Search
  • Follow NativePlanet
Share
» »ನೋಡಿ ಸ್ವಾಮಿ ಬೆಂಗಳೂರಿರೋದು ಹೀಗೆ!

ನೋಡಿ ಸ್ವಾಮಿ ಬೆಂಗಳೂರಿರೋದು ಹೀಗೆ!

By Vijay

"ಬೆಂಗಳೂರು" ಬಹುಶಃ ಹೆಸರಲ್ಲೆ ಇದೆ ಅನ್ಸತ್ತೆ, ಏನೋ ಮೋಡಿ. ಇಲ್ಲದಿದ್ರೆ ಹೆಸರು ಕೇಳಿದಾಗ ಕೂಡಲೆ ರೋಮಾಂಚನವಾಗುವುದು ಸಾಧ್ಯವಿತ್ತೆ? ಬೆಂಗಳೂರಿಗರಿಗೆ ಇದು ದೊಡ್ಡ ವಿಷಯವಲ್ಲವಾದರೂ ಕರ್ನಾಟಕ ರಾಜ್ಯದ ಉತ್ತರ ಭಾಗದ ಹಳ್ಳಿ, ಹಳ್ಳಿ, ಪಟ್ಟಣಗಳಿಗೆ ಹೋಗಿ ಕೇಳಿ. ಪ್ರತಿಯೊಬ್ಬರು ಬೆಂಗಳೂರನ್ನು ಇಷ್ಟಪಡುತ್ತಾರೆ. ಹೆಚ್ಚಿನ ಹಳ್ಳಿ ಜನರಿಗೆ ಬೆಂಗಳೂರು ಪ್ರವಾಸ ಮಾಡುವುದೆಂದರೆ ಜೀವಮಾನದ ದೊಡ್ಡ ಸಾಧನೆ ಇದ್ದಂತೆಯೆ!

ಇಂದು ಬೆಂಗಳೂರು ಹಲವು ವಿಭಿನ್ನ ಸಂಸ್ಕೃತಿಗಳ ಬೀಡಾಗಿದೆ. ಕನ್ನಡ ಅಧಿಕೃತ ಹಾಗೂ ಬಹುವಾಗಿ ಬಳಸಲ್ಪಡುವ ಭಾಷೆಯಾದರೂ ಇತರೆ ಹಲವಾರು ಭಾಷೆಗಳಿಗೂ ಇಲ್ಲಿ ಏನೂ ಕಮ್ಮಿ ಇಲ್ಲ. ಪಕ್ಕದ ರಾಜ್ಯಗಳಿಂದ ಹಿಡಿದು ಉತ್ತರದ ರಾಜ್ಯಗಳ ಹಲವಾರು ಜನರು ಇಂದು ಇಲ್ಲಿ ನೆಲೆಸಿ ಬೆಂಗಳೂರನ್ನು ಒಂದು "ಮಲ್ಟಿ ಕಲ್ಚರ್ಡ್ ಸಿಟಿ" ಯನ್ನಾಗಿ ಮಾಡಿದ್ದಾರೆ.

ರಭಸದ ಜೀವನ, ಕೆಲಸದ ಒತ್ತಡ, ಹೆಚ್ಚಿದ ಜನಸಾಂದ್ರತೆ, ವಾಹನಗಳ ಸದ್ದು ಗದ್ದಲಗಳ ನಡುವೆಯೂ ಉದ್ಯಾನಗಳಲ್ಲಿ ಆವರಿಸಿರುವ ಶಾಂತಿ, ಕುಟುಂಬ, ಸ್ನೇಹಿತರೊಂದಿಗೆ ಆನಂದದಿಂದ ಕುಳಿತು ಸಮಯ ಕಳೆಯಬಹುದಾದ ಕಾಫಿ ಕೇಂದ್ರಗಳು, ಚಿಕ್ಕದಾದರೂ ಚೊಕ್ಕದಾದಂತಹ ಗುಡಿಸಲು ಮನೆಗಳು, ಯಾವ ಗೌಜು ಗದ್ದಲಗಳಿಲ್ಲದ ಆಶ್ರಮ, ದೇವಸ್ಥಾನಗಳು, ಮೋಜು ಮಸ್ತಿಗಾಗಿ ಮಾಲ್ ಗಳು, ನಗರದ ಥಳುಕು ಬಳಕುಗಳು ಬೆಂಗಳೂರನ್ನು ಮತ್ತಷ್ಟು ಪ್ರೀತಿಸುವಂತೆ ಮಾಡುತ್ತವೆ.

ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿ ವಿಶ್ವ ಭೂಪಟದಲ್ಲಿ ಕರ್ನಾಟಕದ ತೂಕವನ್ನು ಹೆಚ್ಚಿಸಿರುವ ಬೆಂಗಳೂರು ನಗರದಲ್ಲಿ ಒಂದೊಮ್ಮೆ ಸುತ್ತಾಡಿದಾಗ ಒಂದು ಪರಿಪೂರ್ಣತೆಯ ಆಭಾಸವು ಸೂಕ್ಷ್ಮ ದೃಷ್ಟಿಯುಳ್ಳ ಪ್ರವಾಸಿಗಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಒಂದೊಮ್ಮೆ ಬೆಂಗಳೂರನ್ನು ಸಂಪೂರ್ಣವಾಗಿ ಅನ್ವೇಷಿಸಿದಾಗ ಸಾಕಷ್ಟು ಕಥೆಗಳನ್ನು ಹೇಳುವ ಹಲವಾರು ಸೂಕ್ಷ್ಮ ಚಿತ್ರಣಗಳನ್ನು ಈ ನಗರದ ನಿತ್ಯ ಜನಜೀವನದಲ್ಲಿ ಕಾಣಬಹುದು. ಈ ನಿಟ್ಟಿನಲ್ಲಿ ಬೆಂಗಳೂರನ್ನು ಅದರದೆ ಆದ ವಿಶಿಷ್ಟತೆಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನ ಈ ಲೇಖನದ್ದಾಗಿದೆ.

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಝಗ ಮಗಿಸುವ ಬೆಂಗಳೂರಿನ ರಾತ್ರಿ.

ಚಿತ್ರಕೃಪೆ: Kalyan Chakravarthy

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಅಲಸೂರು ಕೆರೆಯಲ್ಲೊಂದು ಮಂಜು ಮುಸುಕಿದ ಮುಂಜಾವು.

ಚಿತ್ರಕೃಪೆ: Swaminathan

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಪೂಜೆಗಳಿಗಾಗಿಯೂ ಬೆಂಗಳೂರಿಗರು ಸೈ. ಅರಿಷಿಣ ಕುಂಕುಮಗಳ ಬೆಟ್ಟಗಳು!

ಚಿತ್ರಕೃಪೆ: Melanie M

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಎಷ್ಟೆ ಹೋಟೆಲುಗಳಿರಲಿ, ರಸ್ತೆ ಬದಿಯ ಅಂಗಡಿಗಳಲ್ಲಿ ಪಾನಿ ಪೂರಿ ಸವಿಯುವುದೆಂದರೆ...ಅಬ್ಬಬ್ಬಾ ಬಾಯಲ್ಲಿ ನೀರೂರುತ್ತದೆ.

ಚಿತ್ರಕೃಪೆ: Indi Samarajiva

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ನಿಮ್ಮ ಬೈಕಿನ, ಕಾರಿನ ವೇಗ ಎಷ್ಟೇ ಗರಿಷ್ಠವಿರಲಿ. ಬೆಂಗಳೂರಿನ ಟ್ರಾಫಿಕ್ ಜಾಮ್ ಮುಂದೆ ಅದರ ಆಟ ಏನೂ ನಡೆಯುವುದಿಲ್ಲ.

ಚಿತ್ರಕೃಪೆ: Eirik Refsdal

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ವಿದೇಶಿಯರಿಗೂ ಇಲ್ಲಿನ ಫುಟ್ ಪಾತುಗಳ ಮೇಲೆ ಓಡಾಡುತ್ತ ವಿನೋದದಿಂದ ಸಮಯ ಕಳೆಯುವುದೆಂದರೆ ಬಲು ಇಷ್ಟ.

ಚಿತ್ರಕೃಪೆ: McKay Savage

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಈ ಬಸ್ಸಿಗಿಂತ ನನ್ನ ಆಟೊ ವೇಗ ಏನೂ ಕಮ್ಮಿ ಇಲ್ಲ....

