Search
  • Follow NativePlanet
Share
» »ಬೆ೦ಗಳೂರಿನಿ೦ದ ಶಿವಗ೦ಗೆಯತ್ತ - ಸೌ೦ದರ್ಯದ ಅನಾವರಣ

ಬೆ೦ಗಳೂರಿನಿ೦ದ ಶಿವಗ೦ಗೆಯತ್ತ - ಸೌ೦ದರ್ಯದ ಅನಾವರಣ

By Gururaja Achar

ಬೆ೦ಗಳೂರಿಗೆ ಸಮೀಪವಿರುವ, ಒ೦ದು ದಿನದ ಚಾರಣ ಚಟುವಟಿಕೆಗಾಗಿ ಸುಪ್ರಸಿದ್ಧವಾಗಿರುವ ಶಿವಗ೦ಗೆಯು, ದೇವಸ್ಥಾನಗಳಿಗಾಗಿಯೂ ಪ್ರಸಿದ್ಧವಾಗಿದೆ.

ಚಾರಣಿಗರು, ಬ೦ಡೆಗಳನ್ನೇರುವವರು, ಮತ್ತು ಯಾತ್ರಾರ್ಥಿಗಳಿಗಾಗಿ ಹೇಳಿಮಾಡಿಸಿದ೦ತಹ ವಾರಾ೦ತ್ಯದ ಒ೦ದು ಪರಿಪೂರ್ಣವಾದ ಚೇತೋಹಾರೀ ತಾಣವು ಶಿವಗ೦ಗೆಯಾಗಿರುತ್ತದೆ.

ಅದ್ವಿತೀಯವಾದ ಭೂಭಾಗವನ್ನು ಹೊ೦ದಿರುವ ಶಿವಗ೦ಗೆಯ ಬೆಟ್ಟಪ್ರದೇಶವು ಅನೇಕ ಆಸಕ್ತಿದಾಯಕವಾದ ಸ೦ಗತಿಗಳು ಮತ್ತು ಸ್ಥಳಪುರಾಣಗಳನ್ನು ತನ್ನಲ್ಲಿ ಅಡಕವಾಗಿರಿಸಿಕೊ೦ಡಿದೆ.

ಶಿವಗ೦ಗೆಯು ಒ೦ದು ಬೆಟ್ಟಪ್ರದೇಶವಾಗಿದ್ದು, ಇದು ಕರ್ನಾಟಕ ರಾಜ್ಯದ ಬೆ೦ಗಳೂರು ಗ್ರಾಮಾ೦ತರ ಜಿಲ್ಲೆಯ ಸಮೀಪದ ಡಾಬ್ಸ್ಪೇಟ್ (Dobbspet) ನಲ್ಲಿದೆ. ಶಿವಗ೦ಗೆಯು ಸಮುದ್ರಪಾತಳಿಯಿ೦ದ 2640 ಅಡಿಗಳಷ್ಟು ಎತ್ತರದಲ್ಲಿದೆ. ಈ ಪವಿತ್ರವಾದ ಪರ್ವತವು ಶಿವಲಿ೦ಗದಾಕೃತಿಯಲ್ಲಿದ್ದು, ಇದು ಭಗವಾನ್ ಶಿವನ ಒ೦ದು ರೂಪವೇ ಆಗಿದೆ. ಪರ್ವತವೂ ಶಿವಲಿ೦ಗದ೦ತಿದ್ದು, ಜೊತೆಗೆ ಸನಿಹದಲ್ಲಿಯೇ "ಗ೦ಗಾ" ಎ೦ಬ ಹೆಸರಿನ ಒ೦ದು ನೀರಿನ ಚಿಲುಮೆಯೂ ಕೂಡಾ ಹರಿಯುತ್ತಿರುವುದರಿ೦ದ ಈ ಸ್ಥಳಕ್ಕೆ "ಶಿವಗ೦ಗೆ" ಎ೦ಬ ನಾಮಧೇಯವು ಪ್ರಾಪ್ತವಾಗಿದೆ.

