಡೆ, ಹೀಗೆ ಈ ರಾಜ್ಯದ ವೈಭವವು ಭೇಟಿ ನೀಡುವ ಪ್ರವಾಸಿಗನೆದುರು ಅನಾವರಣಗೊಳ್ಳುತ್ತಾ ಹೋಗುತ್ತದೆ.

ಇವೆಲ್ಲದಕ್ಕಿಂಬು ನೀಡುವಂತೆ ಕಂಗೊಳಿಸುತ್ತದೆ ಈ ರಾಜ್ಯದಲ್ಲಿ ಕಂಡುಬರುವ ಕೆಲವು ಅತ್ಯದ್ಭುತ ಸರೋವರಗಳು ಹಾಗೂ ಅಲ್ಲಿನ ಮನಸ್ಸು ಪ್ರಫುಲ್ಲಗೊಳಿಸುವಂತಹ ಸುಂದರ ಪರಿಸರ. ಹೌದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕೆಲವು ಅತಿ ಸುಂದರವಾದ ಸರೋವರಗಳನ್ನು ಕಾಣಬಹುದು. ಈ ಸುಂದರ ಕೆರೆಗಳು ಛಾಯಾಗ್ರಾಹಕ ಪ್ರವಾಸಿಗನಿಗಂತೂ ಸಾಕ್ಷಾತ ಸ್ವರ್ಗವೆ ಧರೆಗಿಳಿದು ಬಂದಂತಿರುವ ಅನುಭೂತಿಯನ್ನು ನೀಡುತ್ತವೆ. ಪ್ರಸ್ತುತ ಲೇಖನದ ಮೂಲಕ ಈ ರಾಜ್ಯದ ಕೆಲವು ಅದ್ಭುತ ಕೆರೆಗಳ ಕುರಿತು ತಿಳಿಯಿರಿ.

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಪ್ಯಾಂಗಾಂಗ್ ಕೆರೆ : ಯಶಸ್ವಿ ಹಿಂದಿ ಚಲನಚಿತ್ರ ಅಮೀರ ಖಾನ್ ಮತ್ತು ಕರೀನಾ ಕಪೂರ್ ಅಭಿನಯನದ "ತ್ರಿ ಇಡಿಯಟ್ಸ್" ನೆನಪಿದೆಯೆ? ಆ ಚಿತ್ರದ ಅಂತಿಮ ಭಾಗದಲ್ಲಿ ನಾಯಕ ನಾಯಕಿ ಒಂದು ಸುಂದರ ಕೆರೆ ದಡದಲ್ಲಿ ಒಬ್ಬರಿಗೊಬ್ಬರು ಭೇಟಿ ಮಾಡುತ್ತಾರೆ. ಆ ಅದ್ಭುತ ಕೆರೆಯೆ ಈ ಪ್ಯಾಂಗಾಂಗ್ ಕೆರೆ. ತಾಂತ್ರಿಕವಾಗಿ ಇದನ್ನು "ಎಂಡೋರ್ಹೈಕ್" ಕೆರೆ ಎಂದು ವಿಂಗಡಿಸಲಾಗಿದೆ. ಅಂದರೆ ಇದರ ನೀರು ಹೊರಗಿನ ಯಾವುದೆ ಜಲಗಳ ಜೊತೆ ಕೂಡುವುದಿಲ್ಲ.

ಚಿತ್ರಕೃಪೆ: Ajay Panachickal

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದಲ್ಲಿ ಈ ಸುಂದರ ಹಾಗೂ ಮನಮೋಹಕ ಕೆರೆಯನ್ನು ಕಾಣಬಹುದು. ಲೇಹ್ ಪಟ್ಟಣದಿಂದ ಐದು ಘಂಟೆಗಳಷ್ಟು ಪ್ರಯಾಣಾವಧಿಯ ಮೂಲಕ ಈ ಕೆರೆಯನ್ನು ತಲುಪಬಹುದಾಗಿದೆ. ಇಲ್ಲಿಗೆ ತೆರಳಲು ಯಾವುದೆ ವಾಹನಗಳಿರುವುದಿಲ್ಲವಾದ್ದರಿಂದ ನಿಮ್ಮ ಸ್ವಂತ ಅಥವಾ ಬಾಡಿಗೆ ವಾಹನವನ್ನು (ಲೇಹ್ ಪಟ್ಟಣದಿಂದ) ಮೊದಲೆ ಪಡೆದು ತೆರಳಬೇಕು.