ಚಿತ್ರಕೃಪೆ: Peter Rivera

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಪ್ರಾಡಿಜಿ ಎಂಬ ಅಂತಾರಾಷ್ಟ್ರೀಯ ಸಂಗೀತ ಕಲಾವಿದನೊಬ್ಬನಿಂದ ಬೆಂಗಳೂರಿನಲ್ಲೊಂದು ಸುಂದರ ಸಂಗೀತ ಸಂಜೆ ಕಾರ್ಯಕ್ರಮ ನಡೆಯುತ್ತಿರುವುದು.

ಚಿತ್ರಕೃಪೆ: Saad Faruque

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ತಾಳಿ...ಮುರುಡೇಶ್ವರನ ಶಿವ ಪ್ರತಿಮೆಯಲ್ಲ ಇದು. ಬೆಂಗಳೂರಿನ ಕೆಂಪ್ ಫೋರ್ಟ್ ನಲ್ಲಿರುವ ಶಿವ.

ಚಿತ್ರಕೃಪೆ: Sean Ellis

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಸ್ಥಳೀಯ ಸಿನೆಮಾ ಮಂದಿರಗಳು ಕನ್ನಡಿಗರ ಪ್ರಿತಿಗೆ ಪಾತ್ರರಾದ ಚಿತ್ರ ತಾರೆಗಳ ಚಿತ್ರಗಳು ಬಿಡುಗಡೆಗೊಂಡಾಗ ಅವರ ಕಟ್ ಔಟ್ ಗಳನ್ನು ಹಾಕಿ ಸಂಭ್ರಮಿಸುತ್ತಾರೆ.

ಚಿತ್ರಕೃಪೆ: Ryan

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹಾದಿಯಲ್ಲಿ ಕಂಡುಬರುವ ಪಂಚಮುಖಿ ಗಣೇಶನ ಬೃಹತ್ ಸ್ವರ್ಣ ವರ್ಣದ ವಿಗ್ರಹ.

ಚಿತ್ರಕೃಪೆ: vhines200

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನಲ್ಲಿ ಹೀಗೊಂದು ಸಾಮಾನ್ಯ ಮುಂಜಾವು ಸಮಯ. ಜನರ ಚಟುವಟಿಕೆ ಪ್ರಾರಂಭವಾಗುವುದೆ ಒಂದು ಕಪ್ ಬಿಸಿ ಬಿಸಿ ಚಹಾ ಸೇವಿಸಿದ ನಂತರ.

ಚಿತ್ರಕೃಪೆ: Soham Banerjee

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಹೆಬ್ಬಾಳ ಕೆರೆಯಲ್ಲಿ ವಿಮಾನಿನಂತೆ ಟೇಕ್ ಆಫ್ ಆಗುತ್ತಿರುವ ಕೊಕ್ಕರೆ.

ಚಿತ್ರಕೃಪೆ: Nagesh Kamath

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಲಾಲ್ ಬಾಗ್ ನಲ್ಲಿನ ಒಂದು ಮುಂಜಾವು.

ಚಿತ್ರಕೃಪೆ: Vinoth Chandar

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಅತ್ಯಂತ ಜನನಿಬಿಡ ಮಾರುಕಟ್ಟೆ. ಕೃಷ್ಣ ರಾಜೇಂದ್ರ ಮಾರುಕಟ್ಟೆ.

ಚಿತ್ರಕೃಪೆ: Akash Bhattacharya

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಮಳೆಗಾಲವು ಕಚೇರಿಗಳ ಆವರಣಗಳನ್ನು ಅಕ್ಷರಶಃ ಈಜು ಕೊಳವನ್ನಾಗಿ ಮಾಡಿ ಬಿಡುತ್ತವೆ.

ಚಿತ್ರಕೃಪೆ: Thejas

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಅಲಸೂರು ಪ್ರದೇಶದಲ್ಲಿ ಜರುಗುವ ಪಲ್ಲಕ್ಕಿ ಉತ್ಸವ.

ಚಿತ್ರಕೃಪೆ: Akash Bhattacharya

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬಸವನಗುಡಿ ಪ್ರದೇಶದಲ್ಲಿರುವ ದೊಡ್ಡ ಬಸವನ ದೇವಸ್ಥಾನ ಪ್ರವೇಶ ಗೋಪುರ.

