• Follow NativePlanet
Share
Menu
» »ಬೆಂಗಳೂರು-ಮಾಸಿನಗುಡಿ-ಒಂದು - ಸಾಹಸಮಯ ಪ್ರವಾಸ

ಬೆಂಗಳೂರು-ಮಾಸಿನಗುಡಿ-ಒಂದು - ಸಾಹಸಮಯ ಪ್ರವಾಸ

Posted By: Manjula

ಬಂಡೀಪುರ ಕಾಡುಗಳ ಮೂಲಕ ಹೋಗಲು ನೀವು ಜಂಗಲ್ ಸಫಾರಿಯನ್ನು ಆಯ್ಕೆ ಮಾಡಿಕೊಂಡಿದ್ದೀರಾ? ಕಾಡು ಪ್ರಾಣಿಗಳು ನಿಮ್ಮ ಕಣ್ಣುಗಳ ಮುಂದೆ ಹಾದುಹೋಗುವಂತೆ ನೀವು ಕಾಡುಗಳ ಮೂಲಕ ಎಂದಾದರೂ ಪ್ರವಾಸ ಕೈಗೊಂಡಿರುವಿರಾ?ಬಂಡೀಪುರ ಮತ್ತು ಮುದುಮಲೈ ಅರಣ್ಯ ಪ್ರದೇಶಗಳಿಗೆ ಆನಂದಮಯ ವೀಕ್ಷಣೆಗೆ ಬೆಂಗಳೂರಿನಿಂದ ಮಾಸಿನಗುಡಿಗೆ ಪ್ರವಾಸ ಕೈಗೊಳ್ಳೋಣ.ಅಲ್ಲದೆ ಮಾರ್ಗದಲ್ಲಿ ಸಿಗುವ ಪಕ್ಷಿಧಾಮಗಳಿಗೆ ತಪ್ಪದೆ ಭೇಟಿ ನೀಡೋಣ.

ಈವಾಗ ಪ್ರಾರಂಭಿಸೋಣ

ಈವಾಗ ಪ್ರಾರಂಭಿಸೋಣ

ಈ ಪ್ರವಾಸಕ್ಕೆ ಜಾಸ್ತಿ ದಿನಗಳು ಬೇಕಾಗುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಗೆ ಹೊರಡುವ ಮೊದಲು ಜಾಸ್ತಿ ರಜೆ ಸಿಗುವ ವಾರಾಂತ್ಯ ನೋಡಿಕೊಂಡು ಯೋಜಿಸಿದರೆ ಉತ್ತಮ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಬೆಳಿಗ್ಗೆ 7 ಗಂಟೆಗ ಸುಮಾರಿಗೆ ಉತ್ತಮ ಉಪಹಾರ ತೆಗೆದುಕೊಂಡ ನಂತರ ಪ್ರಯಾಣ ಪ್ರಾರಂಭಿಸಿ. ಕಲಾಶಿಪಲಯಂನಲ್ಲಿನ ಕಾಮತ್ ರೆಸ್ಟೋರೆಂಟ್ ನಲ್ಲಿನ ಉಪಹಾರ ದಿನದ ಉತ್ತಮ ಆರಂಭಕ್ಕೆ ಸೂಕ್ತವಾದ ಆಯ್ಕೆಯಾಗಿದೆ.

ಇದನ್ನು ತಪ್ಪಿಸಬೇಡಿ!

ಇದನ್ನು ತಪ್ಪಿಸಬೇಡಿ!

ಮಾರ್ಗದಲ್ಲಿ, ಬಂಡೀಪುರಕ್ಕೆ ಕೆಲವೇ ಕಿಲೋಮೀಟರ್ ಗಳ ಮೊದಲು ಬಲ ತಿರುವಿನಲ್ಲಿ ಗೋಪಾಲಸ್ವಾಮಿ ಬೆಟ್ಟಗಳನ್ನು ಭೇಟಿ ಮಾಡಲು ಮರೆಯಬೇಡಿ.ಈ ಬೆಟ್ಟಗಳು ಅದ್ಭುತ ನೋಟಗಳನ್ನು ಒದಗಿಸುತ್ತವೆ ಇದು ಬೆಳಿಗ್ಗೆ 8.30 ರಿಂದ ಸಾಯಂಕಾಲ 4ರವರೆಗೆ ತೆರೆದಿರುತ್ತದೆ.