ಚಿತ್ರಕೃಪೆ: Karunakar Rayker

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಈ ಮಾರ್ಗವು ಚಿಕ್ಕದಾಗಿದ್ದು ಅದ್ಭುತವಾದ ಪ್ರಕೃತಿ ಸೌಂದರ್ಯದ ಬಿತ್ತರಿಸುವ ಭೂಪ್ರದೇಶಗಳ ಮಾಧ್ಯೆ ಸಾಗುತ್ತ ಹೋಗುತ್ತದೆ. ಅಲ್ಲದೆ ಈ ಮಾರ್ಗದಲ್ಲಿ "ಪಾಗಲ್ ನಾಲಾ" ಹಾಗೂ "ಚಾಂಗ್ಲಾ ಪಾಸ್" ಮುಂತಾದ ರಹದಾರಿಗಳು ಹಾಗೂ ಚಿಕ್ಕ ಪುಟ್ಟ ಹಳ್ಳಿಗಳ ಮೂಲಕ ಹಾದುಹೋಗುತ್ತದೆ. ಚಾಂಗ್ಲಾ ಪಾಸ್ ನಲ್ಲಿ ಸೇನೆಯ ಚಿಕ್ಕ ಚಹಾ ಅಂಗಡಿಯಿದ್ದು ಪ್ರವಾಸಿಗರ ಮನ ತಣಿಸುತ್ತದೆ.

ಚಿತ್ರಕೃಪೆ: Sumeet Mondal

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಮತ್ತೊಂದು ಸಂಗತಿಯೆಂದರೆ ಈ ಕೆರೆಗೆ ಭೇಟಿ ನೀಡಲು ಲೇಹ್ ನಲ್ಲಿರುವ ಪ್ರವಾಸಿ ಕಚೇರಿಯಿಂದ ಒಳಾಂಗಣ ಗಡಿ ಪ್ರವೇಶದ ಪರವಾನಿಗೆಯನ್ನು ನಿಗದಿತ ಶುಲ್ಕ ಕೊಟ್ಟು ಪಡೆದುಕೊಳ್ಳುವುದು ಅವಶ್ಯಕವಾಗಿದೆ. ಭಾರತೀಯರಾದರೆ ಒಬ್ಬ್ರಿದ್ದರೂ ಸರಿ ಪರವಾನಿಗೆ ದೊರೆಯುತ್ತದೆ. ಆದರೆ ವಿದೇಶಿಯರು ಕನಿಷ್ಠ ಮೂರು ಜನರ ಗುಂಪಾಗಿರಬೇಕು ಮತ್ತು ಒಬ್ಬ ಮಾರ್ಗದರ್ಶಿಯಿರಬೇಕು.

ಚಿತ್ರಕೃಪೆ: Ashishinfogr8

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಈ ಅದ್ಭುತ ಕೆರೆಯು 134 ಕಿ.ಮೀ ಗಳಷ್ಟು ಉದ್ದವಿದ್ದು ಗರಿಷ್ಠ 5 ಕಿ.ಮೀ ಗಳಷ್ಟು ಅಗಲ ಹೊಂದಿದೆ. ಕೆರೆಯ ಬಹುಭಾಗವು ಟಿಬೆಟ್ ಪ್ರದೇಶದಲ್ಲಿದ್ದು, ಭದ್ರತಾ ಕಾರಣಗಳಿಂದ ಈ ಕೆರೆಯಲ್ಲಿ ಭಾರತ ಸರ್ಕಾರವು ದೋಣಿಯಾನವನ್ನು ನಿಷೇಧಿಸಿದೆ. ಕೆರೆಯ ನೀರು ಲವಣಯುಕ್ತವಾಗಿದ್ದು ಯಾವುದೆ ರೀತಿಯ ಮೀನುಗಳಿಲ್ಲ. ಆದ್ರೆ ಚಿಪ್ಪು ಹುಳುಕಂಡುಬರುತ್ತವೆಂದು ಹೇಳಲಾಗಿದೆ. ಅಲ್ಲದೆ ವೈವಿಧ್ಯಮಯ ಪಕ್ಷಿಗಳನ್ನು ಈ ಕೆರೆಯ ಆಸು ಪಾಸಿನಲ್ಲಿ ಹೇರಳವಾಗಿ ಕಾಣಬಹುದು.