ಚಿತ್ರಕೃಪೆ: Ming-yen Hsu

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ರಾತ್ರಿಯಾಗುತ್ತಿದ್ದಂತೆ ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುವ ಬೆಂಗಳೂರಿನ ಬ್ರಿಗೇಡ್ ರಸ್ತೆ.

ಚಿತ್ರಕೃಪೆ: Ryan

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಆವಾಗಾವಾಗ ಜರುಗುವ ಸದ್ಭಾವನಾ ಓಟವೊಂದರಲ್ಲಿ ಪಾಲ್ಗೊಂಡಿರುವ ಓಟಗಾರ್ತಿ. ಹಿನ್ನಿಲೆಯಲ್ಲಿ ವಿಧಾನ ಸೌಧ.

ಚಿತ್ರಕೃಪೆ: Nagesh Kamath

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ರೈಲಿನಲ್ಲಿ ಸಾಗುವಾಗ ಬೆಂಗಳೂರಿನ ಹೊರವಲಯದ ಒಂದು ಸುಂದರ ನೋಟ.

ಚಿತ್ರಕೃಪೆ: Easa Shamih

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಅಪ್ಪ ಬರುತ್ತಿರುವನಮ್ಮ ನೋಡಲ್ಲಿ....ಬೆಂಗಳೂರಿನ ಉದ್ಯಾನವೊಂದರಲ್ಲಿ ತಾಯಿ ಮಗುವಿನ ಮುದ್ದಾದ ಸಂಭಾಷಣೆ.

ಚಿತ್ರಕೃಪೆ: Vinoth Chandar

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಎಲ್ಲ ರೀತಿಯ ಪೂಜೆಗಳನ್ನು ಬೆಂಗಳೂರು ಕಾಣುತ್ತದೆ. ದುರ್ಗಾ ಪೂಜೆಯೊಂದರ ಸಂದರ್ಭದಲ್ಲಿ...

ಚಿತ್ರಕೃಪೆ: Travelling Slacker

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಳಿಗ್ಗೆ ಎದ್ದೊಡನೆಯೆ ಸೂರ್ಯ ದೇವರಿಗೊಂದು ಪ್ರಾರ್ಥನೆ. ಸಾಕಷ್ಟು ಸಾಂಪ್ರದಾಯಿಕ ಬೆಂಗಳೂರಿಗರ ದಿನಚರಿ ಇದು.

ಚಿತ್ರಕೃಪೆ: Vinoth Chandar

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಲಾಲ್ ಬಾಗ್ ಉದ್ಯಾನದ ಕೊಳವೊಂದರಲ್ಲಿ ದಣಿವಾರಿಸಿಕೊಂಡು ಉತ್ಸಾಹದಿಂದ ಏಳುವಂತೆ ಅರಳಿದ ಕಮಲ.

ಚಿತ್ರಕೃಪೆ: Swaminathan

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಯಂತ್ರ ವಾಹನಗಳಾದರೇನು...ಕುದುರೆಗಾಡಿ ಆದರೇನು...ಟ್ರಾಫಿಕ್ ನಿಯಮಗಳನ್ನಂತು ಪಾಲಿಸಲೇಬೇಕು.

ಚಿತ್ರಕೃಪೆ: Indi Samarajiva

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಹಲೊ ಸರ್..ಕಡೆ ಬೆಂಚಿಗೂ ಸಹ ಕೂಡುವವನು ನಾನೆ! ಶಾಲಾ ವಾಹನದಲ್ಲಿ ಉತ್ಸಾಹದಿಂದ ಶಾಲೆಗೆ ತೆರಳುತ್ತಿರುವ ಬಾಲಕ.

ಚಿತ್ರಕೃಪೆ: Rasmus Lerdorf

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಚಿಕ್ಕ ಪುಟ್ಟ ಬೀದಿ ವ್ಯಾಪಾರಿಗಳು. ಆಧುನಿಕ ಬೆಂಗಳೂರಿನ ಇನ್ನೊಂದು ಪರಿಚಿತ ಮುಖ.