ಬಂಡಿಪುರವನ್ನು ತಲುಪುವುದು ಹೇಗೆ?

ಬಂಡಿಪುರವನ್ನು ತಲುಪುವುದು ಹೇಗೆ?

ರಸ್ತೆಯ ಮೂಲಕ, ನೀವು 12 ಗಂಟೆಗೆ ಬಂಡೀಪುರವನ್ನು ತಲುಪಬಹುದು. ಕಾಡಿನ ಹತ್ತಿರದಿಂದ ಪ್ರಯಾಣಿಸುವುದರಿಂದ ಇಲ್ಲಿ ಕಾಡು ನಾಯಿ, ಚಿರತೆಗಳು, ಕಾಡು ಹಂದಿ, ಚಿಟಲ್ ಮತ್ತು ಗೌರ್, ಮುಂತಾದುವುಗಳನ್ನು ನೋಡಬಹುದು. ಬಂಡೀಪುರ ಸಫಾರಿ ಲಾಡ್ಜ್ ಗಳು ವನ್ಯಜೀವಿಗಳ ಅದ್ಭುತ ನೋಟವನ್ನು ಆನಂದಿಸಲು ಸೂಕ್ತವಾದುದಾಗಿದೆ. ಇದು ಅರಣ್ಯ ಗಡಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ.

ಬಂಡಿಪುರದಲ್ಲಿ ಉಳಿಯುವುದು

ಬಂಡಿಪುರದಲ್ಲಿ ಉಳಿಯುವುದು

ಬಂಡೀಪುರದ ಕಾಡಿನೊಳಗೆ ಮಾರ್ಗದರ್ಶಿಯಾಗಿ ನಡೆಯುವ ಪ್ರಕೃತಿ ಸೌಲಭ್ಯವನ್ನು ಒದಗಿಸುವುದರಿಂದ, ಸಫಾರಿ ಲಾಡ್ಜ್ ನಲ್ಲಿ ರಾತ್ರಿಯ ತಂಗುವಿಕೆಯು ಜೀವಿತಾವಧಿಯ ಒಂದು-ಸೂಕ್ತವಾದ ಅನುಭವವಾಗಿದೆ. ಸಫಾರಿಯ ಹೊರತಾಗಿ, ಇಲ್ಲಿರುವ ರೆಸಾರ್ಟ ಗಳು ಕೂಡ ಕ್ಯಾಂಪ್ ಫೈರ್ ಉತ್ತಮವಾದ ಆಹಾರದ ಸೌಕರ್ಯವನ್ನು ಕಲ್ಪಿಸಿಕೊಡುತ್ತದೆ.

ಬಂಡಿಪುರ ಮೂಲಕ ಸಫಾರಿ

ಬಂಡಿಪುರ ಮೂಲಕ ಸಫಾರಿ

ಬಂಡೀಪುರ ಸಫಾರಿ ಸಮಯವು ಪ್ರತಿದಿನವೂ ಬೆಳಿಗ್ಗೆ 6.30 ಮತ್ತು ಸಾಯಂಕಾಲ 4.30 ಕ್ಕೆ ಇರುತ್ತದೆ, ಇದರರ್ಥ ನಿಮ್ಮ ಮುಂದಿನ ಗಮ್ಯಸ್ಥಾನಕ್ಕೆ ಚೆಕ್ಔಟ್ ಮಾಡುವ ಮೊದಲು ನೀವು ಸಫಾರಿಯನ್ನು ಸಾಯಂಕಾಲ ಮತ್ತು ಮರುದಿನ ಮುಂಜಾನೆಗೆ ತೆಗೆದುಕೊಳ್ಳಬಹುದು. ಗ್ರೇ ಜಂಗಲ್ ಫೌಲ್ ಮತ್ತು ಡ್ರಂಗೋಸ್ ನಂತಹ ಕೆಲವು ಅಪರೂಪದ ಜಾತಿಯ ಪಕ್ಷಿಗಳನ್ನು ನೀವು ಇಲ್ಲಿ ಕಾಣಬಹುದು.