ಚಿತ್ರಕೃಪೆ: Chinchu2

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಲವಣಯುಕ್ತ ನೀರನ್ನು ಹೊಂದಿದ್ದರೂ ಸಹ ಅತಿ ಚಳಿಗಾಲದ ಅಥವಾ ಹಿಮಪಾತದ ಸಂದರ್ಭದಲ್ಲಿ ಈ ಕೆರೆಯು ಮಂಜುಗಟ್ಟುವುದು ಒಂದು ವಿಶೇಷವೆ ಆಗಿದೆ. ಈ ಕೆರೆಯ ಕುರಿತು ತಿಳಿದು ಆಕರ್ಷಿತರಾಗಿರುವ ಭಾರತದ ಮೂಲೆ ಮೂಲೆಯ ಯುವ ಜನಾಂಗದವರೆ ಹೆಚ್ಚಾಗಿ ಈ ಕೆರೆಗೆ ಮೋಟಾರ್ ಬೈಕುಗಳ ಮೂಲಕ ಭೇಟಿ ನೀಡಬಯಸುತ್ತಾರೆ.

ಚಿತ್ರಕೃಪೆ: Ajay Panachickal

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ದಾಲ್ ಸರೋವರ : ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿಯಾದ ಶ್ರೀನಗರದಲ್ಲಿರುವ ದಾಲ್ ಸರೋವರವು ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಹಿಮಪರ್ವತಗಳ ಸುಂದರ ಹಿನ್ನಿಲೆ ಹೊಂದಿರುವ ಈ ಅದ್ಭುತ ಕೆರೆಯು ಪ್ರವಾಸಿಗರ ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣ, ಕಾರಣ ಇಲ್ಲಿನ ಶಿಕಾರಾಗಳು.

ಚಿತ್ರಕೃಪೆ: Basharat Alam Shah

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಶಿಕಾರಾಗಳು ವೈವಿಧ್ಯಮಯ ಆಸನ, ನಿವಾಸವುಳ್ಳ ಒಂದು ರೀತಿಯ ದೋಣಿ ಮನೆಗಳು. ಇದರಲ್ಲಿ ಕುಳಿತು ಸರೋವರದ ಉದ್ದಗಲವನ್ನು ವಿಹರಿಸುತ್ತ, ಮನಮೋಹಕ ಪ್ರಕೃತಿಯ ಸೊಬಗನ್ನು ಆರಾಧಿಸುತ್ತ, ಹಿಮಚ್ಛಾದಿತ ಪರ್ವತಗಳನ್ನು ನೋಡಿ ಬೆರಗಾಗುತ್ತ, ದಿನ ವ್ಯವಹಾರವಾದಂತಹ ವ್ಯಾಪಾರ ವಹಿವಾಟುಗಳು ಕೆರೆಯಲ್ಲಿಯೆ ದೋಣಿಗಳ ಮೂಲಕ ಸಾಗುತ್ತ ನಡೆಯುತ್ತಿರುವುದನ್ನು ನೋಡಿ ಅಚ್ಚರಿಪಡುತ್ತ ಆನಂದಿಸಬಹುದು.

ಚಿತ್ರಕೃಪೆ: Basharat Alam Shah

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ರಾಜ್ಯದ ಪ್ರವಾಸೋದ್ಯಮಕ್ಕೆ ಇಂಬು ನೀಡಿರುವ ಈ ಸುಂದರ ಕೆರೆಯು "ಶ್ರೀನಗರದ ಒಡವೆ" ಎಂದು ಬಲು ಪ್ರೀತಿಯಿಂದ ಕರೆಯಲ್ಪಡುತ್ತದೆ. ಕೇವಲ ವಿಹಾರಕ್ಕಾಗಿ ಮಾತ್ರವಲ್ಲದೆ ಮೀನುಗಾರಿಕೆ ಹಾಗೂ ಜಲಸಸ್ಯಗಳನ್ನು ಬೆಳೆಯುವ ಪ್ರಮುಖ ಮೂಲವಾಗಿಯೂ ಸಹ ದಾಲ್ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Basharat Alam Shah

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

15.5 ಕಿ.ಮೀ ಗಳಷ್ಟು ಉದ್ದವಾದ ದಡವನ್ನು ಹೊಂದಿರುವ ಈ ಕೆರೆಯ ದಂಡೆಗುಂಟಲೂ ಸಾಕಷ್ಟು ಸುಂದರ ಪ್ರಾಕೃತಿಕ ಸೊಬಗು, ಹೋಟೆಲುಗಳು ಹಾಗೂ ಮುಘಲ್ ನಿರ್ಮಿತ ಶಾಲಿಮಾರ್ ಮತ್ತು ನಿಶಾಂತ್ ಬಾಗ್ ನಂತಹ ಅತಿ ಸುಂದರ ಉದ್ಯಾನಗಳು ಗರಿಗೆದರಿ ನಿಂತಿರುವುದನ್ನು ಕಾಣಬಹುದು. ನಿಶಾಂತ್ ಬಾಗ್ ಉದ್ಯಾನ.