ಚಿತ್ರಕೃಪೆ: Indi Samarajiva

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ನಾನೂ ಕೂಡ ಭವಿಷ್ಯ ನುಡಿಯಬಲ್ಲೆ...ಆದರೆ ನಿಮಗೆ ನನ್ನಲ್ಲಿ ಕೇಳಲು ಆಸೆ ಇದೆಯೆ? ಎನ್ನುತಿರುವ ಯಂತ್ರ ಮಾನವ.

ಚಿತ್ರಕೃಪೆ: Paul Keller

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಯುವ ಜನಾಂಗದವರ ಆಧುನಿಕ ಪಾರ್ಟಿ ಜಗತ್ತು..ಗಮ್ಮತ್ತು!

ಚಿತ್ರಕೃಪೆ: Indi Samarajiva

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಆದರೂ ಸಾಂಪ್ರದಾಯಿಕ ಬಾರುಗಳಿಗೂ ಬೇಡಿಕೆ ಏನು ಕಮ್ಮಿ ಇಲ್ಲ.

ಚಿತ್ರಕೃಪೆ: Indi Samarajiva

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಸಾಕಷ್ಟು ದೇಗುಲಗಳು ಹಾಗೂ ಭಕ್ತರನ್ನು ಹೊಂದಿರುವ ಬೆಂಗಳೂರಿನಲ್ಲಿ ಹೂವಿಗೆ ಎಲ್ಲ ಕಾಲದಲ್ಲೂ ಬೇಡಿಕೆ ಇದ್ದೆ ಇರುತ್ತದೆ.

ಚಿತ್ರಕೃಪೆ: Melanie M

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಅಚ್ಚರಿ ಆಯಿತಲ್ಲವೆ? ಹೌದು..ಇದು ಬೆಂಗಳೂರಿನ ಪ್ರತಿಷ್ಠಿತ ಐಐಎಂ ಕ್ಯಾಂಪಸ್!

ಚಿತ್ರಕೃಪೆ: Asha Susan

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಹೆಮ್ಮೆಯಿಂದ ಬೀಗುತ್ತಿರುವ ರಾಜ್ಯ ಕೇಂದ್ರ ಗ್ರಂಥಾಲಯ. ಆದರೆ ಬೆಂಗಳೂರಿಗರಿಗೆ ಓದಲು ಸಮಯವಿದೆಯೆ?

ಚಿತ್ರಕೃಪೆ: Soham Banerjee

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬ್ರಿಗೆಡ್ ರಸ್ತೆಯಲ್ಲೊಂದು ದಿನ ಶಾಪಿಂಗ್...ಬಲು ಜೋರು

ಚಿತ್ರಕೃಪೆ: Ryan

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಕೇವಲ ಜನರು ಮಾತ್ರವಲ್ಲದೆ ಟ್ರಾಫಿಕ್ ದಟ್ಟನೆಯಿಂದ ತತ್ತರಿಸುವ ದನಗಳಿಗೂ ಕೂಡ ಪಾದಚಾರಿ ಮಾರ್ಗ ವಿರಾಮದ ಅಡ್ಡಾ.

ಚಿತ್ರಕೃಪೆ: Christopher Neugebauer

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬಸ್ಸೇ ಬರಲಿ...ಟ್ರಕ್ಕೇ ಬರಲಿ ನಾವು ಕ್ರಾಸ್ ಮಾಡದೆ ಇರೇವು.

ಚಿತ್ರಕೃಪೆ: Christopher Neugebauer

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಅಬ್ಬಾ....ಕೊನೆಗೂ ಅಂತು ಇಂತು ಬೆಂಗಳೂರಿಗೆ ಬಂದೇ ಬಿಟ್ಟೆವು. ವಿದೇಶಿಯರಿಗೂ ಸಾಕಷ್ಟು ಹೋಟೆಲು ಆಯ್ಕೆಗಳು ಈ ಮಹಾನಗರದಲ್ಲಿ ದೊರೆಯುತ್ತದೆ.

ಚಿತ್ರಕೃಪೆ: Steve Jurvetson

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ರಭಸ ಹಾಗೂ ಸಂತಸಮಯ ಜೀವನ ಒಂದೆಡೆಯಾದರೆ....ನಾಳೆ ಎಂಬುದು ಚೆನ್ನಾಗಿರುತ್ತದೆ ಎಂಬ ಕನಸನ್ನು ಹೊತ್ತು ಬದುಕುವ ಜನರನ್ನೂ ಸಹ ಈ ಮಹಾನಗರದಲ್ಲಿ ಕಾಣಬಹುದು.