ಮುದುಮಲೈನಲ್ಲಿ ಜಂಗಲ್ ಸಫಾರಿ ...

ಮುದುಮಲೈನಲ್ಲಿ ಜಂಗಲ್ ಸಫಾರಿ ...

ನಮ್ಮ ಮುಂದಿನ ನಿಲುಗಡೆ ಬಂಡೀಪುರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮುದುಮಲೈ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇಲ್ಲಿಗೆ ತಲುಪಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಸಫಾರಿ ಇಲ್ಲಿ 9 ಗಂಟೆಗೆ ಮುಚ್ಚುತ್ತದೆ. ಬಂಗಾಳ ಹುಲಿ, ಗೌರ್ ಮತ್ತು ಭಾರತೀಯ ಚಿರತೆಗಳಂತಹ ತೀವ್ರವಾದ ಪರಭಕ್ಷಕಗಳನ್ನು ಹೊಂದಿರುವ ಈ ಕಾಡಿನ ಮೂಲಕ 30 ನಿಮಿಷಗಳ ಸಫಾರಿ ತೆಗೆದುಕೊಳ್ಳಿ.

36 ಹೇರ್ಪಿನ್ ಬೆಂಡ್ಸ್ ಮೂಲಕ ಡ್ರೈವ್ ಮಾಡಿ!

36 ಹೇರ್ಪಿನ್ ಬೆಂಡ್ಸ್ ಮೂಲಕ ಡ್ರೈವ್ ಮಾಡಿ!

ಮುದುಮಲೈನಲ್ಲಿ ಸಾಹಸಮಯ ಅರಣ್ಯ ಸಫಾರಿ ನಂತರ, ಮಾಸಿನಗುಡಿಗೆ ಕೊಯಂಬತ್ತೂರು-ಊಟಿ-ಗುಂಡ್ಲುಪೇಟೆ ಹೆದ್ದಾರಿ ಅಥವಾ 36 ಹೇರ್ಪಿನ್ ಬೆಂಡ್ಸ್ ಪ್ರಖ್ಯಾತ ರಸ್ತೆಯ ಮೂಲಕ ಪ್ರಯಾಣ ಕೈಗೊಳ್ಳಬೇಕು. ಹೌದು, ಇದು ರಸ್ತೆಯ 36 ನೇ ಬೆಂಡ್ ತನಕ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕಾದಂತಹ ಬಾಗಿರುವ ಮತ್ತು ತಿರುವುಗಳನ್ನು ಹೊಂದಿರುವ ದಾರಿಯಾಗಿದೆ.

ಇಲ್ಲಿಯ ಅಜಾಗರೂಕ ಬಾಗುವಿಕೆಗೆ ಇದು ಜನಪ್ರಿಯವಾಗಿದೆ

ಇಲ್ಲಿಯ ಅಜಾಗರೂಕ ಬಾಗುವಿಕೆಗೆ ಇದು ಜನಪ್ರಿಯವಾಗಿದೆ

ಈ ಮಾರ್ಗವು ನೀಡುವ ವೀಕ್ಷಣೆಯನ್ನು ಉಸಿರು ಬಿಗಿ ಹಿಡಿದು ನೋಡುವಂತಹುದು , ಇದು ನೈಜ ಸಾಹಸ ಅನುಭವಕ್ಕಾಗಿ ಬಯಸುವವರು ಈ ಮಾರ್ಗವನ್ನು ಆಯ್ದು ಕೊಳ್ಳುವುದು ಯೋಗ್ಯವಾಗಿದೆ.

ಮಸಿನಗುಡಿಯಲ್ಲಿ ಪಕ್ಷಿಗಳು ...

ಮಸಿನಗುಡಿಯಲ್ಲಿ ಪಕ್ಷಿಗಳು ...

