
ಬಣ್ಣಗಳ ಹಬ್ಬ ಹೋಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರತಿಯೊಬ್ಬರು ಆಚರಿಸುವ ವಿಧಾನದಿಂದಾಗಿ ಹೋಳಿಯ ಆಚರಣೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಭಿನ್ನವೆನಸಿಸುತ್ತದೆ. ಹೋಳಿ ಹಬ್ಬವನ್ನು ಒಂದು ವಾರಗಳ ವರೆಗೆ ಆಚರಿಸಲಾಗುತ್ತದೆ. ಬಣ್ಣಗಳ ಜೊತೆಯಲ್ಲಿ ಆಡುತ್ತಾ ತಮ್ಮ ಜೀವನವನ್ನೂ ಕಲರ್‌ಫುಲ್ ಆಗಿಸುವಲ್ಲಿ ತೊಡಗುತ್ತಾರೆ.
ಈ ಬಾರಿ ಹೋಳಿ ಹಬ್ಬವನ್ನು ಮಾರ್ಚ್ 20 ರಿಂದ 26ರ ವರೆಗೆ ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಬರ್ಸನಾ ಹೋಳಿ ಬಹಳ ಫೇಮಸ್. ಇಲ್ಲಿನ ಹೋಳಿ ಆಚರಣೆಯಲ್ಲಿ ಮಜಾ ಇದೆ. ಎರಡು ಊರಿನವರು ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಗಂಡು ಹೆಣ್ಣುಗಳ ನಡುವೆ ನಡೆಯುವ ಆಟ ಇದಾಗಿದೆ. ಹಾಗಾದರೆ ಬನ್ನಿ ಬರ್ಸನಾ ಹೋಳಿಯನ್ನು ಯಾವ ರೀತಿ ಆಚರಿಸಲಾಗುತ್ತದೆ ಅನ್ನೋದನ್ನು ತಿಳಿಯೋಣ.

ಬರ್ಸನಾ ಹೋಳಿ
ಉತ್ತರ ಪ್ರದೇಶದಲ್ಲಿನ ಸಣ್ಣ ಪಟ್ಟಣ ಬರ್ಸನಾ ಇದು ಮಥುರಾದಿಂದ ಸುಮಾರು ೪೨ ಕಿ.ಮೀ ದೂರದಲ್ಲಿದೆ. ಬರ್ಸನಾ ರಾಧೆಯ ಜನ್ಮಸ್ಥಳ. ಹೋಳಿ ಹಬ್ಬದಂದು ಸಾಕಷ್ಟು ಮಂದಿ ಕೃಷ್ಣನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಹೋಳಿ ಆಚರಣೆಯು ವಿಭಿನ್ನವಾಗಿದೆ ಜೊತೆಗೆ ಮಜವಾಗಿಯೂ ಇದೆ.

ಲಾಥ್‌ಮಾರ್ ಹೋಳಿ
ಈ ವಿಶೇಷ ದಿನದಂದು ನಂದಗೋನ್‌ನ ಪುರುಷರು ಬರ್ಸನಾಕ್ಕೆ ಬರುತ್ತಾರೆ. ಅಲ್ಲಿನ ರಾಧೆಯ ದೇವಸ್ಥಾನವನ್ನು ಹೊತ್ತೊಯ್ಯುವುದು ಅವರ ಉದ್ದೇಶವಾಗಿರುತ್ತದೆ. ಅದರೆ ಬರ್ಸನಾದ ಮಹಿಳೆಯರು ಅದಕ್ಕೆ ಅವಕಾಶ ನೀಡುವುದಿಲ್ಲ. ಅವರು ಅವರನ್ನು ಬಿದಿರಿನ ಕೋಲಿನಿಂದ ಹೊಡೆಯತ್ತಾರೆ. ಹಾಗಾಗಿ ಇಲ್ಲಿನ ಹೋಳಿಯನ್ನು ಲಾಥ್‌ಮಾರ್ ಹೋಳಿ ಎಂದು ಕರೆಯುತ್ತಾರೆ.