ಚಿತ್ರಕೃಪೆ: Nishanth Jois

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಕೇಂದ್ರಿಯ ಬಸ್ಸು ನಿಲ್ದಾಣ...ಬೆಂಗಳೂರಿಗೆ ಬರಲು ಎಲ್ಲರೂ ಸಿದ್ಧ...ಇಲ್ಲಿನ ಮಾಯಾ ಪ್ರಪಂಚದಲ್ಲಿ ಅದರ ಭಾಗವಾಗಿ ಮತ್ತೆ ನಮ್ಮೂರಿಗೆ ಮರಳುವುದು ಕಷ್ಟ.

ಚಿತ್ರಕೃಪೆ: Stan Dalone & Miran Rijave

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಅಂಕಲ್....ಸ್ವಲ್ಪ ಹಣ್ಣುಗಳನ್ನು ಜಾಸ್ತಿ ಹಾಕಿ. ನಗರದ ಬಹುತೇಕ ರಸ್ತೆಗಳಲ್ಲೆಲ್ಲ ಸೈಕಲ್ಲುಗಳ ಮೇಲೆ ಸಾಗುತ್ತ ಹಣ್ಣು ಹಂಪಲುಗಳನ್ನು ಮಾರುವುದನ್ನು ಕಾಣಬಹುದು.

ಚಿತ್ರಕೃಪೆ: Greg Younger

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಹಲವು ಮುಖಗಳಲ್ಲಿ ಇನ್ನೊಂದು ಜನಪ್ರಿಯ ಮುಖ ಸ್ಥಳೀಯ ಉತ್ಸವಗಳು. ಟೌನ್ ಹಾಲ್ ನಲ್ಲಿ ಕಂಡುಬಂದ ಒಂದು ಉತ್ಸವ.

ಚಿತ್ರಕೃಪೆ: Sean Ellis

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನಲ್ಲಿ ಬ್ರ್ಯಾಂಡ್ ಗಳ ಹೊರತಾಗಿ ಖರಿದಿಸುವ ಇಷ್ಟವಿದ್ದಲ್ಲಿ ಅದು ಕೂಡ ಲಭ್ಯ.

ಚಿತ್ರಕೃಪೆ: Christian Heilmann

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಬೆಂಗಳೂರಿನ ಮತ್ತೊಂದು ವಿಶೇಷತೆ: ಹಾದಿ ಬೀದಿಗಳ...ಮೂಲೆ ಮೂಲೆಗಳಲ್ಲಿ ಚಿಕ್ಕ ಪುಟ್ಟ ದೇಗುಲಗಳು ನಿಮ್ಮನು ಸ್ವಾಗತಿಸುತ್ತಿರುತ್ತವೆ.

ಚಿತ್ರಕೃಪೆ: Christian Heilmann

ನಮ್ಮ ಬೆಂಗಳೂರು:

ನಮ್ಮ ಬೆಂಗಳೂರು:

ಕೊನೆಗೆ ವಾರವಿಡಿ ದುಡಿದು ಬಳಲಿ ಬೆಂಡಾದ ಒತ್ತಡದ ಮನಕೆ ವಿಶ್ರಾಂತಿಯ ಬಯಕೆಯಾದಾಗ ತಮ್ಮ ತುಂಬು ಅಪ್ಪುಗೆಯಿಂದ ಸ್ವಾಗತಿಸುತ್ತವೆ ಸುಂದರ ಪ್ರಕೃತಿ ಅರ್ಥಾತ್ ಬೆಂಗಳೂರಿನ ಉದ್ಯಾನಗಳು. ಆದರೆ ಇದನ್ನು ತಿಳಿಯದಾದ ಮನುಜ ತನ್ನ ಸ್ವಾರ್ಥಕ್ಕಾಗಿ ಇಂದು ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಟ್ಟಡಗಳ ನಿರ್ಮಾಣ ಮಾಡುವುದರ ಮೂಲಕ ಹಾಳುಗೆಡವುತ್ತಿರುವುದು ದುರದೃಷ್ಟ.

ಚಿತ್ರಕೃಪೆ: Johan Bichel Lindegaard

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X