ಮುದುಮಾಲೈ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾದ ಮಸಿನುಡಿ ಎಂಬ ಹಕ್ಕಿ ಪ್ರೇಮಿಗಳು ಮತ್ತು ವನ್ಯಜೀವಿ ಉತ್ಸಾಹಿಗಳಿಗೆ ಒಂದು ಅದ್ಭುತ ತಾಣವಾಗಿದೆ.ಇಲ್ಲಿರುವ ಕಾಡಿನಲ್ಲಿ ರೆಸಾರ್ಟ್ ನಲ್ಲಿ ನೀವು ಉಳಿದರೆ ಇದು ನಿಮಗೆ ಪಕ್ಷಿ, ಚಾರಣ, ಕ್ಯಾಂಪಿಂಗ್ ಮತ್ತು ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತದೆ.

ಮಾಸಿನ ಗುಡಿಯಲ್ಲಿ ಒಂದು ರಾತ್ರಿಯ ತಂಗುವಿಕೆ

ಮಾಸಿನ ಗುಡಿಯಲ್ಲಿ ಒಂದು ರಾತ್ರಿಯ ತಂಗುವಿಕೆ

ಬ್ಲೂ ವ್ಯಾಲಿ ಜಂಗಲ್ ರೆಸಾರ್ಟ್, ಮೊನಾರ್ಕ್ ಸಫಾರಿ ಪಾರ್ಕ್, ಕ್ಲಬ್ ಮಹೀಂದ್ರಾ ಮತ್ತು ಜಂಗಲ್ ರಿಟ್ರೀಟ್ ಇತ್ಯಾದಿ ರಾತ್ರಿ ತಂಗುವ ಸ್ಥಳಗಳು ಇಲ್ಲಿವೆ. ಮಾಸಿನಗುಡಿಯ ನೈಸರ್ಗಿಕ ಸ್ಥಳದಲ್ಲಿ ಇದ್ದು ಸಂಜೆಯ ವೇಳೆ ಪಕ್ಷಿಧಾಮವನ್ನು ನೋಡಿ ಆನಂದಿಸಿ. ಅಲ್ಲದೆ ಬೆಳಿಗ್ಗೆ ಬೇಗ ಎದ್ದು ಕೂಡಾ ಪಕ್ಷಿ ವೀಕ್ಷಣೆ ಮಾಡುವುದನ್ನು ಮರೆಯದಿರಿ! ಅಲ್ಲಿಯ ಉತ್ತಮವಾದ ಬೆಳಗ್ಗಿನ ಉಪಹಾರದ ನಂತರ ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಬೆಂಗಳೂರಿನ ಕಡೆ ಹಿಂತಿರುಗಳು ತಯಾರಾಗಿ!

ಹಿಂತಿರುಗಿ ಬೆಂಗಳೂರಿಗೆ!

ಮಾಸಿನಗುಡಿಯಿಂದ ಬೆಂಗಳೂರು 235 ಕಿ.ಮೀ ದೂರದಲ್ಲಿದೆ, ಇದು ಸಂಚಾರವನ್ನು ಅವಲಂಬಿಸಿ 5-7 ಗಂಟೆಗಳ ಕಾಲ ಬೇಕಾಗುತ್ತದೆ.ನೀವು ಸಂಜೆಯ ವೇಳೆಗೆ ಬೆಂಗಳೂರಿಗೆ ತಲುಪಬಹುದು. ಇದು ನಿಜವಾಗಿಯೂ ಆನಂದದಾಯಕ ಮತ್ತು ಸಾಹಸಮಯ ರಸ್ತೆ ಪ್ರವಾಸದ ನಂತರ ಎಲ್ಲ ವನ್ಯಜೀವಿಗಳು, ಹಕ್ಕಿಗಳು ಮತ್ತು ನೀವು ಹಾದುಹೋಗಿದ್ದ ಸಾಹಸಮಯ ರಸ್ತೆಗಳ ನೆನಪುಗಳನ್ನು ಮಾಡುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