ಚಿತ್ರಕೃಪೆ: McKay Savage

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

18 ಕಿ.ಮೀ ಗಳಷ್ಟು ವಿಶಾಲವಾದ ವ್ಯಾಪ್ತಿಯನ್ನಿ ಹೊಂದಿರುವ ಈ ಸುಂದರ ಕೆರೆಯು ನಾಲ್ಕು "ಕಾಸ್ ವೇ" ಗಳ (ನೀರಿನ ಮೂಲಕ್ಕೆ ಅಡ್ಡಲಾಗಿ ತುಸು ಎತ್ತರ ಭೂಭಾಗ ಹೊಂದಿದ್ದು ಅದರ ಮೇಲಿನ ರಸ್ತೆ ಅಥವಾ ರೈಲುಮಾರ್ಗವನ್ನು ಕಾಸ್ ವೆ ಎಂದು ಕರೆಯಲಾಗುತ್ತದೆ.) ಮೂಲಕ ಗರೀಬಲ್, ಲೊಕುಟ್ ದಾಲ್, ಬೋಡ್ ದಾಲ್ ಹಾಗೂ ನಾಗಿನ್ ಗಳೆಂದು ವಿಂಗಡನೆಗೊಂಡಿದೆ.

ಚಿತ್ರಕೃಪೆ: Vinayaraj

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಪುರಾತನ ಸಂಸ್ಕೃತ ಭಾಷೆಯ ಬರಹಗಳಲ್ಲಿ ಈ ಸರೋವರವನ್ನು ಮಹಾಸರಿತ ಎಂದು ಉಲ್ಲೇಖಿಸಲಾಗಿದೆ. ಪುರಾತನ ಐತಿಹಾಸಿಕ ದಾಖಲೆಗಳಲ್ಲಿ ಹೇಳಿರುವಂತೆ ಈ ಕೆರೆಯ ಪೂರ್ವಕ್ಕೆ ಇಸಾಬಾರ್ ಎಂಬ ಗ್ರಾಮವಿತ್ತು. ಈ ಗ್ರಾಮವು ತಾಯಿ ದುರ್ಗೆಯ ವಾಸಸ್ಥಳವಾಗಿತ್ತಂತೆ. ಪ್ರಸ್ತುತ ಕೆರೆಯ ಸುತ್ತಲಿನ ಪ್ರದೇಶಕ್ಕೆ ಸುರೇಶ್ವರಿ ಎಂಬ ಹೆಸರಿದ್ದು ಇದು ಸಾತಧಾರಾ ಎಂಬ ನೀರಿನ ಮೂಲವಾಗಿತ್ತಂತೆ.

ಚಿತ್ರಕೃಪೆ: Basharat Alam Shah

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಂತರ ಇಲ್ಲಿ ಒಳಹೊಕ್ಕಿದ ಮುಘಲರು ಕಾಶ್ಮೀರ ಅದರಲ್ಲೂ ವಿಶೇಷವಾಗಿ ಶ್ರೀನಗರವನ್ನು ತಮ್ಮ ಬೇಸಿಗೆಯ ರಜಾ ತಾಣವನ್ನಾಗಿ ಮಾಡಿಕೊಂಡರು ಮತ್ತು ತಂಪಾಗಿ ಸಮಯ ಕಳೆಯಲು ಇಲ್ಲಿ ಕೆಲವು ಉದ್ಯಾನಗಳನ್ನು ನಿರ್ಮಿಸಿದರು.

ಚಿತ್ರಕೃಪೆ: Basharat Alam Shah

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಪ್ರಸ್ತುತ ದಾಲ್ ಸರೋವರವು ಶ್ರೀನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಶಿಕಾರಾಗಳಲ್ಲಿ ಕುಳಿತು ಹಾಯಾಗಿ ನೀರಿನ ಮೇಲೆ ವಿಹರಿಸುತ್ತ ಸುತ್ತಮುತ್ತಲಿನ ಪರಿಸರದ ಅಂದಚೆಂದವನ್ನು ಆಸ್ವಾದಿಸುತ್ತ ಸಂತಸಪಡುತ್ತಾರೆ.