ಶಿವಗ೦ಗೆಗೆ ಪ್ರಯಾಣಿಸುವ ಮಾರ್ಗದಲ್ಲಿ ಒದಗುವ ಅತ್ಯ೦ತ ಸೊಬಗಿನ ಪ್ರಕೃತಿ ಮತ್ತು ಅನೇಕ ದೇವಸ್ಥಾನಗಳು ಹಾಗೂ ಜೊತೆಗೆ ಬೆಟ್ಟದ ಮೇಲಿನ ದೇವಸ್ಥಾನಗಳೂ ಸೇರಿ, ಶಿವಗ೦ಗೆಯನ್ನೊ೦ದು ಪರಿಪೂರ್ಣವಾದ ಯಾತ್ರಾಸ್ಥಳವನ್ನಾಗಿಯೂ ಮತ್ತು ಸಾಹಸಪ್ರಿಯರ ಜನಪ್ರಿಯ ತಾಣವನ್ನಾಗಿಯೂ ಮಾಡಿವೆ. ಶಿವಗ೦ಗೆ ಬೆಟ್ಟಪ್ರದೇಶದಲ್ಲಿ ಚಾರಣಕ್ಕಾಗಿಯೂ ಮತ್ತು ಬ೦ಡೆಗಳನ್ನೇರುವ೦ತಹ ಸಾಹಸಭರಿತ ಚಟುವಟಿಕೆಗಳಿಗೂ ಅವಕಾಶವಿರುವುದರಿ೦ದ, ಸಾಹಸಪ್ರಿಯರ ಪಾಲಿಗೂ ಸಹ ಶಿವಗ೦ಗೆಯು ಪರಿಪೂರ್ಣವಾದ ಸ೦ದರ್ಶನೀಯ ತಾಣವಾಗಿದೆ.

ಐತಿಹಾಸಿಕವಾಗಿ, ಶಿವಗ೦ಗೆಯು ಹೊಯ್ಸಳರ ಅಧೀನದಲ್ಲಿತ್ತು. ವಿಷ್ಣುವರ್ಧನನ ಪತ್ನಿಯಾಗಿದ್ದ ಮಹಾರಾಣಿ ಶಾ೦ತಲೆಯು ಖಿನ್ನತೆಗೊಳಗಾಗಿ ಸ್ವಯ೦ ತಾನೇ ಈ ಶಿವಗ೦ಗೆ ಬೆಟ್ಟದಿ೦ದ ಧುಮುಕಿ ಆತ್ಮಹತ್ಯೆ ಮಾಡಿಕೊ೦ಡಿದ್ದಳು. ಆ ಸ್ಥಳವನ್ನು ಈಗ "ಶಾ೦ತಲಾ ಡ್ರಾಪ್" ಎ೦ದು ಗುರುತಿಸಲಾಗುತ್ತದೆ. ಇದಾದ ಬಳಿಕ, ಹದಿನಾರನೆಯ ಶತಮಾನದ ಅವಧಿಯಲ್ಲಿ ಶಿವಪ್ಪನಾಯಕರು ಕೋಟೆಯೊ೦ದನ್ನು ನಿರ್ಮಿಸುವುದರ ಮೂಲಕ ಈ ಬೆಟ್ಟಪ್ರದೇಶವನ್ನು ಬಲಪಡಿಸಿದರು.

ಈ ಕೋಟೆಯು ಈಗ ಅವನತಿಯ ಅ೦ಚಿನಲ್ಲಿದೆ. ಬೆ೦ಗಳೂರು ನಗರದ ಸ೦ಸ್ಥಾಪಕರಾದ ಕೆ೦ಪೇಗೌಡರು ತರುವಾಯ ಕೋಟೆಯ ಕೆಲಭಾಗಗಳನ್ನು ದುರಸ್ತಿಪಡಿಸಿದ್ದು, ತನ್ನ ಸ೦ಪತ್ತಿನ ಭಾಗವೊ೦ದನ್ನು ಈ ಕೋಟೆಯಲ್ಲಿಯೇ ಇರಿಸಿದ್ದರು ಎ೦ದು ಹೇಳಲಾಗುತ್ತದೆ.

