• Follow NativePlanet
Share
Menu
» » ಇಂದಿಗೂ ನಿಗೂಢವಾಗಿಯೇ ಇರುವ ಬರಾಬರ್ ಗುಹೆ!

ಇಂದಿಗೂ ನಿಗೂಢವಾಗಿಯೇ ಇರುವ ಬರಾಬರ್ ಗುಹೆ!

Written By:

ನಮ್ಮ ಭಾರತ ದೇಶದಲ್ಲಿಯೇ ಒಂದಲ್ಲ ಒಂದು ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ಹಲವಾರು ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಪ್ರಕೃತಿಯು ಅದನ್ನು ಭೇದಿಸಲು ಸಾಕಷ್ಟು ಸಾಹಸಗಳು ನಡೆಯುತ್ತಲೇ ಇವೆ. ಕಾಲ ಕಾಲಕ್ಕೆ ಅನ್ವೇಷಕರ ಗುಂಪು ಕುತೂಹಲಕಾರಿ ಸ್ಥಳಗಳನ್ನು ಬೆಳಕಿಗೆ ತರುತ್ತಿದ್ದಾರೆ.

ಅಲ್ಲದೇ ಪುರಾತತ್ವ ಶಾಸ್ತ್ರಜ್ಞರು ಅದೆಷ್ಟೊ ಉತ್ಖನನಗಳಿಂದ ವಿಚಿತ್ರವಾದ ಸ್ಥಳಗಳು ಮತ್ತು ವಸ್ತುಗಳನ್ನು ಬೆಳಕಿಗೆ ತಂದಿದ್ದಾರೆ ಹಾಗು ತರುತ್ತಲೇ ಇದ್ದಾರೆ. ಇಂತಹ ಸ್ಥಳಗಳಿಗೆ ಭೇಟಿ ನೀಡುವುದೆಂದರೆ ಇತಿಹಾಸಕಾರರಿಗೆ ಹಾಗು ಜನ ಸಾಮಾನ್ಯರಿಗೆ ಮತ್ತಷ್ಟು ಕುತೂಹಲ ಕೆರಳಿಸುತ್ತದೆ. ಅಂತಹ ಗುಹಾ ರಚನೆಯ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಅದು ಯಾವ ಗುಹೆ? ಅಲ್ಲಿ ಏನಿದೆ? ಆ ಗುಹೆಯ ರಹಸ್ಯವಾದರೂ ಏನು? ಎಂಬ ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯಿರಿ.

 ಬರಾಬರ್ ಗುಹೆ!

ಬರಾಬರ್ ಗುಹೆ!

ಆ ಗುಹೆಯ ಹೆಸರು ಬರಾಬರ್ ಗುಹೆಯಾಗಿದೆ. ಈ ಗುಹೆಗೆ ಹಲವಾರು ಪ್ರವಾಸಿಗಾರರು ಹಾಗು ಅನ್ವೇಷಣೆ ಮಾಡುವವರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಕೆಲವು ಇತಿಹಾಸ ತಜ್ಞರ ಪ್ರಕಾರ ಈ ಬರಾಬರ್ ಗುಹೆಯು ಭಾರತದ ಅತ್ಯಂತ ಪ್ರಾಚೀನವಾದ ಗುಹೆಗಳಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.


PC:Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಹಾಗೆ ಅನುಮಾನ ಪಡಲು ಕಾರಣವೆನೆಂದರೆ ಇಲ್ಲಿ ಅಸಕ್ತಿಕರವಾದ ವಿಷಯಗಳು, ಶಾಸನಗಳು ಕಂಡುಬಂದಿದ್ದು ಗಮನ ಸೆಳೆದಿದೆ. ಅಧ್ಯಯನದ ಪ್ರಕಾರ ಈ ಬಂಡೆಯಲ್ಲಿ ಕೆತ್ತಲಾದ ಗುಹೆಗಳು ಕ್ರಿ.ಪೂ 3 ನೇ ಶತಮಾನಕ್ಕೆ ಸಂಬಂಧಿಸಿದ್ದವೆಂದು ಹೇಳಲಾಗಿದೆ. ಅಂದರೆ ಇದೊಂದು ಪ್ರಾಚೀನವಾದ ಗುಹೆಯಾಗಿದೆ.