ಚಿತ್ರಕೃಪೆ: Laportechicago

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಕೃಷ್ಣಸರ ಸರೋವರ : ಕಾಶ್ಮೀರಿ ಭಾಷೆಯಲ್ಲಿ ಅಥವಾ ಸ್ಥಳೀಯವಾಗಿ ಕೃಷ್ಣನ ಕೆರೆ ಎಂದು ಕರೆಯಲ್ಪಡುವ ಈ ಕೆರೆಯು ಶ್ರೀನಗರದಿಂದ 115 ಕಿ.ಮೀ ಗಳಷ್ಟು ದೂರದಲ್ಲಿ ಸೋನಾಮಾರ್ಗದ ಬಳಿ ಸ್ಥಿತವಿದೆ. ಇದೊಂದು ತಾಜಾ ಹಾಗೂ ಶುಭ್ರ ನೀರಿನ ಕೊಳವಾಗಿದ್ದು ಮುಂದೆ ನೀಲಿಮಾ ನದಿಗೆ ನೀರಿನ ಮೂಲವಾಗಿದೆ.

ಚಿತ್ರಕೃಪೆ: Mehrajmir13

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಕಶ್ಮೀರ ಕಣಿವೆಯಲ್ಲಿ ಚಾರಣಿಗರ ನೆಚ್ಚಿನ ತಾಣವಾಗಿರುವ ಈ ಕೆರೆ ಪ್ರದೇಶವು ಸುತ್ತಲೂ ಸ್ವಚ್ಛಂದವಾದ ಹಸಿರಿನಿಂದ ಕೂಡಿದ ಹುಲ್ಲುಗಾವಲು ಹಾಗೂ ಎತ್ತರದ ಪರ್ವತಗಳಿಂದ ಸುತ್ತುವರೆದಿದೆ. ಹಿಮಪಾತವಾಗುವ ಸಂದರ್ಭದಲ್ಲಿ ಇದರ ನೀರು ಸಂಪೂರ್ಣವಾಗಿ ಹಿಮಗಟ್ಟಿ ಈ ಪ್ರದೇಶವನ್ನು ತಲುಪುವುದು ಅಸಾಧ್ಯವಾಗಿಬಿಡುತ್ತದೆ.

ಚಿತ್ರಕೃಪೆ: Mehrajmir13

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಈ ಸರೋವರದಲ್ಲಿ ಆಮ್ಲಜನಕದ ಪ್ರಮಾಣವು ಆಳದಲ್ಲಿ ಯಥೇಚ್ಚವಾಗಿರುವುದರಿಂದ ವೈವಿಧ್ಯಮಯ ಮೀನುಗಳು ಹಾಗೂ ಇತರೆ ಜಲಚರಗಳನ್ನು ಇಲ್ಲಿ ಕಾಣಬಹುದು. ಕಂದು ಬಣ್ಣದ ಟ್ರೌಟ್ ಮೀನುಗಳು ಈ ತರಹದ ಸಸ್ಯ ಪೋಷಕ ದ್ರವ್ಯಗಳು ಅತಿ ಕಡಿಮೆಯಿರುವ ಕೆರೆಗಳಲ್ಲಿ ಕಂಡುಬರುತ್ತವೆ. ಏಕೆಂದರೆ ಸಾಮಾನ್ಯವಾಗಿ ಈ ಮೀನುಗಳು ಇತರೆ ಮೀನು ಹಾಗೂ ಹುಳು ಹುಪ್ಪಡಿಗಳನ್ನು ತಿಂದು ಬದುಕುತ್ತವೆ ಹಾಗೂ ಇವುಗಳಿಗೆ ತಂಪಾದ ಮತ್ತು ಯಥೇಚ್ಚವಾಗಿ ಆಮ್ಲಜನಕದ ಅವಶ್ಯಕತೆಯಿರುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Mike Cline

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ವಿಷ್ಣುಸರ ಸರೋವರ : ಕೃಷ್ಣಸರದ ಪಕ್ಕದಲ್ಲೆ ಇರುವ ಈ ಕೆರೆಯು ವಿಷ್ಣುವಿನ ಕೆರೆ ಎಂಬ ಹೆಸರನ್ನು ಹೊಂದಿದೆ. ನೀಲಿಮಾ ನದಿಯ ಪ್ರಮುಖ ಮೂಲ ಇದೆ ಕೆರೆ ಎನ್ನಲಾಗಿದೆ. ಕೃಷ್ಣಸರದಂತೆ ವೈವಿಧ್ಯಮಯ ಜಲಚರಗಳಿಗೆ ಹೆಸರುವಾಸಿಯಾದ ಈ ಕೆರೆಯು ಕಾಷ್ಮೀರಿ ಪಂಡಿತರಿಗೆ ಪ್ರಮುಖವಾದ ಕೆರೆಯಾಗಿದೆ.