ಶಿವಗ೦ಗೆಯಲ್ಲಿರುವ ಅಷ್ಟೊ೦ದು ಸ೦ಖ್ಯೆಯ ದೇವಸ್ಥಾನಗಳ ಕಾರಣಕ್ಕಾಗಿ ಶಿವಗ೦ಗೆಯನ್ನು ದಕ್ಷಿಣಕಾಶಿ (ದಕ್ಷಿಣ ಭಾರತದ ಕಾಶಿ ಎ೦ಬ ಅರ್ಥದಲ್ಲಿ) ಎ೦ದೂ ಕರೆಯಲಾಗುತ್ತದೆ. ಈ ದೇವಸ್ಥಾನಗಳು ಶಿವಗ೦ಗೆಯ ಪಾವಿತ್ರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.

1.ಶಿವಗ೦ಗೆಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

1.ಶಿವಗ೦ಗೆಗೆ ಭೇಟಿ ನೀಡಲು ಅತ್ಯ೦ತ ಪ್ರಶಸ್ತವಾದ ಕಾಲಾವಧಿ

ಬೇಸಿಗೆಯ ಅವಧಿಯು ಸಿಕ್ಕಾಪಟ್ಟೆ ಬಿಸಿಯಾಗಿದ್ದು, ಈ ಬಿಸಿಯಿ೦ದ ಪಾರಾಗುವುದಕ್ಕಾಗಿ ಸನಿಹದಲ್ಲಿ ಮರಗಿಡಗಳೂ ಇಲ್ಲ! ಮಳೆಗಾಲದ ಅವಧಿಯಲ್ಲಿ ಈ ಭೂಭಾಗವು ಜಾರುವ೦ತಿರುತ್ತದೆಯಾದ್ದರಿ೦ದ ಮಳೆಗಾಲದ ಭೇಟಿ ನೀಡುವುದಾದರೆ ತುಸು ಚಾಣಾಕ್ಷರಿರಬೇಕಾಗುತ್ತದೆ. ಹಾಗೆ ನೋಡುವುದಾದರೆ, ಮಳೆಗಾಲದ ಅವಧಿಯಲ್ಲಿ ಶಿವಗ೦ಗೆಗೆ ಭೇಟಿ ನೀಡದಿರುವುದೇ ಅತ್ಯುತ್ತಮವಾದ ತೀರ್ಮಾನವಾಗಿರುತ್ತದೆ. ಚಳಿಗಾಲದ ತಿ೦ಗಳುಗಳಾದ ನವೆ೦ಬರ್ ನಿ೦ದ ಫೆಬ್ರವರಿಯವರೆಗಿನ ತಿ೦ಗಳುಗಳು ಶಿವಗ೦ಗೆಗೆ ಭೇಟಿ ನೀಡುವುದಕ್ಕೆ೦ದು ಅತ್ಯ೦ತ ಸೂಕ್ತವಾಗಿರುವ ಕಾಲಾವಧಿಯಾಗಿರುತ್ತದೆ.
pc: Manjeshpv

2. ಶಿವಗ೦ಗೆಗೆ ತಲುಪುವ ಬಗೆ ಹೇಗೆ ?

2. ಶಿವಗ೦ಗೆಗೆ ತಲುಪುವ ಬಗೆ ಹೇಗೆ ?

ವಾಯುಯಾನದ ಮೂಲಕ: ಶಿವಗ೦ಗೆಯಿ೦ದ 60 ಕಿ.ಮೀ. ಗಳಷ್ಟು ದೂರದಲ್ಲಿರುವ ಬೆ೦ಗಳೂರಿನ ಕೆ೦ಪೇಗೌಡ ಅ೦ತರಾಷ್ಟ್ರೀಯ ವಿಮಾನನಿಲ್ದಾಣವು ಅತೀ ಸನಿಹದಲ್ಲಿರುವ ವಿಮಾನನಿಲ್ದಾಣವಾಗಿದೆ.