ಮಹಿಳೆಯರು ಪುರುಷರಿಗೆ ಹೊಡೆಯುವುದು
ಮಹಿಳೆಯರು ಪುರುಷರಿಗೆ ಹೊಡೆಯುವಾಗ ಪುರುಷರು ತಿರುಗಿ ಹೊಡೆಯುವಂತಿಲ್ಲ. ಬದಲಾಗಿ ಬಣ್ಣಗಳನ್ನು ಮಾತ್ರ ಅವರಿಗೆ ಎರಚಬಹುದು. ಯಾವುದಾದರೂ ಪುರುಷ ಮಹಿಳೆಯರ ಕೈಗೆ ಸಿಕ್ಕಿಬಿದ್ದರೆ ಆತ ಮಹಿಳೆಯರಂತೆ ಬಟ್ಟೆ ಧರಿಸಿ, ಶೃಂಗಾರ ಮಾಡಿಕೊಂಡು ಎಲ್ಲರ ಮುಂದೆ ಮಹಿಳೆಯರಂತೆ ನೃತ್ಯ ಮಾಡಬೇಕು. ಇದು ಪುರುಷರಿಗೆ ನಾಚಿಕೆ ಉಂಟು ಮಾಡುವುದಂತೂ ನಿಜ. ಆದರೆ ಇದೊಂದು ಮೋಜಿನ ಆಟವಾಗಿದೆ. ಇದರಲ್ಲಿ ಪ್ರತಿಯೊಬ್ಬರು ಎಂಜಾಯ್ ಮಾಡುತ್ತಾರೆ. ದಂತಕಥೆಯ ಪ್ರಕಾರ ಕೃಷ್ಣ ಕೂಡಾ ಗೋಪಿಯರಿಂದ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದಾನೆ ಎನ್ನಲಾಗುತ್ತದೆ.

ನಂದಗೋನ್‌ನಲ್ಲೂ ನಡೆಯುತ್ತದೆ ಹೋಳಿ
ಇದೇ ರೀತಿಯ ಆಟ ಮರುದಿನ ನಂದಗೋನ್‌ನ ಮಹಿಳೆಯರು ಹಾಗೂ ಬರ್ಸನಾದ ಪುರುಷರ ನಡುವೆ ನಡೆಯುತ್ತದೆ. ಹೋಳಿ ಸಂದರ್ಭದಲ್ಲಿ ಹೋಳಿ ಹಬ್ಬಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಕಲಾಗುತ್ತದೆ. ರಾಧ ಹಾಗೂ ಕೃಷ್ಣರ ನಡುವಿನ ಸಂಭಾಷಣೆಗೆ ನೃತ್ಯ ಮಾಡುತ್ತಾರೆ. ಈ ಮೋಜಿನ ಆಟದಲ್ಲಿ ಪ್ರತಿಯೊಬ್ಬರೂ ಎಂಜಾಯ್ ಮಾಡುತ್ತಾರೆ.

ಪೂರ್ವ ಸಿದ್ಧತೆಯೊಂದಿಗೆ ಆಗಮಿಸುವ ಪುರುಷರು
ಇನ್ನು ಹೋಳಿ ಹಬ್ಬದ ಆಚರಣೆಗಾಗಿ ಇಲ್ಲಿಗೆ ಬರುವ ಪುರುಷರು ಪೂರ್ವ ಸಿದ್ಧತೆಯೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ಯಾವ ರೀತಿಯ ಸ್ವಾಗತ ಸಿಗಲಿದೆ ಎನ್ನುವ ಊಹೆ ಅವರಿಗಿದೆ. ಈ ಆಟದಲ್ಲಿ ಮಹಿಳೆಯರ ಕೈಗೆ ಸಿಲುಕಿಕೊಳ್ಳದಂತೆ ಅವರು ಆದಷ್ಟು ಪ್ರಯತ್ನಿಸುತ್ತಾರೆ.

ತಂಪಾದ ಪಾನೀಯ
ಹೋಳಿ ಆಚರಣೆಯಲ್ಲಿ ಭಾಗವಹಿಸುವವರು 'ಥಂಡೈ' ಎನ್ನುವ ಪಾನೀಯವನ್ನು ಕುಡಿಯುತ್ತಾರೆ. ಇದು ಸ್ವಲ್ಪ ಮದ್ಯಪಾನ ಮಾಡುವ ತಂಪಾದ ಪಾನೀಯ ಏಕೆಂದರೆ ಇದು ಗಾಂಜಾದಿಂದ ತಯಾರಿಸಲಾದ ಭಾಂಗ್ ಎಂಬ ಪೇಸ್ಟ್ನೊಂದಿಗೆ ತಯಾರಿಸಲಾಗುತ್ತದೆ. . ಭಾಂಗ್ ಕುಡಿದ ನಂತರ, ಜನರು ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯಿಸುತ್ತಾರೆ, ಕೆಲವರು ಸಿಹಿತಿಂಡಿಗಾಗಿ ಹಂಬಲಿಸುತ್ತಾರೆ, ಇತರರು ಕೂಗು ಅಥವಾ ನಗುತ್ತಿದ್ದಾರೆ. ಇದು ಮೋಹಕ ಅನುಭವವಾಗಿದೆ,