ಚಿತ್ರಕೃಪೆ: Mehrajmir13

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಶೇಷನಾಗ ಕೆರೆ : ಕಾಶ್ಮೀರ ಕಣಿವೆಯ ಅನಂತನಾಗ ಜಿಲ್ಲೆಯ ಪಹಲ್ಗಾಮ್ ಎಂಬಲ್ಲಿ ಈ ಸುಂದರ ಕೆರೆಯಿದೆ. ಇದೂ ಸಹ ಸಸ್ಯ ಪೋಷಕ ತತ್ವ ಕಡಿಮೆಯಿರುವ ಆದರೆ ಆಮ್ಲಜನಕ ಅಧಿಕವಿರುವ ಶುದ್ಧ ನೀರಿನ ಕೆರೆಯಾಗಿದೆ.

ಚಿತ್ರಕೃಪೆ: Akhilesh Dasgupta

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಅಮರನಾಥ ಯಾತ್ರೆ ಪ್ರಯುಕ್ತ ಅಮರನಾಥ ಗುಹೆಗೆ ಹೋಗುವ ಸಂದರ್ಭದಲ್ಲಿ ಎದುರಾಗುವ ಈ ಕೆರೆಯು ಪೌರಾಣಿಕವಾಗಿಯೂ ಮಹತ್ವವನ್ನು ಪಡೆದ ಕೆರೆಯಾಗಿದೆ. ಪಹಲ್ಗಾಮ್ ಪಟ್ಟಣದಿಂದ 23 ಕಿ.ಮೀ ಗಳಷ್ಟು ದೂರದಲ್ಲಿ ಈ ಕೆರೆಯು ಸ್ಥಿತವಿದೆ.

ಚಿತ್ರಕೃಪೆ: Akhilesh Dasgupta

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

1.1 ಕಿ.ಮೀ ಉದ್ದ ಹಾಗೂ 0.7 ಕಿ.ಮೀ ಅಗಲವಾಗಿರುವ ಈ ಕೆರೆಯು ನಾಗಗಳ ರಾಜನಾದ ಶೇಷನಾಗನಿಗೆ ಮುಡಿಪಾದ ಕೆರೆಯಾಗಿದೆ. ನಂಬಿಕೆಯಂತೆ ಈ ಕೆರೆಯನ್ನು ಸ್ವತಃ ಶೇಷನಾಗನೆ ನಿರ್ಮಿಸಿದ್ದಾನೆನ್ನಲಾಗಿದೆ. ಇದೊಂದು ಪುರಾಣಪ್ರಸಿದ್ಧ ಕೆರೆಯಾಗಿದ್ದು ಅಮರನಾಥ ಯಾತ್ರೆಗೆ ತೆರಳುವ ಭಕ್ತರು ಈ ಕೆರೆಗೆ ಭೇಟಿ ನೀಡಿ, ವಂದಿಸಿ ಅನಂತರ ಮುಂದೆ ತೆರಳುತ್ತಾರೆ.

ಚಿತ್ರಕೃಪೆ: Pauk

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಚಾರಣದ ಮೂಲಕ ಮಾತ್ರವಷ್ಟೆ ಇಲ್ಲಿಗೆ ತಲುಪಬಹುದಾಗಿದೆ. ಈ ಕೆರೆಯಲ್ಲೂ ಸಹ ವೈವಿಧ್ಯಮಯ ಮೀನು ಹಾಗೂ ಇತರೆ ಜಲಚರಗಳನ್ನು ಕಾಣಬಹುದು. ಹಿಮಪಾತದ ಸಂದರ್ಭದಲ್ಲಿ ಈ ಕೆರೆಯ ನೀರು ಸಂಪೂರ್ಣವಾಗಿ ಹಿಮಗಟ್ಟುತ್ತದೆ ಹಾಗೂ ಈ ತಾಣವನ್ನು ತಲುಪುವುದು ಬಲು ಕಷ್ಟಸಾಧ್ಯವಾಗುತ್ತದೆ.