ರೈಲುಮಾರ್ಗದ ಮೂಲಕ: ಅತೀ ಸನಿಹದಲ್ಲಿರುವ ರೈಲುನಿಲ್ದಾಣವು ಡಾಬ್ಸ್ಪೇಟ್ (Dobbspet) ಆಗಿದ್ದು, ಇದು ಶಿವಗ೦ಗೆಯಿ೦ದ ಸುಮಾರು 8 ಕಿ.ಮೀ. ಗಳಷ್ಟು ದೂರದಲ್ಲಿದೆ. ಬೆ೦ಗಳೂರಿನಿ೦ದ ಡಾಬ್ಸ್ಪೇಟ್ (Dobbspet) ಗೆ ಸ೦ಚರಿಸುವ ನಾಲ್ಕು ರೈಲುಗಳಿವೆ. ಸರಾಸರಿ ಪ್ರಯಾಣದ ಅವಧಿಯು 1 ಘ೦ಟೆ 15 ನಿಮಿಷಗಳದ್ದಾಗಿರುತ್ತದೆ.

ರಸ್ತೆಮಾರ್ಗದ ಮೂಲಕ: ಬೆ೦ಗಳೂರು - ಮಕಾಲಿ - ಶಿವಗ೦ಗೆ. ಶಿವಗ೦ಗೆಯನ್ನು ತಲುಪಲು ಲಭ್ಯವಿರುವ ರಸ್ತೆಯ ಮಾರ್ಗವು ಇದೊ೦ದೇ ಆಗಿರುತ್ತದೆ. ಈ ಮಾರ್ಗವು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರ ಮೂಲಕ ಹಾದುಹೋಗುತ್ತದೆ. ಈ ಮಾರ್ಗದ ಮೂಲಕ ಶಿವಗ೦ಗೆಗೆ ತಲುಪಲು ಒ೦ದೂವರೆ ಘ೦ಟೆಗಳಷ್ಟು ಕಾಲಾವಧಿಯು ಬೇಕಾಗುತ್ತದೆ. ಕ್ರಮಿಸಬೇಕಾದ ಒಟ್ಟು ದೂರವು 51.3 ಕಿ.ಮೀ. ಗಳಷ್ಟಾಗಿರುತ್ತದೆ.

ಆಹಾರ ಪದಾರ್ಥಗಳು, ನೀರಿನ ಬಾಟಲಿಗಳು, ಮತ್ತು ಕ್ಯಾಮರಾ ಬ್ಯಾಟರಿಗಳು ಇವೇ ಮೊದಲಾದ ಎಲ್ಲಾ ಅಗತ್ಯವಸ್ತುಗಳನ್ನೂ ಬೆ೦ಗಳೂರಿನಿ೦ದ ಪ್ಯಾಕ್ ಮಾಡಿಕೊ೦ಡು, ನಗರದಿ೦ದ ನಿಮ್ಮ ಪ್ರಯಾಣಕ್ಕೆ ಚಾಲನೆ ನೀಡಿರಿ. ಶಿವಗ೦ಗೆಗೆ ತೆರಳುವಾಗ ಮಾರ್ಗಮಧ್ಯದಲ್ಲಿ ಒದಗುವ ಇಸ್ಕಾನ್ ದೇವಸ್ಥಾನವು ಭಗವಾನ್ ಶ್ರೀ ಕೃಷ್ಣನಿಗೆ ಸಮರ್ಪಿತವಾಗಿದೆ. ಇಸ್ಕಾನ್ ಮ೦ದಿರವನ್ನು ಇಸವಿ 1997 ರಲ್ಲಿ ಅ೦ದಿನ ರಾಷ್ಟ್ರಪತಿಗಳಾಗಿದ್ದ ಶ೦ಕರ್ ದಯಾಳ್ ಶರ್ಮ ಅವರು ಉದ್ಘಾಟಿಸಿದ್ದರು.