PC:Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಇದೊಂದು ಅವಳಿ ಬೆಟ್ಟಗಳಾಗಿದ್ದು, ಒಂದಕ್ಕೊಂದು ಕೇವಲ ಒಂದುವರೆ ಕಿ.ಮೀ ಅಂತರದಲ್ಲಿದೆ. ಆ ಅವಳಿಗುಹೆಗಳ ಹೆಸರು ಒಂದು ಬರಾಬರ್ ಗುಹೆಯಾಗಿದ್ದರೆ, ಮತ್ತೊಂದು ನಾಗಾರ್ಜುನಿ ಗುಹೆಯಾಗಿದೆ. ಆ ಇವೆರಡನ್ನೂ ಸಮಾನ್ಯವಾಗಿ ಬರಾಬರ್ ಗುಹೆ ಎಂದೇ ಕರೆಯಲಾಗುತ್ತದೆ.


Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಬರಾಬರ್ ಗುಡ್ಡದಲ್ಲಿ 4 ಗುಹೆಗಳು ಇದ್ದು, ನಾಗಾರ್ಜುನಿ ಗುಡ್ಡದಲ್ಲಿ 3 ಗುಹೆಗಳು ಇವೆ. ಇಲ್ಲಿ ಒಟ್ಟು 7 ಗುಹೆಗಳನ್ನು ಕಾಣಬಹುದಾಗಿದೆ. ಹಾಗೆಯೇ ಇಲ್ಲಿನ ಚಿತ್ರ, ವಿಚಿತ್ರದ ರಚನೆಗಳನ್ನು, ಸ್ಮಾರಕಗಳು ಹಾಗು ಶಾಸನಗಳನ್ನು ಕಾಣಬಹುದಾಗಿದೆ.


Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ವಿಶೇಷವೆನೆಂದರೆ ಪ್ರಾಚೀನ ಮಹಾಭಾರತದಲ್ಲಿಯೂ ಸಹ ಈ ಸ್ಥಳಗಳ ಬಗ್ಗೆ ಉಲ್ಲೇಖವಿದೆ. ಆ ಪ್ರಕಾರ ಆ ಸಮಯದಲ್ಲಿ ಅವಳಿ ಬೆಟ್ಟಗಳನ್ನು ಘೋರತಗಿರಿ ಎಂಬ ಹೆಸರಿನಿಂದ ಕರೆಯಲಾಗಿದೆ. ಇದಕ್ಕೆ ಪುರಾವೆಯಾಗಿ ಇಲ್ಲಿನ ಗುಹೆಯಲ್ಲಿ ಬ್ರಾಹ್ಮಿ ಲಿಪಿಯನ್ನು ಕಾಣಬಹುದಾಗಿದೆ.

Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಇಲ್ಲಿರುವ ಶಾಸನಗಳನ್ನು ಗಮನಿಸಿದಾಗ ತಿಳಿದುಬರುವ ಸಂಗತಿ ಏನೆಂದರೆ ಮೌರ್ಯರ ಆಡಳಿತವಿದ್ದ ಸಂದರ್ಭದಲ್ಲಿದ್ದ ಈ ಗುಹೆಗಳು ಅಜೀವಿಕ ಪಂಥದವರಿಗೆ ದೇಣಿಗೆಯಾಗಿ ನೀಡಲಾಗಿತ್ತು ಎಂದು. ಆದರೆ ಇಂದು ಆ ಪಂಥ ಸಂಪೂರ್ಣವಾಗಿ ನಾಶ ಹೊಂದಿದೆ ಎಂದೇ ಹೇಳಬಹುದು. ಆನೇಕ ಧರ್ಮಗಳಿಗೆ ಇದೊಂದು ಜನ್ಮ ಭೂಮಿಯಾಗಿತ್ತು.


Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಈ ಪಂಥದವರ ಗುಹೆಗಳು ಆಗಿದ್ದ ಕಾರಣ, ಇವರು ಮೂಲತಃ ವಿಚಿತ್ರವಾದ ಗುಣವನ್ನು ಉಳ್ಳವರು. ಇವರು ಪಕ್ಕಾ ನಾಸ್ತಿಕರು ಹಾಗಾಗಿಯೇ ಇವರು ತಮ್ಮದೇ ಆದ ವಿಚಿತ್ರವಾದ ಸಂಪ್ರದಾಯಗಳನ್ನು ರೂಢಿಸಿಕೊಂಡಿದ್ದರು. ಒಂದು ಕಾಲದಲ್ಲಿ ಬೌದ್ಧ ಹಾಗು ಜೈನ ಧರ್ಮಕ್ಕೆ ತೊಡಕಾಗಿದ್ದ ಧರ್ಮವೆಂದರೆ ಅದು ಅಜೀವಿಕ ಧರ್ಮದವರು.

Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಮೌರ್ಯರ ಕಾಲದಲ್ಲಿ ಅದರಲ್ಲೂ ವಿಶೇಷವಾಗಿ ಬಿಂದುಸಾರನ ಸಮಯದಲ್ಲಿ ಅಜೀವಿಕ ಧರ್ಮವು ಉನ್ನತ ಸ್ಥಿತಿಯಲ್ಲಿತ್ತು. ಬಿಂದುಸಾರ ಹಾಗು ಆತನ ಪತ್ನಿಯರು ಈ ಧರ್ಮವನ್ನು ಅನುಸರಿಸುತ್ತಿದ್ದರು. ಈ ಧರ್ಮದ ಬಗ್ಗೆ ಸಾಕಷ್ಟು ವಿವರಗಳು ಇಲ್ಲದೇ ಇದ್ದರು ಕೂಡ ಜೈನ ಹಾಗು ಬೌದ್ಧ ಧರ್ಮದಲ್ಲಿ ಮಾತ್ರ ಇದರ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದು.


Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ನಂತರ ಬೌದ್ಧ ಧರ್ಮ ತನ್ನ ಪ್ರಭಾವ ಹೆಚ್ಚಿಸಿಕೊಂಡಿತು. ಹೀಗಾಗಿ ಬಿಂದುಸಾರನ ಮಗ ಅಶೋಕ ಚಕ್ರವರ್ತಿಯನ್ನು ಸಾಕಷ್ಟು ಪ್ರಭಾವಿಸಿತು. ಅದ್ದರಿಂದ ಅಶೋಕ ಬೌದ್ಧ ಧರ್ಮವನ್ನು ಒಪ್ಪಿಕೊಂಡನು.

Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಹೀಗಿರುವಾಗ ಅಜೀವಿಕರು ಒಮ್ಮೆ ಬುದ್ಧನನ್ನು ನಕಾರಾತ್ಮಕವಾದ ಭಾವಚಿತ್ರದಲ್ಲಿ ಬರೆದರು ಎಂಬ ಆರೋಪದ ಮೇಲೆ ಅಶೋಕನು ಸಾವಿರಾರು ಸಂಖ್ಯೆಯ ಅಜೀವಿಕರನ್ನು ನಾಶ ಮಾಡಿದನು. ಆದರೆ ಇವರ ಆಚಾರ-ವಿಚಾರಗಳ ಕುರಿತು ಇನ್ನೂ ಸಾಕಷ್ಟು ರಹಸ್ಯಗಳು ಹಾಗೆಯೇ ಉಳಿದಿದೆ ಎನ್ನಲಾಗಿದೆ.

Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

ಅಷ್ಟಕ್ಕೂ ಆ ಪ್ರಾಚೀನ ಗುಹೆಗಳು ಇರುವುದಾದರು ಎಲ್ಲಿ ಎಂಬ ಪ್ರೆಶ್ನೆಗೆ ಉತ್ತರ ಬಿಹಾರ ರಾಜ್ಯದಲ್ಲಿ. ಈ ಗುಹೆಯಲ್ಲಿ ಇನ್ನೂ ಹಲವಾರು ಅಚ್ಚರಿಗಳನ್ನು ಹೊಂದಿದ್ದು, ಹಲವಾರು ಸಂಶೋಧನೆ ಮಾಡಲಾಗುತ್ತಿದೆ.


Photo Dharma

 ಬರಾಬರ್ ಗುಹೆ!

ಬರಾಬರ್ ಗುಹೆ!

.ಈ ರಹಸ್ಯಮಯವಾದ ಗುಹೆಯು ಬಿಹಾರ ರಾಜ್ಯದ ಜೆಹನಾಬಾದ್ ಜಿಲ್ಲೆಯಲ್ಲಿದೆ. ಗಯಾ ಜಿಲ್ಲೆಯ ಪಟ್ಟಣದಿಂದ ಸುಮಾರು 24 ಕಿ.ಮೀ ದೂರದಲ್ಲಿ ಈ ಗುಹೆಗಳಿಗೆ ತಲುಪಬಹುದಾಗಿದೆ. ಇಲ್ಲಿಂದ ಖಾಸಗಿ ಬಸ್ಸು, ರಿಕ್ಷಾದ ಮೂಲಕ ಸುಲಭವಾಗಿ ತೆರಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