ಚಿತ್ರಕೃಪೆ: Ravinder Singh Gill

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಗಡಸರ ಸರೋವರ : ಯೆಮ್ಸರ್ ಕೆರೆ (ರಾಕ್ಷಸ ಕೆರೆ) ಎಂತಲೂ ಕರೆಯಲ್ಪಡುವ ಈ ಕೆರೆಯು ಜಮ್ಮು ಕಶ್ಮೀರ ರಾಜ್ಯದ ನೂತನ ಜಿಲ್ಲೆಯಾದ ಗಂದೇರ್ಬಾಲ್ ಜಿಲ್ಲೆಯಲ್ಲಿದೆ. ಗಡಸರ್ ಕೆರೆ ಎಂದರೆ ಸ್ಥಳೀಯವಾಗಿ ಮೀನುಗಳ ಕೆರೆ
ಎಂದಾಗುತ್ತದೆ. ಸ್ಥಳಿಯವಾಗಿ ಈ ಕೆರೆಯಲ್ಲಿ ಉಗ್ರಜೀವಿಯೊಂದಿದ್ದು ದಂಡೆಯ ಹತ್ತಿರಕ್ಕೆ ಬರುವ ಜೀವಿಗಳನ್ನು ಒಳೆಗೆಳೆಯುತ್ತದಂತೆ! ಆ ಕಾರಣ ಇಲ್ಲಿಗೆ ಅಂದರ ದಡದ ಹತ್ತಿರ ಯಾರೂ ಭೇಟಿ ನೀಡುವುದಿಲ್ಲ. ಆದರೆ ಇದರ ಸುತ್ತಮುತ್ತಲಿನ ಪರಿಸರವು ನೋಡಲು ಮನೋಹರವಾಗಿದೆ. ಬೇಸಿಗೆಯ ಕೆಲ ಸಮಯ ಇದರ ಸುತ್ತಲಿನಲ್ಲಿ ಭಾರತೀಯ ಸೇನೆ ಬೀಡು ಬಿಟ್ಟಿರುತ್ತದೆ ಹಾಗೂ ಇದರ ಹತ್ತಿರ ಯಾರು ಸುಳಿಯದಂತೆ ಎಚ್ಚರವಹಿಸುತ್ತದೆ.

ಚಿತ್ರಕೃಪೆ: Mehrajmir13

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಮಾನಸಬಲ್ ಕೆರೆ : ಗಾಂದೇರ್ಬಾಲ್ ಜಿಲ್ಲೆಯ ಗಾಂದೇರ್ಬಾಲ್ ಪಟ್ಟಣದ ಸಾಫಾಪೋರಾ ಎಂಬ ಪ್ರದೇಶದ ಬಳಿ ಇ ಸುಂದರ ಹಾಗೂ ನಯನಮನೋಹರವಾದಂತಹ ಕೆರೆಯಿದೆ. ಈ ಕೆರೆಯ ಮೂರು ಸುತ್ತಲು ಗಾಂದೇರ್ಬಾಲ್, ಜರೋಕ್ಬಲ್ ಹಾಗೂ ಕೊಂಡಬಲ್ ಎಂಬ ಪ್ರದೇಶಗಳಿದ್ದು ಒಟ್ಟಾರೆ ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Basharat Alam Shah

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಶುದ್ಧ ನೀರು, ಕಮಲದ ಹೂವುಗಳು ಕೆರೆಯ ಪ್ರಮುಖ ವಿಶೇಷತೆಯಾಗಿದ್ದು, ಜರೋಕಾ ಎಂಬ ಮುಘಲ್ ಉದ್ಯಾನಕ್ಕೆ ಅಭಿಮುಖವಾಗಿ, ಪ್ರಶಾಂತವಾಗಿ ಈ ಕೆರೆಯಿರುವುದನ್ನು ಕಾಣಬಹುದು. ಈ ಕೆರೆ ತಾಣವು ವೈವಿಧ್ಯಮಯ ಪಕ್ಷಿ ವೀಕ್ಷಣೆಗೂ ಸಹ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Ankur P

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಕಾಶ್ಮೀರ ಸರೋವರಗಳ "ಉತ್ಕೃಷ್ಟ ರತ್ನ" ಎಂಬು ಬಿರುದನ್ನು ಪಡೆದಿರುವ ಈ ಕೆರೆಯು ಭಾರತದ ಅತಿ ಹೆಚ್ಚು ಆಳ ಹೊಂದಿರುವ ಕೆರೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದರ ಆಳ ಸುಮಾರು 45 ಅಡಿಗಳಷ್ಟು ಎಂದು ಅಂದಾಜಿಸಲಾಗಿದೆ. ಮಾನಸಬಲ್ ಕೆರೆಯ ಒಂದು ದಡದಲ್ಲಿರುವ ಪುರಾತನ ಶಿವ ಮಂದಿರ.