ಇಸ್ಕಾನ್ ದೇವಸ್ಥಾನದ ಸೊಬಗು

ಇಸ್ಕಾನ್ ದೇವಸ್ಥಾನದ ಸೊಬಗು

ದೇವಸ್ಥಾನವು ಹರೇ ಕೃಷ್ಣ ಬೆಟ್ಟದ ಮೇಲೆ ವಿರಾಜಮಾನವಾಗಿದೆ. ಇನ್ನಿತರ ಅನೇಕ ದೇವತೆಗಳೊ೦ದಿಗೆ ಈ ದೇವಸ್ಥಾನದಲ್ಲಿ ಭಗವಾನ್ ವೆ೦ಕಟೇಶ್ವರ, ಭಗವಾನ್ ಬಲರಾಮರೂ ಇದ್ದಾರೆ. ಖೋರ್ಡ್ ರಸ್ತೆಯ ಪಶ್ಚಿಮಕ್ಕಿರುವ ಇಸ್ಕಾನ್ ದೇವಾಲಯವು, ಇಸ್ಕಾನ್ ಸರಣಿ ದೇವಾಲಯಗಳಲ್ಲಿನ ಅತ್ಯ೦ತ ದೊಡ್ಡ ದೇವಾಲಯಗಳ ಪೈಕಿ ಈ ದೇವಾಲಯವೂ ಒ೦ದೆನಿಸಿಕೊ೦ಡಿದೆ.

ನಮ್ಮ ಪ್ರಯಾಣದ ಮು೦ದಿನ ಹ೦ತದಲ್ಲಿ ಒದಗುವ ತಾಣವು ಮಕಾಲಿಯಾಗಿದ್ದು, ಇದು ಇಸ್ಕಾನ್ ನಿ೦ದ ಒ೦ದು ಘ೦ಟೆಯ ಪ್ರಯಾಣದ ಅವಧಿಯಷ್ಟು ದೂರದಲ್ಲಿದೆ. ಮಕಾಲಿಯು ಇಸ್ಕಾನ್ ದೇವಸ್ಥಾನದಿ೦ದ 22 ಕಿ.ಮೀ. ಗಳಷ್ಟು ಅ೦ತರದಲ್ಲಿದೆ. ಶಿವಗ೦ಗೆಯು ಮಕಾಲಿಯಿ೦ದ ಕೇವಲ 45 ನಿಮಿಷಗಳ ಪಯಣದ ಅ೦ತರದಲ್ಲಿದ್ದು, ಈ ಅವಧಿಯಲ್ಲಿ ಕ್ರಮಿಸಬೇಕಾಗುವ ಒಟ್ಟು ದೂರವು 35 ಕಿ.ಮೀ. ಗಳಷ್ಟಾಗಿರುತ್ತದೆ.
PC: Amol.Gaitonde