ತಿಂಗಳಿಗೂ ಮೊದಲೇ ತಯಾರಿ ಆರಂಭ
ಹೋಳಿ ಹಬ್ಬಕ್ಕಾಗಿ ಬರ್ಸಾನಾ ಮಹಿಳೆಯರು ಒಂದು ತಿಂಗಳು ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಅತ್ತೆ, ಮಾವಂದಿರು ತಮ್ಮ ಸೊಸೆಯಂದಿರಿಗೆ ಹೆಣ್ಣುಮಕ್ಕಳು ಸಮೃದ್ಧ ಆಹಾರವನ್ನು ತಿನ್ನಿಸುತ್ತಾರೆ . ಆದ್ದರಿಂದ ಅವರು ಹೋಳಿ ಯುದ್ಧ ವಲಯದಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸುತ್ತಾರೆ. ಇದು ಪ್ರೀತಿ, ವಿನೋದ ಮತ್ತು ಸಮಾನತೆಯ ಒಂದು ಪ್ರದರ್ಶನವಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ
ಹಿಂದೂ ಕ್ಯಾಲೆಂಡರ್ ಪ್ರಕಾರ ಪಲ್ಗುಣದ ಒಂಭತ್ತನೇ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಬರ್ಸನಾಕ್ಕೆ ಭೇಟಿ ನೀಡಲು ಹೋಳಿ ಸೂಕ್ತ ಸಮಯವಾಗಿದೆ. ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ಹೋಳಿಯನ್ನು ಆಚರಿಸಲಾಗುತ್ತದೆ. ರಾಜ್ಯ ಪ್ರವಾಸೋಧ್ಯಮ ಇಲಾಖೆಯು ಹೋಳಿ ಹಬ್ಬದ ಆಚರಣೆಗಾಗಿಯೇ ನಗರದ ಹೊರವಲಯದಲ್ಲಿರುವ ಖಾಲಿ ಗ್ರೌಂಡ್‌ನಲ್ಲಿ ವ್ಯವಸ್ಥೆ ಮಾಡುತ್ತದೆ.
ತಲುಪುವುದು ಹೇಗೆ?
ಹತ್ತಿರ ರೈಲು ನಿಲ್ದಾಣ 10 ಕಿ.ಮೀ ದೂರದಲ್ಲಿರುವ ಕೊಸಿ ಕಲನ್. ಆದಾಗ್ಯೂ 50 ಕಿಮೀ ದೂರದಲ್ಲಿರುವ ಮಥುರಾ ಹಲವಾರು ಸೂಪರ್ಫಾಸ್ಟ್ ರೈಲುಗಳು ನಿಲ್ಲಿಸುವ ಸ್ಥಳವಾಗಿದೆ. ಕೊಸಿ ಕಲನ್ ಮತ್ತು ಮಥುರಾ ಉತ್ತರ ಕೇಂದ್ರ ರೈಲ್ವೆಯ ಬ್ರಾಡ್ ಗೇಜ್ ರೈಲುಮಾರ್ಗದಲ್ಲಿದೆ..
ಯು.ಪಿ.ಎಸ್.ಆರ್.ಟಿಸಿ ಮತ್ತು ಹಲವಾರು ಖಾಸಗಿ ಬಸ್ ಆಪರೇಟರ್‌ಗಳ ಬಸ್ಸುಗಳ ಮೂಲಕ ಬರ್ಸನಾ ದೆಹಲಿ, ಆಗ್ರಾ ಮತ್ತು ಮಥುರಾಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಬ್ರಾಜ್ ಭೂಮಿ (ಪ್ರಾಂತ್ಯ) ಗ್ರಾಮಗಳಿಂದ ರಸ್ತೆಯ ಮೂಲಕ ಬರ್ಸನಾವನ್ನು ತಲುಪಬಹುದು. ಯುಪಿಎಸ್ಆರ್‌ಟಿಸಿ ಬಸ್ಸುಗಳು, ಆಟೋ ರಿಕ್ಷಾಗಳು, ಮೀಟರ್ ಟ್ಯಾಕ್ಸಿಗಳು, ಕ್ಯಾಬ್‌ಗಳು ಮತ್ತು ಜೀಪ್‌ಗಳು ಪ್ರಯಾಣಕ್ಕೆ ಲಭ್ಯವಿದೆ.