ಚಿತ್ರಕೃಪೆ: Ankur P

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ವೂಲಾರ್ ಕೆರೆ : ಏಷಿಯಾದ ದೊಡ್ಡ ತಾಜಾ ನೀರಿನ ಕೆರೆಗಳ ಪೈಕಿ ಒಂದಾಗಿದೆ ವೂಲಾರ್ ಕೆರೆ. ಝೀಲಮ್ ನದಿಯಿಂದ ನೀರನ್ನು ಪಡೆಯುವ ಈ ಕೆರೆಯು ಜಮ್ಮು ಕಾಶ್ಮೀರ ರಾಜ್ಯದ ಬಂಡೀಪೋರ್ ಜಿಲ್ಲೆಯಲ್ಲಿದೆ. ಭೂಮಿಯ ಚಲನ ವಲನಗಳಿಂದ ಈ ಕೆರೆ ಭಾಗವು ನಿರ್ಮಾಣವಾಗಿದ್ದು ಋತುಮಾನಕ್ಕನುಗುಣವಾಗಿ ಇದರ ವ್ಯಾಪ್ತಿಯು 12 ರಿಂದ 100 ಚ.ಕಿ.ಮೀ ವರೆಗೆ ವ್ಯಾಪಿಸುತ್ತದೆ.

ಚಿತ್ರಕೃಪೆ: Maxx786

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ದೋಣಿ ವಿಹಾರ ಹಾಗೂ ಇತರೆ ಜಲಕ್ರೀಡೆಗಳನ್ನು ಸರ್ಕಾರವು ಇತ್ತೀಚಿಗಷ್ಟೆ ಪ್ರವಾಸೋದ್ಯಮದ ಅಭಿವೃದ್ಧಿಯ ಅಂಗವಾಗಿ ಇಲ್ಲಿ ಪರಿಚಯಿಸಿದೆ. ಜಲಚರಗಳಿಗೆ ಮುಖ್ಯ ಆಶ್ರಯ ತಾಣವಾಗಿರುವ ಈ ಕೆರೆಯಲ್ಲಿ ವೈವಿಧ್ಯಮಯ ಮೀನುಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Maxx786

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಸೊ ಮೊರಿರಿ ಕೆರೆ : ಲಡಾಖ್ ಪ್ರದೇಶದ ಲೇಹ್ ಜಿಲ್ಲೆಯ ಚಂಗತಂಗ್ ಪ್ರಸ್ಥಭೂಮಿಯ ಕರ್ಜೋಕ್ ಎಂಬಲ್ಲಿ ಈ ಸುಂದರ ಕೆರೆಯಿದೆ. ಜೌಗು ಸಂರಕ್ಷಣಾ ಪ್ರದೇಶದ ಭಾಗವಾಗಿರುವ ಈ ಕೆರೆಯು ನಯನ ಮನೋಹರವಾದ ಪರಿಸರವನ್ನು ಹೊಂದಿದ್ದು ಚುಂಬಕದಂತೆ ಸೆಳೆಯುತ್ತದೆ.

ಚಿತ್ರಕೃಪೆ: Prabhu B

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ನಯನಮನೋಹರ ಜಮ್ಮು-ಕಾಶ್ಮೀರ ಕೆರೆಗಳು:

ಇದರ ಸುತ್ತಮುತ್ತಲಿನ ಪರ್ವತಗಳಲ್ಲಿ ಉಗಮಗೊಳ್ಳುವ ನೀರಿನ ತೊರೆಗಳು ಹಾಗೂ ಕರುಗುವ ಹಿಮ ಈ ಕೆರೆಗೆ ಪ್ರಮುಖ ನೀರಿನ ಮೂಲಗಳಾಗಿವೆ. ಈ ತಾಣದಲ್ಲಿ ವೈವಿಧ್ಯಮಯ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Jacques Pire

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X