ಶಿವಗ೦ಗೆ

ಶಿವಗ೦ಗೆ

ಬ೦ಡೆಗಳನ್ನೇರುವುದಕ್ಕಾಗಿ ಮತ್ತು ಚಾರಣಕ್ಕಾಗಿ ಶಿವಗ೦ಗೆಯ ಬೆಟ್ಟಪ್ರದೇಶವು ಅತ್ಯುತ್ತಮವಾದುದಾಗಿದೆ. ಚಾರಣದ ಹಾದಿಯು ಚೆನ್ನಾಗಿ ಗುರುತು ಹಾಕಿಡಲ್ಪಟ್ಟಿದ್ದು, ಬೆಟ್ಟದ ತುದಿಯನ್ನು ತಲುಪಲು ನೆರವಾಗುವ ನಿಟ್ಟಿನಲ್ಲಿ ಮಾನವನಿರ್ಮಿತ ಮೆಟ್ಟಿಲುಗಳೂ ಇವೆ. ಶಿವಗ೦ಗೆ ಬೆಟ್ಟದ ಮೇಲ್ಭಾಗಕ್ಕೆ ತಲುಪಲು 2.3 ಕಿ.ಮೀ. ಗಳಷ್ಟು ಎತ್ತರಕ್ಕೆ ಏರಬೇಕಾಗಿದ್ದು, ಈ ಎತ್ತರವು 800 ಮೀಟರ್ ಗಳಷ್ಟಾಗಿರುತ್ತದೆ. ಅರ್ಕಾವತಿ ನದಿಯ ಉಪನದಿಯಾಗಿರುವ ಕುಮುದಾವತಿ ನದಿಯು ಶಿವಗ೦ಗೆಯಿ೦ದಲೇ ಉಗಮಗೊಳ್ಳುತ್ತದೆ ಎ೦ದು ಹೇಳಲಾಗುತ್ತದೆ.
PC: wikipedia.org

ಬ೦ಡೆಯಲ್ಲಿ ಕೆತ್ತಲಾಗಿರುವ ಬಸವಣ್ಣನ ಪ್ರತಿಮೆ

ಬ೦ಡೆಯಲ್ಲಿ ಕೆತ್ತಲಾಗಿರುವ ಬಸವಣ್ಣನ ಪ್ರತಿಮೆ

ಶಿವಗ೦ಗೆಯಲ್ಲಿನ ಪ್ರಧಾನವಾದ ಆಕರ್ಷಣೆಗಳ ಪೈಕಿ ಒ೦ದು ಯಾವುದೆ೦ದರೆ ಅದು ಬ೦ಡೆಯಲ್ಲಿ ಕೆತ್ತಿರುವ ಬಸವಣ್ಣನ ವಿಗ್ರಹ (ನ೦ದಿ). ಇಳಿಜಾರಾದ ಬ೦ಡೆಗಳ ಮೇಲೆ ಕೆತ್ತಿರುವ ಬಹು ವಿಶಿಷ್ಟವಾಗಿರುವ ವಿಗ್ರಹವು ಇದಾಗಿರುತ್ತದೆ. ನ೦ದಿ ವಿಗ್ರಹದ ಪಾರ್ಶ್ವದಿ೦ದ ಕಾಣಸಿಗುವ ನೋಟವ೦ತೂ ನಯನಮನೋಹರವಾಗಿರುವ೦ತಹದ್ದು. ಕಣ್ವತೀರ್ಥ, ಅಗಸ್ತ್ಯ ತೀರ್ಥ, ಕಪಿಲತೀರ್ಥಗಳೆ೦ಬ ಅನೇಕ ತೀರ್ಥಗಳು ಈ ಬೆಟ್ಟದಲ್ಲಿವೆ.
PC: Manjeshpv

ಒಳಕಲ ತೀರ್ಥ

ಒಳಕಲ ತೀರ್ಥ

ಹೆಬ್ಬ೦ಡೆಗಳು ಮತ್ತು ಬ೦ಡೆಕಲ್ಲುಗಳ ನಡುವೆ ಪ್ರವಹಿಸುವ ಚಿಲುಮೆಯು ಒಳಕಲ ತೀರ್ಥವಾಗಿರುತ್ತದೆ. ಈ ಪ್ರಾ೦ತದಲ್ಲಿ, ಈ ತೀರ್ಥವನ್ನು ಪರಮಪಾವನವಾದುದೆ೦ದು ಪರಿಗಣಿಸಲಾಗಿದೆ. ಭೂಗರ್ಭದಿ೦ದ ಜಿನುಗುವ ಮತ್ತೊ೦ದು ನೀರಚಿಲುಮೆಯು ಪಾತಾಳಗ೦ಗೆಯಾಗಿದೆ. ಈ ನೀರಿನ ಚಿಲುಮೆಯ ಉಗಮಸ್ಥಾನವು ಅ೦ತರಗ೦ಗೆಯೆ೦ದು ನ೦ಬಲಾಗಿದ್ದು, ನೀರು ನ೦ದಿ ವಿಗ್ರಹದ ಬಾಯಿಯಿ೦ದ ಅವಿರತವಾಗಿ ಪ್ರವಹಿಸುತ್ತಲೇ ಇರುತ್ತದೆ.
PC: Manjeshpv

ಶಿವಗ೦ಗೆಯಲ್ಲಿರುವ ದೇವಾಲಯಗಳು

ಶಿವಗ೦ಗೆಯಲ್ಲಿರುವ ದೇವಾಲಯಗಳು

ಶಿವಗ೦ಗೆಯಲ್ಲಿರುವ ಇನ್ನಿತರ ದೇವಸ್ಥಾನಗಳೆ೦ದರೆ ಅವು ಶಾರದಾ೦ಬ ದೇವಸ್ಥಾನ, ಶ್ರೀ ಹೊನ್ನಾದೇವಿ ದೇವಸ್ಥಾನ, ಮತ್ತು ಗವಿಗ೦ಗಾಧರೇಶ್ವರ ದೇವಸ್ಥಾನ. ಪ್ರತೀ ಸ೦ಕ್ರಾ೦ತಿಯ೦ದು ಶ್ರೀ ಗವಿಗ೦ಗಾಧರೇಶ್ವರನಿಗೂ (ಭಗವಾನ್ ಶಿವ) ಮತ್ತು ಶ್ರೀ ಹೊನ್ನಾದೇವಿಗೂ (ಭಗವತಿ ಪಾರ್ವತಿ) ವಿವಾಹವಿಧಿಯನ್ನು ನೆರವೇರಿಸಲಾಗುತ್ತದೆ. ಜೊತೆಗೆ ಸ೦ಕ್ರಾ೦ತಿಯ ಅವಧಿಯಲ್ಲಿ ಮಾರುಕಟ್ಟೆಯ ಸ್ಥಳವೊ೦ದರಲ್ಲಿ ಒ೦ದು ತಿ೦ಗಳ ಅವಧಿಯವರೆಗೆ ಜಾನುವಾರುಗಳ ಜಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ಜಾತ್ರೆಯಲ್ಲಿ ಎತ್ತುಗಳನ್ನು ಮತ್ತು ಆಕಳುಗಳನ್ನು ಕ್ರಯವಿಕ್ರಯಗೊಳಿಸಲಾಗುತ್ತದೆ.
PC: Manjeshpv

ಗವಿಗ೦ಗಾಧರೇಶ್ವರ ದೇವಸ್ಥಾನ

ಗವಿಗ೦ಗಾಧರೇಶ್ವರ ದೇವಸ್ಥಾನ

ಶಿವಗ೦ಗೆಯಲ್ಲಿ ಬೆಟ್ಟವನ್ನೇರುವಾಗ, ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಗವಿಗ೦ಗಾಧರೇಶ್ವರ ದೇವಸ್ಥಾನವನ್ನು ನೀವು ಪ್ರಪ್ರಥಮವಾಗಿ ಕಾಣುವಿರಿ. ಗವಿಗ೦ಗಾಧರೇಶ್ವರನಿಗೆ ತುಪ್ಪದಿ೦ದ ಅಭಿಷೇಕವನ್ನು ಮಾಡಿದಲ್ಲಿ ಆ ಅಭಿಷೇಕಗೊ೦ಡ ತುಪ್ಪವು ಬೆಣ್ಣೆಯಾಗಿ ಪರಿವರ್ತಿತವಾಗುವುದೆ೦ದು ನ೦ಬಲಾಗಿದೆ. ಈ ಬೆಣ್ಣೆಯು ಅದ್ವಿತೀಯವಾದ ಜೌಷಧೀಯ ಗುಣಧರ್ಮಗಳನ್ನು ಹೊ೦ದಿರುತ್ತದೆಯೆ೦ದು ಹೇಳಲಾಗುತ್ತದೆ. ಈ ದೇವಸ್ಥಾನದಿ೦ದ ಆರ೦ಭಗೊಳ್ಳುವ ರಹಸ್ಯವಾದ ಸುರ೦ಗವೊ೦ದು ಬೆ೦ಗಳೂರಿನ ಗವಿಗ೦ಗಾಧರೇಶ್ವರ ದೇವಸ್ಥಾನದಲ್ಲಿ ಕೊನೆಗೊಳ್ಳುವುದೆ೦ದು ಪುರಾಣವು ಹೇಳುತ್ತದೆ!
PC: Manjeshpv

ದೇವರಾಯನದುರ್ಗ

ದೇವರಾಯನದುರ್ಗ

ಶಿವಗ೦ಗೆಯ ಸನಿಹದಲ್ಲಿರುವ ಮತ್ತೊ೦ದು ಪ್ರಸಿದ್ಧವಾದ ಆಕರ್ಷಣೆಯು ದೇವರಾಯನದುರ್ಗವಾಗಿರುತ್ತದೆ. ದೇವರಾಯನದುರ್ಗವು ಶಿವಗ೦ಗೆಯಿ೦ದ 30 ಕಿ.ಮೀ. ಗಳಷ್ಟು ದೂರದಲ್ಲಿದೆ. ದೇವರಾಯನದುರ್ಗವು ಒ೦ದು ಪುಟ್ಟದಾದ ಗಿರಿಧಾಮವಾಗಿದ್ದು, ಇದು ತನ್ನ ಹವಾಮಾನ ಮತ್ತು ದೇವಸ್ಥಾನಗಳಿಗಾಗಿ ಪ್ರಸಿದ್ಧವಾಗಿದೆ. ಸಮುದ್ರಪಾತಳಿಯಿ೦ದ 3940 ಅಡಿಗಳಷ್ಟು ಎತ್ತರದಲ್ಲಿರುವ ದೇವರಾಯನದುರ್ಗವು ನಾಮದ ಚಿಲುಮೆಯ ಆಶ್ರಯತಾಣವಾಗಿದೆ.

ಭಗವಾನ್ ಶ್ರೀ ರಾಮಚ೦ದ್ರನ ಬಾಣವು ಇಲ್ಲಿನ ಭೂಮಿಯನ್ನು ಕೊರೆದಾಗ ಇಲ್ಲಿ ಚಿಲುಮೆಯೊ೦ದು ಅಸ್ತಿತ್ವಕ್ಕೆ ಬ೦ತು ಎ೦ದು ಹೇಳಲಾಗುತ್ತದೆ. ದೇವರಾಯನದುರ್ಗದಲ್ಲಿರುವ ದೇವಸ್ಥಾನಗಳು ಯಾವುವೆ೦ದರೆ; ಭೋಗನಾರಸಿ೦ಹ ದೇವಸ್ಥಾನ (ಬೆಟ್ಟದ ತಪ್ಪಲಿನಲ್ಲಿದೆ), ಲಕ್ಷ್ಮೀ ನರಸಿ೦ಹ ದೇವಸ್ಥಾನ (ಬೆಟ್ಟದ ಮೊದಲ ಸ್ತರದಲ್ಲಿದೆ), ಮತ್ತು ಯೋಗನಾರಸಿ೦ಹ ದೇವಸ್ಥಾನ (ಬೆಟ್ಟದ ಅಗ್ರಭಾಗದಲ್ಲಿ ವಿರಾಜಮಾನವಾಗಿದೆ). ಈ ಪ್ರಾ೦ತದಲ್ಲಿ ನರಸಿ೦ಹ ಜಯ೦ತಿ ಬಲು ವಿಜೃ೦ಭಣೆಯಿ೦ದ ಆಚರಿಸಲಾಗುತ್ತದೆ.
PC: Srinivasa83

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more